ತಲೆಗಾಯ: ನಿಮಗೆ ಏನೇನು ತಿಳಿದಿದೆ?
Team Udayavani, May 6, 2018, 6:20 AM IST
ಹಿಂದಿನ ವಾರದಿಂದ- ಶಸ್ತ್ರಚಿಕಿತ್ಸೆ
ಶಸ್ತ್ರಚಿಕಿತ್ಸೆಯನ್ನು ಕೆಳಕಂಡ ಸನ್ನಿವೇಶಗಳಲ್ಲಿ ಪರಿಗಣಿಸಲಾಗುತ್ತದೆ:
1. ತೆರೆದ ಜಜ್ಜಿದ ಗಾಯಗಳು – ಮಿದುಳು ದ್ರವ (ಸಿಎಸ್‌ಎಫ್) ಸೋರಿಕೆಯ ಜತೆಗೆ.
2. ತೀವ್ರ ಹೆಚ್ಚಿದ ಇಂಟ್ರಾಕ್ರೇನಿಯಲ್ ಒತ್ತಡಕ್ಕೆ ಕಾರಣವಾಗುವ ಅಧಿಕ ಇಂಟ್ರಾಕ್ರೇನಿಯಲ್ ಹೆಮಟೋಮಾ ಇದ್ದಾಗ.
3. ಅಧಿಕ ಇಂಟ್ರಾಕ್ರೇನಿಯಲ್ ಒತ್ತಡದ ಜತೆಗೆ ತೀವ್ರ ಇದ್ದಾಗ.
ಮಿದುಳಿಗೆ ಹೆಚ್ಚು ಹಾನಿ ಉಂಟಾಗುವುದನ್ನು ತಡೆಯಲು ತುರ್ತು ಶಸ್ತ್ರಕ್ರಿಯೆನ್ನು ನಡೆಸುವುದು ಅಗತ್ಯವಾಗುತ್ತದೆ. ಉದಾಹರಣೆಗೆ, ಹೆಪಟೋಮಾ ತೆಗೆದುಹಾಕಲು, ತಲೆಬುರುಡೆಯನ್ನು ದುರಸ್ತಿ ಮಾಡಲು ಅಥವಾ ತಲೆ ಬುರುಡೆಯ ಒತ್ತಡವನ್ನು ಕಡಿಮೆ ಮಾಡಲು ಶಸ್ತ್ರಕ್ರಿಯೆ ನಡೆಸಬೇಕಾಗಬಹುದು.
ಪುನಶ್ಚೇತನ
ಗಂಭೀರ ತಲೆಗಾಯ ಉಂಟಾಗಿದ್ದ ಸಂದರ್ಭದಲ್ಲಿ ಮಿದುಳಿನ ಪೂರ್ಣ ಕಾರ್ಯಚಟುವಟಿಕೆಗಳನ್ನು ಪುನರ್ ಸ್ಥಾಪಿಸಲು ಪುನಶ್ಚೇತನ ಅಗತ್ಯವಾಗಿರುತ್ತದೆ. ತಲೆಗಾಯದ ಪರಿಣಾಮವಾಗಿ ಯಾವ ಕಾರ್ಯಚಟುವಟಿಕೆಯನ್ನು ರೋಗಿ ಕಳೆದುಕೊಂಡಿದ್ದಾನೆ ಎಂಬುದನ್ನು ಆಧರಿಸಿ ಪುನಶ್ಚೇತನ ನಡೆಸಲಾಗುತ್ತದೆ. ಸಾಮಾನ್ಯವಾಗಿ ತಲೆಗಾಯಕ್ಕೆ ಒಳಗಾದ ವ್ಯಕ್ತಿಗಳಿಗೆ ಚಲನಸಾಮರ್ಥಯ ಮತ್ತು ಮಾತಿನ ಸಾಮರ್ಥ್ಯವನ್ನು ಮರಳಿ ಪಡೆಯಲು ಸಹಾಯ ಅಗತ್ಯವಾಗಿರುತ್ತದೆ.
ದೀರ್ಘಾವಧಿಯಲ್ಲಿ ನಿರೀಕ್ಷಿಸಬಹುದಾದದ್ದು ಏನು?
ನಿರೀಕ್ಷೆಗಳು ಅಥವಾ ಭರವಸೆಗಳು ತಲೆಗಾಯದ ಗಂಭೀರತೆಯನ್ನು ಅವಲಂಬಿಸಿರುತ್ತವೆ.
1. ಲಘು ಸ್ವರೂಪದ ತಲೆಗಾಯಕ್ಕೆ ಒಳಗಾದ ಬಹುತೇಕ ವ್ಯಕ್ತಿಗಳು ದೀರ್ಘಕಾಲಿಕ ಪರಿಣಾಮಗಳನ್ನು ಹೊಂದಿರುವುದಿಲ್ಲ.
2. ಗಂಭೀರ ಸ್ವರೂಪದ ತಲೆಗಾಯಕ್ಕೆ ಒಳಗಾದ ವ್ಯಕ್ತಿಗಳು ತಮ್ಮ ವ್ಯಕ್ತಿತ್ವದಲ್ಲಿ ಅಥವಾ ದೈಹಿಕ ಹಾಗೂ ಚಲನ ಸಾಮರ್ಥ್ಯಗಳಲ್ಲಿ ಶಾಶ್ವತ ಬದಲಾವಣೆಗಳನ್ನು ಹೊಂದುವುದು ಸಾಧ್ಯ.
