ತುಳುನಾಡು ಮಾತೃಪ್ರಧಾನ ಪುಣ್ಯ ನೆಲ: ಡಾ| ಸುನೀತಾ
Team Udayavani, May 2, 2018, 2:43 PM IST
ಮಹಾನಗರ: ತುಳುನಾಡಿನಲ್ಲಿ ತಾಯಿಗೆ ವಿಶೇಷವಾದ ಗೌರವ ನೀಡಲಾಗುತ್ತದೆ. ಈ ಮೂಲಕ ತುಳುನಾಡಿನ ಮಣ್ಣು ಮಾತೃಪ್ರಧಾನ ಪುಣ್ಯ ನೆಲ ಎಂದು ಹಿರಿಯ ಸಾಹಿತಿ ಮುಂಬಯಿಯ ಡಾ| ಸುನೀತಾ ಎಂ. ಶೆಟ್ಟಿ ಹೇಳಿದರು. ಬಂಟರ ಯಾನೆ ನಾಡವರ ಮಾತೃಸಂಘ, ಮಹಿಳಾ ವಿಭಾಗ ಹಾಗೂ ತುಳುವೆರೆ ಆಯಾನ ಕೂಟದ ಸಹಯೋಗದೊಂದಿಗೆ
ಬಂಟ್ಸ್‌ಹಾಸ್ಟೆಲ್‌ನ ಬಂಟರ ಯಾನೆ ನಾಡವರ ಮಾತೃಸಂಘದಲ್ಲಿ ಮಂಗಳವಾರ ನಡೆದ ‘ಪಗ್ಗು ಪದಿನೆಣ್ಮ ಸಿರಿದಿನ’ ಕಾರ್ಯಕ್ರಮದಲ್ಲಿ ಅವರು ‘ತುಳು ರತ್ನ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಭವ್ಯತೆ ಪ್ರದರ್ಶನವಾಗಬೇಕು
ತುಳುವರ ತಿಂಗಳು ಆರಂಭವಾಗುವುದೇ ಪಗ್ಗುವಿನ ಮೂಲಕ. ಬಿಸು ತುಳುವೆರೆ ಹೊಸ ವರ್ಷ. ಸಿರಿ ಎಂಬುದು ಸಂಪತ್ತು, ಏಳಿಗೆ ಅಥವಾ ಪ್ರಗತಿಯ ಸ್ಥೂಲ ನೋಟವೂ ಹೌದು. ಜತೆಗೆ ಸಿರಿ ತುಳುನಾಡಿನ ಆದರ್ಶ. ಇಂತಹ ಒಟ್ಟು ತುಳುನಾಡಿನ ವಿಚಾರಗಳ ಬಗ್ಗೆ ಮುಂದಿನ ಜನಮಾನಸಕ್ಕೆ ತಿಳಿಸಿಕೊಡುವ ನಿಟ್ಟಿನಲ್ಲಿ ಆಚರಣೆಗಳು ನಡೆಯುತ್ತಿರಬೇಕು. ಈ ಮೂಲಕ ತುಳುನಾಡಿನ ಭವ್ಯತೆ ಪ್ರದರ್ಶನವಾಗಬೇಕು ಎಂದರು.
ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ| ಕೆ.ಚಿನ್ನಪ್ಪ ಗೌಡ ಮುಖ್ಯ ಅತಿಥಿಗಳಾಗಿದ್ದರು. ಪ್ರಮುಖರಾದ ಡಾ| ರತಿದೇವಿ, ಜಯಲಕ್ಷ್ಮೀ ಹೆಗ್ಡೆ, ತುಳುವೆರೆ ಆಯಾನ ಕೂಟ ಅಧ್ಯಕ್ಷ ಡಾ| ರಾಜೇಶ್ ಮುಖ್ಯ ಅತಿಥಿಗಳಾಗಿದ್ದರು.
ಸಿರಿಪಾಡ್ಡನ ಉಳಿಸುವಲ್ಲಿ ವಿಶೇಷ ಸೇವೆ ಸಲ್ಲಿಸಿದ ಕರ್ಗಿ ಶೆಡ್ತಿ ಅಳದಂಗಡಿ, ಲೀಲಾ ಶೆಡ್ತಿ ಮಾಳ, ಕಾರ್ಕಳ, ವಿವಿಧ ಕ್ಷೇತ್ರದ ಸಾಧಕರಾದ ಡಾ| ರತಿದೇವಿ, ವನಜಾ, ವೈಲೆಟ್ ಪಿರೇರಾ, ಖೈರುನ್ನೀಸ, ಸಿ.ಎಸ್. ರಾಧಿಕಾ, ಸುಧಾರತ್ನಾ, ಕಸ್ತೂರಿ ಅವರನ್ನು ಸಮ್ಮಾನಿಸಲಾಯಿತು.
ಬಂಟರ ಯಾನೆ ನಾಡವರ ಮಾತೃಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಡಾ| ಆಶಾಜ್ಯೋತಿ ರೈ ಸ್ವಾಗತಿಸಿದರು. ಕವಿತಾ ಶೆಟ್ಟಿ, ಮಂಜುಳಾ ಶೆಟ್ಟಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!
Udupi: ಎಂಜಿಎಂ ವಿದ್ಯೆ ಎಂಬ ಅಮೃತ ನೀಡುತ್ತಿದೆ: ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
Guarantee Scheme: ಸರಕಾರದ ಖಜಾನೆ ತುಂಬಲು ಅನಧಿಕೃತ ಲೇಔಟ್ ಸಕ್ರಮಗೊಳಿಸಲಿ:ಜನಾರ್ದನ ರೆಡ್ಡಿ
Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.