ಫಸಲ್ ಬಿಮಾ ಜಾರಿಗೆ ಕಾಂಗ್ರೆಸ್ ಅಸ ಡ್ಡೆ
Team Udayavani, May 4, 2018, 3:52 PM IST
ಕಲಬುರಗಿ: ಅತಿವೃಷ್ಟಿ ಹಾಗೂ ಪ್ರಕೃತಿ ವಿಕೋಪದಿಂದ ಹಾನಿಗೀಡಾಗುವ ಬೆಳೆ ವಿಮೆ ಹಾನಿಗೆ ಪರಿಹಾರ ದೊರಕುವ ಪ್ರಧಾನ ಮಂತ್ರಿ ಬಿಮಾ ಫಸಲು ಯೋಜನೆ ಜಾರಿಗೆ ರಾಜ್ಯ ಸರ್ಕಾರ ಆಸಕ್ತಿ ತಳೆಯದೇ ನಿರ್ಲಕ್ಷ್ಯ ಭಾವನೆ ತಳೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.
ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಗುರುವಾರ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು, ಬೀದರ ಸಂಸದರು ಹೆಚ್ಚಿನ ಆಸಕ್ತಿ ವಹಿಸಿದ ಪರಿಣಾಮ ಸಮರ್ಪಕ ಪರಿಹಾರ ಬರಲು ಸಾಧ್ಯವಾಗಿದೆ. ಆದರೆ ರಾಜ್ಯ ಸರ್ಕಾರ ರೈತರ ಬಗೆಗೆ ಕಾಳಜಿ ವಹಿಸಲಿಲ್ಲ ಎಂದು ಟೀಕಿಸಿದರು. ಜೈಜವಾನ್, ಜೈ ಕಿಸಾನ್ ವಿರೋಧಿಯಾಗಿರುವ ಕಾಂಗ್ರೆಸ್ ಮುಕ್ತ ಭಾರತಕ್ಕಾಗಿ ಕರ್ನಾಟಕದ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಬೇಕು ಎಂದು ಕರೆ ನೀಡಿದರು.
ಖರ್ಗೆ ವಿರುದ್ಧ ವಾಗ್ಧಾಳಿ ಮುಂದುವರಿಸಿದ ಗುತ್ತೇದಾರ: ಅಫಜಲಪುರ ಕ್ಷೇತ್ರದ ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ಮಾತನಾಡಿ, ಸಂಸದ ಖರ್ಗೆ ವಿರುದ್ಧ ವಾಗ್ಧಾಳಿ ಮುಂದುವರಿಸಿದರು. ಉತ್ತರ ಪ್ರದೇಶದ ಸಾರಿಗೆ ಮತ್ತು ಇಂಧನ ಖಾತೆ ಸಚಿವ ಸ್ವತಂತ್ರದೇವ ಸಿಂಗ್, ಬೀದರ ಸಂಸದ ಭಗವಂತ ಖೂಬಾ, ಮಾಜಿ ಸಚಿವರಾದ ರಾಜುಗೌಡ, ಸುನೀಲ ವಲ್ಲಾಪುರೆ, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಗುರು ಪಾಟೀಲ, ಕೆ.ಬಿ. ಶಾಣಪ್ಪ, ರಘುನಾಥ ಮಲ್ಕಾಪುರೆ, ಅಮರನಾಥ ಪಾಟೀಲ, ಬಿ.ಜಿ. ಪಾಟೀಲ, ಅಭ್ಯರ್ಥಿಗಳಾದ ಸುಭಾಷ ಆರ್. ಗುತ್ತೇದಾರ, ರಾಜಕುಮಾರ ಪಾಟೀಲ ತೇಲ್ಕೂರ, ವಾಲ್ಮೀಕಿ ನಾಯಕ, ಬಸವರಾಜ ಮತ್ತಿಮೂಡ, ಸಾಯಬಣ್ಣ ಬೋರಬಂಡಾ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಮಾಜಿ ಸಚಿವ ಬಾಬುರಾವ ಚವ್ಹಾಣ, ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತರಾವ ಮಲಾಜಿ ಸೇರಿದಂತೆ
ಬಿಜೆಪಿ ಅಭ್ಯರ್ಥಿಗಳು ಇದ್ದರು. ಆರಂಭದಲ್ಲಿ ಬಿಜೆಪಿ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೈಸೂರು ಪೇಠ ತೊಡಿಸಿ ಶರಣಬಸವೇಶ್ವರರ ಮೂರ್ತಿ ನೀಡಿ ಗೌರವಿಸಲಾಯಿತು.
