ಕಂದು ಟೊಪ್ಪಿಯ ಕುಳ್ಳ ಮರಕುಟುಕ
Team Udayavani, May 5, 2018, 2:46 PM IST
ಕುಳ್ಳ ಮರಕುಟಕ ಪಕ್ಷಿಯು ಆಯತ ವರ್ತುಲಾಕಾರದ ಬಿಳಿ ಮೊಟ್ಟೆಗಳನ್ನು ಇಡುತ್ತದೆ. ಗಂಡು-ಹೆಣ್ಣು ಸೇರಿ ಮರಿಗಳ ಲಾಲನೆ ಪಾಲನೆ ಮಾಡುತ್ತವೆ. ಇವು ಮರವನ್ನು ಕುಟ್ಟುವ ದನಿಯಲ್ಲೇ ಭಿನ್ನತೆ ಇರುತ್ತದೆ.
ಕಂದು ಟೊಪ್ಪಿಯ ಕುಳ್ಳ ಮರಕುಟುಕ ಗಾತ್ರದಲ್ಲಿ ಕುಳ್ಳಗಿರುವುದರಿಂದ ಇದಕ್ಕೆ ಪಿಗ್ಮಿ ಹಕ್ಕಿ ಎಂದು ಕರೆಯುತ್ತಾರೆ.brown-caped pygmy woodpecker (Dendrocopos nanus (Vigors) R Sparrow ಇದರಷ್ಟೇ ಚಿಕ್ಕದಿರುವ ಪೈಯx ಮರಕುಟುಕ ಎಂಬ ಹಕ್ಕಿಯೂ ಇದೆ. ಎರಡೂ ಹಕ್ಕಿ ಕಂದು ಮಿಶ್ರಿತ ಪಾಚಿ ಹಸಿರು ಬಣ್ಣದಿಂದ ಕೂಡಿವೆ. ಪಿಗ್ಮಿ ಮರಕುಟುಕ ಹಕ್ಕಿಯ ಮೈಬಣ್ಣ ಕಂದು ಮಿಶ್ರಿತ ಪಾಚಿಬಣ್ಣ. ತಲೆಯಲ್ಲಿ ಕಂದು ಬಣ್ಣದ ಟೊಪ್ಪಿ ಇರುತ್ತದೆ. ಮೈ, ಪಾಚಿ ಮಿಶ್ರಿತ ಕಂದು ಬಣ್ಣದಿಂದ ಕೂಡಿರುತ್ತದೆ. ಮೈಮೇಲೆ ಮತ್ತು ರೆಕ್ಕೆಯ ಮೇಲೆ-ಬಿಳಿ ಚುಕ್ಕೆ ಇದೆ. ಕಣ್ಣು, ಹುಬ್ಬು ಬಿಳಿಯಾಗಿದೆ. ಮೋಟಗಿನ, ಚೂಪಾದ ಪುಟ್ಟ ಬಾಲವೇ ಇದರ ಆಕರ್ಷಣೆ. ಎದೆ ಹಳದಿ ಮಿಶ್ರಿತ ಮಸಕು ಬಿಳಿಬಣ್ಣದಿಂದ ಕೂಡಿದೆ.
ಎದೆ, ಕುತ್ತಿಗೆಯ ಭಾಗದಲ್ಲಿ ಕಂದು ಬಣ್ಣದ ರೇಖೆಯನ್ನು ಕಾಣಬಹುದು. ಬೆನ್ನಿನ ಮೇಲೆ ಬಿಳಿ ಚುಕ್ಕೆಯಿಂದಾಗಿ ಅರ್ಧ ವರ್ತುಲದಂತೆ ಚುಕ್ಕಿಯ ಚಿತ್ತಾರ ಮಾಡಿದಂತೆ ಭಾಸವಾಗುತ್ತದೆ. ಚುಂಚು ಇತರೆ ಮರಕುಟುಕ ಹಕ್ಕಿಯ ಚುಂಚಿನಂತಿರದೆ -ಹೂ ಹಕ್ಕಿಯ ಚುಂಚಿನಂತೆ ಚೂಪಾಗಿದೆ. ಕಾಲು ಚಿಕ್ಕದಿದ್ದರೂ ಸದೃಢವಾಗಿ -ಮರ ಏರಲು ಮತ್ತು ಟೊಂಗೆಯಿಂದ ಜಾರದಂತೆ ಹುಳಗಳನ್ನು ಹಿಡಿಯಲು ಅನುಕೂಲಕರವಾಗಿದೆ. ಅನೇಕ ಇಂಥ ಒಟ್ಟೆಗಳನ್ನು -ಒಂದೇ ಮರದಲ್ಲಿ ಕೊರೆಯುತ್ತದೆ. ಅವುಗಳಲ್ಲಿ ಕೆಲವನ್ನು ಮಾತ್ರ ತನ್ನ ಗೂಡು ಮಾಡಲು ಉಪಯೋಗಿಸುತ್ತದೆ. ಹೀಗೆ ಒಂದರ ಸಮೀಪವೇ ಇನ್ನೊಂದು ಗೂಡು ಮಾಡಿ ಸಾಮೂಹಿಕವಾಗಿಯೂ ಮೊಟ್ಟೆ ಇಡುವುದು ಇದರ ಇನ್ನೊಂದು ವಿಶೇಷ. ಎಲ್ಲಾ ಹಕ್ಕಿ ಸೇರಿ ಮರಿಗಳಿಗೆ ಕೆಲವೊಮ್ಮೆ ಗುಟುಕು ಕೊಡುತ್ತವೆ. ಹೀಗೆ ಮಾಡುವುದರಿಂದ ಇದರ ಸಂತತಿ ಹೆಚ್ಚುವುದಂತೆ.
