ಬಿಜೆಪಿ ಸುನಾಮಿಗೆ ಕಾಂಗ್ರೆಸ್‌ ಧೂಳಿಪಟ


Team Udayavani, May 5, 2018, 1:23 PM IST

vij-1.jpg

ತಾಳಿಕೋಟೆ: ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಬ್ರಿಟಿಷರ ಹಾಗೆ ಆಳ್ವಿಕೆ ನಡೆಸುತ್ತಿರುವ ಕಾಂಗ್ರೆಸ್‌ ಪಕ್ಷ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಸುನಾಮಿ ಅಲೆಗೆ ಧೂಳಿಪಟವಾಗಲಿದೆ ಎಂದು ಬಿಜೆಪಿ ಅಭ್ಯರ್ಥಿ ಎ.ಎಸ್‌. ಪಾಟೀಲ (ನಡಹಳ್ಳಿ) ಹೇಳಿದರು.

ಪಟ್ಟಣದ ಬಸವೇಶ್ವರ ಮಾರ್ಕೆಟ್‌ ಯಾರ್ಡ್‌ನಲ್ಲಿ ಚುನಾವಣಾ ಪ್ರಚಾರಾರ್ಥ ನಡೆದ ಭಹಿರಂಗ ಸಭೆಯಲ್ಲಿ ಅವರು
ಮಾತನಾಡಿದರು. 25 ವರ್ಷಗಳಿಂದ ಮುದ್ದೇಬಿಹಾಳ ಕ್ಷೇತ್ರವನ್ನು ಆಳ್ವಿಕೆ ಮಾಡಿರುವ ಸಿ.ಎಸ್‌. ನಾಡಗೌಡರು ಜನರ ಎದುರಿಗೆ ಅಭಿವೃದ್ಧಿ ಕುರಿತು ಮಾತನಾಡಲು ನೈತಿಕತೆ ಉಳಿಸಿಕೊಂಡಿಲ್ಲ. ಕ್ಷೇತ್ರದಲ್ಲಿಯ ಯಾವುದೇ ಒಂದು ಸಣ್ಣ ಸಮಾಜಕ್ಕೆ ಯಾವುದೇ ಕೊಡುಗೆಗಳನ್ನು ನೀಡಿಲ್ಲ. ಕ್ಷೇತ್ರದಲ್ಲಿ ರಸ್ತೆ, ಕುಡಿಯುವ ನೀರು, ಶೈಕ್ಷಣಿಕವಾಗಿಯೂ ಯಾವುದೇ ಅಭಿವೃದ್ದಿ ಮಾಡಿಲ್ಲ ಎಂದರು.

ಈ ಭಾಗದಲ್ಲಿರುವ ಎಲ್ಲ ರೈತರು ಮಳೆ ಕೊರತೆಯನ್ನು ಎದುರಿಸುತ್ತ ಸಾಗಿದ್ದಾರೆ. ಕೇವಲ 30 ಕಿ.ಮೀ. ಅಂತರದಲ್ಲಿ ನಾರಾಯಣಪುರ ಡ್ಯಾಂ ಇದ್ದರೂ ಕೂಡಾ ನಾಡಗೌಡರಿಂದ ನೀರಾವರಿ ಮಾಡಲು ಸಹ ಆಗಿಲ್ಲ. ಆದರೆ ನಾನು ದೇವರಹಿಪ್ಪರಗಿ ಕ್ಷೇತ್ರದಲ್ಲಿ ಫಿರಾಪುರ-ಬೂದಿಹಾಳ ಏತ ನೀರಾವರಿ ಯೋಜನೆ ರೂಪಿಸಿ ಅನುಷ್ಠಾನಗೊಳಿ ರೈತರ ಕಷ್ಟಕ್ಕೆ ಸ್ಪಂದಿಸುವಂತಹ ಕಾರ್ಯ ಮಾಡಿದ್ದೇನೆ. 

ಮುದ್ದೇಬಿಹಾಳ ಮತ್ತು ದೇವರಹಿಪ್ಪರಗಿ ಕ್ಷೇತ್ರದಲ್ಲಿ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದೇನೆ. ಸುಮಾರು 4 ಸಾವಿರ ಜನರಿಗೆ ಸಾಮೂಹಿಕ ವಿವಾಹ ಮಾಡಿದ್ದೇನೆ.
 
