ಮುಹೂರ್ತಕ್ಕೇ ಮುಹೂರ್ತ


Team Udayavani, May 4, 2018, 6:00 AM IST

s-43.jpg

ಸಿನಿಮಾ ಮಂದಿ ತಮ್ಮ ಇಷ್ಟಾರ್ಥ ಸಿದ್ಧಿಸಿದ ದೇವಸ್ಥಾನಗಳಲ್ಲಿ ತಮ್ಮ ಸಿನಿಮಾಗಳ ಮುಹೂರ್ತ ಮಾಡುತ್ತಾರೆ. ಇದೇ ಕಾರಣದಿಂದ ಬೆಂಗಳೂರಿನ ಅನೇಕ ದೇವಸ್ಥಾನಗಳಲ್ಲಿ ಸಿನಿಮಾ ಮುಹೂರ್ತಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ಕೆಲವು ದೇವಸ್ಥಾನಗಳಲ್ಲಿ ತಿಂಗಳಿಗೆ ಮೂರ್‍ನಾಲ್ಕು ಸಿನಿಮಾಗಳ ಮುಹೂರ್ತ ನಡೆಯುವ ಮೂಲಕ, ಮತ್ತಷ್ಟು ಮಂದಿ ಆ ದೇವಸ್ಥಾನದಲ್ಲಿ ಮುಹೂರ್ತ ಮಾಡುವುದಕ್ಕೆ ಪ್ರೇರಣೆಯಾಗಿದೆ.

ಫ‌ಸ್ಟ್‌ ಸೀನ್‌: ಕಥಾನಾಯಕ ದೇವರ ಮುಂದೆ ಕೈ ಮುಗಿದು ನಿಂತಿರುತ್ತಾನೆ. ಹಿಂದಿನಿಂದ “ಆ್ಯಕ್ಷನ್‌’ ಎಂಬ ಧ್ವನಿ. “ದೇವರೇ ಎಲ್ಲರನ್ನೂ ಚೆನ್ನಾಗಿಡು, ನನ್ನನ್ನು ಮಾತ್ರ ಸ್ವಲ್ಪ ಹೆಚ್ಚೇ ಚೆನ್ನಾಗಿಡು’ ಎಂದು ನಾಯಕ ಮನಸ್ಸಲ್ಲೇ ಬೇಡಿಕೊಳ್ಳುತ್ತಾನೆ. ಶಾಟ್‌ ಕಟ್‌ ಆಗುತ್ತದೆ. ಅರ್ಚಕರು ಸ್ಕ್ರಿಪ್ಟ್ ಅನ್ನು ದೇವರ ಬಳಿ ಇಟ್ಟು ಪೂಜೆ ಮಾಡಿ, ಚಿತ್ರತಂಡದ ಕೈಗಿಡುತ್ತಾರೆ.

– ಸಿನಿಮಾ ಮುಹೂರ್ತ ಎಂದರೆ ಅದು ದೇವರ ಮುಂದೆಯೇ ಆಗಬೇಕು, ತಮ್ಮ ಇಷ್ಟದ ದೇವಸ್ಥಾನಗಳಲ್ಲೇ ಆಗಬೇಕೆಂಬುದು ಸಿನಿಮಾ ಮಂದಿಯ ಆಸೆ, ನಂಬಿಕೆ. ಸಿಕ್ಕಾಪಟ್ಟೆ ಭಿನ್ನ ಆಲೋಚನೆಗಳ, ಸಾಮಾನ್ಯ ಜನರ ನಂಬಿಕೆಗಳಿಗಿಂತ ಭಿನ್ನವಾಗಿ ಯೋಚಿಸುವ ಕಥೆಗಳನ್ನಿಟ್ಟುಕೊಂಡು ಸಿನಿಮಾ ಮಾಡುವ ಚಿತ್ರತಂಡಗಳು ಕೂಡಾ ಚಿತ್ರದ ಮುಹೂರ್ತಕ್ಕೆ ತಮ್ಮ ನಂಬಿಕೆಯ ದೇವಸ್ಥಾನವನ್ನೇ ಹುಡುಕುತ್ತವೆ. ದೇವರಿಗೆ ಬೈಯ್ಯುವ, ದೇವರಿಲ್ಲ ಎಂದು ಹೇಳುವ ಸ್ಕ್ರಿಪ್ಟ್ ಅನ್ನು ಅದೇ ದೇವರ ಮುಂದೆ ಇಟ್ಟು ಫ‌ಸ್ಟ್‌ಶಾಟ್‌ ತೆಗೆಯಲಾಗುತ್ತದೆ. ಅನೇಕರು ತಮ್ಮ ಇಷ್ಟದೇವರ ಮೇಲೆಯೇ ಫ‌ಸ್ಟ್‌ಶಾಟ್‌ ತೆಗೆಯುತ್ತಾರೆ. ಅದಕ್ಕೆ ಕಾರಣ ಅವರವರ ನಂಬಿಕೆ. ಮುಂದೆ ಅದನ್ನು ಸಿನಿಮಾದಲ್ಲಿ ಇಡುತ್ತಾರೋ, ಬಿಡುತ್ತಾರೋ ಅದು ಆ ತಂಡಕ್ಕೆ ಬಿಟ್ಟಿದ್ದು. ಆದರೆ, ಸಿನಿಮಾ ಮುಹೂರ್ತ ಮಾತ್ರ ದೇವರ ಮುಂದೆಯೂ ಆಗುತ್ತದೆ. 

