ಕಾಂಗ್ರೆಸ್ಗೆ ಪರೋಕ್ಷ ನೆರವು ? ಟಿಪ್ಪು ಮೈಸೂರಿನ ಹುಲಿ ಎಂದ ಪಾಕ್
Team Udayavani, May 4, 2018, 7:12 PM IST
ಬೆಂಗಳೂರು : ಟಿಪ್ಪು ಸುಲ್ತಾನ್ ಮೃತಪಟ್ಟ 218ನೇ ವರ್ಷಾಚರಣೆಯ ಸಂದರ್ಭದಲ್ಲಿ ಪಾಕಿಸ್ಥಾನ ಸರಕಾರ ಆತನನ್ನು “ಮೈಸೂರಿನ ಹುಲಿ’ ಎಂದು ಟ್ವಿಟರ್ನಲ್ಲಿ ಬಣ್ಣಿಸಿರುವುದು, ಪ್ರಕೃತ ಚುನಾವಣೆಗೆ ನಿಕಟವಾಗಿರುವ ಕರ್ನಾಟಕದಲ್ಲಿ ರಾಜಕೀಯ ಪಕ್ಷಗಳ ತೀವ್ರ ವಾಕ್ಸಮರಕ್ಕೆ ಕಾರಣವಾಗಲಿದ್ದು ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತಿದೆ.
ಪಾಕ್ ಸರಕಾರ ಇಂದು ಶುಕ್ರವಾರ “ಮೈಸೂರಿನ ಹಿಂದಿನ ಅರಸ ಟಿಪ್ಪು ಸುಲ್ತಾನ್ ಅತ್ಯಂತ ದಿಟ್ಟ ಮತ್ತು ನಿರ್ಭಯ ಯೋಧ’ ಎಂದು ತನ್ನ ಟ್ವಿಟರ್ ಖಾತೆಯಲ್ಲಿ ವರ್ಣಿಸಿದೆ. ಅಂತೆಯೇ ಟಿಪ್ಪುವನ್ನು ಮೈಸೂರಿನ ಹುಲಿ ಎಂದು ಕೊಂಡಾಡಿದೆ.
ಕರ್ನಾಟಕದಲ್ಲಿನ ಕಾಂಗ್ರೆಸ್ ಸರಕಾರ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿ ವ್ಯಾಪಕ ಟೀಕೆ, ಖಂಡನೆ, ಆಕ್ರೋಶಕ್ಕೆ ಗುರಿಯಾಗಿತ್ತು. ಇದೀಗ ಚುನಾವಣೆಯ ಹೊಸ್ತಿಲಲ್ಲಿ ನಿಂತಿರುವ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಟಿಪ್ಪು ಕುರಿತ ಪಾಕ್ ಟ್ವೀಟ್ ಹೊಸ ವಾಕ್ಸಮರಕ್ಕೆ ಕಾರಣವಾಗಲಿದೆ ಎಂದು ತಿಳಿಯಲಾಗಿದೆ.
ಮೈಸೂರಿನ ಮುಸ್ಲಿಂ ಆಡಳಿತಗಾರ, ಬಾದ್ಶಾ ನಸೀಬುದ್ದೌಲ ಸುಲ್ತಾನ್ ಫತೇ ಅಲಿ ಬಹಾದ್ದೂರ್ ಸಾಹಬ್ ಟಿಪ್ಪು ಅಲಿಯಾಸ್ ಟಿಪ್ಪು ಸುಲ್ತಾನ್ ಮೃತಪಟ್ಟ 218ನೇ ವರ್ಷಾಚರಣೆಯ ಸಂದರ್ಭದಲ್ಲಿ ಪಾಕ್ ಸರಕಾರ ಆತನನ್ನು “ಮೈಸೂರಿನ ಹುಲಿ’ ಎಂದು ಟ್ವಿಟರ್ನಲ್ಲಿ ಕೊಂಡಾಡಿದೆ.
ಪಾಕಿಸ್ಥಾನದ ಕುತ್ಸಿತ ರಾಜಕಾರಣದ ಈ ಟ್ವೀಟ್ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪರೋಕ್ಷವಾಗಿ ನೆರವಾಗುವ ಉದ್ದೇಶ ಹೊಂದಿದೆ ಎಂದು ಬಿಜೆಪಿ ಆರೋಪಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
MUST WATCH
ಹೊಸ ಸೇರ್ಪಡೆ
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ
Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ
Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.