ಶಾಸ್ತ್ರೀಯ ಸಂಗೀತದಿಂದ ಮನಸ್ಸು ಪ್ರಫುಲ್ಲ: ಬಲರಾಮ್ ಭಟ್ ಕಾಕುಂಜೆ
Team Udayavani, May 5, 2018, 7:40 AM IST
ಹೊಸಂಗಡಿ: ಶಾಸ್ತ್ರೀಯ ಸಂಗೀತವು ಮನಸ್ಸನ್ನು ಅರಳುವಂತೆ ಮಾಡುತ್ತದೆ. ಎಳವೆಯಿಂದಲೇ ಇದರ ಅಭ್ಯಾಸವು ಜೀವನಕ್ಕೆ ಒಂದು ಶಿಸ್ತನ್ನು ನೀಡುತ್ತದೆ. ಅದು ಒಂದು ದೇವರ ವರದಾನವಾಗಿದೆ. ಆ ನಿಟ್ಟಿನಲ್ಲಿ ಹೊಸಂಗಡಿಯ ರಾಗಸುಧಾ ಕಲಿಕಾ ಸಂಸ್ಥೆಯ ಪ್ರಯತ್ನ ಶ್ಲಾಘನೀಯ ಎಂದು ಬಡಾಜೆ ಮಹಾಲಿಂಗೇಶ್ವರ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಬಲರಾಮ್ ಭಟ್ ಕಾಕುಂಜೆ ಅಭಿಪ್ರಾಯಪಟ್ಟರು.
ಅವರು ಹೊಸಂಗಡಿ ಗೋವಿಂದನಗರ ದಲ್ಲಿರುವ ರಾಗಸುಧಾದ ದ್ವಿತೀಯ ವಾರ್ಷಿಕೋತ್ಸವವನ್ನು ಗುರುನರಸಿಂಹ ಕಲ್ಯಾಣ ಮಂಟಪದಲ್ಲಿ ಉದ್ಘಾಟಿಸಿ ಮಾತನಾಡಿದರು.
ಶಾಸ್ತ್ರೀಯ ಸಂಗೀತದ ಮೇರು ಪರ್ವತ ದಿ| ಎಂ.ಎಸ್. ಸುಬ್ಬಲಕ್ಷ್ಮೀ ಅವರ 102 ವರ್ಷದ ಆಚರಣೆಯನ್ನು ಮಾಡುತ್ತಿರುವ ಈ ಸಂದರ್ಭದಲ್ಲಿ ರಾಗಸುಧಾದ ಶಾಸ್ತ್ರೀಯ ಸಂಗೀತದ ವಾರ್ಷಿಕ ಆಚರಣೆ ಹಾಗೂ ವಿದ್ಯಾರ್ಥಿಗಳ ಪ್ರತಿಭೆಯ ಪ್ರದರ್ಶನವು ಅರ್ಥಪೂರ್ಣ ವಿಚಾರ ಎಂದರು.
ಕಾರ್ಯಕ್ರಮದಲ್ಲಿ ಟಿ.ಡಿ. ಸದಾಶಿವ ರಾವ್ ಉಪಸ್ಥಿತರಿದ್ದರು. ಗತ ವರ್ಷದಲ್ಲಿ ಜೂನಿಯರ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಾದ ಸುಪ್ರೀತಾ ಮಯ್ಯ, ಶಿವಾನಿ, ಸಾಯಿರಶ್ಮಿ ಮಾಣಿಪ್ಪಾಡಿ, ಚೇತನ ಅವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ರಾಗಸುಧಾದ ರೂವಾರಿ ಹಾಗೂ ಅಧ್ಯಾಪಿಕೆಯಾದ ಶಿಲ್ಪಾ ಭಟ್ ಅವರನ್ನು ವಿದ್ಯಾರ್ಥಿಗಳಿಂದ ಗುರುಕಾಣಿಕೆಯೊಂದಿಗೆ ಗೌರವಿಸಲಾಯಿತು.
ಅನಂತರ ನಡೆದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಪಕ್ಕವಾದ್ಯ ಮೃದಂಗ ದಲ್ಲಿ ಮುರಳಿಕೃಷ್ಣ ಕುಕ್ಕಿಲ ಹಾಗೂ ವಯೋ ಲಿನ್‌ನಲ್ಲಿ ಜ್ಯೋತಿಲಕ್ಷ್ಮೀ ಸಹಕರಿಸಿದರು. ಶ್ರೀ ರಾಮಚಂದ್ರಪುರದ ಕಲಾರಾಮದ ಸಹಭಾಗಿತ್ವದಲ್ಲಿ ನಡೆದ ಈ ಶಾಸ್ತ್ರೀಯ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಕಲಾರಾಮ ಪ್ರಶಸ್ತಿ ಪತ್ರವನ್ನು ಶ್ರೀ ಗುರುನರಸಿಂಹ ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀಧರ ರಾವ್ ಮತ್ತು ಪ್ರಭಾಕರ ಶೆಟ್ಟಿ ಮಂಜಯಹಿತ್ಲು ಅವರು ವಿತರಿಸಿದರು.
ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶ್ರುತಿ ಸ್ವಾಗತಿಸಿದರು. ಪ್ರಕಾಶ್ ಹೊಳ್ಳ ಮಂಗಲ್ಪಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Organ Donation: ಸಾವಿನ ನಂತರವೂ ನೆರವಾದ ಜೀವ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.