ಸರ್ಕಾರಿ ನೌಕರರಿಗೆ 4ನೇ ಶನಿವಾರವೂ ರಜೆ ನೀಡಿ

Team Udayavani, May 1, 2018, 3:48 PM IST

yad-1.jpg

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಆರನೇ ರಾಜ್ಯ ವೇತನ ಆಯೋಗ ತನ್ನ ಅಂತಿಮ ವರದಿ ನೀಡಿದ್ದು, ರಾಜ್ಯ ಸರ್ಕಾರಿ ನೌಕರರಿಗೆ ತಿಂಗಳ ನಾಲ್ಕನೇ ಶನಿವಾರವೂ ರಜೆ ನೀಡುವಂತೆ ಶಿಫಾರಸು ಮಾಡಿದೆ.

ವೇತನ ಆಯೋಗದ ಅಧ್ಯಕ್ಷ ಎಂ.ಆರ್‌. ಶ್ರೀನಿವಾಸಮೂರ್ತಿ ಮತ್ತು ಸದಸ್ಯರು ಸೋಮವಾರ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರಿಗೆ ಸುಮಾರು 500 ಪುಟಗಳ ಅಂತಿಮ ವರದಿ ಸಲ್ಲಿಸಿದೆ. ಆದರೆ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವರದಿಯ ಅಂಶಗಳನ್ನು ಬಹಿರಂಗಪಡಿಸಲು ಆಯೋಗ ಮತ್ತು ಸರ್ಕಾರ ನಿರಾಕರಿಸಿದೆ. 

ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ವೇತನ ಮತ್ತು ಪಿಂಚಣಿಗಳನ್ನು ಪರಿಷ್ಕರಿಸುವ ಕುರಿತು ಆಯೋಗ ಜ.31ರಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಶೇ. 30ರಷ್ಟು ವೇತನ ಪರಿಷ್ಕರಣೆಗೆ ಸೂಚಿಸಿತ್ತು. ಅದರಂತೆ ಸರ್ಕಾರ ಕ್ರಮ ಕೈಗೊಂಡಿದೆ. ಇದೀಗ ಆಯೋಗದ ಅವಧಿ ಸೋಮವಾರಕ್ಕೆ ಕೊನೆಗೊಳ್ಳುತ್ತಿರುವುದರಿಂದ ತನ್ನ ಅಂತಿಮ ವರದಿ ಸಲ್ಲಿಸಿದ್ದು, ಕೆಲವು ಇಲಾಖೆಗಳಲ್ಲಿ ವೇತನ ನಿಗದಿ ಕುರಿತಂತೆ ಇರುವ ವ್ಯತ್ಯಾಸ, ಒಂದೇ ಹುದ್ದೆಯಲ್ಲಿರುವ ನೌಕರರ ಮಧ್ಯೆ ಇರುವ ವೇತನ ಅಸಮಾನತೆ ನಿವಾರಣೆ, ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಹಲವು ಶಿಫಾರಸುಗಳನ್ನು ಮಾಡಿದೆ. 

ಹಿರಿಯ ನೌಕರರಿಗೆ ವೇತನ ಬಡ್ತಿ ಮತ್ತು ಫಿಟ್‌ ಮೆಂಟ್‌ ಕಡ್ಡಾಯವಾಗಿ ನೀಡಬೇಕು. ರಾಜ್ಯ ಸರಕಾರಿ ನೌಕರರಿಗೆ ಉಚಿತ ಆರೋಗ್ಯ ಭದ್ರತೆ ಒದಗಿಸುವ ‘ಜ್ಯೋತಿ ಸಂಜೀವಿನಿ’ (ನಗದು ರಹಿತ ಚಿಕಿತ್ಸಾ ಸೌಲಭ್ಯ) ಅನುದಾನಿತ ಸಂಸ್ಥೆಗಳ ನೌಕರರಿಗೂ ನೀಡಬೇಕು ಮತ್ತು ಎಲ್ಲಾ ಕಾಯಿಲೆಗಳಿಗೂ ಅನ್ವಯ ಮಾಡಬೇಕು. ಸ್ವಯಂ ನಿವೃತ್ತಿ ಪಡೆಯಲು ಇರುವ ಗರಿಷ್ಠ ಸೇವಾವಧಿಯನ್ನು 33 ವರ್ಷದಿಂದ 30 ವರ್ಷಕ್ಕೆ ಇಳಿಸಬೇಕು ಎಂದು ಆಯೋಗ ತನ್ನ ಶಿಫಾರಸಿನಲ್ಲಿ ಹೇಳಿದೆ ಎಂದು ತಿಳಿದುಬಂದಿದೆ.

