ಬೋಲ್ಡ್‌ ಈಸ್‌ ಬ್ಯೂಟಿಫ‌ುಲ್‌


Team Udayavani, May 2, 2018, 12:36 PM IST

bold-&-beauti.jpg

25 ವರ್ಷ ತುಂಬುವ ಮೊದಲೇ ಹೆಣ್ಣುಮಕ್ಕಳಿಗೆ ಮದುವೆ ಮಾಡಿಬಿಡಬೇಕು ಎಂದು ನಂಬಿದ್ದ ಕಾಲವೊಂದಿತ್ತು. ಅದನ್ನೀಗ, ಹೆಣ್ಣುಮಕ್ಕಳೇ ಬದಿಗೆ ಸರಿಸಿದ್ದಾರೆ. ಸ್ವಲ್ಪ ಸಂಪಾದಿಸೋಣ, ಏನಾದ್ರೂ ಸಾಧಿಸೋಣ, ಆಮೇಲೆ ಮದುವೆಯಾಗೋಣ ಎಂದು ದಿಟ್ಟವಾಗಿ ಹೇಳುತ್ತಿದ್ದಾರೆ. 30 ದಾಟಿದ್ಮೇಲೆ ಮದುವೆ ಆದ್ರಾಯ್ತು, ಈಗ್ಲೆ ಏನವಸರ? ಎಂದೂ ಕೇಳುತ್ತಿದ್ದಾರೆ. ಸಮಾಜ ಇವರನ್ನು “ಬೋಲ್ಡ್‌ ಬ್ಯೂಟೀಸ್‌’ ಎಂದು ಕರೆಯುತ್ತಿದೆ. ಈ ಸ್ವತಂತ್ರ ಯೋಚನೆಯ ಅಕ್ತಂಗಿಯರ ಬದುಕು-ಯೋಚನೆಗಳ ಭಾವಲೋಕದ ಅನಾವರಣ ಇಲ್ಲಿದೆ…

ನಾವು ಹುಡುಗಿಯರು, ಆಗಾಗ ಮಾರ್ದವ ಘಳಿಗೆಗಳು ಅಂತಾರಲ್ಲ: ಅಂಥ ಸಂದರ್ಭಗಳಿಗೆ ಸಾಕ್ಷಿಗಳೂ, ಮಾಡೆಲ್‌ಗ‌ಳೂ, ಫ‌ಲಾನುಭವಿಗಳೂ ಆಗ್ತಾ ಇರಿ¤àವಿ! ಬಾಲ್ಯದ ಪುಟ್ಟ ಪ್ರಪಂಚದ ಸಮಸ್ಯೆಗಳು, ನಮಗಾಗಿಯೇ ದೇವರು ಕಳುಹಿಸಿದಂತಿರುವ ಸ್ನೇಹಿತ, ನೆನೆದಾಕ್ಷಣ ಸಮಾಧಾನಕ್ಕೆ ದೊರಕುವ, ನಮಗಾಗಿಯೇ ಹೋರಾಡುವ ಹುಡುಗ, ಸಮಸ್ಯೆಗೆ ಪರಿಹಾರ ಹುಡುಕುವ ಹುಡುಗ…ಇಂಥವರೆಲ್ಲ ನಮ್ಮ ಪಾಲಿನ ಹೀರೋ ಆಗಿಬಿಟ್ಟಿರ್ತಾರೆ. ಮತ್ತೆ ಶಾಲೆಯ ದಿನಗಳು ಮುಗಿದಾಗ, ಮನಸು ಬರಿದೇ, ಬರಿದು… 