ಬಿಎಸ್‌ವೈ ಸರ್ಕಾರ ಬಂದ್ರೆ ಜನಪರ ಕಾರ್ಯಕ್ರಮ
ಕಲಬುರಗಿ: ಕರ್ನಾಟಕ ರಾಜ್ಯದ ಚುನಾವಣೆಯಲ್ಲಿ ಯುವಕರ ಭವಿಷ್ಯ ಮತ್ತು ರೈತರ ಹಣೆಬರಹ ಅಡಗಿದೆ. ಅಲ್ಲದೇ ಪ್ರಮುಖವಾಗಿ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಬಂದರೆ ಜನಪರ ಕಾರ್ಯಕ್ರಮ ರೂಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ವಿಧಾನಸಭೆ ಚುನಾವಣೆ ಅಂಗವಾಗಿ ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಗುರುವಾರ ಕಲಬುರಗಿ, ಬೀದರ ಹಾಗೂ ಯಾದಗಿರಿ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ ಕೇಂದ್ರ ಸರ್ಕಾರ ಹೆಗಲಿಗೆ ಹೆಗಲು ಕೊಟ್ಟು ಅಭಿವೃದ್ಧಿ ಕಾರ್ಯಗಳಿಗೆ ಕೈ ಜೋಡಿಸಲಾಗುವುದು ಎಂದು ಘೋಷಿಸಿದರು.
ಬಿಜೆಪಿ ಸರ್ಕಾರ ಬಂದರೆ ವಿಶ್ವಾಸದ ಜತೆ ಕಮಲ ಅರಳುತ್ತದೆ. ಆದರೆ ಕಾಂಗ್ರೆಸ್ ಸರ್ಕಾರ ಬಂದರೆ ಕೆಲವೊಂದು ಪರಿವಾರಗಳು ಅರಳುತ್ತವೆ ಎಂದು ಟೀಕಿಸಿದರು. ಕಮಲಕ್ಕೆ ಮತ ಹಾಕುವ ಮುಖಾಂತರ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಿ ತನ್ನಿ. ಸ್ವಚ್ಚ, ಸುಂದರ, ಸುರಕ್ಷಿತ ಅಧಿಕಾರ ತರೋಣ ಎಂದರಲ್ಲದೇ ಬಿಜೆಪಿ ಗಾಳಿ ನಾಲ್ಕು ದಿಕ್ಕಿನಿಂದ ಬೀಸುತ್ತಿದೆ ಎಂದು ಹೇಳಿದರು. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡುವುದು ಸೇರಿದಂತೆ ರೈತರ ಉತ್ಪನ್ನಗಳಿಗೆ ಬೆಲೆ ಕಲ್ಪಿಸುವ ಡಾ| ಸ್ವಾಮಿನಾಥನ್ ಆಯೋಗದ ವರದಿಯನ್ನು ಕಾಂಗ್ರೆಸ್ ಪಕ್ಷ ಅಲ್ಮೇರಾದಲ್ಲಿ ಇಟ್ಟು ಕೀಲಿ ಹಾಕಿತ್ತು. ಆದರೆ ತಾವು ಬಂದ ಮೇಲೆ ಅದನ್ನು ಹೊರ ತೆಗೆದಿದ್ದೇವೆ. ಕಲಬುರಗಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ತೊಗರಿ ಬೆಲೆ ಕುಸಿತವಾಗಿದ್ದರಿಂದ ಬೆಂಬಲ ಬೆಲೆಯಲ್ಲಿ ಕೇಂದ್ರ ಸರ್ಕಾರವೇ ಖರೀದಿ ಮಾಡಿದೆ ಎಂದು ಹೇಳಿದರು.
