ಕೇರಳದಲ್ಲಿ ಶೇ. 75ರಷ್ಟು ಶಾಲಾ ಕೊಠಡಿಗಳು ಹೈಟೆಕ್‌


Team Udayavani, May 4, 2018, 6:10 AM IST

02ksde1.jpg

ಕಾಸರಗೋಡು: 2018- 19ನೇ ಶೈಕ್ಷಣಿಕ ವರ್ಷ ಆರಂಭ ಗೊಳ್ಳಲು ಇನ್ನು  ಒಂದು ತಿಂಗಳು ಮಾತ್ರ ಬಾಕಿ ಉಳಿದಿದ್ದು, ಜೂನ್‌ 1ರಿಂದಲೇ ಅನ್ವಯವಾಗುವಂತೆ ಕೇರಳ ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ  ಅಭಿಯಾನದಡಿ ರಾಜ್ಯದ ಶೇಕಡಾ 75ರಷ್ಟು ತರಗತಿ ಕೊಠಡಿಗಳು ಹೈಟೆಕ್‌ ಟಚ್‌ ಪಡೆದುಕೊಂಡಿವೆ.

ಸಾರ್ವಜನಿಕ ಶಿಕ್ಷಣ ವಲಯದ ವ್ಯಾಪ್ತಿಯಲ್ಲಿ  ಬರುವ ಸುಮಾರು 34,500 ಶಾಲಾ ತರಗತಿ ಕೊಠಡಿಗಳು ಲ್ಯಾಪ್‌ಟಾಪ್‌, ಪ್ರಾಜೆಕ್ಟರ್‌, ಸ್ಪೀಕರ್‌ ಹಾಗೂ ಇನ್ನಿತರ ಅತ್ಯಾಧುನಿಕ ಮಾದರಿಯ ಉಪಕರಣಗಳೊಂದಿಗೆ ಹೈಟೆಕ್‌ ಆಗಿವೆ. ಮುಂದಿನ ಶೈಕ್ಷಣಿಕ ವರ್ಷವು ಜೂನ್‌ ಮೊದಲ ವಾರದಿಂದ ಆರಂಭಗೊಳ್ಳಲಿದ್ದು, ಇದಕ್ಕೆ ಮೊದಲೇ ಇನ್ನಷ್ಟು  ತರಗತಿ ಕೊಠಡಿಗಳನ್ನು  ಸಾರ್ವಜನಿಕರ, ಹಳೆ ವಿದ್ಯಾರ್ಥಿಗಳ, ಸಂಘ – ಸಂಸ್ಥೆಗಳ ಸಹಕಾರದೊಂದಿಗೆ ಹೈಟೆಕ್‌ಗೊಳಿಸಲು ನಿರ್ಧರಿಸಲಾಗಿದೆ.

ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ ಅಭಿಯಾನದ ಪ್ರಯುಕ್ತ ರಾಜ್ಯ ಸರಕಾರದ ಕಂಪೆನಿಯಾದ ಕೇರಳ ಇನ್‌ಫ್ರಾಸ್ಟ್ರಕ್ಚರ್‌ ಆ್ಯಂಡ್‌ ಟೆಕ್ನಾಲಜಿ ಫಾರ್‌ ಎಜ್ಯುಕೇಶನ್‌ (ಕೆಐಟಿಇ) ಸಹಭಾಗಿತ್ವದಲ್ಲಿ  ಶಾಲಾ ಕೊಠಡಿಗಳನ್ನು  ಹೈಟೆಕ್‌ ಗೊಳಿಸಲಾಗುತ್ತಿದೆ.

