ಟಿಪ್ಪು ಸುಲ್ತಾನನ ಪುಣ್ಯತಿಥಿ ಆಚರಿಸಿದ ಪಾಕಿಸ್ತಾನ!
Team Udayavani, May 5, 2018, 6:00 AM IST
ನವದೆಹಲಿ: ಟಿಪ್ಪು ಸುಲ್ತಾನ್ 218ನೇ ಪುಣ್ಯತಿಥಿಯ ಹಿನ್ನೆಲೆಯಲ್ಲಿ ಪಾಕಿಸ್ತಾನ ಟ್ವೀಟ್ ಮಾಡಿರುವುದು ಇದೀಗ ಕರ್ನಾಟಕದಲ್ಲಿ ಚುನಾವಣಾ ರಣಾಂಗಣದಲ್ಲಿ ವಾಗ್ವಾದಕ್ಕೆ ಕಾರಣವಾಗಿದೆ. ಪಾಕಿಸ್ತಾನ ಸರ್ಕಾರದ ಅಧಿಕೃತ ಟ್ವಿಟರ್ ಖಾತೆಯಲ್ಲಿ, ಟಿಪ್ಪುವನ್ನು ಹೊಗಳಿ ಒಂದು ವಿಡಿಯೋವನ್ನು ಪ್ರಕಟಿಸಿದೆ. ಅಲ್ಲದೆ ಬ್ರಿಟಿಷರ ವಸಾಹತುಷಾಹಿ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರ ಎಂದೂ ಇನ್ನೊಂದು ಟ್ವೀಟ್ನಲ್ಲಿ ಪಾಕ್ ಹೇಳಿದೆ.
ಇದು ಈಗ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ತೀವ್ರ ವಾಗ್ಧಾಳಿಗೆ ಕಾರಣವಾಗಿದೆ. ನಿಮ್ಮ ಹೀರೋ ಪುಣ್ಯತಿಥಿಯನ್ನು ಪಾಕಿಸ್ತಾನ ಆಚರಿಸುತ್ತಿದೆ. ಅದಕ್ಕಾಗಿ ನಿಮ್ಮ ಪಾಕ್ ಸ್ನೇಹಿತರು ವಿಡಿಯೋವನ್ನೂ ಮಾಡಿದ್ದಾರೆ. ನೀವು ಇನ್ನೂ ಈ ಬಗ್ಗೆ ಮಾತನಾಡಿಲ್ಲ. ಪಾಕ್ ಸರ್ಕಾರವು ನಿಮ್ಮ ಜಾತ್ಯತೀತತೆಯನ್ನು ಪ್ರಶ್ನಿಸಬಹುದು. ತಡಮಾಡದೇ ಬೇಗ ಟಿಪ್ಪುಗೆ ನಮನ ಸಲ್ಲಿಸಿ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಕರ್ನಾಟಕದಲ್ಲಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಕಾಂಗ್ರೆಸ್ ಸರ್ಕಾರ ಆಚರಣೆ ಮಾಡಿದ್ದನ್ನು ಬಿಜೆಪಿ ತೀವ್ರವಾಗಿ ವಿರೋಧಿಸಿತ್ತು. 2015ರಿಂದ ಈ ವಿವಾದ ತಾರಕಕ್ಕೇರಿತ್ತು. ಟಿಪ್ಪುವನ್ನು ಬಿಜೆಪಿ ಹಿಂದೂ ವಿರೋಧಿ, ಮುಸ್ಲಿಂ ಸರ್ವಾಧಿ ಕಾರಿ ಹಾಗೂ ಕನ್ನಡಿಗರ ವಿರೋಧಿ ಎಂದು ಪರಿಗಣಿಸಿದರೆ, ಬ್ರಿಟಿಷರ ವಿರುದ್ಧ ಹೋರಾಡಿದ ಸಾಹಸಿ ಎಂದು ಕಾಂಗ್ರೆಸ್ ವಾದಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.