ನಕಲಿ ಗನ್ ಲೈಸನ್ಸ್ ಕೇಸ್: ಕೊನೆಗೂ ಸೆರೆಸಿಕ್ಕ ಸತ್ತ ಮನುಷ್ಯನ ಭೂತ
Team Udayavani, May 3, 2018, 11:37 AM IST
ಹೊಸದಿಲ್ಲಿ : ನಕಲಿ ಬಂದೂಕು ಲೈಸನ್ಸ್ ಕೇಸಿನಲ್ಲಿ ತನಿಖೆಗೆ ಒಳಪಟ್ಟು, ಬಳಿಕ ನಾಪತ್ತೆಯಾಗಿ ಅನಂತರ ಮೃತಪಟ್ಟಿರುವುದಾಗಿ ತಿಳಿಯಲ್ಪಟ್ಟಿದ್ದ, ಡೆತ್ ಸರ್ಟಿಫಿಕೇಟ್ ಕೂಡ ಜಾರಿಗೊಂಡಿದ್ದ, ದೀಪೇಶ್ ಎಂಬ ರಿಯಲ್ ಎಸ್ಟೇಟ್ ಉದ್ಯಮಿಯನ್ನು ರಾಜಸ್ಥಾನದ ಎಟಿಎಸ್ ಅಧಿಕಾರಿಗಳು ಕೊನೆಗೂ ಬಂಧಿಸಿದ್ದಾರೆ. ಅಂತೆಯೇ “ನಡೆದಾಡುವ ಸತ್ತ ಮನುಷ್ಯನ ಭೂತವನ್ನು ತಾವು ಸೆರೆಹಿಡಿದಿರುವುದಾಗಿ’ ರಾಜಸ್ಥಾನ ಎಟಿಎಸ್ನವರು ಹೇಳಿಕೊಂಡಿದ್ದಾರೆ.
ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಾ ಕಳೆದ ಆರು ತಿಂಗಳಲ್ಲಿ ಆರು ಬಾರಿ ತನ್ನ ವಿಳಾಸವನ್ನು ಮತ್ತು ಅನೇಕ ಬಾರಿ ಮೊಬೈಲ್ ಸಿಮ್ ಬದಲಿಸಿಕೊಂಡು ತಲೆಮರೆಸಿಕೊಂಡು “ಮೃತಪಟ್ಟಿದ್ದಾನೆ’ ಎಂದೇ ತಿಳಿಯಲ್ಪಟ್ಟಿದ್ದ ದೀಪೇಶ್ನನ್ನು ಪೊಲೀಸರು ಕಳೆದ ಮಂಗಳವಾರ ಮುಂಬಯಿಯಲ್ಲಿ “ಜೀವಂತ’ ಪತ್ತೆ ಹಚ್ಚಿ ಸೆರೆ ಹಿಡಿದರು.
ದೀಪೇಶನ ಹಾಗೆ ಬಿಎಸ್ಎಫ್ ಮತ್ತು ಭಾರತೀಯ ಸೇನಾಧಿಕಾರಿಗಳ ಹೆಸರಲ್ಲಿ ನಕಲಿ ಶಸ್ತ್ರಾಸ್ತ್ರ ಲೈಸನ್ಸ್ ಪಡೆದುಕೊಂಡಿದ್ದ 50ಕ್ಕೂ ಹೆಚ್ಚು ಮಂದಿಯನ್ನು ರಾಜಸ್ಥಾನ ಎಟಿಎಸ್ ಅಧಿಕಾರಿಗಳು ಬಂಧಿಸಿದ್ದಾರೆ.
ದೀಪೇಶ್ ಹೇಳಿರುವಂತೆ ತನ್ನ ಹೆಸರಲ್ಲಿ ಕೊಡಲ್ಪಟ್ಟಿರುವ ಡೆತ್ ಸರ್ಟಿಫಿಕೇಟ್ ಕೂಡ ನಕಲಿಯಾಗಿದೆ. ತಾನು ರಿಯಲ್ ಎಸ್ಟೇಟ್ ಉದ್ಯಮದಲ್ಲಿರುವುದರಿಂದ ತನಗೆ ಎದುರಾಳಿಗಳಿಂದ ಜೀವ ಬೆದರಿಕೆ ಇರುವ ಕಾರಣ ಸ್ವರಕ್ಷಣೆಗಾಗಿ ತಾನು ನಕಲಿ ಬಂದೂಕು ಲೈಸನ್ಸ್ ಪಡೆದುಕೊಂಡಿದ್ದುದಾಗಿ ದೀಪೇಶ್ ಹೇಳಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
MUST WATCH
ಹೊಸ ಸೇರ್ಪಡೆ
Anthamthana Kannada Movie: ಶೂಟಿಂಗ್ನತ್ತ ಅಣ್ತಮ್ತನ
45 Movie: ಕರಾಟೆ ಗೊತ್ತುಂಟು, ಹತ್ತಿರ ಬಂದ್ರೆ ಜಾಗ್ರತೆ!
Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ
Mangaluru: ಬೇಕು ಇಂದೋರ್ ಮಾದರಿ;ದೇಶದ ನಂ.1 ಸ್ವಚ್ಛ ನಗರ ಇಲ್ಲಿಗೆ ಹೇಗೆ ಅನ್ವಯವಾಗುತ್ತದೆ?
Bengaluru: ಸುರಂಗ ರಸ್ತೆ ಕಾಮಗಾರಿಗೆ ಭಾರತ-ಚೀನಾ ಸಂಬಂಧ ಅಡ್ಡಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.