ನಾನು ಶ್ರೀಮಂತರಿಗಿಂತ ಅತಿಯಾಗಿ ಪ್ರೀತಿಸುವುದು ಬಡವರನ್ನು. ಆ ಬಡವರು ನನ್ನ ಮನೆಗೆ ಬಂದಾಗ ನನ್ನ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತ ಬಂದಿದ್ದೇನೆ. ನಾಡಗೌಡರು ಬಡವರಿಗಾಗಿ, ದೀನ ದಲಿತರಿಗಾಗಿ, ತಾಲೂಕಿನ ಅಭಿವೃದ್ಧಿಗಾಗಿ ಯಾವ ಕೊಡೆಗೆಗಳನ್ನು ನೀಡಿದ್ದಾರೆಂಬುದನ್ನು ಯೋಚಿಸಿ ನೋಡಿದರೆ ಎಲ್ಲದರಲ್ಲಿಯೂ ಅವರು ಶೂನ್ಯ ಸಾಧನೆ ಮಾಡಿದ್ದಾರೆ. ಇಂತಹ ಬ್ರಿಟಿಷರ ಸಂಸ್ಕೃತಿ ಹೊಂದಿರುವ ಕಾಂಗ್ರೆಸ್‌ ಪಕ್ಷವನ್ನು ಮೇ 12ರಂದು ಅಬ್ಬರಿಸಲಿರುವ ಬಿಜೆಪಿ ಸುನಾಮಿಯ ಅಲೆಗೆ ಧೂಳಿಪಟ ಮಾಡಲು ಎಲ್ಲ ವರ್ತಕ ಬಂಧುಗಳು, ಕಾರ್ಯಕರು ಬಿಜೆಪಿಗೆ ಮತ ನೀಡುವ ಮೂಲಕ ಬೆಂಬಲಿಸಬೇಕೆಂದರು.
 
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್‌. ಎಸ್‌. ಪಾಟೀಲ (ಕೂಚಬಾಳ) ಮಾತನಾಡಿ, ದೇಶದೆಲ್ಲೆಡೆ ಬದಲಾವಣೆ ಗಾಳಿ ಬೀಸುತ್ತಿದೆ. ನರೇಂದ್ರ ಮೋದಿಜಿ ಅವರ ನೇತೃತ್ವದ ಸರ್ಕಾರ ಒಳ್ಳೆ ಆಡಳಿತ ನೀಡುವಲ್ಲಿ ಯಶಸ್ವಿಯಾಗಿದೆ. ಈ ಬಾರಿಯ ಚುನಾವಣೆಗೆ ಮುದ್ದೇಬಿಹಾಳ ಕ್ಷೇತ್ರದಿಂದ ಎ.ಎಸ್‌. ಪಾಟೀಲ (ನಡಹಳ್ಳಿ) ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದಾರೆ. ಎಲ್ಲ ಸಂಘಟಕರು ಅವರಿಗೆ ಬೆಂಬಲಿಸಬೇಕೆಂದು ಹೇಳಿದರು.

 ಎ.ಎಸ್‌. ಪಾಟೀಲ (ನಡಹಳ್ಳಿ) ಬಗ್ಗೆ ಇಲ್ಲ ಸಲ್ಲದ ಉಹಾಪೋಹಗಳನ್ನು ಕೆಲವರು ಎಬ್ಬಿಸುತ್ತಿದ್ದು ಅದಕ್ಕೆ ಯಾರು ಕಿವಿ ಗೊಡಬಾರದು. ನಡಹಳ್ಳಿ ಅವರು ಅಭಿವೃದ್ಧಿಗಾಗಿ ಹೋರಾಟಗಳನ್ನು ಮಾಡಿಯಶಸ್ಸನ್ನೂ ಕಂಡಿದ್ದಾರೆ. ಆದರೆ ನಾಡಗೌಡರು ಅಭಿವೃದ್ಧಿ ವಿಷಯದಲ್ಲಿ ಹೋರಾಟ ಮಾಡಿಲ್ಲ. ಕೇವಲ ಹಿಂಬಾಲಕರಿಗೆ ಮಣೆ ಹಾಕಿ ಅವರನ್ನು ಶ್ರೀಮಂತರನ್ನಾಗಿಸಿದ್ದಾರೆ. ಕಾಂಗ್ರೆಸ್‌ ಪಕ್ಷವು ಜಾತಿ ಜಾತಿಗಳ ನಡುವೆ ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತಿ ದೇಶದ ಸಂಸ್ಕೃತಿ ನಾಶ ಮಾಡಲು ಹೊರಟಿದೆ. ಇದನ್ನು ಬದಾಲಾಯಿಸಿ ಸೌಹಾರ್ದ ತರಲು ಬಿಜೆಪಿ ಅಭ್ಯರ್ಥಿ ಎ.ಎಸ್‌. ಪಾಟೀಲ (ನಡಹಳ್ಳಿ) ಅವರಿಗೆ ಬೆಂಬಲಿಸಿ ಮತ ನೀಡಬೇಕೆಂದು ವಿನಂತಿಸಿದರು.

