ಡೇ ಹತ್ಯೆ: ರಾಜನ್ಗೆ ಜೀವಾವಧಿ
Team Udayavani, May 3, 2018, 6:00 AM IST
ಮುಂಬೈ: ಮಹಾರಾಷ್ಟ್ರದ ಹಿರಿಯ ಪತ್ರಕರ್ತ ಜೆ ಡೇ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್ಸ್ಟರ್ ಛೋಟಾ ರಾಜನ್ ಹಾಗೂ ಇತರ ಎಂಟು ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮುಂಬೈ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. 2011ರಲ್ಲಿ ನಡೆದ ಹತ್ಯೆ ಭಾರಿ ಸಂಚಲನ ಮೂಡಿಸಿತ್ತು. ಅಪರಾ ಧಿಗಳಿಗೆ ತಲಾ 26 ಲಕ್ಷ ರೂ. ದಂಡವನ್ನೂ ವಿಧಿಸಲಾಗಿದೆ. ಕೊಲೆ ಮಾಡಲು ರಾಜನ್ಗೆ ಪ್ರಚೋದನೆಯ ಆರೋಪ ಹೊತ್ತಿದ್ದ ಮಾಜಿ ಪತ್ರಕರ್ತ ಜಿಗ್ನಾ ವೋರಾರನ್ನು ಕೋರ್ಟ್ ಖುಲಾಸೆಗೊಳಿಸಿದೆ.
2015ರಲ್ಲಿ ಇಂಡೋನೇಷ್ಯಾದಲ್ಲಿ ರಾಜನ್ನನ್ನು ಭಾರತಕ್ಕೆ ಕರೆ ತಂದ ಬಳಿಕ ಆತನ ವಿರುದ್ಧ ಸಾಬೀತಾದ ಪ್ರಮುಖ ಆರೋಪಗಳಲ್ಲಿ ಇದೂ ಒಂದು. ಕಳೆದ ವರ್ಷ ನಕಲಿ ಪಾಸ್ಪೋರ್ಟ್ ಪ್ರಕರಣದಲ್ಲಿ ರಾಜನ್ಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.
ಠೀಕ್ ಹೈ ಎಂದ ರಾಜನ್: ತನ್ನ ಜೀವಾವಧಿ ಶಿಕ್ಷೆಯ ತೀರ್ಪನ್ನು ರಾಜನ್ ದೆಹಲಿಯ ತಿಹಾರ್ ಜೈಲಿನಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ವೀಕ್ಷಿಸಿದ್ದಾನೆ. ತೀರ್ಪು ಪ್ರಕಟಿಸಿದ ನಂತರ ರಾಜನ್ನ ಪ್ರತಿಕ್ರಿಯೆಯನ್ನು ಜಡ್ಜ್ ಸಮೀರ್ ಅಡ್ಕರ್ ಕೇಳಿದರು. ಅದಕ್ಕೆ ಠೀಕ್ ಹೈ (ಸರಿ ಬಿಡಿ) ಎಂದು ರಾಜನ್ ಉತ್ತರಿಸಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.