ಸಿನಿಮಾ ಮಂದಿ ಜ್ಯೋತಿಷ್ಯ, ಭವಿಷ್ಯ, ದೇವರನ್ನು ಸ್ವಲ್ಪ ಹೆಚ್ಚೇ ನಂಬುತ್ತಾರೆಂಬ ಮಾತಿದೆ. ಚಿತ್ರತಂಡದವರು ಜ್ಯೋತಿಷಿಗಳನ್ನು ಕೇಳಿ ಸಿನಿಮಾ ಬಿಡುಗಡೆ ಮಾಡುವುದರಿಂದ ಕೆಲವೊಮ್ಮೆ ಯಾವುದೇ ಪ್ರಮೋಶನ್‌ ಇಲ್ಲದೇ ತರಾತುರಿಯಲ್ಲಿ ಸಿನಿಮಾ ಬಿಡುಗಡೆ ಆಗುತ್ತದೆ ಎಂಬ ಮಾತು ಈ ಹಿಂದೆ ಕೇಳಿಬಂದಿತ್ತು. ಅದು ಅವರವರ ನಂಬಿಕೆ. ಸಿನಿಮಾ ಮಂದಿ ತಮ್ಮ ಇಷ್ಟಾರ್ಥ ಸಿದ್ಧಿಸಿದ ದೇವಸ್ಥಾನಗಳಲ್ಲಿ ತಮ್ಮ ಸಿನಿಮಾಗಳ ಮುಹೂರ್ತ ಮಾಡುತ್ತಾರೆ. ಇದೇ ಕಾರಣದಿಂದ ಬೆಂಗಳೂರಿನ ಅನೇಕ ದೇವಸ್ಥಾನಗಳಲ್ಲಿ ಸಿನಿಮಾ ಮುಹೂರ್ತಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ಕೆಲವು ದೇವಸ್ಥಾನಗಳಲ್ಲಿ ತಿಂಗಳಿಗೆ ಮೂರ್‍ನಾಲ್ಕು ಸಿನಿಮಾಗಳ ಮುಹೂರ್ತ ನಡೆಯುವ ಮೂಲಕ, ಮತ್ತಷ್ಟು ಮಂದಿ ಆ ದೇವಸ್ಥಾನದಲ್ಲಿ ಮುಹೂರ್ತ ಮಾಡುವುದಕ್ಕೆ ಪ್ರೇರಣೆಯಾಗುತ್ತಿರುವುದು ಸುಳ್ಳಲ್ಲ.  ವೆಸ್ಟ್‌ ಆಫ್ ಕಾರ್ಡ್‌ ರಸ್ತೆಯಲ್ಲಿರುವ ಶ್ರೀ ವರಸಿದ್ಧಿ ವಿನಾಯಕ ಶ್ರೀನಿವಾಸ ಮಂದಿರ, ಬನಶಂಕರಿಯ ಧರ್ಮಗಿರಿ ಮಂಜುನಾಥಸ್ವಾಮಿ ದೇವಸ್ಥಾನ, ಬಸವನಗುಡಿಯ ದೊಡ್ಡ ಗಣಪತಿ, ಮಲ್ಲೇಶ್ವರಂನಲ್ಲಿರುವ ಕಾಡು ಮಲ್ಲೇಶ್ವರ ದೇವಸ್ಥಾನ, ಆರ್‌.ಟಿ.ನಗರದ ಸಾಯಿಬಾಬಾ ಮಂದಿರ, ಮಹಾಲಕ್ಷ್ಮೀ ಲೇಔಟ್‌ನ ಆಂಜನೇಯ ಸ್ವಾಮಿ ದೇವಸ್ಥಾನ, ಗವಿಗಂಗಾಧರೇಶ್ವರ ಸ್ವಾಮಿ ದೇವಸ್ಥಾನ … ಹೀಗೆ ಬೆಂಗಳೂರಿನ ಅನೇಕ ದೇವಸ್ಥಾನಗಳಲ್ಲಿ ಸಿನಿಮಾ ಮುಹೂರ್ತಗಳು ನಡೆಯುತ್ತಲೇ ಇರುತ್ತವೆ.  ಅದರಲ್ಲೂ ಕಾರ್ಡ್‌ ರಸ್ತೆಯಲ್ಲಿರುವ ಶ್ರೀ ವರಸಿದ್ಧಿ ವಿನಾಯಕ ಶ್ರೀನಿವಾಸ ಮಂದಿರ ಚಿತ್ರತಂಡದವರ ಇಷ್ಟದ ಜಾಗ ಎಂದರೆ ತಪ್ಪಲ್ಲ. ಅದೇ ಕಾರಣದಿಂದ ಆ ಮಂದಿರದಲ್ಲಿ ಸೆಟ್ಟೇರುವ ಸಿನಿಮಾಗಳ ಸಂಖ್ಯೆಯೂ ಹೆಚ್ಚಿದೆ. ಈ ಮಂದಿರ ಆರಂಭವಾಗಿ 32 ವರ್ಷಗಳಾಗಿವೆ. ಈ 32 ವರ್ಷದಲ್ಲಿ 200ಕ್ಕೂ ಹೆಚ್ಚು ಚಿತ್ರಗಳು ಇಲ್ಲಿ ಮುಹೂರ್ತ ಕಂಡಿವೆ.

