ಐದು ಕೋಟಿಗೂ ಅಧಿಕ ಮತದಾರರು
Team Udayavani, May 2, 2018, 6:00 AM IST
ಬೆಂಗಳೂರು: ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಐದುಕೋಟಿಗೂ ಅಧಿಕ ಮತದಾರರು ತಮ್ಮ ಹಕ್ಕು
ಚಲಾಯಿಸಲಿದ್ದಾರೆ. ಏಪ್ರಿಲ್ 14ಕ್ಕೆ ಅಂತ್ಯಗೊಂಡ ಮತದಾರರ ನೋಂದಣಿ ಪ್ರಕ್ರಿಯೆಯಲ್ಲಿ ರಾಜ್ಯ ಮತದಾರರ ಸಂಖ್ಯೆ 2,56,75,579 ಪುರುಷರು ಮತ್ತು 2,50,09,904 ಮಹಿಳೆಯರು ಸೇರಿ 5,06,90,538 ಆಗಿದೆ. ಫೆಬ್ರವರಿ 28ಕ್ಕೆ ಪ್ರಕಟಗೊಂಡ ಅಂತಿಮ ಮತದಾರರ ಪಟ್ಟಿಯಲ್ಲಿ 4.96 ಕೋಟಿ ಮತದಾರರಿದ್ದರು. ಅಂದರೆ, ಸುಮಾರು 10 ಲಕ್ಷ ಮತದಾರರು ಎರಡು ತಿಂಗಳ ಅವಧಿಯಲ್ಲಿ ಸೇರ್ಪಡೆಗೊಂಡಿದ್ದಾರೆಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯುವ ಮತದಾರರ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದ್ದು, ಏಪ್ರಿಲ್ 14ಕ್ಕೆ 15.72 ಲಕ್ಷ ಆಗಿದೆ (ಫೆ. 28ಕ್ಕೆ 15.42 ಲಕ್ಷ ಇತ್ತು). ಅದೇ
ರೀತಿ, ವಿಧಾನಸಭಾ ಕ್ಷೇತ್ರವಾರು ಗಮನಿಸಿದರೆ ಬೆಂಗಳೂರು ದಕ್ಷಿಣದಲ್ಲಿ ಅಧಿಕವಾಗಿದ್ದು, 6.03 ಲಕ್ಷ ಮಂದಿ ಇದ್ದಾರೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ 1.66 ಲಕ್ಷ ಇದ್ದು, ಅತಿ ಕಡಿಮೆ ಮತದಾರರನ್ನು ಹೊಂದಿದೆ ಎಂದರು.
ಕಣದಲ್ಲಿ 220 ಮಹಿಳಾ ಮಣಿಗಳು: ವಿಧಾನಸಭಾ ಚುನಾವಣೆಯಲ್ಲಿ ಒಟ್ಟಾರೆ 224 ಕ್ಷೇತ್ರಗಳಲ್ಲಿ 2,655 ಅಭ್ಯರ್ಥಿಗಳು ಕಣದಲ್ಲಿದ್ದು, ಈ ಪೈಕಿ 220 ಮಹಿಳೆಯರು ಅದೃಷ್ಟ ಪರೀಕ್ಷೆಗೊಡ್ಡಿದ್ದಾರೆ. 220ರಲ್ಲಿ ವಿವಿಧ ಪಕ್ಷಗಳಿಂದ ಅಖಾಡಕ್ಕಿಳಿದವರ ಸಂಖ್ಯೆ ಕೇವಲ 34. ಇದರಲ್ಲಿ ಕಾಂಗ್ರೆಸ್‌ನಿಂದ 15, ಬಿಜೆಪಿ 8, ಜೆಡಿಎಸ್ 7, ಸಿಪಿಎಂ 2, ಬಿಎಸ್‌ಪಿ 1, ಎನ್ ಸಿಪಿ 1 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇತರೆ ಪಕ್ಷಗಳಿಂದ 113 ಮತ್ತು ಪಕ್ಷೇತರರಾಗಿ 73 ಮಹಿಳೆಯರು ಸ್ಪರ್ಧಿಸಿದ್ದಾರೆ. ಒಟ್ಟಾರೆ 2,655 ಅಭ್ಯರ್ಥಿಗಳಲ್ಲಿ 41-50 ವರ್ಷದ ಒಳಗಿನ 855 ಅಭ್ಯರ್ಥಿಗಳು ಕಣದಲ್ಲಿದ್ದಾರೆಂದು ಮಾಹಿತಿ ನೀಡಿದರು.
