ಕೇಂದ್ರದಲ್ಲೂ ಕಾಂಗ್ರೆಸ್‌ ಬಂದ್ರೆ ಸಾಲ ಮನ್ನಾ


Team Udayavani, May 5, 2018, 11:34 AM IST

gul-1.jpg

ಕಲಬುರಗಿ: ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಗಳಿಸಿ ಸರ್ಕಾರ ರಚಿಸಿದಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಅಖೀಲ ಭಾರತ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ರಾಹುಲ್‌ ಗಾಂಧಿ ಘೋಷಿಸಿದರು.

ಶುಕ್ರವಾರ ಜಿಲ್ಲೆಯ ನೂತನ ತಾಲೂಕು ಕಾಳಗಿ ಪಟ್ಟಣದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು, ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಸರ್ಕಾರ ಸಹಕಾರಿ ಸಂಘಗಳಲ್ಲಿ ಸಾಲ ಮನ್ನಾ ಮಾಡಿದೆ. ಕೇಂದ್ರದಲ್ಲೂ ಕಾಂಗ್ರೆಸ್‌ ಸರ್ಕಾರ ಬಂದ್ರೆ ಸರ್ಕಾರ ರಚನೆಯಾದ 10 ದಿನದೊಳಗೆ ಎಲ್ಲ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ಪ್ರಕಟಿಸಿದರು.

ಈ ಹಿಂದೆ ಡಾ. ಮನಮೋಹನ್‌ ಸರ್ಕಾರವಿದ್ದಾಗ 75 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಲಾಗಿತ್ತು. ಆದರೆ ಪ್ರಧಾನಿ ಮೋದಿ ರೈತರ ಬಗ್ಗೆ ಮಾತನಾಡುತ್ತಾದರೂ ಕಳೆದ ನಾಲ್ಕು ವರ್ಷಗಳಲ್ಲಿ ರೈತರ ಒಂದೇ ಒಂದು ರೂ. ಸಾಲ ಮನ್ನಾ ಮಾಡಿಲ್ಲ. ತಾವು ನುಡಿದಂತೆ ನಡೆದು ಘೋಷಣೆಯನ್ನು ಈಡೇರಿಸುತ್ತೇವೆ ಎಂದು ಟಾಂಗ್‌ ನೀಡಿದರು. 

ನುಡಿದಂತೆ ನಡೆಯದ ಮೋದಿ: ಬಸವಣ್ಣ ನುಡಿದಂತೆ ನಡೆ ಎಂದು ಹೇಳಿದ್ದಾರೆ. ಆದರೆ ಪ್ರಧಾನಮಂತ್ರಿ ಮೋದಿ ಅವರಿಗೆ ಈ ನುಡಿ ಅರ್ಥವಾಗಿಲ್ಲ ಎಂಬುದು ಗೊತ್ತಾಗುತ್ತಿದೆ. ಏಕೆಂದರೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡಲಾಗುವುದು, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುತ್ತೇನೆ ಎಂಬುದಾಗಿ ಹೇಳಿ ಅದನ್ನು ಪಾಲನೆ ಮಾಡದಿರುವುದನ್ನು ನೋಡಿದರೆ ನುಡಿದಂತೆ ನಡೆದಿಲ್ಲ ಎಂಬುದು ನಿರೂಪಿಸುತ್ತದೆ ಎಂದು ಟೀಕಿಸಿದರು.

ಭ್ರಷ್ಟಾಚಾರ ಬಗ್ಗೆ ಮಾತನಾಡಲಾಗುತ್ತದೆ. ಆದರೆ ಭ್ರಷ್ಟಾಚಾರ ಆಧಾರದ ಮೇಲೆ ಜೈಲಿಗೆ ಹೋಗಿ ಬಂದ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಇದನ್ನೆಲ್ಲ ನೋಡಿದರೆ ನುಡಿದಂತೆ ನಡೆ ಎಂಬುದು ಅರ್ಥವಾಗಿಲ್ಲ ಎಂಬುದು ನಿರೂಪಿಸುತ್ತದೆ ಎಂದು ಮೋದಿ ವಿರುದ್ಧ ವಾಗ್ಧಾಳಿ ನಡೆಸಿದರು.

