ಕಾಬೂಲ್ ಅವಳಿ ಸ್ಫೋಟ: 10 ಪತ್ರಕರ್ತರೂ ಸೇರಿ 25 ಸಾವು
Team Udayavani, May 1, 2018, 8:52 AM IST
ಕಾಬೂಲ್: ಅಫ್ಘಾನಿಸ್ಥಾನ ರಾಜಧಾನಿ ಕಾಬೂಲ್ನಲ್ಲಿ ಸೋಮವಾರ ಅವಳಿ ಆತ್ಮಾಹುತಿ ದಾಳಿ ನಡೆದಿದ್ದು, ಹತ್ತು ಮಂದಿ ಪತ್ರಕರ್ತರೂ ಸೇರಿದಂತೆ 25 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಕನಿಷ್ಠ 45 ಮಂದಿ ಗಾಯಗೊಂಡಿದ್ದಾರೆ. ಉಗ್ರ ಸಂಘಟನೆ ಐಸಿಸ್ ಈ ಕೃತ್ಯದ ಹೊಣೆ ಹೊತ್ತುಕೊಂಡಿದೆ.
ನ್ಯಾಟೋ ಪ್ರಧಾನ ಕಚೇರಿ ಮತ್ತು ವಿವಿಧ ರಾಷ್ಟ್ರಗಳ ರಾಯಭಾರ ಕಚೇರಿಗಳಿರುವ ಕಾಬೂಲ್ನ ಶಾ ದರಾಕ್ ಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿದೆ. ಬೈಕ್ನಲ್ಲಿ ಬಂದಿದ್ದ ವ್ಯಕ್ತಿ ಮೊದಲ ಸ್ಫೋಟ ನಡೆಸಿದ. ಇದಾದ 15 ನಿಮಿಷಗಳ ಬಳಿಕ ಪತ್ರಕರ್ತರೂ ಸೇರಿದಂತೆ ಹಲವಾರು ಮಂದಿ ಇದ್ದ ಗುಂಪಿನ ನಡುವೆ ಮತ್ತೂಂದು ಸ್ಫೋಟ ಸಂಭವಿಸಿದೆ. ಮೊದಲ ಸ್ಫೋಟ ಸಂಭವಿಸಿದ ಸ್ಥಳಕ್ಕೆ ಪತ್ರಕರ್ತರು, ಇತರರು ಸಹಾಯಕ್ಕಾಗಿ ಧಾವಿಸುತ್ತಿರು ವಂತೆಯೇ ಎರಡನೇ ಸ್ಫೋಟ ನಡೆಸಲಾಗಿದೆ. ಈ ಸ್ಫೋಟ ನಡೆಸಿದ ಆತ್ಮಾಹುತಿ ದಾಳಿಕೋರ ವಾಹನದಲ್ಲಿ ಇರಲಿಲ್ಲ. ಆತ ಮಾಧ್ಯಮ ದವರಂತೆಯೇ ನಟಿಸಿದ್ದ ಎಂದು ಪೊಲೀಸ್ ವಕ್ತಾರ ತಿಳಿಸಿದ್ದಾರೆ.
ಏಜೆನ್ಸೆ ಫ್ರಾನ್ಸ್-ಪ್ರಸ್ಸೆ(ಎಎಫ್ಪಿ) ಮಾಧ್ಯಮ ಸಂಸ್ಥೆಯ ಕಾಬೂಲ್ನಲ್ಲಿರುವ ಮುಖ್ಯ ಛಾಯಾಚಿತ್ರಗ್ರಾಹಕ ಶಾ ಮರೈ, ಬಿಬಿಸಿ ವರದಿಗಾರ ಸೇರಿದಂತೆ ಇತರ ಸ್ಥಳೀಯ ಮತ್ತು ಎಂಟು ಅಂತಾರಾಷ್ಟ್ರೀಯ ಪತ್ರಕರ್ತರು ದುರಂತಕ್ಕೆ ಬಲಿಯಾಗಿದ್ದಾರೆ.
11 ಮಕ್ಕಳ ಸಾವು: ಕಾಬೂಲ್ ಘಟನೆ ಬೆನ್ನಲ್ಲೇ ಕಂದಹಾರ್ನ ದಮಾನ್ ಜಿಲ್ಲೆಯಲ್ಲಿ ನ್ಯಾಟೋವನ್ನು ಗುರಿಯಾಗಿರಿಸಿಕೊಂಡು ನಡೆಸಲಾಗಿರುವ ದಾಳಿಯಲ್ಲಿ 11 ಮಂದಿ ಮಕ್ಕಳು ಅಸುನೀಗಿದ್ದಾರೆ. ನ್ಯಾಟೋ ವಾಹ ನದ ಸುತ್ತ ಧಾರ್ಮಿಕ ಕೇಂದ್ರದ ಮಕ್ಕಳು ವಿನೋದಕ್ಕಾಗಿ ಸೇರಿದ್ದರು. ಅದೇ ಸಂದರ್ಭ ದಲ್ಲಿ ಬಾಂಬರ್ ತನ್ನನ್ನು ತಾನು ಸ್ಫೋಟಿಸಿ ಕೊಂಡಿದ್ದಾನೆ. ಘಟನೆಯಲ್ಲಿ ನ್ಯಾಟೋದ ಐವರು ಸೈನಿಕರು, 9 ನಾಗರಿಕರು, ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.