ಜ್ಞಾನ ಸಂಪಾದಿಸಿ ಸಾರ್ಥಕ ಜೀವನ ನಡೆಸಿ
Team Udayavani, Apr 30, 2018, 5:03 PM IST
ತೇರದಾಳ: ಕಾಲೇಜಿನ ಜೀವನದಲ್ಲಿ ಜೀವನ ತೃಪ್ತಿಯಾಗುವಷ್ಟು ಜ್ಞಾನ ಸಂಪಾದಿಸಿಕೊಂಡು ಸಾರ್ಥಕ ಹಾಗೂ ಉದಾತ್ ಜೀವನ ನಡೆಸುವಂತಾಗಬೇಕು ಎಂದು ಪ್ರೊ.ಬಿ.ಆರ್. ಪೊಲೀಸ್‌ಪಾಟೀಲ ಹೇಳಿದರು.
ಪಟ್ಟಣದ ದಾನಿಗೊಂಡ ಪದವಿ ವಾಣಿಜ್ಯ ಮಹಾವಿದ್ಯಾಲಯದ ಸಭಾಭವನದಲ್ಲಿ ಜರುಗಿದ ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಆಚಾರಕ್ಕೆ ಅರಸನಾಗು, ನೀತಿಯಲ್ಲಿ ದೊರೆಯಾಗು, ಮಾತಿನಲ್ಲಿ ಚೂಡಾಮಣಿಯಾಗು, ಜಗಕ್ಕೆಲ್ಲ ಜ್ಯೋತಿಯಾಗು ಎನ್ನುವಂತೆ ಮನುಷ್ಯ ಎಲ್ಲರಿಗೂ ಬೆಳಕಿನಂತ ಉತ್ಸಾಹ ತರಿಸುವ ವ್ಯಕ್ತಿಯಾಗಬೇಕು. ಕಾಲೇಜಿನ ಜೀವನದಲ್ಲಿ ಮನಸ್ಸನ್ನು ಕೇಂದ್ರೀಕರಿಸಿಕೊಂಡು ಅಭ್ಯಾಸದತ್ತ ಸಾಗುವುದರೊಂದಿಗೆ ಭಾರತೀಯ ಸಂಸ್ಕೃತಿ, ಸಾಹಿತ್ಯಕ್ಕೆ ಗೌರವಿಸಬೇಕು. ಎಲ್ಲ ಬಗೆಯ ಕಲೆ-ಸಾಹಿತ್ಯಕ್ಕೆ ಜನಪದ ಸಾಹಿತ್ಯವೆ ಮೂಲವಾಗಿದ್ದು ನಮ್ಮ ಜನಪದ ಸಾಹಿತ್ಯದ ರುಚಿಯನ್ನು ಎಲ್ಲರು ಸವಿಯಬೇಕು. ಉತ್ಸಾಹವಿಲ್ಲದ ಜೀವನ ಜೀವನವೆ ಅಲ್ಲ. ಜನಪದ ಸೊಗಡು ಬದುಕಿಗೆ ಉತ್ಸಾಹ ನೀಡಬಲ್ಲದು. ಆಸಕ್ತಿಯಿಂದ ಓದಿ ಹೆಚ್ಚು ಅಂಕ ಗಳಿಸುವುದರೊಂದಿಗೆ, ಮೀತಿ-ನಿಯಮ, ಗುರು ಹಿರಿಯರಿಗೆ ಗೌರವಿಸುವ ಭಾವನೆ ಹೊಂದಿರಬೇಕು ಎಂದರು.
ಎಸ್‌ಡಿಎಂ ಟ್ರಸ್ಟ್ ದಾನಿಗೊಂಡ ಸಮೂಹ ಶಿಕ್ಷಣ ಸಂಸ್ಥೆಗಳ ಚೇರಮನ್ ಡಾ. ಎಂ.ಎಸ್. ದಾನಿಗೊಂಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೆ ಸಂದರ್ಭದಲ್ಲಿ ಪ್ರೊ.ಬಿ.ಆರ್. ಪೊಲೀಸ್ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಆರ್.ಪಿ. ಪಟೇಲ, ಆರ್.ಪಿ. ಚಿಂಚಖಂಡಿ, ಜಿ.ಐ. ಕುಂಬಾರ, ಗಂಗಾ ಯಾದವಾಡ, ಶ್ರೀಕಾಂತ ಕೆಂಧೂಳಿ ಸೇರಿದಂತೆ ಸಿಬ್ಬಂದಿ, ವಿದ್ಯಾರ್ಥಿ ಮುಖಂಡರಾದ ಚೇತನ ಆಲಗೂರ, ದಾನಮ್ಮ ಹಿರೇಮಠ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಐಶ್ವರ್ಯ ಬಡಿಗೇರ ಪ್ರಾರ್ಥಿಸಿದರು.
ತೇಜಶ್ವಿನಿ ಆಲಗೂರ ಸ್ವಾಗತಿಸಿದರು. ಪಂಶುಪಾಲ ಆರ್.ಡಿ. ಬೀಳಗಿ ಪ್ರಾಸ್ತಾವಿಕ ಮಾತನಾಡಿದರು. ಕೆ.ಎಸ್. ವಿಟೇಕರ ವರದಿ ವಾಚಿಸಿದರು. ಸುಷ್ಮಿತಾ ಆಲಗೂರ, ತೇಜಶ್ವಿನಿ ಕಡಹಟ್ಟಿ ನಿರೂಪಿಸಿದರು. ದೀಪಾ ಶಿರಗಾರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.