ಮೊಬೈಲ್ ಸಿಮ್ ಪಡೆಯಲು ಆಧಾರ್ ಕಡ್ಡಾಯವಲ್ಲ: ವರದಿ
Team Udayavani, May 2, 2018, 11:06 AM IST
ಹೊಸದಿಲ್ಲಿ : ಅನೇಕ ಸರಕಾರಿ ಸೇವೆಗಳನ್ನು ಪಡೆಯಲು ಅಧಿಕೃತ ಬಯೋಮೆಟ್ರಿಕ್ ಗುರುತು ಪತ್ರವಾಗಿರುವ ಆಧಾರ್ ಕಾರ್ಡ್ ಅತೀ ಮುಖ್ಯ ದಾಖಲೆಯಾದರೂ ಮೊಬೈಲ್ ಸಿಮ್ ಪಡೆಯುವುದಕ್ಕೆ ಅದು ಕಡ್ಡಾಯವಲ್ಲ ಎಂದು ವರದಿಗಳು ಹೇಳಿವೆ.
ಮೊಬೈಲ್ ಸಿಮ್ ನೀಡುವುದಕ್ಕೆ ಆಧಾರ್ ಬದಲು ಇತರ ಗುರುತು ಪತ್ರ ದಾಖಲೆಗಳಾಗಿರುವ ಡ್ರೈವಿಂಗ್ ಲೈಸನ್ಸ್, ವೋಟರ್ ಐಡಿ ಕಾರ್ಡ್ ಇತ್ಯಾದಿಗಳನ್ನು ಸ್ವೀಕರಿಸುವಂತೆ ಸರಕಾರ ಟೆಲಿಕಾಂ ನಿರ್ವಾಹಕರಿಗೆ ಸೂಚಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ.
ಮೊಬೈಲ್ ಸಿಮ್ ನೀಡುವುದಕ್ಕೆ ಆಧಾರ್ ಹೊರತಾದ ಇತರ ಗುರುತು ದಾಖಲೆಗಳನ್ನು ತತ್‌ಕ್ಷಣದಿಂದಲೇ ಸ್ವೀಕರಿಸುವಂತೆ ಸರಕಾರ ಟೆಲಿಕಾಂ ಕಂಪೆನಿಗಳಿಗೆ ಸೂಚಿಸಿರುವುದಾಗಿ ಟೆಲಿಕಾಂ ಕಾರ್ಯದರ್ಶಿ ಅರುಣಾ ಸುಂದರರಾಜನ್ ತಿಳಿಸಿದ್ದಾರೆ.
ಸರಕಾರದ ವಿವಿಧ ಸೇವೆಗಳಿಗೆ ಆಧಾರ್ ಜೋಡಣೆಯನ್ನು ಕಡ್ಡಾಯ ಮಾಡುವ ಮಾಚ್ 31ರ ಗಡುವನ್ನು ಸುಪ್ರೀಂ ಕೋರ್ಟ್, ಈ ವಿಷಯದಲ್ಲಿ ತನ್ನ ಅಂತಿಮ ತೀರ್ಪು ಪ್ರಕಟವಾಗುವ ವರೆಗಿನ ಅನಿರ್ದಿಷ್ಟಾವಧಿಗೆ ಆಧಾರ್ ಜೋಡಣೆ ಗಡುವನ್ನು ವಿಸ್ತರಿಸಲಾಗಿದೆ ಎಂದು ಹೇಳಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ಗೋ ಮಾಂಸ ತಿನ್ನೋದು ಸರಿ ಎಂದಾದರೆ ಮೂತ್ರ ಯಾಕೆ ಬೇಡ: ಬಿಜೆಪಿ
Delhi Polls: ದಿಲ್ಲಿ ವಿಧಾನಸಭೆಯ 70 ಸ್ಥಾನಕ್ಕೆ ಬರೋಬ್ಬರಿ 699 ಅಭ್ಯರ್ಥಿಗಳು ಸ್ಪರ್ಧೆ!
Supreme Court: ಟೆಕಿ ಅತುಲ್ ಪುತ್ರನನ್ನು ಅಜ್ಜಿ ಸುಪರ್ದಿಗೆ ನೀಡಲು ಸುಪ್ರೀಂ ನಕಾರ
NRI: ಸಂಸತ್ತಿನಲ್ಲಿ ಎನ್‌ಆರ್‌ಐ ಪ್ರಾತಿನಿಧ್ಯ: ಸ್ಥಾಯಿ ಸಮಿತಿ ಸಭೇಲಿ ಚರ್ಚೆ
Dog’s Revenge: ತನಗೆ ಡಿಕ್ಕಿ ಹೊಡೆದ ಕಾರಿನ ಮೇಲೆ ಸೇಡು ತೀರಿಸಿಕೊಂಡ ಶ್ವಾನ…