ಬಡತನಕ್ಕೆ ಸವಾಲೆಸೆದ ಶಶಾಂಕ್‌ಗೆ ರಾಜ್ಯದಲ್ಲಿ 4ನೇ ರ್‍ಯಾಂಕ್
Team Udayavani, May 2, 2018, 12:38 PM IST
ಪುತ್ತೂರು: ತಂದೆ ಲಿವರ್ ಕ್ಯಾನ್ಸರ್‌ಗೆ ಬಲಿಯಾದ ಮೇಲೆ ಕುಟುಂಬಕ್ಕೆ ತಾಯಿಯೇ ಆಧಾರ. ಬೀಡಿ ಕಟ್ಟಿ ಸಾಕಿ ಬೆಳೆಸಿದ ತಾಯಿಯ ಶ್ರಮಕ್ಕೆ ಮಗ ಪ್ರತಿಫಲ ನೀಡಿದ್ದಾನೆ. ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಷಯದಲ್ಲಿ ರಾಜ್ಯಕ್ಕೆ 4ನೇ ರ್‍ಯಾಂಕ್ ಪಡೆಯುವ ಮೂಲಕ ತಾಯಿ ಶ್ರಮವನ್ನು ಸಾರ್ಥಕಗೊಳಿಸಿದ್ದಾನೆ.
ಬಂಟ್ವಾಳ ಸಜಿಪನಡುವಿನ ಶಶಿಕಲಾ ಮತ್ತು ದಿ| ರಾಘವ ದಂಪತಿ ಪುತ್ರ. ವಿವೇಕಾನಂದ ಪ.ಪೂ. ಕಾಲೇಜಿನ ವಿದ್ಯಾರ್ಥಿ. ತಂದೆಯ ಅಗಲಿಕೆ, ಬಡತನ ಶಶಾಂಕ್‌ಗೆ ಸವಾಲಾಗಿತ್ತು. ತಾಯಿಯ ಧೈರ್ಯದ ಮಾತು, ಸ್ಫೂರ್ತಿ ತುಂಬಿದವು. ಈ ಎಲ್ಲ ಬವಣೆ, ಶ್ರಮ, ನೋವು ಮಗನ ಸಾಧನೆ ಮುಂದೆ ಇಲ್ಲವಾಗಿದೆ. ಪಿಯುಸಿ ಪರೀಕ್ಷೆಯಲ್ಲಿ 592 ಅಂಕ ಪಡೆದಿರುವ ಶಶಾಂಕ್, ಸಿ.ಎ. ಮಾಡಬೇಕೆಂಬ ಹಂಬಲ ವ್ಯಕ್ತಪಡಿಸಿದ್ದಾರೆ. ಸಾಧನೆಗೆ ತಾಯಿಯ ಪ್ರೋತ್ಸಾಹ, ಗುರು, ವಿದ್ಯಾಲಯದ ಬೆಂಬಲ ಕಾರಣ ಎನ್ನುತ್ತಾರೆ ಶಶಾಂಕ್. ಸಹೋದರಿ ರಶ್ಮಿತಾ ಎಂ.ಎಸ್ಸಿ. ವಿದ್ಯಾರ್ಥಿನಿ.
ಶಶಾಂಕ್ ಅಂಕ- ಇಂಗ್ಲಿಷ್-94, ಕನ್ನಡ- 98, ಸಂಖ್ಯಾಶಾಸ್ತ್ರ-100, ಗಣಕವಿಜ್ಞಾನ- 100, ವ್ಯವಹಾರ ಅಧ್ಯಯನ- 100, ಲೆಕ್ಕಶಾಸ್ತ್ರ – 100. ಒಟ್ಟು 600ರಲ್ಲಿ 592 (ಶೇ. 98.6).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Belthangady: ಗ್ರಾಮೀಣ ರಸ್ತೆಗಳಲ್ಲೂ ಗುಂಡಿ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Puttur: ಮಾದಕ ವಸ್ತು ಎಂಡಿಎಂಎ ಸಾಗಾಟ ಪ್ರಕರಣ; ಆರೋಪಿಗೆ ಜಾಮೀನು
Rain: ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ; ರಸ್ತೆಗೆ ಬಿದ್ದ ಮರ; ತಪ್ಪಿದ ಭಾರೀ ಅನಾಹುತ
MUST WATCH
ಹೊಸ ಸೇರ್ಪಡೆ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.