3 ದಿನದಲ್ಲಿ ವೋಟರ್‌ ಸ್ಲಿಪ್‌: ಸವಾಲು

Team Udayavani, May 2, 2018, 3:03 PM IST

3dinadal;li.jpg

ಬೆಂಗಳೂರು: ನಗರದಲ್ಲಿರುವ ಮತದಾರರಿಗೆ ಮನೆ ಮನೆಗೆ “ವೋಟರ್‌ ಸ್ಲಿಪ್‌’ (ಮತದಾರರ ಚೀಟಿ) ತಲುಪಿಸುವುದಾಗಿ ಚುನಾವಣಾ ಆಯೋಗ ಹೇಳಿದೆಯಾದರೂ ಈ ಕೆಲಸ ಬಿಬಿಎಂಪಿಗೆ ದೊಡ್ಡ ಸವಾಲಾಗಿದೆ.

ನಗರದಲ್ಲಿ ಮತದಾರರ ಸಂಖ್ಯೆ 91.13 ಲಕ್ಷವಿದ್ದು, ಅವರಿಗೆ ಮತದಾರರ ಚೀಟಿ ತಲುಪಿಸುವ ಬೂತ್‌ಮಟ್ಟದ ಅಧಿಕಾರಿಗಳಿರುವುದು ಬರೀ 8,278 ಮಾತ್ರ. ಅಲ್ಲದೆ, ಇರುವ ಕಾಲಾವಕಾಶ ಕೇವಲ ಮೂರು ದಿನಗಳು. ಈ ಅಲ್ಪಾವಧಿಯಲ್ಲಿ ಬೆಂಗಳೂರಿನಂತಹ ನಗರದಲ್ಲಿ ನಿತ್ಯ ಸರಾಸರಿ 350 ಮತದಾರರನ್ನು ಭೇಟಿ ಮಾಡಿ, ಸ್ಲಿಪ್‌ ತಲುಪಿಸುವುದು ಅಕ್ಷರಶಃ ಸವಾಲಾಗಿದೆ. ಹಾಗಾಗಿ, ಈ ಪ್ರಕ್ರಿಯೆ ಸಮರ್ಪಕವಾಗಿ ನಡೆಯವುದು ಅನುಮಾನ ಎನ್ನಲಾಗುತ್ತಿದೆ.

ಬೂತ್‌ಮಟ್ಟದ ಅಧಿಕಾರಿಗಳು ಪ್ರತಿಯೊಬ್ಬ ಮತದಾರನಿಗೆ ವೋಟರ್‌ ಸ್ಲಿಪ್‌ ಜತೆಗೆ ಮೂರು ಪುಟಗಳ ಮಾರ್ಗದರ್ಶಿ ಕಿರುಹೊತ್ತಿಗೆ ವಿತರಿಸಬೇಕು. ನಂತರ ಆಯಾ ಮತದಾರರ ಮೊಬೈಲ್‌ ನಂಬರ್‌ ಮತ್ತು ಸಹಿ ಸಂಗ್ರಹಿಸಬೇಕು. ಇದಲ್ಲದೆ, ಹೊಸದಾಗಿ ಸೇರ್ಪಡೆಗೊಂಡ ಮತದಾರರಿಗೆ “ಮತದಾರರ ಗುರುತಿನ ಚೀಟಿ’ (ಎಪಿಕ್‌ ಕಾರ್ಡ್‌) ತಲುಪಿಸುವ ಹೊಣೆಯೂ ಈ ಬೂತ್‌ಮಟ್ಟದ ಅಧಿಕಾರಿಗಳ ಮೇಲಿದೆ.

