ಗಮನ ಸೆಳೆದ ಜೋಡೆತ್ತಿನ ಗಾಡಿ ಸ್ಪರ್ಧೆ
Team Udayavani, Apr 30, 2018, 5:09 PM IST
ಚಿಕ್ಕೋಡಿ: ಉಮರಾಣಿ ಗ್ರಾಮದ ಭಾವೇಶ್ವರಿದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಜೋಡೆತ್ತಿನ ಗಾಡಿ ಸ್ಪರ್ಧೆ ಹಾಗೂ ಜೋಡು ಕುದುರೆ ಗಾಡಿ ಸ್ಪರ್ಧೆ ನೋಡುಗರ ಗಮನ ಸೆಳೆದವು.
ಸ್ಪರ್ಧೆಗಳಿಗೆ ಅಪ್ಪಾಸಾಬಗೌಡಾ ಪಾಟೀಲ ಮತ್ತು ಜಾತ್ರಾ ಕಮಿಟಿ ಮುಖಂಡರು ಚಾಲನೆ ನೀಡಿದರು. ಜೋಡೆತ್ತಿನ ಗಾಡಿ ಸ್ಪರ್ಧೆಯಲ್ಲಿ ಉಮರಾಣಿ ಗ್ರಾಮದ ಕರೆಪ್ಪಾ ದಶರಥ ಕರೆನ್ನವರ ಅವರ ಗಾಡಿ ಪ್ರಥಮ, ಕರ್ನಾಳವರ ಗಾಡಿ ದ್ವಿತೀಯ, ಉಮರಾಣಿ ಗ್ರಾಮದ ರಾಜು ಕರೆನ್ನವರ ಗಾಡಿ ತೃತೀಯ ಹಾಗೂ ಆಲಕನೂರಿನ ಪರಸು ಸಿದ್ರಾಮ ಕರಿಗಾರವರ ಗಾಡಿ ನಾಲ್ಕನೇ ಬಹುಮಾನ ಪಡೆದುಕೊಂಡವು.
ಜೋಡು ಕುದುರೆ ಗಾಡಿ ಸ್ಪರ್ಧೆಯಲ್ಲಿ ಉಮರಾಣಿ ಗ್ರಾಮದ ರಾಜು ಕರೆನ್ನವರ ಗಾಡಿ ಪ್ರಥಮ, ಕರೆಪ್ಪಾ ಕರೆನ್ನವರ ಗಾಡಿ ದ್ವಿತೀಯ ಹಾಗೂ ಅಬ್ದುಲಾಟದ ಗಾಡಿ ತೃತೀಯ ಬಹುಮಾನ ಪಡೆದುಕೊಂಡವು. ಜಾತ್ರಾ ಮಹೋತ್ಸವದ ಅಂಗವಾಡಿ ವಿವಿಧ ಸಂಘಟನೆಗಳಿಂದ ವಾಲಿಬಾಲ್ ಪಂದ್ಯಾವಳಿ, ಕಬಡ್ಡಿ ಪಂದ್ಯಾವಳಿ ಮತ್ತು ಕ್ರಿಕೆಟ್ ಪಂದ್ಯಾಳಿಗಳನ್ನು ಹಮ್ಮಿಕೊಳ್ಳಲಾಗಿತ್ತು.
ನಂತರ ಬಹುಮಾನ ವಿತರಣಾ ಸಮಾರಂಭ ನಡೆಯಿತು. ಸ್ಪರ್ಧಾ ವಿಜೇತರಿಗೆ ಜಾತ್ರಾ ಕಮಿಟಿ ಸದಸ್ಯರಾದ ಪರಗೌಡ ಪಾಟೀಲ, ಕೇದಾರಿಗೌಡ ಪಾಟೀಲ, ಮಹಾದೇವಗೌಡ ಪಾಟೀಲ, ಲಕ್ಷ್ಮಣ ಅಂಬಲೆ, ಸಿದಗೌಡ ಪಾಟೀಲ, ಈಶ್ವರಗೌಡ ಪಾಟೀಲ ಮತ್ತು ಗ್ರಾಪಂ ಸದಸ್ಯರಾದ ಎಂ.ಎನ್.ಅಡಿಸೇರಿ, ಡಿ.ಎಂ. ಭೀಮನಾಯಿಕ, ಎಸ್.ವೈ. ಪಾಟೀಲ, ಲಕ್ಷ್ಮಣ ಪೂಜೇರಿ,ಬಸಗೌಡ ಪಾಟೀಲ, ಮಹೇಶ ಪಾಟೀಲ, ಜಯಾನಂದ ವಂಟೆಮುತ್ತೆ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.