ದೆಹಲಿಯಲ್ಲಿ ಅತ್ಯಾಚಾರವಾದಾಗ ಮೇಣದಬತ್ತಿ ಹಚ್ಚುತ್ತಿರಲ್ವೇ? ಅದೇ ಕರ್ನಾಟಕದ ಬೀದರ-ವಿಜಯಪುರದಲ್ಲಿ ದಲಿತ ಬಾಲಕಿ ಮೇಲೆ ಅತ್ಯಾಚಾರ ಆದಾಗ ಏಲ್ಲಿ ಹೋಗಿತ್ತು ನಿಮ್ಮ ಮೇಣದಬತ್ತಿ ಎಂದು ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿದರು.
ಕಲ್ಯಾಣ ಕರ್ನಾಟಕ ಭೂಮಿಗೆ ನಮಸ್ಕರಿಸುವೆ: ವಿಶ್ವಗುರು ಬಸವಣ್ಣ ನಡೆದಾಡಿದ, ರಾಷ್ಟ್ರಕೂಟರು ಆಳಿದ, ಕಾನೂನು ಪ್ರತಿಪಾದಕ ಮೀತಾಕ್ಷರ, ಸಂತರು ಓಡಾಡಿದ ಕಲ್ಯಾಣ ಕರ್ನಾಟಕ ಪುಣ್ಯ ಭೂಮಿಗೆ ನನ್ನ ಕೋಟಿ ನಮಸ್ಕಾರ ಎಂದು ಪ್ರಧಾನಿ ನರೇಂದ್ರ ಮೋದಿ ಧನ್ಯತಾ ಭಾವದಿಂದ ನುಡಿದರು. ಕಲ್ಯಾಣ ಕರ್ನಾಟಕದ ಪ್ರೀತಿಯ ಸಹೋದರ- ಹೋದರಿಯರೇ ಎನ್ನುತ್ತಾ ಭಾಷಣ ಆರಂಭಿಸಿರುವುದು ವಿಶೇಷವಾಗಿ ಕಂಡು ಬಂತು.
ಬಿಜೆಪಿ ಗೆಲಿಸಿ ಹಣೆಬರಹ ಬದಲಿಸಿ: ಮೋದಿ
ಕಲಬುರಗಿ: ಕರ್ನಾಟಕ ರಾಜ್ಯದ ಚುನಾವಣೆಯಲ್ಲಿ ಯುವಕರ ಭವಿಷ್ಯ, ರೈತರ ಹಣೆಬರಹ ಅಡಗಿದೆ. ಅಲ್ಲದೇ ಪ್ರಮುಖವಾಗಿ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಬಂದ್ರೆ ಜನಪರ ಕಾರ್ಯಕ್ರಮ ರೂಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ವಿಧಾನಸಭೆ ಚುನಾವಣೆ ಅಂಗವಾಗಿ ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಕಲಬುರಗಿ, ಬೀದರ ಹಾಗೂ ಯಾದಗಿರಿ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ ಕೇಂದ್ರ ಸರ್ಕಾರ ಹೆಗಲಿಗೆ ಹೆಗಲು ಕೊಟ್ಟು ಅಭಿವೃದ್ಧಿ ಕಾರ್ಯಗಳಿಗೆ ಕೈ ಜೋಡಿಸಲಾಗುವುದು. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡುವುದು ಸೇರಿದಂತೆ ರೈತರ ಉತ್ಪನ್ನಗಳಿಗೆ ಬೆಲೆ ಕಲ್ಪಿಸುವ ಡಾ.ಸ್ವಾಮಿನಾಥನ್ ಆಯೋಗದ ವರದಿಯನ್ನು ಕಾಂಗ್ರೆಸ್ ಪಕ್ಷ ಅಲ್ಮೇರಾದಲ್ಲಿ ಇಟ್ಟು ಕೀಲಿ ಹಾಕಿತ್ತು. ಆದರೆ ತಾವು ಬಂದ ಮೇಲೆ ಅದನ್ನು ಹೊರ ತೆಗೆದಿದ್ದೇವೆ.
ಕಲಬುರಗಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ತೊಗರಿ ಬೆಲೆ ಕುಸಿತವಾಗಿದ್ದರಿಂದ ಬೆಂಬಲ ಬೆಲೆಯಲ್ಲಿ ಕೇಂದ್ರ ಸರ್ಕಾರವೇ ಖರೀದಿ ಮಾಡಿದೆ ಎಂದರು. ಬಿಜೆಪಿ ಅಧಿಕಾರಕ್ಕೆ ಬಂದರೆ ವಿಶ್ವಾಸದ ಜತೆ ಕಮಲ ಅರಳುತ್ತದೆ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೆಲವೊಂದು ಪರಿವಾರಗಳು ಅರಳುತ್ತವೆ. ಕಮಲಕ್ಕೆ ಮತ ಹಾಕುವ ಮುಖಾಂತರ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ತನ್ನಿ. ಸ್ವತ್ಛ, ಸುಂದರ, ಸುರಕ್ಷಿತ ಅಧಿಕಾರ ತರೋಣ. ಬಿಜೆಪಿ ಗಾಳಿ ನಾಲ್ಕು ದಿಕ್ಕಿನಿಂದ ಬೀಸುತ್ತಿದೆ. ದೆಹಲಿಯಲ್ಲಿ ಅತ್ಯಾಚಾರವಾದಾಗ ಮೇಣದಬತ್ತಿ ಹಚ್ಚುತ್ತಿರಲ್ವ. ಅದೇ ಕರ್ನಾಟಕದ ಬೀದರ, ವಿಜಯಪುರದಲ್ಲಿ ದಲಿತ ಬಾಲಕಿ ಮೇಲೆ ಅತ್ಯಾಚಾರ ಆದಾಗ ಏಲ್ಲಿ ಹೋಗಿತ್ತು ನಿಮ್ಮ ಮೇಣದಬತ್ತಿ ಎಂದು ಪ್ರಶ್ನಿಸಿದರು.
ಖರ್ಗೆ ಬಲಗೈ ಬಂಟ ಬಿಜೆಪಿಗೆ ಸೇರ್ಪಡೆ
ಚುನಾವಣಾ ಪ್ರಚಾರದ ಸಭೆಯಲ್ಲಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರ ಬಲಗೈ ಬಂಟ, ಜಿಪಂ ಮಾಜಿ ಅಧ್ಯಕ್ಷ ಅಂಬಾರಾಯ ಅಷ್ಠಗಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು. ಪಕ್ಷದ ನಾಯಕರು ಪಕ್ಷದ ಧ್ವಜ ನೀಡುವ ಮೂಲಕ ಪಕ್ಷಕ್ಕೆ ಸ್ವಾಗತಿಸಿಕೊಂಡರು. ಅದೇ ರೀತಿ ಅಫಜಲಪುರ ಕ್ಷೇತ್ರದ ಜೆಡಿಎಸ್ ಮುಖಂಡ ಗೋವಿಂದ ಭಟ್ ಸಹ ಇದೇ ಸಂದರ್ಭದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.
ಮಿಂಚಿದ ಯುವಕರು
ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸತ್ಕರಿಸಿದರೆ, ಚಂದು ಪಾಟೀಲ ಶಾಸಕರಾಗಿ ಆಯ್ಕೆಯಾದರೆ ಉತ್ತರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಲ್ಲದೇ ಜಿಲ್ಲೆಯಲ್ಲಿ ರಾಸಾಯನಿಕ ಗೊಬ್ಬರ ತಯಾರಿಕಾ ಕಾರ್ಖಾನೆ ಸ್ಥಾಪನೆಯಾಗಲು ಕೇಂದ್ರದ ಸಚಿವ ಅನಂತಕುಮಾರ ಮೇಲೆ ಒತ್ತಡ ಹೇರಲಾಗುವುದು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Bengaluru: ಭುವನೇಶ್ವರಿ ಪ್ರತಿಮೆಗೆ ಹಾನಿ: ಆಕ್ರೋಶ
Bengaluru: ಕದ್ದ ಮೊಬೈಲ್ ಕೊರಿಯರ್ ಮೂಲಕ ಕೇರಳಕ್ಕೆ ರವಾನೆ!
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.