ಮುಂದಿನ ಪಯಣ ನೌಕರಿಯದ್ದು. ಯಾವುದೋ ಆಫೀಸಿನಲ್ಲಿ ಟಕ ಟಕ ಟಕ ಅಂತ ಕಂಪ್ಯೂಟರ್‌ ಕುಟ್ಟುವಾಗ ಅಚಾನಕ್‌ ಆಗಿ ಮೌಸ್‌ ಮೇಲೆ ಇರೋ ಕೈ ಮೇಲೆ, ಆರೇಳು ತಿಂಗಳ ಹಿಂದಷ್ಟೇ ಪರಿಚಯವಾದ, ವಿಪರೀತ ಕೇರ್‌ ತಗೊಳ್ಳುವ, ಸಭ್ಯ ಅಂತ ಐದಾರು ಬಾರಿ ಪ್ರೂವ್‌ ಮಾಡಿರುವ ಚಿಗುರು ಮೀಸೆಯ ಯುವಕ ಕೈಇಟ್ಟ ಅಂದ್ರೆ ಮುಗೀತು, ಚೆಲುವಿನ ಚಿತ್ತಾರ ಮನಸೊಳಗೆ! ಇನ್ಯಾವುದೋ ಕ್ಷಣ, ಇನ್ಯಾರೋ ಪರಿಚಿತ ಅದೊಂದು ಸಂತಸದ ಕ್ಷಣವನ್ನು ಹಂಚಿಕೊಂಡ್ರೆ, ಹಾಗೇ ಬರ ಸೆಳೆದು ಭುಜವನ್ನು ಅವನ ಎದೆಗೊತ್ತಿಕೊಂಡ್ರೆ, ಪುಳಕ…

ಇನ್ನೆಲ್ಲೋ ಎಡವಿಬಿದ್ದಾಗ ಅದ್ಯಾರೋ ಮನಸೂರೆ ಮಾಡುವ ರಾಜಕುಮಾರ ಓಡಿಬಂದು ಆಸರೆ ಆದ್ರೆ ಮನಸೊಳಗೆ ಹಿತವಾದ ತಂಗಾಳಿ! ಜೀವನದ ಅನೇಕ ಭೇಟಿಗಳಲ್ಲಿ, ಮತ್ಯಾವುದೋ ಒಂದು ಕ್ಷಣ, ಇನ್ಯಾರೋ ಮನ ಕದಿವ ಹುಡುಗನೊಬ್ಬನ ಜೊತೆ ಅರಿಯದೇ ಕಣ್‌ಕಣ್‌ ಬೆಸೆದಾಗ, ಮನಸು ಅವನ ತಕ್ಕೆಗೆ ಜಾರಿಬಿಟ್ಟಿರುತ್ತೆ. ಜೋರಾದ ದುಃಖದಲ್ಲಿ ಬರಸೆಳೆದು ಅಪ್ಪಿ ಸಾಂತ್ವನ ಹೇಳುವ ಗೆಳೆಯ, ಮತ್ತೂಂದು ಹಂತದಲ್ಲಿ ಪರಿಚಯವಾಗುವ ಆತ್ಮೀಯ, ಹಾಗೊಂದು ಆಸೆ ಮುಂದಿಟ್ಟಾಗ, “ನಿನ್ನ ಬೆರಳ ಉಗುರಿಗೆ ಬಣ್ಣದ ನೇಲ್‌ ಪಾಲಿಷ್‌ ಹಚ್ಚಲೇ’ ಅಂತ ಪ್ರೇಮ ನಿವೇದಿಸಿಕೊಂಡಾಗ ರಾಧಿಕೆಯರಾಗಿಬಿಡ್ತೇವೆ. 