ಕೇರಳದ ಒಟ್ಟು  14 ಜಿಲ್ಲೆಗಳ ಆಯ್ದ  ಸರಕಾರಿ ಶಾಲೆಗಳಲ್ಲಿ  ಈಗಾಗಲೇ ಲ್ಯಾಪ್‌ಟಾಪ್‌, ಮಲ್ಟಿ  ಮೀಡಿಯಾ ಪ್ರಾಜೆಕ್ಟರ್‌ಗಳು, ಗೋಡೆಯ ಮೇಲಿನ ಪ್ರಾಜೆಕ್ಟರ್‌ಗಳು, ಯುಎಸ್‌ಬಿ ಸ್ಪೀಕರ್‌, ದೊಡ್ಡ  ಸ್ಕ್ರೀನ್‌ಗಳನ್ನು  ಅಳವಡಿಸಲಾಗಿದೆ. ಇವುಗಳೆಲ್ಲಾ ಕಾರ್ಯಾಚರಿಸುವ ಸಲುವಾಗಿ ಹೈಸ್ಪೀಡ್‌ ಬ್ಯಾಂಡ್‌ ಇಂಟರ್‌ನೆಟ್‌ ಸಂಪರ್ಕ ಸಹ ಒದಗಿಸಲಾಗಿದೆ. ಕೆಐಟಿಇ ಸಂಸ್ಥೆಯು ಈಗಾಗಲೇ ಹೈಟೆಕ್‌ ತರಗತಿ ನಡೆಸುವ ಕುರಿತು ಈ ಉಪಕರಣಗಳನ್ನು  ಬಳಸುವ ಬಗ್ಗೆ  ಅಧ್ಯಾಪಕರಿಗೆ ತರಬೇತಿ ನೀಡಲು ಆರಂಭಿಸಲಾಗಿದೆ.

ಮುಂದೆ ವಿಡಿಯೋ ಕಾನ್ಫರೆನ್ಸ್‌ 
ಈ ಮಹತ್ವಾಕಾಂಕ್ಷಿ  ಯೋಜನೆಯ ಮುಂದಿನ ಹಂತದಲ್ಲಿ  ತರಗತಿ ಕೊಠಡಿಗಳಲ್ಲಿ  ವೀಡಿಯೋ ಕಾನ್ಫರೆನ್ಸ್‌  ವ್ಯವಸ್ಥೆಯನ್ನು  ಕೂಡ ಅಳವಡಿಸಲು ತೀರ್ಮಾನಿಸಲಾಗಿದೆ. ಈ ಶಾಲೆಗಳಲ್ಲಿ  ಮಲ್ಟಿ  ಫಂಕ್ಷನ್‌ ಪ್ರಿಂಟರ್‌ಗಳು, ಎಚ್‌ಡಿ ಡಿಜಿಟಲ್‌ ಹ್ಯಾಂಡಿಕ್ಯಾಮ್‌, ಎಚ್‌ಡಿ ವೆಬ್‌ಕ್ಯಾಮ್‌, ಎಲ್‌ಇಡಿ ಟಿವಿ ಮುಂತಾದವುಗಳನ್ನು  ಒದಗಿಸಲು ಈಗಾಗಲೇ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ.

ಎಲ್ಲ ಶಿಕ್ಷಕರಿಗೆ ಮಾಹಿತಿ ಮತ್ತು  ಸಂವಹನ ತಂತ್ರಜ್ಞಾನದ ಬಗ್ಗೆ  ವಿಶೇಷ ತರಬೇತಿ ನೀಡಲಾಗುವುದು. ವಿದ್ಯಾಭ್ಯಾಸ ಇಲಾಖೆಯು ಸಮಗ್ರ ರಿಸೋರ್ಸ್‌ ಪೋರ್ಟಲ್‌ ಮೂಲಕ ವಿಷಯ ಹಾಗೂ ಪಠ್ಯ ಯೋಜನೆಗಳನ್ನು  ಸಿದ್ಧಪಡಿಸಿದ್ದು, ಅದರನ್ವಯ ಮುಂದಿನ ಚಟುವಟಿಕೆಗಳನ್ನು  ಜಾರಿಗೆ ತರುತ್ತಿದೆ.