ನೌಕರರ ವೇತನದಲ್ಲಿ ಅಸಮಾನತೆ ಹೋಗಲಾಡಿಸಲು ಕೆಲ ಭತ್ಯೆಗಳನ್ನು ನೀಡುವಂತೆ ಮತ್ತು ತರ್ಕಬದ್ಧವಾಗಿ ವೇತನ ನಿಗದಿಪಡಿಸಬೇಕು ಎಂದು ಹೇಳಿದೆ. ಅಲ್ಲದೆ, ವೇತನ ಬಡ್ತಿ ನೀಡುವ ಸಂದರ್ಭದಲ್ಲಿ ನೌಕರರ ಕಾರ್ಯಕ್ಷಮತೆ ಪರಿಗಣಿಸಬೇಕು. ಈ ಮೂಲಕ ಸರ್ಕಾರಿ ನೌಕರರಲ್ಲೇ ಸ್ಪರ್ಧಾತ್ಮಕ ಮನೋಭಾವ ಬೆಳೆಯಲು ಅವಕಾಶ ಕಲ್ಪಿಸಬೇಕು. ಇದರಿಂದ ಅವರ ಕಾರ್ಯಕ್ಷಮತೆ ಸುಧಾರಣೆಯಾಗಿ ಕೆಲಸಗಳು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಯಲು ಸಾಧ್ಯವಾಗುತ್ತದೆ ಎಂದು ಆಯೋಗ ಶಿಫಾರಸು ಮಾಡಿದೆ.

ಇದಲ್ಲದೆ, ರಾಜ್ಯ ಸರ್ಕಾರ ಅಳವಡಿಸಿಕೊಂಡಿರುವ ತುಟ್ಟಿ ಭತ್ಯೆ ಸೂತ್ರದಲ್ಲಿ ಕೆಲವೊಂದು ಮಾರ್ಪಾಟುಗಳನ್ನು ಮಾಡಿಕೊಳ್ಳಬೇಕು. ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ, ವಿಶೇಷ ಭತ್ಯೆ, ರಜೆ ಪ್ರಯಾಯಿತಿ, ವೈದ್ಯಕೀಯ ಮರುಪಾವತಿ ಪ್ರಮಾಣವನ್ನು ಪ್ರಸ್ತುತ ಹಣದುಬ್ಬರ ಪ್ರಮಾಣಕ್ಕೆ ತಕ್ಕಂತೆ ಹೆಚ್ಚಿಸಬೇಕು ಎಂದೂ ಆಯೋಗವು ತನ್ನ ಶಿಫಾರಸಿನಲ್ಲಿ ತಿಳಿಸಿರುವುದಾಗಿ ಮೂಲಗಳು ಹೇಳಿವೆ.

ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆಯೂ ಆಯೋಗ ಕೆಲವು ಶಿಫಾರಸುಗಳನ್ನು ಮಾಡಿದ್ದು, ಪ್ರಸ್ತುತ ಇರುವ ಖಾಲಿ ಹುದ್ದೆಗಳ ಪೈಕಿ ಅಗತ್ಯವಿರುವ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು. ನೌಕರರಿಗೆ ಆಗಾಗೆ ತರಬೇತಿ ನೀಡಬೇಕು ಎಂದು ಹೇಳಿದೆ. ಅಲ್ಲದೆ, ಉತ್ತಮವಾಗಿ ಕಾರ್ಯನಿರ್ವಹಿಸುವ ನೌಕರರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದರೊಂದಿಗೆ ಅವರಿಗೆ ನೀಡುವ ನಗದು ಪುರಸ್ಕಾರದ ಮೊತ್ತ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದೂ ಹೇಳಿರುವುದಾಗಿ ತಿಳಿದುಬಂದಿದೆ.