ಮೋದಿ ನನಗೆ ಭಾಷಣ ಮಾಡಲು ಬರೋದಿಲ್ಲ ಅಂತಾರೆ. ಅದೇ ರೀತಿ ಖರ್ಗೆ ಕುರಿತಾಗಿ ವೈಯಕ್ತಿಕ ಟೀಕೆ ಮಾಡ್ತಾರೆ. ಆದರೆ ತಾವೆಂದು ಮೋದಿ ಬಗ್ಗೆ ವೈಯಕ್ತಿವಾಗಿ ಒಮ್ಮೆಯೂ ಟೀಕಿಸಿಲ್ಲ, ಜತೆಗೆ ವೈಯಕ್ತಿಕ ದಾಳಿ ಮಾಡೋದಿಲ್ಲ. ಆದ್ರೆ
ದೇಶದ ಸಮಸ್ಯೆಗಳ ಬಗ್ಗೆ ಪ್ರಶ್ನೆ ಮಾಡಿಯೇ ಮಾಡುತ್ತೇನೆ. ಭ್ರಷ್ಟಾಚಾರ ಆರೋಪದ ಮೇರೆಗೆ ಜೈಲಿಗೆ ಹೋಗಿಬಂದ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡಿದ್ದರ ಬಗ್ಗೆ ಪ್ರಶ್ನೆ ಮಾಡುತ್ತೇನೆ. ದೇಶದಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಪ್ರಶ್ನೆ ಮಾಡುತ್ತೇನೆ. ಉದ್ಯೋಗ ಕೊಡುವುದಾಗಿ ಹೇಳಿ ಕೊಡದ ಬಗ್ಗೆ ಪ್ರಶ್ನೆ ಮಾಡುತ್ತೇನೆ ಎಂದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ, ಸಚಿವರಾದ ಡಾ| ಶರಣಪ್ರಕಾಶ ಪಾಟೀಲ, ಪ್ರಿಯಾಂಕ್‌ ಖರ್ಗೆ, ಶಾಸಕ ಡಾ| ಉಮೇಶ ಜಾಧವ್‌, ಡಾ| ಅಜಯಸಿಂಗ್‌, ಚುನಾವಣೆ ವೀಕ್ಷಕ ಹಾಗೂ ಅಕ್ಕಲಕೋಟ ಶಾಸಕ ಸಿದ್ದರಾಮ ಮೆØàತ್ರೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ, ಕಲಬುರಗಿ ಉತ್ತರ ಮತಕ್ಷೇತ್ರದ ಖನಿಜಾ ಫಾತೀಮಾ, ಕಲಬುರಗಿ ದಕ್ಷಿಣ ಮತಕ್ಷೇತ್ರದ ಅಲ್ಲಂಪ್ರಭು ಪಾಟೀಲ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ಜಗನ್ನಾಥ ಗೋಧಿ, ತಿಪ್ಪಣ್ಣಪ್ಪ ಕಮಕನೂರ, ರವಿರಾಜ ಕೊರವಿ, ಮಲ್ಲಿಕಾರ್ಜುನ ಪಾಟೀಲ ಹುಳಗೇರಾ, ರೇವಣ ಸಿದ್ದಪ್ಪ ಸಾತನೂರ, ಪ್ರವೀಣ ಹರವಾಳ, ಕಿರಣ ದೇಶಮುಖ, ಡಾ| ಸಾಕೆ ಶೈಲೇಜನಾಥ ಇದ್ದರು. ಕಾಂಗ್ರೆಸ್‌ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಮುಂತಾದವರಿದ್ದರು.

ಚುನಾವಣೆ ಪ್ರಚಾರದ ವೇಳೆಯಲ್ಲಿ ಆ ಪುಣ್ಯಾತ್ಮ ತಮ್ಮ ಸರ್ಕಾರ ಏನು ಮಾಡಿದೆ ಅಂತ ಒಂದೇ ಒಂದು ಮಾತು ಹೇಳಲಿಲ್ಲ. ಕೇವಲ ನನ್ನ ಸೇರಿದಂತೆ ಕಾಂಗ್ರೆಸ್‌ ನಾಯಕರ ಬಗ್ಗೆ ಮಾತನಾಡುವುದರಲ್ಲೇ ಕಾಲಹರಣ ಮಾಡಿದ್ರು. ನಾವು ನುಡಿದಂತೆ ನಡೆದಿದ್ದೇವೆ. 165 ಭರವಸೆಗಳಲ್ಲಿ 155 ಈಡೇರಿಸಿದ್ದೇವೆ. ಅಭಿವೃದ್ಧಿ ಮೇಲೆ ಮತ ಕೇಳ್ತೇವೆ. ಆದ್ರೆ ಬಿಜೆಪಿ ಒಂದೇ ಒಂದು ಒಳ್ಳೆ ಕೆಲಸ ಮಾಡಿಲ್ಲ. ಹೀಗಾಗಿ ಬರೀ ಟೀಕಿಸುತ್ತಾ ಮತ ಕೇಳಲಾಗುತ್ತಿದೆ. ಅಭಿವೃದ್ಧಿಯನ್ನೇ ಮಾಡದ ನೀವು ಯಾವ ಮುಖ ಇಟ್ಟುಕೊಂಡು ಮತ ಕೇಳ್ತಿರಿ. 
●ಡಾ| ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಸಂಸದೀಯ ನಾಯಕ

ಟಾಪ್ ನ್ಯೂಸ್

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Maharashtra Election; BJP has nothing but 370: Mallikarjuna Kharge

Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ

Kalaburagi: Govt order to investigate KKRDB grant illegality: Complaint to election commission

Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು

ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ

Kalaburagi: ರೌಡಿ ಶೀಟರ್ ಬರ್ಬರ ಹತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು

Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

19

Hockey: ಚೀನ ವಿರುದ್ಧ ಜಯಭೇರಿ; ಸೆಮಿಫೈನಲ್‌ಗೆ ಭಾರತ

18

Men’s Senior Hockey Nationals: ಒಡಿಶಾ ಚಾಂಪಿಯನ್‌

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.