ಕಲಾಪವಲ್ಲ ಪ್ರಲಾಪ
Team Udayavani, May 2, 2018, 9:30 AM IST
ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರಕಾರದ ಅನವಶ್ಯಕ ಪ್ರಕರಣಗಳ ಸಂಖ್ಯೆ ಅಧಿಕವಾಗಿದ್ದು, ಇದನ್ನು ಸರಕಾರಗಳು ಗಂಭೀರವಾಗಿ ಪರಿಗಣಿಸಬೇಕೆಂದು ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ. ಒಮ್ಮೆ ತಳ್ಳಿ ಹಾಕಿದ ಮೇಲ್ಮನವಿಗಳನ್ನು ಪದೇ ಪದೇ ಸಲ್ಲಿಸುವುದು, ಒಂದೇ ಪ್ರಕರಣದ ವಿಚಾರಣೆಗೆ 10 ವಕೀಲರನ್ನು ನೇಮಿಸುವುದು, ಮೇಲ್ಮನವಿ ಸಲ್ಲಿಕೆಗಾಗಿಯೇ ಹಣ ವ್ಯರ್ಥಗೊಳಿಸುತ್ತಿರುವುದನ್ನು ಇನ್ನಾದರೂ ಸಾಕು ಮಾಡಬೇಕು, ಕೇಂದ್ರ ಸರಕಾರ ತನ್ನ ‘ಕಾನೂನು ಹೋರಾಟ ನೀತಿ’ಯನ್ನು ಬದಲಿಸಿಕೊಳ್ಳಬೇಕು ಎಂದು ನ್ಯಾಯಪೀಠ ತಾಕೀತು ಮಾಡಿದೆ.
ಸರ್ಕಾರದ ಮೇಲೇಕೆ ಕೋಪ?
ಸುಪ್ರೀಂ ಕೋಪಕ್ಕೆ ಕಾರಣಗಳಿವೆ. ಪ್ರಕರಣವೊಂದರಲ್ಲಿ ಕೇಂದ್ರ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕಳೆದ ಡಿಸೆಂಬರ್‌ನಲ್ಲೇ ತಳ್ಳಿಹಾಕಿತ್ತು. ಆದರೆ, ಜನವರಿಯಲ್ಲಿ ಕೇಂದ್ರ ಮತ್ತೆ ಅದೇ ವಿಚಾರಕ್ಕೆ ಸಂಬಂಧಿಸಿ ಮೇಲ್ಮನವಿ ಸಲ್ಲಿಸಿತು. ಮತ್ತೆ ಅರ್ಜಿಯನ್ನು ತಳ್ಳಿಹಾಕಿದ ನ್ಯಾಯಪೀಠ, ಅನವಶ್ಯಕ ಮೇಲ್ಮನವಿ ಹಿನ್ನೆಲೆಯಲ್ಲಿ ಕೇಂದ್ರದ ಮೇಲೆ 1 ಲಕ್ಷ ರೂ. ದಂಡ ಹೇರಿತು. ಆದರೆ, ಮಾರ್ಚ್‌ನಲ್ಲಿ ಕೇಂದ್ರ ಅದೇ ಪ್ರಕರಣಕ್ಕೆ ಪುನಃ ಮೇಲ್ಮನವಿ ಸಲ್ಲಿಸಿದ್ದರಿಂದಾಗಿ ಆಕ್ರೋಶಗೊಂಡ ನ್ಯಾಯಪೀಠ, ಮತ್ತೆ 1 ಲಕ್ಷ ರೂ. ದಂಡ ವಿಧಿಸಿತು.
ಕಾನೂನು ಮಿಷನ್ ನಿರರ್ಥಕ?