ಸ್ಟಾರ್‌ಗಳಿಂದ ಹಿಡಿದು ಹೊಸಬರ ಸಿನಿಮಾಗಳ ಮುಹೂರ್ತಗಳಿಗೂ ಇಲ್ಲಿನ ದೇವರು ಸಾಕ್ಷಿಯಾಗಿದ್ದಾರೆ. ದೇವರ ಆಶೀರ್ವಾದವೋ, ಸಿನಿಮಾದ ಶಕ್ತಿಯೋ ಗೊತ್ತಿಲ್ಲ, ಆದರೆ ಇಲ್ಲಿ ಮುಹೂರ್ತ ಮಾಡಿದ ಕೆಲವು ಸಿನಿಮಾಗಳು ಕೂಡಾ ಹಿಟ್‌ ಆಗಿವೆ. ಅಷ್ಟಕ್ಕೂ ಈ ಮಂದಿರದಲ್ಲಿ ಇಷ್ಟೊಂದು ಮುಹೂರ್ತ ನಡೆಯಲು ಕಾರಣವೇನು, ಯಾವತ್ತಿನಿಂದ ಸಿನಿಮಾ ಮುಹೂರ್ತಗಳು ಇಲ್ಲಿ ನಡೆಯುತ್ತಾ ಬಂದುವು ಎಂಬ ಪ್ರಶ್ನೆ ಬರುತ್ತದೆ. ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಅವರ ಬಹುತೇಕ ಸಿನಿಮಾಗಳು ಇಲ್ಲೇ ಮುಹೂರ್ತ ಕಂಡಿವೆ. ರವಿಚಂದ್ರನ್‌ ಅಭಿನಯದ ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದ “ಯಾರೇ ನೀನು ಚೆಲುವೆ’,”ಪ್ರೀತ್ಸೋದ್‌ ತಪ್ಪಾ’ ಚಿತ್ರಗಳ ಮುಹೂರ್ತಗಳು ನಡೆದಿದ್ದು, ಇದೇ ಮಂದಿರದಲ್ಲಿ. ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸಂಚಲನವನ್ನೇ ಉಂಟು ಮಾಡಿದ “ಮುಂಗಾರು ಮಳೆ’ ಚಿತ್ರದ ಮುಹೂರ್ತವಾಗಿದ್ದು ಕೂಡಾ ಇಲ್ಲೇ. ಅಷ್ಟೇ ಅಲ್ಲದೇ, ಸುದೀಪ್‌ ಅವರ “ಮಾಣಿಕ್ಯ’, “ರನ್ನ’, “ಅಂಬಿ ನಿಂಗೆ ವಯಸ್ಸಾಯೊ¤à’, “ರಾಜ ಮಾರ್ತಾಂಡ’, ಧ್ರುವ ಸರ್ಜಾ “ಪೊಗರು’, ಇತ್ತೀಚೆಗೆ ಶಿವರಾಜಕುಮಾರ್‌ ಅವರ “ರುಸ್ತುಂ’ … ಹೀಗೆ ಸಾಕಷ್ಟು ಸಿನಿಮಾಗಳು ಇಲ್ಲಿ ಮುಹೂರ್ತ ಕಂಡಿವೆ. ಅದೆಷ್ಟೋ ಬಾರಿ ಇಲ್ಲಿ ಒಂದೇ ದಿನದಲ್ಲಿ ಮೂರ್‍ನಾಲ್ಕು ಸಿನಿಮಾಗಳ ಮುಹೂರ್ತ ಆದ ಉದಾಹರಣೆಗಳು ಕೂಡಾ ಇವೆ. 