  ಅವನೂ ಅಷ್ಟೇ. ಒಂದು ಮಧುರ ಕಂಪನಕ್ಕೆ ಒಳಗಾಗಿರ್ತಾನೆ. ಇವೆಲ್ಲಾ ಅಚಾನಕ್‌ ಆಗಿ ನಡೆದುಬಿಡುವಂಥದ್ದು, ಆ ಕ್ಷಣಕ್ಕೆ ಇವಳು ನನ್ನವಳು/ ನನ್ನವ ಅನ್ನುವ ಆ ಒಂದು ಭಾವ ಮೂಡಿ ಮರೆಯಾಗೋದಂತೂ ಸುಳ್ಳಲ್ಲ. ಅದು ಬೇಕಂತಲೇ ಆಗಿರೋದಿಲ್ಲ. ಇಂಥ ಪ್ರತಿ ಮೊದಲ ಅನುಭವ ಪ್ರತೀ ಹೆಣ್ಣನ್ನೂ ಕಾಡಿರುತ್ತೆ. ಪ್ರತೀ ಗಂಡಿನ ನಿ¨ªೆಗೆಡಿಸಿರುತ್ತೆ. ತನ್ನ ಕನಸಿನ ಕೃಷ್ಣನನ್ನು ಈ ವಿಶೇಷ ಸನ್ನಿವೇಶಗಳಲ್ಲಿ ಹುಡುಕುವ ಪ್ರಯತ್ನ ನಡೆದಿರುತ್ತೆ. ಪ್ರತಿಯೊಬ್ಬ  ಹುಡುಗಿಯೂ ಇಂಥ ಸನ್ನಿವೇಶಗಳನ್ನು ದಾಟಿಯೇ ಬಂದಿರ್ತಾಳೆ.

ಆದರೆ, ಮನಸ್ಸಿನಲ್ಲಿ ಹೊಮ್ಮಿದ ಮಧುರ ಭಾವನೆಗಳನ್ನು ಹೊರಗೆ ಪ್ರಕಟವಾಗಲು ಬಿಡುವುದಿಲ್ಲ. ಆ ಕ್ಷಣ ಮೂಡಿದ “ಬೇಕು’ ಅನ್ನುವ ಆಸೆಗಳಿಗೆ ಸರಿಯಾದ ಪೋಷಣೆ ಸಿಕ್ಕೋದಿಲ್ಲ. ಅಲ್ಲಿಗೆ ಅದು ಆಕರ್ಷಣೆ ಅನ್ನೋ ಹೆಸರಲ್ಲಿ ಕೊನೆಗೊಳ್ಳುತ್ತೆ. ಆ ಭಾವನೆಗಳು ಉದ್ದ ಬೆಳೆಯೊಲ್ಲ. ಹರೆಯ 30 ಮುಟ್ಟುವ ಹೊತ್ತಿಗೆ ಆ ನೆನಪುಗಳು ಮನದೊಳಗೆ ಸುಳಿದಾಗ ತಿಳಿನಗೆಯೊಂದು ಮೂಡಿದ್ರೂ, ಅದೊಂದು, beautiful infatuationಹಹ್ಹಹ್ಹ.. ಅಂತ ನೆನಪುಗಳನ್ನ ಲೈಟ್‌ ಆಗಿ ಕೊಡವಿಕೊಳ್ಳುವಷ್ಟರ ಮಟ್ಟಿಗೆ ಹುಡುಗೀರು ಮೈಂಡ್‌ಸೆಟ್‌ ಬೆಳೆಸಿಕೊಂಡಿರ್ತಾರೆ.

ರೆಸ್ಟೋರೆಂಟ್‌ ಒಂದರಲ್ಲಿ ಯಾವುದೋ ಒಂದು ಜೋಡಿ ಒಂದೇ ಕಪ್‌ನಲ್ಲಿ ಜ್ಯೂಸ್‌ ಹೀರುತ್ತಾ ಇದ್ದರೆ, ಮತ್ತೂಂದು ಟೇಬಲ್‌ನಲ್ಲಿ ಯಾರೋ ಕಾಲೇಜುಕನ್ಯೆ ಸೋದರ ಮಾವನ ಜತೆ ನಾಚಾ¤ ನಾಚಾ¤ ಸಲ್ಲಾಪ ಆಡ್ತಾ ಇದ್ದರೆ, ದೂರದಲ್ಲೇ ಕೂತು ಅವರನ್ನು ನೋಡ್ತಾ ನಿಧಾನಕ್ಕೆ ಕಾಫಿ ಹೀರ್ತಾ ತಾನು ರೀಫ್ರೆಶ್‌ ಆಗೋಮಟ್ಟಿಗೆ, ರಸ್ತೆಯಲ್ಲಿ ಜೋಡಿಯೊಂದು ಹೆಗಲಮೇಲೆ ಕೈಹಾಕಿ ನಡೀತಾ ಇದ್ದರೆ,

