ಕಳಚಿ ಬಿದ್ದ ಕಲಾಕುಸುಮ ಶ್ರೀನಿವಾಸ ರಾವ್
Team Udayavani, May 4, 2018, 6:00 AM IST
ಬಹುಮುಖಿ ಕಲಾವಿದ ನಿವೃತ್ತ ಶಿಕ್ಷಕ ಮದಂಗಲ್ಲು ಶ್ರೀನಿವಾಸ ರಾವ್ ಎ.23ರಂದು 65ನೇ ವಯಸ್ಸಿನಲ್ಲಿ ನಿಧನ ಹೊಂದಿದರು. ವೃತ್ತಿಯಲ್ಲಿ ಅಧ್ಯಾಪಕನಾಗಿದ್ದರೂ ಓರ್ವ ಹವ್ಯಾಸಿ ಯಕ್ಷಗಾನ ಕಲಾವಿದನಾಗಿ, ತಾಳಮದ್ದಳೆ ಅರ್ಥಧಾರಿಯಾಗಿ, ರಂಗನಟನಾಗಿ, ಪ್ರಸಾದನಾ ಕಲಾವಿದನಾಗಿ, ನೇಪಥ್ಯ ಕಲಾವಿದನಾಗಿ ರಾತ್ರಿಯಿಂದ ಬೆಳಗಿನವರೆಗೆ ಹವ್ಯಾಸಿ ಯಕ್ಷಗಾನ ಕಲಾವಿದರ ಮುಖವರ್ಣಿಕೆ ಬರೆಯುತ್ತಾ, ನಾಟಕ ಹಾಗೂ ಶಾಲಾ ವಾರ್ಷಿಕೋತ್ಸವಗಳಿಗೆ ಪ್ರಸಾದನ ಕೈಂಕರ್ಯ ನಡೆಸುತ್ತಾ, ನೇಪಥ್ಯದಲ್ಲಿ ವೇಷಭೂಷಣ ಕಟ್ಟುತ್ತಾ 48 ವರ್ಷಗಳಿಂದ ಸದ್ದಿಲ್ಲದೆ ಕಲಾ ಸೇವೆ ನಡೆಸುತ್ತಾ ಬಂದವರು. ಆಪ್ತರಿಂದ ಒಪ್ಪಣ್ಣನೆಂದೇ ಕರೆಸಿಕೊಂಡವರು.
ಇಂದಿನ ಅನೇಕ ಹಿರಿಯ ಹವ್ಯಾಸಿ ಕಲಾವಿದರೂ ಕೂಡ ಒಂದಲ್ಲ ಒಂದು ಸಲ ಇವರಿಂದ ಮುಖವರ್ಣಿಕೆ ಬರೆಸಿಕೊಂಡವರೆ. ಹವ್ಯಾಸಿ ಯಕ್ಷಗಾನ ಬಯಲಾಟಗಳಿಗೆ ಆಪತ್ ಕಲಾವಿದನಾಗಿ ಒದಗುವವರು.ಆಟಕ್ಕೆ ಯಾವುದೇ ಕಲಾವಿದರ ಗೈರಾದಾರೆ ಆ ವೇಷಕ್ಕೆ ಒಪ್ಪಣ್ಣನೇ ಗತಿ. ಆಪತ್ ಕಲಾವಿದನಾಗಿ ಶಾಲಾ ದಿನದಲ್ಲಿ ರಂಗವೇರಿದ ಶ್ರೀನಿವಾಸ ರಾವ್ ಜೀವನದುದ್ದಕ್ಕೂ ಆಪತ್ ಕಲಾವಿದನಾಗೇ ಗುರುತಿಸಿಕೊಂಡಿದ್ದೇನೆ ಎನ್ನುತ್ತಿದ್ದರು.
ಪುಂಡುವೇಷ, ಕಿರೀಟವೇಷ, ಬಣ್ಣದವೇಷ, ಹೆಣ್ಣು ಬಣ್ಣ, ಹಾಸ್ಯ, ಕನ್ನಡ, ತುಳು, ಪೌರಾಣಿಕ, ಕಾಲ್ಪನಿಕ ಹೀಗೆ ಎಲ್ಲಾ ಪ್ರಕಾರದ ವೇಷಗಳಿಗೆ ಸೈ ಎನಿಸಿದವರು. ಇವರ ಭಸ್ಮಾಸುರ ಮೋಹಿನಿಯ ಶಿವ, ದೇವಿ ಮಹಾತೆ¾ಯ ಬ್ರಹ್ಮ, ಶೂರ್ಪನಖೀ, ತಾಟಕಿ, ಪೂತನಿ, ರಾವಣ, ದೇವೇಂದ್ರ, ಮಹಿಷಾಸುರ, ವಾವರ, ಅಬ್ಬು ಸೇಕು, ಕೇಳು ಪಂಡಿತ, ಕೇತಕಿ ವರ್ಮ, ಬುದ್ಧಿವಂತ, ಕೇಮರ ಬಲ್ಲಾಳ ಹೀಗೆ ಪೌರಾಣಿಕ ಸಾಮಾಜಿಕ, ತುಳು ಕನ್ನಡ ಎಲ್ಲ ಪ್ರಕಾರದ ವೇಷಗಳನ್ನು ಮಾಡಿದ್ದಾರೆ. ನಾಟಕ ರಂಗದಲ್ಲಿ ಬಯ್ಯಮಲ್ಲಿಗೆಯ ಚಿಕ್ಕಮ್ಮ, ಬೊಳ್ಳಿಮೂಡುಂಡು ನಾಟಕದ ಗಂಗಾ, ಕೃಷ್ಣ ದೇವರಾಯದ ಅಪ್ಪಾಜಿ ಇವರ ಪ್ರಸಿದ್ಧ ಪಾತ್ರಗಳು.
ಅಧ್ಯಾಪನ ವೃತ್ತಿಯ ಜತೆಗೆ ಹಿರಿಯ ಕಲಾವಿದ ದೇವಕಾನ ಕೃಷ್ಣ ಭಟ್ಟರಿಂದ ಪ್ರಸಾದನ ಕಲೆ ಕಲಿತು ಗಣೇಶ ಕಲಾವೃಂದ ಪೈವಳಿಕೆ ಸಂಸ್ಥೆಯಲ್ಲಿ ಸೇವೆಗೈಯುತ್ತಾ ಬಂದಿದ್ದರು. ಪಣಂಬೂರು ಶ್ರೀಧರ ಐತಾಳರು ಒಪ್ಪಣ್ಣರಿಗೆ ಯಕ್ಷಗಾನದ ಮೊದಲ ಪಾಠ ಹೇಳಿಕೊಟ್ಟವರು. ಮಾವ ಕುರಿಯ ವಿಠಲ ಶಾಸ್ತ್ರಿಗಳ ಮಾರ್ಗದರ್ಶನ, ಅಣ್ಣ , ತಮ್ಮಂದಿರೊಂದಿಗೆ ಯಕ್ಷಗಾನದ ಒಡನಾಟ, ಹೀಗೆ ಕೇಳಿ ನೋಡಿ ಕಲಿತದ್ದೇ ಹೆಚ್ಚು ಎನ್ನುತ್ತಿದ್ದರು ರಾವ್. ದೇಶ ವಿದೇಶಗಳಲ್ಲಿ ಹಲವಾರು ಪ್ರಶಸ್ತಿ , ಸಮ್ಮಾನದ ಗೌರವಗಳಿಗೆ ಪಾತ್ರರಾದವರು ರಾವ್.
ಯೋಗೀಶ ರಾವ್ ಚಿಗುರುಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.