ಈ ಮಂದಿರದ ಅರ್ಚಕರಾದ ಚೇತನ್‌ ಅವರು ಹೇಳುವಂತೆ, ಇಲ್ಲಿ ಮುಹೂರ್ತ ಮಾಡಿದ ಬಹುತೇಕರಿಗೆ ಯಶಸ್ಸು ಸಿಕ್ಕಿದೆಯಂತೆ. “ನಾನು ಚಿಕ್ಕ ಹುಡುಗನಾಗಿದ್ದರಿಂದಲೇ ಇಲ್ಲಿ ಮುಹೂರ್ತಗಳು ನಡೆಯುತ್ತಿವೆ. ಇದು ವರಸಿಧಿœ ವಿನಾಯಕ ಮಂದಿರ. ಬೇಡಿದ್ದನ್ನು, ಇಷ್ಟಾರ್ಥವನ್ನು ಈಡೇರಿಸುವ ದೇವರು. ಅನೇಕರು ಬೇಡಿಕೊಂಡು ಹೋಗಿ, ಆ ನಂತರ ಬಂದು ನಮ್ಮ ಇಷ್ಟಾರ್ಥ ಈಡೇರಿದೆ ಎಂದ ಉದಾಹರಣೆ ಇದೆ. ಅದೇ ಕಾರಣದಿಂದ ಇಲ್ಲಿ ಮುಹೂರ್ತಗಳು ನಡೆಯುತ್ತವೆ. ಸ್ಟಾರ್‌ ನಟರಿಂದ ಹಿಡಿದು ಹೊಸಬರ ಸಿನಿಮಾಗಳ ಮುಹೂರ್ತಗಳು ಇಲ್ಲಿ ನಡೆಯುತ್ತವೆ. ರಾಕ್‌ಲೈನ್‌ ವೆಂಕಟೇಶ್‌ ಅವರ ಸಿನಿಮಾಗಳು ಆರಂಭದಲ್ಲಿ ಇಲ್ಲೇ ನಡೆಯುತ್ತಿದ್ದವು. ಹಾಗೇ ಇತರ ಸಿನಿಮಾಗಳು ಕೂಡಾ ಇಲ್ಲಿ ಮುಹೂರ್ತ ಮಾಡಿಕೊಳ್ಳುತ್ತಿವೆ’ ಎನ್ನುತ್ತಾರೆ ಅವರು. ಈ ಮಂದಿರ ಇರೋದು ಕಾರ್ಡ್‌ ರಸ್ತೆಯಲ್ಲಿ ಹೆಚ್ಚು ಜನಸಂಚಾರವಿರುವ ಜಾಗ. ಸ್ಟಾರ್‌ಗಳು ಬಂದರೆ ಬೇಗನೇ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಇದರಿಂದ ಸಂಚಾರ ದಟ್ಟಣೆ ಉಂಟಾಗುತ್ತದೆ. ಅದೇ ಕಾರಣದಿಂದ ಇಲ್ಲಿ ಸ್ಟಾರ್‌ಗಳ ಸಿನಿಮಾಗಳ ಮುಹೂರ್ತ ಮುಂಜಾನೆ  ನಡೆಯುತ್ತದೆ. 5.30 ರಿಂದ 7 ಗಂಟೆಯೊಳಗಡೆ ಸ್ಟಾರ್‌ಗಳ ಸಿನಿಮಾದ ಮುಹೂರ್ತ ಮಾಡಲಾಗುತ್ತದೆ. 