ಗೈರುಹಾಜರಿ; ಕಠಿಣಕ್ರಮದ ಎಚ್ಚರಿಕೆ
ನಗರದಲ್ಲಿ ಚುನಾವಣಾ ಕರ್ತವ್ಯದಿಂದ ಅಧಿಕಾರಿಗಳು ಇಲ್ಲ-ಸಲ್ಲದ ನೆಪವೊಡ್ಡಿ ಜಾರಿಕೊಳ್ಳುತ್ತಿದ್ದಾರೆ. ಇದು ತಲೆನೋವಾಗಿ
ಪರಿಣಮಿಸಿದೆ. – ಈ ಬಗ್ಗೆ ಸ್ವತಃ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್ ಬೇಸರ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು. ವಿಕಾಸ ಸೌಧದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಅಸಮಾಧಾನ ಹೊರಹಾಕಿದರು. ಒಟ್ಟಾರೆ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡವರಲ್ಲಿ ನಗರದಲ್ಲಿ ಅತಿ ಹೆಚ್ಚು ಅಧಿಕಾರಿಗಳು ವಿವಿಧ ಕಾರಣಗಳನ್ನು ನೀಡಿಗೈರುಹಾಜರಾಗಿ ದ್ದಾರೆ. ಸುಮಾರು 1,500 ಮಂದಿ ಚುನಾವಣಾ ತರಬೇತಿಗೆ ಗೈರುಹಾಜರಾಗಿರುವುದು ಕಂಡು ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಧಿಕಾರಿಗಳ ಗೈರುಹಾಜರಾತಿಗೆ ನೀಡಿದ ಕಾರಣಗಳು ಸೂಕ್ತವಾಗಿಲ್ಲದಿದ್ದರೆ, ಅಂತಹ ಅಧಿಕಾರಿಗಳ ವಿರುದಟಛಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕರ್ತವ್ಯದಿಂದ ನುಣುಚಿಕೊಳ್ಳುವ ಅಧಿಕಾರಿಯನ್ನು ಬಂಧಿಸಲಿಕ್ಕೂ ಅವಕಾಶ ಇದೆ ಎಂದು ಎಚ್ಚರಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟಾರೆ 21 ಸಾವಿರ ಜನ ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಯಾಗಿ ನಿಯೋಜನೆ
ಗೊಂಡಿದ್ದು, 8,278 ಜನ ಬೂತ್‌ಮಟ್ಟದ ಅಧಿಕಾರಿಗಳು ಇದ್ದಾರೆ. ಈ ಪೈಕಿ ಈಚೆಗೆ ನಡೆದ ತರಬೇತಿಯಲ್ಲಿ ಒಮ್ಮೆಲೆ 1,500 ಮಂದಿ ಗೈರು ಹಾಜರಾಗಿದ್ದಾರೆ. ಇದನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದೆ.
ಕಾಪ್ಟರ್‌ಗೆ 81 ಅರ್ಜಿ; ಬಿಜೆಪಿಯಿಂದಲೇ 51
ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಗಣ್ಯರು ಮತ್ತು ಸ್ಟಾರ್‌ಗಳನ್ನು ಕರೆತರಲು ಇದುವರೆಗೆ ವಿವಿಧ ರಾಜಕೀಯ ಪಕ್ಷಗಳಿಂದ 81 ಹೆಲಿಕಾಪ್ಟರ್‌ಗಳಿಗಾಗಿ ಅರ್ಜಿ ಸಲ್ಲಿಕೆಯಾಗಿದ್ದು, ಈ ಪೈಕಿ ಬಿಜೆಪಿಯಿಂದಲೇ 51 ಹೆಲಿಕಾಪ್ಟರ್‌ಗಾಗಿ ಬೇಡಿಕೆ ಬಂದಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್ ಮಾಹಿತಿ ನೀಡಿದರು.
3 ಕೋಟಿಜನರನ್ನು ತಲುಪಿದ ಆಂದೋಲನ
ಮತದಾನ ಶಿಕ್ಷಣ ಮತ್ತು ಪಾಲ್ಗೊಳ್ಳುವಿಕೆ ಆಂದೋಲನಕ್ಕೆ (ಸ್ವೀಪ್) ಉತ್ತಮ ಸ್ಪಂದನೆ ದೊರಕಿದ್ದು, ರಾಜ್ಯಾದ್ಯಂತ ಕೈಗೊಂಡಿರುವ
ವಿವಿಧ ಕಾರ್ಯಕ್ರಮಗಳ ಮೂಲಕ ಈ ಆಂದೋಲನವು ಸುಮಾರು 3 ಕೋಟಿ ಜನರನ್ನು ತಲುಪಿದೆ ಎಂದು ಸಂಜೀವಕುಮಾರ್ ತಿಳಿಸಿದರು.
ಹೊಸ ರಾಯಭಾರಿಗಳು ಚುನಾವಣಾ ಆಯೋಗ ಹೊಸ ಪ್ರಚಾರ ರಾಯಭಾರಿಗಳನ್ನು ಪ್ರಕಟಿಸಿದೆ. ಈ ರಾಯಭಾರಿಗಳನ್ನು ವಿವಿಧ ಕ್ಷೇತ್ರಗಳಿಂದ ಆಯ್ಕೆ ಮಾಡಲಾಗಿದ್ದು ಸಾಮಾನ್ಯರಿಗೂ ತಲುಪುವ ಉದ್ದೇಶದಿಂದ ಕಿರುತೆರೆ ನಟರಾದ ರಜಿನಿ, ಆರ್.ಬಿ.ವೈಷ್ಣವಿ, ಚಂದನ್ ಶೆಟ್ಟಿ ಹಾಗೂ ಚಿತ್ರ ನಟ ವಸಿಷ್ಠ ಎನ್.ಸಿಂಹ ಚುನಾವಣೆಯ ಪ್ರಚಾರ ರಾಯಭಾರಿಗಳಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.