493.50 ಕೋ. ರೂ. ಮಂಜೂರು 
ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞವನ್ನು  ಈಗಿನ ಎಲ್‌ಡಿಎಫ್‌ ಸರಕಾರವು ಅಧಿಕಾರಕ್ಕೆ ಬಂದ ಬಳಿಕ 2016ರ ಮೊದಲ ಮುಂಗಡಪತ್ರದಲ್ಲಿ  ಘೋಷಿಸಿತ್ತು. ಕಳೆದ ಯುಡಿಎಫ್‌ ಸರಕಾರ ಕೂಡ ಈ ಯೋಜನೆಗೆ ವಿಶೇಷ ಮಹತ್ವ ನೀಡಿತ್ತು. 
ರಾಜ್ಯದಲ್ಲಿ  ಮಾಹಿತಿ ಮತ್ತು  ಸಂವಹನ ತಂತ್ರಜ್ಞಾನದ ಬಳಕೆಗಾಗಿ ಕೇರಳ ಇನ್‌ಫ್ರಾಸ್ಟ್ರಕ್ಚರ್‌ ಇನ್ವೆಸ್ಟ್‌ ಮೆಂಟ್‌ ಫಂಡ್‌ ಬೋರ್ಡ್‌ (ಕಿಫ್‌ಬಿ) ಮೂಲಕ 493.50 ಕೋಟಿ ರೂಪಾಯಿ ಮಂಜೂರು ಮಾಡಲಾಗಿತ್ತು. ಪ್ರಥಮ ಹಂತದಲ್ಲಿ  ಕೇರಳದ 140 ವಿಧಾನಸಭಾ ಕ್ಷೇತ್ರಗಳ ಪ್ರತಿ ಒಂದು ಶಾಲೆಯಂತೆ ಯೋಜನೆಯನ್ನು  ಆರಂಭಿಸಲಾಗಿತ್ತು.

ಜಿಲ್ಲೆಗೂ ಯೋಜನೆ ವಿಸ್ತರಣೆ
ಶಾಲಾ ಕೊಠಡಿಗಳನ್ನು  ಹೈಟೆಕ್‌ ಮಾಡುವ ಮಹತ್ತರ ಯೋಜನೆಯನ್ನು  ಕಾಸರಗೋಡು ಜಿಲ್ಲೆಯಲ್ಲೂ  ಆರಂಭಿಸಲಾಗಿದೆ. ಜಿಲ್ಲೆಯ ಕೆಲವು ಸರಕಾರಿ ವಲಯದ ಶಾಲೆಗಳನ್ನು  ಈಗಾಗಲೇ ಅತ್ಯಾಧುನಿಕ ಮಾದರಿಯಲ್ಲಿ  ಹೈಟೆಕ್‌ ಮಾಡಲಾಗಿದೆ. ಜೂನ್‌ ಮೊದಲ ವಾರಕ್ಕಾಗುವಾಗ ಮತ್ತಷ್ಟು  ಶಾಲೆಗಳನ್ನು  ಸ್ಮಾರ್ಟ್‌ ತರಗತಿಗಳಾಗಿ ಮಾರ್ಪಡಿಸಲು ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಜಿಲ್ಲೆಯ ಶಿಕ್ಷಣ ಅಧಿಕಾರಿಗಳು ಕ್ರಮಬದ್ಧ  ಯೋಜನೆಗಳನ್ನು  ರೂಪಿಸಿ ಜಾರಿಗೊಳಿಸುವಲ್ಲಿ  ನಿರತರಾಗಿದ್ದಾರೆ. ಇನ್ನೊಂದೆಡೆ ಜಿಲ್ಲೆಯ ಸರಕಾರಿ ಶಾಲೆಗಳ ಜೊತೆಯಲ್ಲಿ  ಅನುದಾನಿತ ಮತ್ತು  ಅನುದಾನ ರಹಿತ ಶಾಲೆಗಳು ಕೂಡ ಹೈಟೆಕ್‌ ಆಗುತ್ತಿದ್ದು, ಅತ್ಯಾಧುನಿಕ ಮಾದರಿಯ ಸ್ಮಾರ್ಟ್‌ ತರಗತಿ ಕೊಠಡಿಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ.

ಟಾಪ್ ನ್ಯೂಸ್

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

101

Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ

No support for liquor bandh: Tourism Hotel Owners Association

Liquor: ಮದ್ಯ ಬಂದ್‌ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ

: ಸಿಎಂ ಸಿದ್ದರಾಮಯ್ಯ

Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್‌ ಮಗುಚಿ ಇಬ್ಬರು ನಟಿಯರ ಸಾವು

Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್‌ ಮಗುಚಿ ಇಬ್ಬರು ನಟಿಯರ ಸಾವು

3

Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ

Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ

Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ

police

Kumbala: ಸಂತ್ರಸ್ತೆಯ ತಾಯಿ ಆತ್ಮಹ*ತ್ಯೆ: ಸಚಿತಾ ರೈ ವಿರುದ್ಧ ಮತ್ತೊಂದು ದೂರು ದಾಖಲು

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

2

Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ

Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.