ಸ್ವಲ್ಪ ದೊಡ್ಡದಾದ ಮರಿ -ಚಿಕ್ಕ ಮರಿಗಳ ರಕ್ಷಣೆಗೆ ನಿಂತುಬಿಡುತ್ತದೆ. ಅದಕ್ಕೆ ಗುಟುಕು ನೀಡುವ ಮೂಲಕ ಚಿಕ್ಕ ಹಕ್ಕಿಯಲ್ಲಿ ಸಹಕಾರ ಮನೋಭಾವವನ್ನು ಮೂಡಿಸುತ್ತದೆ.
ಈ ಹಕ್ಕಿ ಮರವನ್ನು ಕುಟ್ಟಿ ಕೊರೆಯುತ್ತದೆ. ಈ ಸಂದರ್ಭದಲ್ಲಿ ಮರಗಳ ಒಳಗಿರುವ ಹುಳು, ಹುಳುಗಳ ಲಾರ್ವಾ ಇದೆಯೋ ಇಲ್ಲವೋ ಎನ್ನುವುದನ್ನು ಪತ್ತೆ ಹಚ್ಚುವ ಕ್ಷಮತೆ ಇದಕ್ಕಿದೆ. ಸಮಶೀತೋಷ್ಣ, ತಂಪು ವಾತಾವರಣ ಇರುವ-ದೊಡ್ಡ, ಸಾಮಾನ್ಯ ಕಾಡುಗಳನ್ನು ಇದು ತನ್ನ ಇರುನೆಲೆ ಮಾಡಿಕೊಂಡಿರುತ್ತದೆ. ಮರದ ತೊಗಟೆ ಬಣ್ಣವನ್ನೇ ಇದರ ಮೈ ಬಣ್ಣವೂ ಹೋಲುವುದರಿಂದ ಮರದ ಮೇಲೆ ಕುಳಿತ ಈ ಹಕ್ಕಿಯನ್ನು ಗುರುತಿಸುವುದು ಕಷ್ಟ. ಇದರ ಮೈಮೇಲಿರುವ ಚುಕ್ಕೆ ಮತ್ತು ತಲೆಯ ಟೊಪ್ಪಿಯ ಕೆಳಗಿರುವ ಕೆಂಪು ಬಣ್ಣದಿಂದ ಕುಳ್ಳ ಮರಕುಟುಕ ಅಂತ ಗುರುತಿಸಬಹುದು. ಗಂಡು ಹಕ್ಕಿಯಲ್ಲಿ ಹುಬ್ಬಿನಲ್ಲಿರುವ ಕೆಂಪು ಬಣ್ಣ ಮಾತ್ರ ಬದಲಾಗಿರುತ್ತದೆ. ಉಳಿದ ಲಕ್ಷಣ ಗಂಡು, ಹೆಣ್ಣಿನಲ್ಲಿ ಒಂದೇ ರೀತಿಯಾಗಿರುತ್ತದೆ.