ವೋಟರ್‌ ಸ್ಲಿಪ್‌; ಏನು ಉಪಯೋಗ?: ಮತದಾನದಂದು ಮತದಾರರು ತಮ್ಮ ಹಕ್ಕು ಚಲಾಯಿಸಲು ಈ ವೋಟರ್‌ ಸ್ಲಿಪ್‌ ತೋರಿಸಿಯೇ ಮತಗಟ್ಟೆ ಒಳಗೆ ಪ್ರವೇಶ ಪಡೆಯಬೇಕಾಗುತ್ತದೆ. ಈ ಸ್ಲಿಪ್‌ ಇದ್ದರೆ ಸಾಕು, ಮತದಾರರ ಗುರುತಿನಚೀಟಿ ಇಲ್ಲದಿದ್ದರೂ ನಡೆಯುತ್ತದೆ. ಇದರಲ್ಲಿ ಮತದಾರರ ಫೋಟೋ, ಎಪಿಕ್‌ ನಂಬರ್‌ ಸಹಿತ ಸಂಪೂರ್ಣ ಮಾಹಿತಿ ಇದ್ದು, ಮಹತ್ವ ಪಡೆದಿದೆ.

ಸಮಸ್ಯೆ ಏನು?: ಬೆಂಗಳೂರಿನಂತಹ ಮಹಾನಗರದಲ್ಲಿ ನಿತ್ಯ ಅಬ್ಬಬ್ಟಾ ಎಂದರೆ 80ರಿಂದ 100 ಮತದಾರರನ್ನು ಸಂಪರ್ಕಿಸಲು ಮಾತ್ರ ಸಾಧ್ಯವಾಗುತ್ತದೆ. ಏಕೆಂದರೆ, ಬಹುತೇಕರು ಹಗಲು ಮನೆಯಲ್ಲಿ ಇರುವುದಿಲ್ಲ. ಬೆಳಗ್ಗೆ ಮತ್ತು ಸಂಜೆ ಮಾತ್ರ ಲಭ್ಯ ಇರುತ್ತಾರೆ. ಈ ಅವಧಿಯಲ್ಲೇ ಸಂಪರ್ಕಿಸಬೇಕು. ಹಲವು ಮನೆಗಳಲ್ಲಿ ನಾಯಿಗಳ ಹಾವಳಿ, ಇನ್ನು ಕೆಲವರು ಮನೆಯಲ್ಲಿದ್ದರೂ ಬಾಗಿಲು ತೆಗೆಯುವುದಿಲ್ಲ,

ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ಗಳಲ್ಲಂತೂ ಬೂತ್‌ಮಟ್ಟದ ಅಧಿಕಾರಿಗಳನ್ನು ಒಳಗೆ ಕೂಡ ಬಿಟ್ಟುಕೊಳ್ಳುವುದಿಲ್ಲ. ಇಂತಹ ವಾಸ್ತವ ಸಮಸ್ಯೆಗಳು ಕಾಡುತ್ತಿವೆ. ಸ್ಲಿàಪ್‌ ನೀಡಲು ಮತದಾರರು ಅವರೇ ಎಂದು ಖಾತ್ರಿ ಮಾಡಿಕೊಳ್ಳಬೇಕು ಹೀಗಾಗಿ, ಮನೆಯಲ್ಲಿ ಹಾಕಿ ಬರುವುದೂ ಕಷ್ಟಸಾಧ್ಯ. ಆದ್ದರಿಂದ ಇದೊಂದು ಸವಾಲಿನ ಕೆಲಸ ಎಂದು ಹೆಸರು ಹೇಳಲಿಚ್ಛಿಸದ ಬಿಬಿಎಂಪಿ ಚುನಾವಣಾ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು. 