ಟೆರೇಸ್‌ ಮೇಲೆ ನಿಂತು ಪುರುಷ ಸಹೋದ್ಯೋಗಿ ಜತೆ ಕಮೆಂಟ್‌ ಹೊಡಿಯೋಷ್ಟರ ಮಟ್ಟಿಗೆ, ಕಾಲೇಜು ಹುಡುಗ- ಹುಡುಗಿಯರ ಗುಂಪೊಂದು ಗಲಾಟೆ ಮಾಡ್ತಾ ನೈಟ್‌ಔಟ್‌ ಮಾಡ್ತಾ ಇದ್ದರೆ, ಅವರ ಮಧ್ಯೆ ಇರುವ ಕ್ರಶ್‌ ನೋಡ್ತಾ, ಅದನ್ನು ಎಂಜಾಯ್‌ ಮಾಡ್ತಾ, ತನ್ನ ಕೆಲಸದ ತಲೆನೋವು ಕಡಿಮೆ ಮಾಡಿಕೊಳ್ತಾ, ತಾನು ಮಾತ್ರ ಐಪಾಡ್‌ನ‌ಲ್ಲಿ ನಾಳೆಯ ಶೆಡ್ನೂಲ್‌ನ ರಿಮೈಂಡರ್‌ಗೆ ಹಾಕಿಕೊಳ್ತಾ ಮನಸಾರೆ ನಕ್ಕು ಬಿಡುವಷ್ಟು ಪ್ರಬುದ್ಧಳಾಗಿರ್ತಾಳೆ 30 ದಾಟಿದ ಹುಡುಗಿ!

ಬ್ಯಾಚುಲರ್‌ ಲೈಫ್, ಅವಕಾಶಗಳ ಆಗರ‌: ಪ್ರೀತಿ, ಮದುವೆ, ಸಂಗಾತಿ…ಜೀವನ ಅಂದ್ರೆ ಇದಿಷ್ಟೇ ಅಲ್ಲ: ಸಾಧನೆಯ ಹಾದಿಯೊಂದು ನನಗೋಸ್ಕರ ಕಾದಿದೆ ಎಂದು ಯೋಚಿಸುವಷ್ಟರ ಮಟ್ಟಿಗೆ, 30ರ ಹುಡುಗಿ ಮೆಚ್ಯೂರ್ಡ್‌ ಆಗಿರ್ತಾಳೆ. ಇದು ಕಣ್ರೀ,  beauty of thirty. ಅವಳಿಗಿಂತ ಚಿಕ್ಕವರಿಗೆ ಮದುವೆ ಆಗಿದೆ, ಮಕ್ಕಳಾಗಿವೆ. ಕ್ಲಾಸ್‌ಮೇಟ್ಸ್‌ ಆಗಿದ್ದ ಗೆಳೆತಿಯರ ಮದುವೆಯೂ ಆಗಿ, ಅವರೆಲ್ಲ ಲೈಫ್ನಲ್ಲಿ ಸೆಟ್ಲ ಆಗಿದ್ದೂ ಆಯಿತು; ಇವೆಲ್ಲಾ ಅವಳನ್ನು, ಡಿಸ್ಟರ್ಬ್ ಮಾಡಲ್ಲ. ಬೀಯಿಂಗ್‌ ಬೋಲ್ಡ್‌, ಹೆಜ್ಜೆಗಳು ಸ್ಟ್ರಾಂಗ್‌ ಆಗಿರ್ತವೆ. ಧೃಡ ನಿರ್ಧಾರ ಆಗಿರ್ತವೆ.