ಬಾರ್ಬೆಟ್, ಹೃದಯ ಬೆನ್ನಿನ ಮರಕುಟುಕ, ಹಳದಿ ಬೆನ್ನಿನ ಮರಕುಟುಕ, ಕೆಂಪು ಜುಟ್ಟಿನ ಮರಕುಟುಕಗಳು ಇದರ ಸಹಚರಿ ಹಕ್ಕಿಗಳು. ಇವುಗಳ ಮರ ಏರುವ ವಿಧಾನ, ಜಾರುವ ಪರಿ ಸಾಮಾನ್ಯವಾಗಿ ಒಂದೇರೀತಿ ಇರುತ್ತದೆ. ಕೆಲವೊಮ್ಮೆ ಬಾರ್ಬೆಟ್ ಹಕ್ಕಿಯಂತೆ ಮರದ ಟೊಂಗೆಯ ತುದಿಯಲ್ಲಿ ಸಹ ಕುಳಿತು ಕೂಗುತ್ತಿರುತ್ತದೆ. ಬೂರಲ, ಬಸರಿ ಮರಗಳು ಹೂ ಬಿಟ್ಟಾಗ ಬೂರಲ ಹೂವಿನ ಮಕರಂದ, ಪರಾಗ, ಮೆತ್ತನೆ ಹೂ ದಳವನ್ನು ಈ ಹಕ್ಕಿ ತಿನ್ನುತ್ತದೆ.
ಕುಳ್ಳ ಮರಕುಟಕ ‘ಪಿಸಿಡಿಯಾ’ ಕುಟುಂಬಕ್ಕೆ ಸೇರಿದ ಹಕ್ಕಿ. ಇದರಲ್ಲಿ ಸುಮಾರು 22 ಸಂತತಿಗಳಿವೆ. ಪಿಕ್‌ಲೆಟ್ ಎಂಬ ಜಾತಿಯ ಮರಕುಟುಕ 7 ಸೆಂ.ಮೀ ದೊಡ್ಡವಿದ್ದರೆ ದೊಡ್ಡ ಮರಕುಟುಕ 12.75 ದಿಂದ 19 ಸೆಂ.ಮೀ ನಷ್ಟು ದೊಡ್ಡದಿದೆ. ಇದರ ತೂಕ ಸುಮಾರು 350 ರಿಂದ 360 ಗ್ರಾಂ. ಇರುತ್ತದೆ. ಕಂದು ಟೊಪ್ಪಿಯ ಮರಕುಟುಕ ಅನೇಕ ಗೂಡುಗಳನ್ನು ಮರದಲ್ಲಿ ಕೊರೆಯುವುದು. ಕಾಡಿನ ರಕ್ಷಣೆಯಲ್ಲಿ ಮತ್ತು ಪರಾಗ ಸ್ಪರ್ಷದಿಂದ ಹಣ್ಣಿನ ಮರಗಳ ಉಳಿವಿಗೆ ಇದು ಸಹಾಯಕಾರಿ.
ಭಾರತದ ತುಂಬೆಲ್ಲಾ ಇರುವ ಕಾಡು ಇದಕ್ಕೆ ಪ್ರಿಯ. ತನ್ನ ಕೂಗಿನ ಮೂಲಕ ತನ್ನವರೊಂದಿಗೆ ಸಂಪರ್ಕ ಇರಿಸಿಕೊಳ್ಳುವುದು ಮತ್ತು ವಿಫುಲ ಆಹಾರ ದೊರೆತ ಸಂದೇಶ ಇಂಥದೇ ಕೂಗಿನ ಮೂಲಕ ರವಾನಿಸುವುದು ಈ ಹಕ್ಕಿಯ ವಿಶೇಷ.
ಫೆಬ್ರವರಿ, ಏಪ್ರಿಲ್ ಇದು ಮರಿಮಾಡುವ ಸಮಯ. ಹೆಚ್ಚಾಗಿ ಮರದ ಮೂಲ ದಿನ್ನೆಯಲ್ಲೆ ತನ್ನ ಗೂಡನ್ನು ಕಟ್ಟುತ್ತದೆ. 2-3 ಚಿಕ್ಕ ಆಯತ ವರ್ತುಲಾಕಾರದ -ಬಿಳಿ ಮೊಟ್ಟೆ ಇಡುತ್ತದೆ. ಗಂಡು-ಹೆಣ್ಣು ಸೇರಿ ಮರಿಗಳ ಲಾಲನೆ ,ಪಾಲನೆ ಮಾಡುತ್ತವೆ. ಭಿನ್ನ ಮರಕುಟುಕಗಳು ಮರವನ್ನು ಕುಟ್ಟುವ ದನಿಯಲ್ಲಿ ಭಿನ್ನತೆ ಇದೆ. ಈ ದನಿಯ ಮೂಲಕ ತನ್ನ ವ್ಯಾಪ್ತಿ ಪ್ರದೇಶವನ್ನು ಘೋಷಿಸುವುದು ಆಶ್ಚರ್ಯಕರ ವಿಚಾರ. ಕಾಡಿನ, ಜೀವ ವೈವಿಧ್ಯತೆಯ ಉಳಿಗಾಗಿ ಇದರ ರಕ್ಷಣೆ ಅತ್ಯವಶ್ಯಕ.
ಪಿ.ವಿ.ಭಟ್ ಮೂರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.