FB ಯಲ್ಲಿ ವರಾನ್ವೇಷಣೆ : ಸೂಕ್ತ ವರಬೇಕೆಂದು ಕೋರಿದ ಕೇರಳದ ಜ್ಯೋತಿ
Team Udayavani, May 4, 2018, 8:40 AM IST
ತಿರುವನಂತಪುರ: ಮದುವೆಯಾಗಲು ಬಯಸುವವರು, ತಮಗೆ ಸೂಕ್ತ ವಧು, ವರರ ಅನ್ವೇಷಣೆಗಾಗಿ ಮಧ್ಯವರ್ತಿಗಳ, ಮ್ಯಾಟ್ರಿಮನಿ ಸಂಸ್ಥೆಗಳ ಮೊರೆ ಹೋಗುವುದನ್ನು ನಾವು ಕೇಳಿದ್ದೇವೆ. ಆದರೆ, ಕೇರಳದ ಯುವತಿಯೊಬ್ಬರು, ತಮ್ಮ ಫೇಸ್ ಬುಕ್ ಪುಟದಲ್ಲೇ ತನಗೆ ಸೂಕ್ತ ವರನನ್ನು ಹುಡುಕಲು ಪ್ರಯತ್ನಿಸಿದ್ದಾರೆ. ಅಲ್ಲದೆ, ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಝುಕರ್ ಬರ್ಗ್ ಅವರಿಗೆ ಫೇಸ್ ಬಕ್ ಮ್ಯಾಟ್ರಿಮನಿ ತೆರೆಯಲು (ವಧು-ವರರ ಹುಡುಕಾಟ ವೇದಿಕೆ) ಸೌಲಭ್ಯವನ್ನೂ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ. ಆಕೆಯ ಈ ಪ್ರಯತ್ನಕ್ಕೆ ಜನರಿಂದ ಪ್ರೋತ್ಸಾಹವೂ ಸಿಕ್ಕಿದೆ.
ಇವರ ಹೆಸರು ಕೆ.ಜಿ. ಜ್ಯೋತಿ. ವಯಸ್ಸು 28. ಫ್ಯಾಷನ್ ಡಿಸೈನಿಂಗ್‌ನಲ್ಲಿ ಬಿಎಸ್ಸಿ ಮಾಡಿರುವ ಇವರು, ಫೇಸ್‌ಬುಕ್‌ನಲ್ಲಿ #FacebookMatrimony ಎಂಬ ಹ್ಯಾಶ್ ಟ್ಯಾಗ್‌ನಡಿ ತಮ್ಮ ಮನದಾಳದ ಮಾತುಗಳನ್ನು ಹೇಳಿಕೊಂಡಿದ್ದಾರೆ. ‘ನನಗೊಬ್ಬ ಸೂಕ್ತ ವರ ಬೇಕು. ಜಾತಿ, ಜಾತಕಗಳ ಹಂಗು ನನಗಿಲ್ಲ. ನಾನೊಬ್ಬ ಅನಾಥೆ. ನನ್ನ ಅಣ್ಣ ಮುಂಬಯಿಯಲ್ಲಿ ಕಲಾ ನಿರ್ದೇಶಕನಾಗಿ ದುಡಿಯುತ್ತಿದ್ದರೆ, ತಂಗಿ ಸಿವಿಲ್ ಇಂಜಿನಿಯರಿಂಗ್ ಓದುತ್ತಿದ್ದಾಳೆ’ ಎಂದು ತಮ್ಮ ಹಿನ್ನೆಲೆಯನ್ನು ಪರಿಚಯಿಸಿಕೊಂಡಿದ್ದಾರೆ. ಗುರುವಾರ ಸಂಜೆ ಹೊತ್ತಿಗೆ ಜ್ಯೋತಿಯವರ ಈ ಮನವಿ 6,118 ಶೇರ್ ಆಗಿದ್ದು, ಇವರಿಗೆ ದೇಶದ ಮೂಲೆ ಮೂಲೆಗಳಿಂದ ಆಫರ್‌ಗಳು ಹರಿದುಬರುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
MUST WATCH
ಹೊಸ ಸೇರ್ಪಡೆ
Pushpa 2 trailer: ಪೈಸಾ ವಸೂಲ್ ಅವತಾರದಲ್ಲಿ ʼಪುಷ್ಪರಾಜ್ʼ; ಅಲ್ಲು ಭರ್ಜರಿ ಆ್ಯಕ್ಷನ್
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.