ಇಂಥ ಬೋಲ್ಡ್‌ ಕ್ಯಾರೆಕ್ಟರ್‌ಗೆ ಸಂಗಾತಿಯ ಬಗ್ಗೆ ನಿರ್ದಿಷ್ಟ ಕಲ್ಪನೆಗಳಿರುತ್ತವೆ. 30ರ ನಂತರ ಶುರುವಾದ ಸಂಬಂಧಗಳಲ್ಲಿ ಬ್ರೇಕ್‌ಅಪ್ಸ್‌ ಇರಲ್ಲ. ಸಾಮಾನ್ಯ ಹೆಣ್ಣುಮಗಳಿಗಿಂತ ಹೆಚ್ಚಿನ ಜವಾಬ್ದಾರಿಯ ಅರಿವು ಇರುತ್ತೆ. ಸ್ನೇಹ ಸಂಬಂಧಗಳ ಆಯ್ಕೆಯ ವಿಚಾರ ಬಂದಾಗ ಚ್ಯೂಸಿ ಆಗಿರ್ತಾರೆ. ಅನಗತ್ಯ ಸಂಬಂಧಗಳ ಜೊತೆ ಅಟ್ಯಾಚ್‌ಮೆಂಟ್‌ ಇರಲ್ಲ. ಸಮಸ್ಯೆಗಳನ್ನು ನಿಭಾಯಿಸಬಲ್ಲ ಮನಸ್ಥಿತಿಯನ್ನು ಬೆಳೆಸಿಕೊಂಡಿರ್ತಾರೆ. ಸವಾಲುಗಳು ಅವಳನ್ನು ಧೃತಿಗೆಡಿಸೋದಿಲ್ಲ. beauty of thirty. ಆಗಿರ್ತಾರೆ. ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ಜೀವನದ ಬಗ್ಗೆ ಅವಳಿಗೆ ಸ್ವಾತಂತ್ರಇರುತ್ತೆ.

ವಯಸ್ಸು ನೋ ಮ್ಯಾಟರ್‌: ಮದುವೆಯ ವಿಷಯವಾಗಿ ಮೊದಲಿಂದಲೂ ಒಂದು ನಂಬಿಕೆ ಇದೆ. ಏನೆಂದರೆ, ಹೆಣ್ಣುಮಕ್ಕಳಿಗೆ 25ರೊಳಗೆ ಮದುವೆ ಆಗ್ಬೇಕು. ತಡವಾದ್ರೆ ಮಕ್ಕಳಾಗಲ್ಲ, ಹುಡುಗನ ಫೈನಾನ್ಷಿಯಲ್‌ ಸ್ಟೇಟಸ್‌ ಮುಖ್ಯ, ಹುಡುಗ-ಹುಡುಗಿಯ ನಡುವೆ 5- 7 ವರ್ಷದ ಗ್ಯಾಪ್‌ ಇರಬೇಕು…ಇತ್ಯಾದಿ. ಈ ಕಾಲದ ಹೆಣ್ಣು, ಅದರಲ್ಲೂ 30 ವರ್ಷದವರೆಗೂ ಒಂಟಿಯಾಗಿದ್ದು ಟೋಟಲಿ ಮೆಚ್ಯೂರ್ಡ್‌ ಅನ್ನಿಸಿಕೊಂಡಿರುವ ಹುಡುಗಿಯರು ಈ ಥರದ ಸಿದ್ಧಸೂತ್ರಗಳಿಗೆ ಬದ್ಧಳಾಗಿರೋದಿಲ್ಲ.

