ನಿಸರ್ಗಾರಾಧಕರು ಬಿಷ್ಣೋಯಿಗಳು
Team Udayavani, May 2, 2018, 3:45 PM IST
ಜಗತ್ತಿನಲ್ಲಿ ಹಲವು ನಾಗರಿಕತೆ, ಸಂಸ್ಕೃತಿಗಳು ಹುಟ್ಟಿಕೊಂಡಿವೆ. ನದಿ, ಕಾಡುಮೇಡುಗಳಲ್ಲಿ. ಹಲವು ಸಂಸ್ಕೃತಿ, ಸಂಪ್ರದಾಯ ಸಮುದಾಯಗಳಲ್ಲಿ ಪೈಕಿ ಕೃಷ್ಣಮೃಗವೇ ಕುಲದೇವತೆ ಎಂದು, ನಿಸರ್ಗವನ್ನು ಪೂಜಿಸುವ ರಾಜಸ್ಥಾನದ ವಿಶಿಷ್ಟ ಸಮುದಾಯ ಬಿಷ್ಣೋಯಿ. 600 ವರ್ಷಗಳ ಸುದೀರ್ಘ ಇತಿಹಾಸವಿರುವ ಈ ಸಮುದಾಯ ಹುಟ್ಟಿಕೊಂಡದ್ದೇ ಒಂದು ಆಶ್ಚರ್ಯ.
ಜೀವಪರ ಸಂಸ್ಕೃತಿ ಹೊಂದಿರುವ ಬಿಷ್ಣೋಯಿಗಳು ಜೀವನ ಪದ್ಧತಿ ಹಾಗೂ ಬದುಕಿನ ಬಗ್ಗೆ ಹಸಿರುವಾಸಿ ಪಾಕ್ಷಿಕದಲ್ಲಿ ಪತ್ರಕರ್ತ ರಾಧಾಕೃಷ್ಣ ಭಡ್ತಿ ಅವರು ‘ಜಗತ್ತಿಗೆ ಜೀವನ ಪ್ರೀತಿ ಬೋಧಿಸಿದ ಬಿಷ್ಣೋಯಿಗಳು’ ಎಂಬ ಶೀರ್ಷಿಕೆಯ ಲೇಖನದಲ್ಲಿ ದೇಶದ ಬಹುಮುಖೀ ಸಂಸ್ಕೃತಿಯ ಪರಿಚಯ ಮಾಡಿಕೊಟ್ಟಿದ್ದಾರೆ.
ಬಿಷ್ಣೋಯಿಗಳಿಂದ ಕಲಿಯಲೇಬೇಕಾದುದ್ದು ತುಂಬಾ ಇದೆ. ಅವರು ನಿಸರ್ಗಾರಾಧಕರು, ಪ್ರಾಣಿ ವಧೆಯನ್ನು ಖಂಡಿಸುವ ಈ ಸಮುದಾಯ ಇತ್ತೀಚೆಗೆಷ್ಟೇ ಕೃಷ್ಣ ಮೃಗ ಹತ್ಯೆ ಪ್ರಕ ರ ಣಕ್ಕೆ ಸಂಬಂಧಿಸಿ ಖ್ಯಾತ ನಟರೊಬ್ಬರ ವಿರುದ್ಧ ತೀವ್ರ ಪ್ರತಿ ಭಟನೆಯನ್ನೂ ನಡೆಸಿದ್ದರು. ಈ ಸಮುದಾಯದ ಇತಿಹಾಸ ಮತ್ತು ಜೀವನದ ಸಂಕ್ಷಿಪ್ತ ಪರಿಚಯವನ್ನು ಲೇಖಕರು ಇಲ್ಲಿ ಮಾಡಿದ್ದಾರೆ.