ಇನ್ನು ಬನಶಂಕರಿಯ ಶ್ರೀ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಾಲಯದಲ್ಲೂ ಅನೇಕ ಸಿನಿಮಾಗಳ ಮುಹೂರ್ತ ನಡೆಯುತ್ತವೆ. ಅದರಲ್ಲೂ ರಕ್ಷಿತ್‌ ಶೆಟ್ಟಿ ನಿರ್ಮಾಣದ ಹಾಗೂ ನಟನೆಯ ಸಿನಿಮಾಗಳ ಮುಹೂರ್ತ ಖಾಯಂ ಆಗಿ ಇಲ್ಲೇ ನಡೆಯುತ್ತವೆ. “ಕಿರಿಕ್‌ ಪಾರ್ಟಿ’ ಚಿತ್ರದ ಮುಹೂರ್ತ ಇಲ್ಲೇ ಆಗಿದ್ದು. ಆ ಚಿತ್ರ ಹಿಟ್‌ ಆಗಿದ್ದೇ ತಡ, ರಕ್ಷಿತ್‌ ಮತ್ತು ಪುಷ್ಕರ್‌ ನಿರ್ಮಾಣದ “ಹಂಬಲ್‌ ಪೊಲಿಟಿಷಿಯನ್‌ ನೋಗ್‌ರಾಜ್‌’, “ಕಥೆಯೊಂದು ಶುರುವಾಗಿದೆ’, “ಅವನೇ ಶ್ರೀಮನ್ನಾರಾಯಣ’ ಚಿತ್ರಗಳ ಮುಹೂರ್ತಗಳು ಅಲ್ಲೇ ನಡೆದಿವೆ. ಇತ್ತೀಚೆಗೆ “ಪಡ್ಡೆಹುಲಿ’, “ನಾತಿಚರಾಮಿ’ ಚಿತ್ರಗಳು ಕೂಡಾ ಇಲ್ಲೇ ಸೆಟ್ಟೇರಿವೆ. ರಾಜಾಜಿನಗರದ ಶಿವನ ದೇವಸ್ಥಾನದಲ್ಲೂ ಸಾಕಷ್ಟು ಸಿನಿಮಾಗಳ ಮುಹೂರ್ತ ನಡೆಯುತ್ತವೆ. ಕಳೆದ ವರ್ಷ ಶಿವರಾತ್ರಿಯಂದು ರವಿಚಂದ್ರನ್‌ ಅವರ ಮೂರು ಸಿನಿಮಾಗಳು ಅಲ್ಲಿ ಮುಹೂರ್ತ ಆಚರಿಸಿಕೊಂಡಿದ್ದವು. ಇನ್ನು, ಬಸವಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲೂ “ಮೆರವಣಿಗೆ’, “ಮಿಲನ’, “ಶಿವ’, “ಟೋನಿ’, “ಬರ್ಫಿ’, “ಮರಿ ಟೈಗರ್‌’, “ಕಲ್ಪನಾ-2′ ಹೀಗೆ ಅನೇಕ ಸಿನಿಮಾಗಳು ಮುಹೂರ್ತ ಕಾಣುತ್ತಲೇ ಇರುತ್ತವೆ.

ಹಾಗಂತ ಸಿನಿಮಾ ಮುಹೂರ್ತವನ್ನು ದೇವಸ್ಥಾನದಲ್ಲೇ ಮಾಡಬೇಕೆಂಬ ಯಾವ ನಿಯಮವೂ ಇಲ್ಲ. ಮುಹೂರ್ತವನ್ನು ಅದ್ಧೂರಿಯಾಗಿ, ಆಪ್ತವರ್ಗವನ್ನು ಕರೆದು ಮಾಡಬೇಕೆಂದು ಕನಸು ಕಾಣುವವರು ಕಂಠೀರವ ಸ್ಟುಡಿಯೋ ಅಥವಾ ಇನ್ಯಾವುದೋ ಜಾಗದಲ್ಲಿ ಮಾಡುತ್ತಾರೆ. ದೇವರ ಫೋಟೋ ಮುಂದೆ ಮೊದಲ ದೃಶ್ಯವನ್ನು ಚಿತ್ರೀಕರಿಸಲಾಗುತ್ತದೆ. ಕೆಲವರು ದೊಡ್ಡ ಹೋಟೆಲ್‌ಗ‌ಳಲ್ಲಿ ಸರಳ ಪೂಜೆಯೊಂದಿಗೆ ಚಿತ್ರ ಪ್ರಾರಂಭಿಸಿದ ಉದಾಹರಣೆಗಳೂ ಇವೆ. 

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

tobacc

Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

Strict laws are there to protect women, not to misuse them: Supreme Court

laws: ಕಠಿಣ ಕಾಯ್ದೆ ‌ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್

Daily Horoscope

Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

Sandalwood: ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

KD

Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್‌

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

tobacc

Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

Strict laws are there to protect women, not to misuse them: Supreme Court

laws: ಕಠಿಣ ಕಾಯ್ದೆ ‌ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್

Daily Horoscope

Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.