ಸಮಸ್ಯೆಯೇ ಅಲ್ಲ; ಚುನಾವಣಾಧಿಕಾರಿ: ತಲಾ ಒಬ್ಬ ಬೂತ್‌ಮಟ್ಟದ ಅಧಿಕಾರಿಗೆ (ಬಿಎಲ್‌ಒ) ಸರಾಸರಿ 1,100 ಮತದಾರರು ಬರುತ್ತಾರೆ. ನಿತ್ಯ 200ರಿಂದ 300 ಜನರನ್ನು ಅನಾಯಾಸವಾಗಿ ತಲುಪುತ್ತಾರೆ. ಇದೊಂದು ಸಮಸ್ಯೆಯೇ ಅಲ್ಲ. ಅಷ್ಟಕ್ಕೂ ಈ ಬಿಎಲ್‌ಒಗಳು ಸ್ಥಳೀಯರು ಹಾಗೂ ಈ ಮೊದಲೇ ಮತದಾರರ ನೋಂದಣಿ ಮಾಡಿಸಲು ಮನೆ-ಮನೆಗೆ ತೆರಳಿದ್ದರಿಂದ ಮನೆಗಳು ಪರಿಚಿತವಾಗಿರುತ್ತವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎನ್‌. ಮಂಜುನಾಥ ಪ್ರಸಾದ್‌ ಹೇಳುತ್ತಾರೆ.

ಬಿಎಲ್‌ಒಗಳೇ ಅಲಭ್ಯ?: ಈ ಮೊದಲು ಇದೇ ಬಿಎಲ್‌ಒಗಳಿಂದ ಮನೆ-ಮನೆಗೆ ತೆರಳಿ ಮತದಾರರ ನೋಂದಣಿ ಮಾಡಿಸುವುದಾಗಿ ಬಿಬಿಎಂಪಿ ಹೇಳಿತ್ತು. ಆದರೆ, ಬಹುತೇಕ ಕಡೆ ಈ ಬಿಎಲ್‌ಒಗಳು ಭೇಟಿಯೇ ನೀಡಿಲ್ಲ ಎಂಬ ದೂರುಗಳಿವೆ ಎಂದು ಯುವ ಮತದಾರ ನೋಂದಣಿ ಮತ್ತು ಜಾಗೃತಿ ಅಭಿಯಾನ ಕಾರ್ಯಕರ್ತ ಆನಂದ್‌ ತೀರ್ಥ ಆರೋಪಿಸುತ್ತಾರೆ.

ಆಶಾ ಕಾರ್ಯಕರ್ತರು ಅಥವಾ ವಿವಿಧ ಬಡಾವಣೆಗಳ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಸದಸ್ಯರ ನೆರವು ಪಡೆಯುವ ಬಗ್ಗೆ ಬಿಬಿಎಂಪಿ ಚಿಂತನೆ ನಡೆಸಬೇಕು. ಇದರಿಂದ ವೋಟರ್‌ ಸ್ಲಿಪ್‌ ಸಮರ್ಪಕ ವಿತರಣೆ ಸಾಧ್ಯವಾಗುತ್ತದೆ ಎಂದು ತಜ್ಞರೊಬ್ಬರು ತಿಳಿಸಿದರು. ಆದರೆ, ಈ ಕಾರ್ಯವನ್ನು ಬೂತ್‌ಮಟ್ಟದ ಅಧಿಕಾರಿಗಳಿಂದಲೇ ನಡೆಸಬೇಕಾಗುತ್ತದೆ. ಹಾಗೂ ಆ ಅಧಿಕಾರಿಗಳು ಶೇ. 100ರಷ್ಟು ಈ ಪ್ರಕ್ರಿಯೆ ಪೂರ್ಣಗೊಳಿಸಲಿದ್ದಾರೆ ಎಂದು ಎನ್‌. ಮಂಜುನಾಥ ಪ್ರಸಾದ್‌ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಲಕ್ಷ ಮತದಾರರಿಗೆ ಇನ್ನೂ ಎಪಿಕ್‌ ಕಾರ್ಡ್‌ ಸಿಕ್ಕಿಲ್ಲ!: ಮತದಾನಕ್ಕೆ ಇನ್ನು ಹತ್ತು ದಿನ ಮಾತ್ರ ಬಾಕಿ ಇದೆ. ಆದರೂ ನಗರದಲ್ಲಿ ಸುಮಾರು ಒಂದು ಲಕ್ಷ ಮತದಾರರಿಗೆ ಇನ್ನೂ ಮತದಾರರ ಗುರುತಿನ ಚೀಟಿ ಸಿಕ್ಕಿಲ್ಲ. ನಗರದಲ್ಲಿ 91.13 ಲಕ್ಷ ಪೈಕಿ ಈ ಬಾರಿ ಹೊಸದಾಗಿ 4.40 ಲಕ್ಷ ಮತದಾರರು ಸೇರ್ಪಡೆಗೊಂಡಿದ್ದಾರೆ. ಇದರಲ್ಲಿ ಶೇ. 75ರಿಂದ 80ರಷ್ಟು ಜನರಿಗೆ “ಎಪಿಕ್‌ ಕಾರ್ಡ್‌’ ನೀಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎನ್‌. ಮಂಜುನಾಥ ಪ್ರಸಾದ್‌ ಹೇಳುತ್ತಾರೆ.