ಮದುವೆ ಆಗದೇ ಹೀಗೆ ಉಳಿದುಬಿಟ್ರೆ, ಅನ್ನೋ ಆತಂಕವನ್ನು ಗಾಳಿಗೆ ತೂರಿಬಿಟ್ಟಿದ್ದಾಳೆ. ಅವಳಿಗೆ ಬೇಕಾಗಿರೋದು ಪ್ರೀತಿ, ಸಹಪಯಣಿಗ, ಒಂದೇ ಅಭಿರುಚಿ, ಮನಃಸ್ಥಿತಿಯ ಗೆಳೆಯ. ವಯಸ್ಸು ನೋ ಮ್ಯಾಟರ್‌, ಒಂದಷ್ಟು ವರ್ಷ ಸಣ್ಣವನಾದ್ರೂ ಸರಿ, ತನಗಿಂತ ಹಿರಿಯ ಬಾಸ್‌ನಂಥ ವ್ಯಕ್ತಿತ್ವವಾದ್ರೂ ಸರಿ. ತನ್ನ ಕನಸುಗಳಿಗೆ ಸಂಗಾತಿಯಾಗುವಾತ, ಬದುಕಿಗೆ ಕಂಫ‌ರ್ಟ್‌ ನೀಡುವ ವ್ಯಕ್ತಿ ಅವಳ ಮೊದಲ ಆಯ್ಕೆ ಆಗಿರ್ತದೆ. ಸಂಬಂಧದಲ್ಲೂ ಪ್ರೈವೆಸಿ ನೀಡುವವನು. ಹಕ್ಕಿ ಥರ ಹಾರಲು ಬಿಡುವವನು.

ಕನಸುಗಳಿಗೆ ಜತೆಯಾಗುವವನು, ಹೊಸತನ್ನು ಕಲಿಸುವವನು, ಕಲಿಯಲು ಹುರುಪು ತುಂಬುವವನು, ಇಂಥಾ ಕೆಲವೊಂದು ನಿರೀಕ್ಷೆಗಳೇ ಅವಳ ಆದ್ಯತೆಗಳಾಗಿವೆ. ಅವಳಿಗೆ ಬೇಕಾದ ಗುಣಗಳು ಅಪ್ಪ-ಅಮ್ಮ ನೋಡಿದ ಹುಡುಗನಲ್ಲಿ, ಪ್ರಪೋಸ್‌ ಮಾಡಿದ ಹುಡುಗನಲ್ಲಿ ಇಲ್ಲದೇ ಹೋದ್ರೆ ರಾಜಿಯಾಗೋಕೆ ಇವರು ರೆಡಿಯಿರಲಿಲ್ಲ. ಇನ್ನೂ ಸ್ವಲ್ಪ ದಿನ ಕಾದು ನೋಡೋಣ. ನನ್ನ ಅಭಿರುಚಿಗೆ ಹೊಂದುವಂಥ ಹುಡುಗ ಖಂಡಿತ ಸಿಕ್ತಾನೆ. ಹೊಂದಾಣಿಕೆ ಆಗ್ತಿಲ್ಲ ಅಂತ ಮೊದಲೇ ಗೊತ್ತಿದ್ದೂ ಮದುವೆಯಾಗಿ ಆಮೇಲೆ ಒದ್ದಾಡೋದು ಬೇಡ ಎಂದು ಲೆಕ್ಕ ಹಾಕಿರ್ತಾರೆ.

