ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವಿಕಲಾಂಗ ವಿದ್ಯಾರ್ಥಿ ಸಾಧನೆ
Team Udayavani, May 1, 2018, 10:12 AM IST
ಬಂಟ್ವಾಳ: ಕಾಲಿಗೆ ಬಲವಿಲ್ಲದ್ದರಿಂದ ನಿತ್ಯ ವೀಲ್‌ಚೇರ್‌ನಲ್ಲಿ ಹೋಗಬೇಕಾದ ಅನಿವಾರ್ಯತೆ. ಆದರೆ ಅಂಗವಿಕಲತೆ ಯಾವ ಸಮಸ್ಯೆಗಳೂ ಆತನ ಸಾಧನೆಗೆ ಅಡ್ಡಿಯಾಗಲಿಲ್ಲ. ಪರಿಣಾಮ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 577 ಅಂಕಗಳನ್ನು ಪಡೆವಂತಾಯಿತು. ಇದು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿ ಆದಿತ್ಯರ ಸಾಧನೆಗೆ ಹಿಡಿದ ಕೈಗನ್ನಡಿ.
5ನೇ ಬಳಿಕ ಆದಿತ್ಯ ಎಲ್ಲರಂತಿರಲಿಲ್ಲ. ಎರಡೂ ಕಾಲುಗಳ ಶಕ್ತಿ ಕುಂದಿತ್ತು. ವಿದ್ಯೆ ಕಲಿಯುವ ಉತ್ಸಾಹವಿತ್ತು. ಮೂಲತ: ಬರಿಮಾರು ನಿವಾಸಿ, ಕೃಷಿಕರಾಗಿರು ತಂದೆ ಗಣೇಶ್ ಭಟ್ ಮಗನ ವಿದ್ಯೆಗೆ ನಿರಂತರ ಪ್ರೋತ್ಸಾಹ ನೀಡಿದರು.
ಕಾಲೇಜು ಆಡಳಿತ ಮಂಡಳಿ ಕೂಡ ಆದಿತ್ಯನಿಗಾಗಿ ವಾಣಿಜ್ಯ ವಿಭಾಗವನ್ನು ತಳ ಅಂತಸ್ತಿನಲ್ಲಿಯೇ ವ್ಯವಸ್ಥೆ ಮಾಡಿ ಪ್ರೋತ್ಸಾಹ ನೀಡಿದ್ದರು. ಇದರ ಪರಿಣಾಮ ಸಾಧನೆ ಸಾಧ್ಯವಾಯಿತು.
ಸಹಪಾಠಿಗಳೇ ಊಟದ ತಟ್ಟೆ ತೊಳೆದರು!
ಶಾಲೆಯಿಂದ ಆದಿತ್ಯ ಮನೆ ಸುಮಾರು 6 ಕಿ.ಮೀ. ದೂರ ಇದೆ. ದಿನಂಪ್ರತಿ ತಂದೆಯೇ ಬಾಲಕನನ್ನು ವೀಲ್‌ಚೇರ್‌ನಲ್ಲಿ ಕುಳ್ಳಿರಿಸಿ ಆಮ್ನಿ ಕಾರಿನಲ್ಲಿ ಶಾಲೆಗೆ ತಂದು ಬಿಡುತ್ತಿದ್ದರು. ಸಹಪಾಠಿ ವಿದ್ಯಾರ್ಥಿಗಳು ವೀಲ್‌ಚೇರ್ ಸಹಿತ ವಾಹನದಿಂದ ಇಳಿಸಿ ತರಗತಿಗೆ ಕರೆದೊಯ್ಯು ತ್ತಿದ್ದರು. ಮಧ್ಯಾಹ್ನ ಊಟದ ಬಳಿಕ ಆತನ ಬಟ್ಟಲನ್ನೂ ಸಹಪಾಠಿಗಳು ತೊಳೆದು ಸ್ವತ್ಛ ಮಾಡುವುದಲ್ಲದೇ ಮನ ದುಂಬಿ ಸಹಕಾರ ನೀಡುತ್ತಿದ್ದರೂ, ವೀಲ್‌ಚೇರ್‌ನಿಂದ ಬೀಳದಂತೆ ಕಣ್ಣಿಟ್ಟು ಕಾಯುತ್ತಿದ್ದರು ಎಂದು ಪ್ರಾಂಶುಪಾಲ ವಸಂತ ಬಲ್ಲಾಳ್ ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Mangalore: ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ವಿವಿಯಲ್ಲಿ ಎಬಿವಿಪಿ ಪ್ರತಿಭಟನೆ
Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್ ಅರ್ಜಿ ತಿರಸ್ಕೃತ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.