ನ್ಯಾಯಾಲಯಗಳಲ್ಲಿ ವರ್ಷಗಟ್ಟಲೆ ಬಾಕಿ ಉಳಿಯುವ ಪ್ರಕರಣಗಳ ತ್ವರಿತ ಇತ್ಯರ್ಥದ ಸದುದ್ದೇಶದಿಂದ ಕೇಂದ್ರವು 2010ರಲ್ಲಿ ರಾಷ್ಟ್ರೀಯ ಕಾನೂನು ಮಿಷನ್ ಜಾರಿಗೊಳಿಸಿತು. ಅದರಂತೆ, ಪ್ರಕರಣಗಳ ಸರಾಸರಿ ಇತ್ಯರ್ಥ ಅವಧಿಯನ್ನು 15 ವರ್ಷದಿಂದ 3 ವರ್ಷಕ್ಕೆ ಇಳಿಸಲಾಗಿತ್ತು. ಆದರೆ, ಖುದ್ದು ತಾನೇ ಈ ಮಿಷನ್‌ನ ಉದ್ದೇಶಗಳನ್ನು ಪಾಲಿಸುತ್ತಿಲ್ಲ ಎಂದು ನ್ಯಾಯ ಪೀಠ ಬೇಸರಿಸಿದೆ. ಸರಕಾರವು, ತಾನೇ ಕೆಲವು ಪ್ರಕರಣಗಳ ಬಗ್ಗೆ ಪದೇ ಪದೆ ಮೇಲ್ಮನವಿ ಸಲ್ಲಿಸಿ ನ್ಯಾಯಾಲಯದ ಅಮೂಲ್ಯ ಅವಧಿಯನ್ನು ವ್ಯರ್ಥಗೊಳಿಸುತ್ತಿದೆ ಎಂದಿದೆ.
ಮೇಲ್ಮನವಿಗಳಿಂದ ಆಗುವ ತೊಂದರೆ
– ನ್ಯಾಯಾಲಯದ ಕಲಾಪ ಅವಧಿ ವ್ಯರ್ಥ
– ವಕೀಲರಿಗೆ, ದಾಖಲೆಗಳಿಗೆ ಅನವಶ್ಯಕ ಖರ್ಚು
– ಸರಕಾರಿ ಬೊಕ್ಕಸದ ಮೇಲೆ ಹೊರೆ
– ದೇಶದ ತೆರಿಗೆದಾರರ ಹಣ ವ್ಯರ್ಥ
– ಇತರ ಮೇಲ್ಮನವಿದಾರರ ಅರ್ಜಿಗಳ ತ್ವರಿತ ವಿಚಾರಣೆಗೆ ಸಮಸ್ಯೆ
2017ರಲ್ಲಿ ಅನವಶ್ಯಕ ಕೇಸುಗಳು
ಬಾಕಿ ಇರುವ ಪ್ರಕರಣಗಳ ಸಂಖ್ಯೆ: 3.2 ಕೋಟಿ.
ಬಾಕಿ ಇರುವ ಕೇಂದ್ರ, ರಾಜ್ಯ ಸರಕಾರಗಳ ಪ್ರಕರಣಗಳು: 46%
ಅತಿ ಹೆಚ್ಚು ಪ್ರಕರಣ ಬಾಕಿ ಉಳಿಸಿಕೊಂಡ ಇಲಾಖೆಗಳು (ರೈಲ್ವೇ, ವಿತ್ತ, ಸಂವಹನ, ಗೃಹ ಮತ್ತು ರಕ್ಷಣಾ ಇಲಾಖೆ): 5
ಯಾವ್ಯಾವ ಇಲಾಖೆಯದ್ದು ಎಷ್ಟೆಷ್ಟು ಕೇಸು?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ಗೋ ಮಾಂಸ ತಿನ್ನೋದು ಸರಿ ಎಂದಾದರೆ ಮೂತ್ರ ಯಾಕೆ ಬೇಡ: ಬಿಜೆಪಿ
Delhi Polls: ದಿಲ್ಲಿ ವಿಧಾನಸಭೆಯ 70 ಸ್ಥಾನಕ್ಕೆ ಬರೋಬ್ಬರಿ 699 ಅಭ್ಯರ್ಥಿಗಳು ಸ್ಪರ್ಧೆ!
Supreme Court: ಟೆಕಿ ಅತುಲ್ ಪುತ್ರನನ್ನು ಅಜ್ಜಿ ಸುಪರ್ದಿಗೆ ನೀಡಲು ಸುಪ್ರೀಂ ನಕಾರ
NRI: ಸಂಸತ್ತಿನಲ್ಲಿ ಎನ್‌ಆರ್‌ಐ ಪ್ರಾತಿನಿಧ್ಯ: ಸ್ಥಾಯಿ ಸಮಿತಿ ಸಭೇಲಿ ಚರ್ಚೆ
Dog’s Revenge: ತನಗೆ ಡಿಕ್ಕಿ ಹೊಡೆದ ಕಾರಿನ ಮೇಲೆ ಸೇಡು ತೀರಿಸಿಕೊಂಡ ಶ್ವಾನ…