3. ಕೆಲವು ಪ್ರಕರಣಗಳಲ್ಲಿ ಕೆಲವು ನಿಮಿಷಗಳಿಂದ ಕೆಲವು ತಾಸುಗಳ ಕಾಲ ಉಂಟಾಗುವಂತಹ ಪರಿವರ್ತನಾತ್ಮಕ ನರಶಾಸ್ತ್ರೀಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ತಲೆಗಾಯದ ಬಳಿಕ ಸ್ಥಿರವಾಗಿರುವ ರೋಗಿಗಳಲ್ಲಿ ಅಪಾಯಕಾರಿಯಾದ ಅವಘಡೋತ್ತರ ಮಿದುಳಿನ ಊತ ಅನಿರೀಕ್ಷಿತವಾಗಿ ತಲೆದೋರಬಹುದಾಗಿದೆ.
4. ಕೆಲವು ರೋಗಿಗಳು ಅವಘಡೋತ್ತರ ಸೆಳವು ಮತ್ತು ಅವಘಡೋತ್ತರ
ಹೈಡ್ರೊಸೆಫಲಸ್‌ಗೆ ಒಳಗಾಗಬಹುದಾಗಿದ್ದು, ಇದಕ್ಕೆ ಪರಿಹಾರವಾಗಿ ಶಸ್ತ್ರಕ್ರಿಯೆ ಅಗತ್ಯವಾಗಿರುತ್ತದೆ.
5. ನರಶಾಸ್ತ್ರೀಯ ಸಮಸ್ಯೆಗಳು ಉಂಟಾಗಿರುವ ಮಕ್ಕಳಲ್ಲಿ ಗುಣ ಹೊಂದುವುದು ಮಗುವಿನಿಂದ ಮಗುವಿಗೆ ಬದಲಾಗಬಹುದು. ಆರೋಗ್ಯ ಸ್ಥಿತಿ ದಿನಂಪ್ರತಿ ಉತ್ತಮಗೊಳ್ಳುವ ನರಶಾಸ್ತ್ರೀಯ ತೊಂದರೆಗೆ ಒಳಗಾದ ಮಕ್ಕಳು ಗುಣಹೊಂದುವ ಸಾಧ್ಯತೆ ಹೆಚ್ಚು; ತಿಂಗಳುಗಳ ಕಾಲ ಏರುಪೇರು ಹೊಂದಿರುವ ಮಕ್ಕಳು ಗುಣಹೊಂದುವ ಸಾಧ್ಯತೆ ಕಡಿಮೆ. ಸಮಸ್ಯೆಗಳಿಲ್ಲದ ಬಹುತೇಕ ರೋಗಿಗಳು ಪೂರ್ಣ ಗುಣಮುಖರಾಗುತ್ತಾರೆ.
6. ತಲೆಗಾಯಕ್ಕೆ ಒಳಗಾಗಿ ಒಂದು ತಾಸು ಅಥವಾ ಅದಕ್ಕೂ ಹೆಚ್ಚು ಕಾಲ ಅಪ್ರಜ್ಞಾವಸ್ಥೆಯಲ್ಲಿದ್ದ ರೋಗಿಗಳು ಭವಿಷ್ಯದಲ್ಲಿ ಅಲ್ಜೀಮರ್ಸ್ ಕಾಯಿಲೆಗೆ ತುತ್ತಾಗುವ ಸಾಧ್ಯತೆ ದುಪ್ಪಟ್ಟಿರುತ್ತದೆ.
7. ತಲೆಗಾಯವು ಕುತ್ತಿಗೆಯ ಗಾಯಕ್ಕೂ ಸಂಬಂಧಿಸಿರುತ್ತದೆ. ಕುತ್ತಿಗೆ ಅಥವಾ ಬೆನ್ನಿನಲ್ಲಿ ತರಚಿದ ಗಾಯಗಳು, ಕುತ್ತಿಗೆ ನೋವು ಅಥವಾ ಕೈಗಳಿಗೆ ವಿಸ್ತರಿಸಿಕೊಳ್ಳುವ ನೋವು ಸರ್ವಿಕಲ್ ಬೆನ್ನುಹುರಿ ಗಾಯದ ಚಿಹ್ನೆಗಳಾಗಿದ್ದು, ಸರ್ವಿಕಲ್ ಕಾಲರ್ ಅಳವಡಿಕೆಯ ಮೂಲಕ ಬೆನ್ನುಹುರಿಯನ್ನು ಚಲನರಹಿತಗೊಳಿಸುವ ಚಿಕಿತ್ಸೆಗೆ ಅರ್ಹವಾಗುತ್ತವೆ, ಕೆಲವೊಮ್ಮೆ ಶಸ್ತ್ರಕ್ರಿಯೆಯ ಅಗತ್ಯವೂ ಬೀಳುತ್ತದೆ.
ತಲೆಗಾಯಕ್ಕೆ ಒಳಗಾದ ವ್ಯಕ್ತಿಯು ಎಷ್ಟು ಸಾಧ್ಯವೋ ಅಷ್ಟು ಸಂಪೂರ್ಣವಾಗಿ ಚೇತರಿಸಿಕೊಳ್ಳುವಂತೆ ವೈದ್ಯರು ಮತ್ತು ಆರೋಗ್ಯ ಸೇವಾ ಸಿಬಂದಿ ಶ್ರಮಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.