ಮದುವೆ ಬೇಡ ಅನ್ನೋದಕ್ಕೆ ಕಾರಣಗಳು: ಯಾವುದೇ ಕಾರಣಗಳಿಲ್ಲದೇ ನಾವಿರೋದೇ ಹೀಗೆ, ಹೀಗಿರೋದೇ ಇಷ್ಟ ಅನ್ನೋರೂ ಆಗಿರ್ಬೋದು. ಅದಕ್ಕೆ ಕಾರಣ, ಈಗಿನ ಹೆಣ್ಣುಮಕ್ಕಳಿಗೆ ಶಿಕ್ಷಣದ ಮುಕ್ತ ಅವಕಾಶಗಳು ತೆರೆದುಕೊಂಡಿರುವಂಥದ್ದು… ಸಾಧನೆಯ ಬೆನ್ನುಬಿದ್ದವರೂ ಆಗಿರ್ಬೋದು, ಕೆಲವೊಮ್ಮೆ ಈ bold beautiesಗೆ ಸರಿಯಾದ ಸಂಗಾತಿ ಸಿಗದೇ ಇರೋರೂ ಆಗಿರ್ಬೋದು, love failuered ಆಗಿರ್ಬೋದು…. ಮದುವೆ ಬಗ್ಗೆ ಆಸಕ್ತಿ ಇಲ್ದಿರೋರೂ ಆಗಿರ್ಬೋದು, ಜೀವನದ ಕಹಿ ಉಂಡವರೂ ಆಗಿರ್ಬೋದು, 

ಲಕ್ಷ್ಮಣರೇಖೆ ದಾಟೊಲ್ಲ: ಹಾಗಂತ ಬೋಲ್ಡ್‌ ಆಗಿರೋ ಹೆಣ್ಣುಮಕ್ಕಳು ಪುರುಷರ ಗುಂಪಲ್ಲಿ ಇದ್ದಾಕ್ಷಣ ಚಾರಿತ್ರ್ಯಹೀನರಾಗಿರೋದಿಲ್ಲ. ಆದ್ರೂ ಇಂಥದೊಂದು ಕಳಂಕ ನವಯುಗದ ಹುಡುಗಿಗೆ ಮೆತ್ಕೊಂಡಿದೆ. ಹೆಣ್ಣಿನ ಗುಂಪಿನಲ್ಲಿ ಸಿಗದೆ ಇರುವ ಬೆಂಬಲ ಪ್ರೋತ್ಸಾಹ, ಕಲಿಕೆ, ಹೊಸದು ಪುರುಷರ ಗುಂಪಲ್ಲಿ ಸಿಕ್ಕಿರ್ಬೋದು. ಆದ್ರೆ ಬೋಲ್ಡ್‌ ಹುಡುಗಿಯರು ಸ್ಲಿವ್‌, ಜೀನ್ಸ್‌ ಹಾಕಿದಾಕ್ಷಣ ತಮ್ಮ ಪರಿಮಿತಿಯನ್ನು ದಾಟಾರೆ ಅಂತ ಅರ್ಥ ಅಲ್ಲ.

ಒಂದು ಹುಡುಗಿ, 30 ವರ್ಷಗಳ ಕಾಲ ಸಿಂಗಲ್‌ ಆಗಿ ಬದುಕೋದು ಅಂದುಕೊಂಡಷ್ಟು ಸುಲಭಾನೂ ಅಲ್ಲ. ವರ್ಷಗಳುದ್ದಕ್ಕೂ ಜೊತೆಯಾದ ನೋವು, ನಲಿವು, ಕಿರಿಕಿರಿ, ಅವಮಾನಗಳನ್ನೆಲ್ಲ ಮೆಟ್ಟಿ ನಿಂತು ಆಕೆ ಶಿಸ್ತು, ಸನ್ನಡತೆ, ಗೌರವಯುತ ಪರಿಸರದಲ್ಲೇ ತನ್ನನ್ನು ಛಲಗಾತಿಯಾಗಿ ರೂಪಿಸಿಕೊಂಡಿರ್ತಾಳೆ. ಸಾಮಾನ್ಯ ಹೆಣ್ಣಿಗಿರುವುದಕ್ಕಿಂತ ಹೆಚ್ಚಿನ ಸಂಯಮ, ವಿವೇಕ, ಪ್ರಜ್ಞೆ, ಸೂಕ್ಷತೆಯನ್ನು ಬೆಳೆಸಿಕೊಂಡಿರ್ತಾಳೆ. 

* ಶುಭಾಶಯ ಜೈನ್‌

ಟಾಪ್ ನ್ಯೂಸ್

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.