ಬಿಜೆಪಿ ಮುಖಂಡ ಎಂ.ಎಸ್‌. ಪಾಟೀಲ (ನಾಲತವಾಡ) ಮಾತನಾಡಿ, 25 ವರ್ಷಗಳಿಂದ ಮುದ್ದೇಬಿಹಾಳ ಕ್ಷೇತ್ರದ ಶಾಸಕರಾಗಿರುವ ನಾಡಗೌಡರು ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಬೇರೆ ಕ್ಷೇತ್ರಗಳಿಗೆ ಹೋಲಿಸಿದರೆ ಅತಿ ಹಿಂದುಳಿದ ಕ್ಷೇತ್ರ ಮುದ್ದೇಬಿಹಾಳ. ನಾಡಗೌಡರನ್ನು ಬದಲಿಸಲು ಒಂದು ಒಳ್ಳೆಯ ಅವಕಾಶ ಒದಗಿ ಬಂದಿದೆ. ಈ ಬಾರಿಗೆ ಬಿಜೆಪಿ ಅಭ್ಯರ್ಥಿ ಎ.ಎಸ್‌. ಪಾಟೀಲ (ನಡಹಳ್ಳಿ) ಅವರಿಗೆ ಬೆಂಬಲಿಸಿ ಅವರಿಗೆ ತಕ್ಕ ಪಾಠ ಕಲಿಸಬೇಕೆಂದರು. 

ವಿ.ಎ. ಹಜೇರಿ, ಎಸ್‌.ಪಿ. ಸರಶೆಟ್ಟಿ, ಎಸ್‌.ಎ. ಸರೂರ, ಮಹಾದೇವ ಕುಂಬಾರ, ಗಣ್ಯರಾದ ದತ್ತಾತ್ರೇಯ ಹೆಬಸೂರ, ಗೊಲ್ಲಾಳೆಪ್ಪ ಹಿರೇಗೌಡರ, ಚಿಂತಪ್ಪಗೌಡ ಯಾಳಗಿ, ಬಾಬು ಹಜೇರಿ, ವಾಸುದೇವ ಹೆಬಸೂರ, ಕೆ.ಎಂ. ಮಠ, ಮಲ್ಲು ದುಮಗುಂಡಿ, ಎಚ್‌.ಎಸ್‌.ಗೂಗಲ್ಲ, ವಿಶ್ವನಾಥ ಬಿದರಕುಂದಿ, ಪ್ರಭು ಬಿಳೇಭಾವಿ, ಯಂಕಣ್ಣ ಬಿಳೇಭಾವಿ, ಸುಭಾಷ್‌ ಗಾಣೂರ, ಚನಬಸು ದೇಸಾಯಿ, ಚನ್ನಬಸು ಸರಶೆಟ್ಟಿ, ಮುತ್ತು ಕಶೆಟ್ಟಿ, ಮಲ್ಲು ನಾಗರಾಳ, ನಾಗಪ್ಪ ಚುನಗುಡಿ ಇದ್ದರು. 

30ನೇ ವರ್ಷದಲ್ಲಿ ರಾಜಕೀಯ ಪ್ರವೇಶಿಸಿದ ನಾಡಗೌಡರಿಗೆ ಈಗ 60 ವರ್ಷವಾಗಿದೆ. 30 ವರ್ಷದ ರಾಜಕೀಯದಲ್ಲಿ ಕ್ಷೇತ್ರದ ಅಭಿವೃದ್ಧಿ ಮಾಡಲು ಅವರಿಂದ ಆಗಿಲ್ಲ. ಈ ಬಾರಿ ಅವರು ರಾಜಕೀಯವಾಗಿ ನಿವೃತ್ತಿ ಘೋಷಿಸಿಕೊಳ್ಳಬೇಕಿತ್ತು. ಅದನ್ನು ಅವರು ಮಾಡಲಿಲ್ಲ. ಅದಕ್ಕೆ ಈ ಬಾರಿ ಕ್ಷೇತ್ರದ ಜನತೆಯೇ ನಿವೃತ್ತಿಗೊಳಿಸಿ ಮನೆಗೆ ಕಳುಹಿಸಲು ಸಜ್ಜಾಗಿದ್ದಾರೆ.
 ಎ.ಎಸ್‌ .ಪಾಟೀಲ (ನಡಹಳ್ಳಿ) ಬಿಜೆಪಿ ಅಭ್ಯರ್ಥಿ

ಟಾಪ್ ನ್ಯೂಸ್

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

kejriwal-2

Distribution of money ಆರೋಪ: ಬಿಜೆಪಿ ಅಭ್ಯರ್ಥಿ ಸ್ಪರ್ಧೆ ನಿರ್ಬಂಧಕ್ಕೆ ಕೇಜ್ರಿ ಮನವಿ

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ

Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ

Leopard spotted in Vijayapura city: CCTV footage captured

Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

arrested

Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

robbers

Pakistan; ಡಕಾಯಿತರಿಂದ 3 ಹಿಂದೂ ಯುವಕರ ಅಪಹರಣ

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

naksal (2)

ಸುಕ್ಮಾ ಎನ್‌ಕೌಂಟರ್‌: ಮೂವರು ನಕ್ಸಲರ ಹ*ತ್ಯೆ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.