ಘಟನೆ 1
ಬಿಷ್ಣೋಯಿ ಧರ್ಮದ ಸ್ಥಾಪನೆಯಾಗಿದ್ದು ದನ ಕಾಯುವ ಹುಡುಗನಿಂದ. ಜಂಭೋಜಿ ಎಂಬ ದನಗಾಯಿ ರಾಜಾಸ್ಥಾನದ
ಮರುಭೂಮಿಯಲ್ಲಿ ದನಕಾಯುತ್ತಿರುವಾಗ , ಮರುಭೂಮಿಯಲ್ಲಿ ಮರುಳಿನಲ್ಲಿ ಮರಗಿಡಗಳು ಇರದ ಕಾರಣ ಒಂದು ಖರ್ಜೂರು ಬಿತ್ತುತ್ತಾನೆ. ಇದರ ಜತೆಗೆ ಜಿಂಕೆಗಳ ಸಂತತಿ ಬೆಳೆಯುತ್ತದೆ. ಬಳಿಕ ಕಾಲಕಾಲಕ್ಕೆ ಮಳೆಯಾಗಲಾರಂಭಿಸಿದಾಗ ಅಲ್ಲಿನ ಕೆಲವೊಂದಿಷ್ಟು ಜನ ಬಂದು ನೆಲೆಸಿ, ಜಂಬೋಜಿಯನ್ನೇ ಗುರುವಾಗಿ, ಕೃಷ್ಣಮೃಗವನ್ನೇ ಕುಲದೇವತೆಯಾಗಿ ಮಾಡಿ ಕೊಂಡರು. ಇದುವೇ ಮುಂದೆ ಬಿಷ್ಣೋಯಿ ಸಮುದಾಯವಾಗಿ ಬೆಳಯಿತು.
ಘಟನೆ 2
ಬಿಷ್ಣೋಯಿಗಳು ನಿಸರ್ಗಾರಾಧಕರು, ಇವರಲ್ಲಿ ಮರ ಕಡಿಯು ವುದು, ಜಿಂಕೆಗಳನ್ನು ಕೊಲ್ಲುವುದು ಮಹಾಪಾಪ. ಪುಟ್ಟ ಜಿಂಕೆಗಳಿಗೆ ಮಹಿಳೆಯರೇ ಸ್ವತಃ ಹಾಲುಣಿಸುತ್ತಾರೆ. ಮಗುವಿನಂತೆ ಹಾರೈಸುತ್ತಾರೆ. ಬಿಷ್ಣೋಯಿಗಳು ತಮ್ಮ ಜೀವನ ಪದ್ಧತಿ ಯಲ್ಲಿ ನಿಸರ್ಗ ಪ್ರೇರಿತ 29 ತತ್ವಗಳನ್ನು ಎಡೆಬಿಡದೇ ಪಾಲಿಸುತ್ತಾರೆ.
ಘಟನೆ 3
ಜೋಧಪುರ ರಾಜ, ಅರಮನೆ ನಿರ್ಮಾಣಕ್ಕೆ ಖರ್ಜೂರು ಗಿಡಗಳನ್ನು ಕಡಿದುಕೊಂಡು ಬರಲು ಹೇಳಿದ, ಕಾಡಿಗೆ ಬಂದು ಗಿಡಗಳನ್ನು ಕಡಿಯಲಾರಂಭಿಸಿದಾಗ ಬಿಷ್ಣೋಯಿ ಸಮುದಾಯದ ಅಮೃತಾದೇವಿ ಸಹಿತ 363 ಮಹಿಳೆಯರು ಮರಗಳನ್ನು ಅಪ್ಪಿಕೊಂಡು ಮರ ಕಡಿಯುವುದಕ್ಕೆ ಪ್ರತಿರೋಧಿಸಿದರು. ಕೊನೆಗೆ ಸೈನಿಕರ ಮೂಲಕ 363 ಮಹಿಳೆಯರನ್ನು ಕೊಲ್ಲಲಾಗುತ್ತದೆ. ಈ ಬಲಿದಾನ ಬಿಷ್ಣೋಯಿ ಸಮುದಾಯದ ನಿಸರ್ಗ ಪ್ರೇಮವನ್ನು ಎತ್ತಿ ತೋರಿಸುತ್ತದೆ.
ಶಿವ ಸ್ಥಾವರಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.