ಟಾಪ್ ನ್ಯೂಸ್

1-virat-Kohli

Australia; ಮಂಗಳೂರಿಗನ ಸಲೂನ್‌ನಲ್ಲಿ ಕೊಹ್ಲಿ ರಿಲ್ಯಾಕ್ಸ್‌: ವಿರಾಟ್‌ ನಡೆಗೆ ಕಿರಣ್‌ ಫಿದಾ

mob

OTP ನಿಯಮದಿಂದ ಅಗತ್ಯ ಸೇವೆಗೆ ತೊಂದರೆ ಆಗದು: ಟ್ರಾಯ್‌

Surathkal: ರ‍್ಯಾಗಿಂಗ್; 9 ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲು

Surathkal: ರ‍್ಯಾಗಿಂಗ್; 9 ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲು

Manipal: ಹುಲ್ಲು ತರಲು ತೆರಳಿದ್ದ ಮಹಿಳೆಯ ಮೃತದೇಹ ಪತ್ತೆ

Manipal: ಹುಲ್ಲು ತರಲು ತೆರಳಿದ್ದ ಮಹಿಳೆಯ ಮೃತದೇಹ ಪತ್ತೆ

Bantwal: ಯಜಮಾನರು-ಓಟಗಾರರಿಂದಲೇ ಹುಟ್ಟಿದ ಕಂಬಳ

Bantwal: ಯಜಮಾನರು-ಓಟಗಾರರಿಂದಲೇ ಹುಟ್ಟಿದ ಕಂಬಳ

rahul-gandhi

Election;ವಿಶ್ವಾಸಾರ್ಹತೆಗೆ ಧಕ್ಕೆ: ಕಾಂಗ್ರೆಸ್‌ ಆಂದೋಲನ

1-eqwewqe

Adelaide Test: ಭಾರತಕ್ಕೆ ಹಗಲು-ರಾತ್ರಿ ಅಭ್ಯಾಸ ಪಂದ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-shahapur

Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

Talk war between Minister Sharanabasappa Darshanapura and MLA Sharanagouda Kandakur in KDP meeting

Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!

Yadgir: ಅಪ್ರಾಪ್ತೆ ಮೇಲೆ ಅತ್ಯಾಚಾರ… ಪ್ರಕರಣ ದಾಖಲು

Yadgir: ಅಪ್ರಾಪ್ತೆ ಮೇಲೆ ಅತ್ಯಾಚಾರ… ಪ್ರಕರಣ ದಾಖಲು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-virat-Kohli

Australia; ಮಂಗಳೂರಿಗನ ಸಲೂನ್‌ನಲ್ಲಿ ಕೊಹ್ಲಿ ರಿಲ್ಯಾಕ್ಸ್‌: ವಿರಾಟ್‌ ನಡೆಗೆ ಕಿರಣ್‌ ಫಿದಾ

mob

OTP ನಿಯಮದಿಂದ ಅಗತ್ಯ ಸೇವೆಗೆ ತೊಂದರೆ ಆಗದು: ಟ್ರಾಯ್‌

Surathkal: ರ‍್ಯಾಗಿಂಗ್; 9 ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲು

Surathkal: ರ‍್ಯಾಗಿಂಗ್; 9 ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲು

Manipal: ಹುಲ್ಲು ತರಲು ತೆರಳಿದ್ದ ಮಹಿಳೆಯ ಮೃತದೇಹ ಪತ್ತೆ

Manipal: ಹುಲ್ಲು ತರಲು ತೆರಳಿದ್ದ ಮಹಿಳೆಯ ಮೃತದೇಹ ಪತ್ತೆ

Bantwal: ಯಜಮಾನರು-ಓಟಗಾರರಿಂದಲೇ ಹುಟ್ಟಿದ ಕಂಬಳ

Bantwal: ಯಜಮಾನರು-ಓಟಗಾರರಿಂದಲೇ ಹುಟ್ಟಿದ ಕಂಬಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.