ಮುಂಬಯಿ ವಿವಿ ಕನ್ನಡ ವಿಭಾಗ: ಕವಿ ಸಮಯ
Team Udayavani, May 5, 2018, 3:35 PM IST
ಮುಂಬಯಿ: ವಿಶ್ವ ಪುಸ್ತಕ ದಿನದ ಶುಭಾವಸರದಲ್ಲಿ ಸಾಂತಾಕ್ರೂಜ್ ಪೂರ್ವದ ಕಲೀನಾ ಕ್ಯಾಂಪಸ್‌ನ ವಿದ್ಯಾನಗರಿ ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ವತಿಯಿಂದ ಕವಿ ಸಮಯ ಕಾರ್ಯಕ್ರಮವು ಜರಗಿತು.
ಮುಂಬಯಿ ವಿವಿಯ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್. ಉಪಾಧ್ಯ ಅವರು ಮಾತನಾಡುತ್ತ, ಕನ್ನಡ ಸಾಹಿತ್ಯಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡ ಸಾಹಿತ್ಯವು ಬಹು ಶ್ರೀಮಂತಿಕೆಯಿಂದ ಕೂಡಿದೆ. ಕಥೆ, ಕಾವ್ಯ, ನಾಟಕ, ಕಾದಂಬರಿ, ವಿಮರ್ಶೆ ಸಂಶೋಧನೆ ಇತ್ಯಾದಿ ಸಾಹಿತ್ಯ ಪ್ರಕಾರಗಳಿಂದ ಸಾಹಿತ್ಯಕ್ಕೆ ಕನ್ನಡದ ಹಿರಿ-ಕಿರಿಯ ಬರಹಗಾರರು ಶಕ್ತಿ ತುಂಬಿದ್ದಾರೆ. ಕಾವ್ಯ ಕಾಮನ ಬಿಲ್ಲು ಇದ್ದ ಹಾಗೆ. ಅದೊಂದು ಮಿಂಚು ಇದ್ದಂತೆ. ಓದುಗನ ಅಂತರಂಗವನ್ನು ಕೆದಕುವ ಕಾವ್ಯವೇ ನಿಜವಾದ ಕಾವ್ಯವಾಗಬಲ್ಲದು. ಇತ್ತೀಚೆಗೆ ನಾವೆಲ್ಲ ತುಂಬ ಮಾತನಾಡುತ್ತೇವೆ. ಬರೆಯುವುದು ಮಾತ್ರ ಕಡಿಮೆ. ಬರವಣಿಗೆ ಎಚ್ಚರಿಕೆಯಿಂದ ಆಗುವಂತಹದು. ಸತತ ಓದು, ಪರಿಶ್ರಮ ಇದ್ದರೆ ಲೇಖಕನು ಸುಲಭವಾಗಿ ಸಾಹಿತ್ಯ ರಚನೆ ಮಾಡಲು ಸಾಧ್ಯ. ಮುಂಬಯಿ ಯುವ ಬರಹಗಾರರಿಗೆ ಚಿತ್ತಾಲ, ಬಲ್ಲಾಳ, ಜಯಂತ ಕಾಯ್ಕಿಣಿ ಮೊದಲಾದ ಹಿರಿಯ ಲೇಖಕರು ಮಾದರಿಯಾಗಿದ್ದಾರೆ. ಬೇರೆ ಸಾಹಿತಿಗಳ ಕೃತಿಗಳನ್ನು ಓದದೆ ಕೃತಿ ರಚನೆ ಸಾಧ್ಯವಾಗದು ಎಂದು ತಿಳಿಸಿದರು.
ದಾಕ್ಷಾಯಣಿ ಯಡವಳ್ಳಿ ಅವರು ಜಾನಪದ ಹಾಡುಗಳನ್ನು ಹಾಡಿದರು. ಶಾರದಾ ಅಂಬೆಸಂಗ ಅವರು ಸ್ವರಚಿತ ಕವಿತೆಗಳನ್ನು ವಾಚಿಸಿದರು. ಅಮೃತಾ ಶೆಟ್ಟಿ, ಲಕ್ಷಿ¾à ಹೆರೂರ, ಜಯಕರ ಪಾಲನ್, ಶೈಲಜಾ ಹೆಗಡೆ, ಉದಯ ಶೆಟ್ಟಿ, ರಮಾ ಉಡುಪ, ಜಯಾ ಸಾಲಿಯಾನ್, ಮಧುಸೂದನ್ ರಾವ್, ಸುರೇಖಾ ದೇವಾಡಿಗ, ಶಿವರಾಜ ಎಂ.ಜಿ., ದಿನಕರ ಚಂದನ್, ಕುಮುದಾ ಆಳ್ವ ಉಪಸ್ಥಿತರಿದ್ದರು. ಡಾ| ಪೂರ್ಣಿಮಾ ಎಸ್.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ದುರ್ಗಪ್ಪ ಕೋಟಿಯವರ್ ಅವರು ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.