ಚುನಾವಣಾಧಿಕಾರಿಗಳ ಪ್ರಕಾರವೇ ಲೆಕ್ಕಹಾಕಿದರೂ 90 ಸಾವಿರಕ್ಕೂ ಅಧಿಕ ಜನರಿಗೆ ಮತದಾರರ ಗುರುತಿನ ಚೀಟಿ ಈಗಲೂ ಮರೀಚಿಕೆಯಾಗಿದೆ. ಅದರಲ್ಲೂ ಎಪಿಕ್‌ ಕಾರ್ಡ್‌ ವಂಚಿತರ ಪೈಕಿ ಬಹುತೇಕರು 2017ರ ಆಗಸ್ಟ್‌, ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲಿ ನೋಂದಣಿ ಆಗಿದ್ದಾರೆ.

ವಾರ್ಡ್‌ ಕಚೇರಿಗಳಲ್ಲಿ ಮತದಾರರ ಗುರುತಿನ ಚೀಟಿ ಕೇಳಿದರೆ, ಕಂದಾಯ ಅಧಿಕಾರಿಗಳ ಬಳಿ ಕಳುಹಿಸುತ್ತಾರೆ. ಅಲ್ಲಿಗೆ ಹೋದರೆ, ಈಗಾಗಲೇ ವಾರ್ಡ್‌ ಕಚೇರಿಗೆ ಕೊಟ್ಟಾಗಿದೆ ಎಂಬ ಉತ್ತರ ಬರುತ್ತದೆ. ಇನ್ನು “ಬೆಂಗಳೂರು ಒನ್‌’ನಲ್ಲಿ ಕೂಡ ಇದೇ ಉತ್ತರ ಬರುತ್ತದೆ ಎಂದು ಅಕ್ಟೋಬರ್‌ನಲ್ಲಿ ನೋಂದಣಿಯಾದ ಬಸವನಗುಡಿಯ ಮೋಹನ್‌ ಕೇಳುತ್ತಾರೆ.

* ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

1-ct

C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!

horatti

C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ

TuluMovie; Middle Class Family is ready to hit the screens: Release date has arrived

TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್‌ ಕ್ಲಾಸ್‌ ಫ್ಯಾಮಿಲಿ: ರಿಲೀಸ್‌ ದಿನಾಂಕ ಬಂತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

5

Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ

IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kasaragod: ಅಪರಾಧ ಸುದ್ದಿಗಳು; ಕಾರ್ಮಿಕ ಆತ್ಮಹ*ತ್ಯೆ

Kasaragod: ಅಪರಾಧ ಸುದ್ದಿಗಳು; ಕಾರ್ಮಿಕ ಆತ್ಮಹ*ತ್ಯೆ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Sullia: ಚಿನ್ನ ಕಳ್ಳತನ ಪ್ರಕರಣ: ಇಬ್ಬರು ಪೊಲೀಸರ ವಶಕ್ಕೆ

Sullia: ಚಿನ್ನ ಕಳ್ಳತನ ಪ್ರಕರಣ: ಇಬ್ಬರು ಪೊಲೀಸರ ವಶಕ್ಕೆ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.