ಅಂಗವಿಕಲರಿಗಾಗಿಯೇ ವಿಶೇಷ ಮತಗಟ್ಟೆ


Team Udayavani, May 6, 2018, 6:20 AM IST

Special-booth-f.jpg

ಉಡುಪಿ: ಈ ಬಾರಿ ಚುನಾವಣೆಯಲ್ಲಿ ಅಂಗವಿಕಲರು ಮತ್ತು ಅಶಕ್ತರ ಬಗ್ಗೆ ವಿಶೇಷ ಗಮನ ಹರಿಸಲಾಗಿದ್ದು, ಅಂಗವಿಕಲ ಮತಗಟ್ಟೆ ಅಧಿಕಾರಿಗಳೇ ಉಳ್ಳ ವಿಶೇಷ ಮತಗಟ್ಟೆಗಳು ಸ್ಥಾಪನೆಯಾಗಲಿವೆ. 

ಗಾಲಿಕುರ್ಚಿ ವ್ಯವಸ್ಥೆ
ಸಾಮಾನ್ಯವಾಗಿ ಒಂದು ಕಟ್ಟಡದಲ್ಲಿ (ಮತದಾನ ಕೇಂದ್ರ) 2-3 ಮತಗಟ್ಟೆಗಳಿರುತ್ತವೆ. ಅಂತಹ ಮೂರು ಮತಗಟ್ಟೆಗಳಿಗೆ ಕನಿಷ್ಠ ಒಂದರಂತೆ 551ರಷ್ಟು ಗಾಲಿಕುರ್ಚಿಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಆರೋಗ್ಯ ಇಲಾಖೆ 376, ಗ್ರಾ.ಪಂ.ಗಳು 175 ಗಾಲಿಕುರ್ಚಿಗಳನ್ನು ಹೊಂದಿಸಿಕೊಂಡಿವೆ. ಉಳಿದಂತೆ ಸುಮಾರು 175 ಗಾಲಿಕುರ್ಚಿ ಅವಶ್ಯವಿದೆ. ಅದನ್ನು ಮತದಾನದಿನ ಹೊಂದಿಸಿಕೊಳ್ಳಲಾಗುತ್ತದೆ.  

328 ಬೂತ್‌ಗಳಲ್ಲಿ  ಭೂತಗನ್ನಡಿ
ಮಂದ ದೃಷ್ಟಿಯುಳ್ಳವರು ಮತದಾನ ಮಾಡಲು ನೆರವಾಗುವಂತೆ ಜಿಲ್ಲೆಯ 328 ಬೂತ್‌ಗಳಲ್ಲಿ ಭೂತಗನ್ನಡಿ ಸಿದ್ಧಪಡಿಸಿ ಇಡಲಾಗುತ್ತದೆ.  

ಬ್ರೈಲ್‌ ಲಿಪಿಯಲ್ಲಿ ಕ್ರಮಸಂಖ್ಯೆ
ಜಿಲ್ಲೆಯಲ್ಲಿ ಸುಮಾರು 580 ಮಂದಿ ಮಂದ ದೃಷ್ಟಿಯ ಮತದಾರರಿದ್ದಾರೆ ಎಂದು ಅಂದಾಜಿಸಲಾಗಿದೆ. ಒಂದು ಬೂತ್‌ನಲ್ಲಿ ಒಂದು ಭೂತಗನ್ನಡಿ ಇರುತ್ತದೆ. ಶೇ.100ರಷ್ಟು ಅಂಧತ್ವ ಹೊಂದಿರುವವರು ಸಹಾಯಕರ ನೆರವಿನಿಂದ ಮತದಾನ ಮಾಡಬಹುದು. ಬ್ರೈಲ್‌ ಲಿಪಿ ತಿಳಿದಿದ್ದರೆ ಅವರಾಗಿಯೇ ಸ್ವತಃ ಮತ ಹಾಕಬಹುದು. ಮತಯಂತ್ರದ ಕ್ರಮಸಂಖ್ಯೆ ಬ್ರೈಲ್‌ ಲಿಪಿಯಲ್ಲಿಯೂ ಇರಲಿದೆ.

ಜಿಲ್ಲೆಯಲ್ಲಿ ಒಂದು ಮತಗಟ್ಟೆ
ದೈಹಿಕ ಊನತೆ ಹೊಂದಿರುವವರು, ದೃಷ್ಟಿ, ಶ್ರವಣದೋಷ ಇತ್ಯಾದಿ ಹೊಂದಿದವರನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಯಲ್ಲಿ ಒಂದು ಮತಗಟ್ಟೆ ಸಿದ್ಧಪಡಿಸಲಾಗುತ್ತದೆ. 

ಇದಕ್ಕಾಗಿ ಕುಂದಾಪುರ ತೆಕ್ಕಟ್ಟೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇಲ್ಲಿ ಸಾಮಾನ್ಯರು ಕೂಡ ಮತದಾನ ಮಾಡಬಹುದು.

ಮತಗಟ್ಟೆಗೂ ಅಂಗವಿಕಲ ಅಧಿಕಾರಿಗಳು
ಸದ್ಯ ಗುರುತಿಸಲಾದ ವಿಶೇಷ ಮತಗಟ್ಟೆಯ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲೇ ಅತ್ಯಧಿಕ 22 ಮಂದಿ ಅಂಗವಿಕಲ ಮತದಾರರಿದ್ದಾರೆ ಎಂದು ಗುರುತಿಸಲಾಗಿದೆ. ಇಲ್ಲಿ 4 ಮಂದಿ ಅಂಗವಿಕಲರೇ ಮತಗಟ್ಟೆ ಅಧಿಕಾರಿ, ಓರ್ವ ಸಿಬಂದಿ ಇರಲಿದ್ದಾರೆ.

ಏನೇನು ವ್ಯವಸ್ಥೆ? 
ಅಶಕ್ತರಿಗಾಗಿ ಇರುವ ಮತಗಟ್ಟೆಯಲ್ಲಿ ಶೌಚಾಲಯ, ರ್‍ಯಾಂಪ್‌, ಗಾಲಿಕುರ್ಚಿ, ವಾಕರ್‌, ಸ್ಟಿಕ್‌ ಇತ್ಯಾದಿ ಸಿದ್ಧವಿರು ತ್ತವೆ. ವಿಕಲಚೇತನ ಅಧಿಕಾರಿ ಮತ್ತು ಸಿಬಂದಿ ಅದೇ ಮತಗಟ್ಟೆಯಲ್ಲಿ ಉಳಿದುಕೊಳ್ಳಬೇಕಾಗಿ ಬಂದರೆ ಅದಕ್ಕೆ ಪೂರಕವಾಗಿ ಬೆಡ್‌ ವ್ಯವಸ್ಥೆ ಕೂಡ ಮಾಡಿಕೊಡಲಾಗುತ್ತದೆ.

ಜಿಲ್ಲೆಯಲ್ಲಿರುವ ಅಶಕ್ತ ಮತದಾರರು
ಬೈಂದೂರು :1786
ಕುಂದಾಪುರ: 2143
ಕಾಪು: 1316
ಉಡುಪಿ: 1390
ಕಾರ್ಕಳ: 1419

– ವಿಶೇಷ ವರದಿ

ಟಾಪ್ ನ್ಯೂಸ್

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

courts-s

Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ

Suicide 3

Karkala:ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿ ಕುಗ್ಗಿದ್ದ ಯುವಕ ಆತ್ಮಹ*ತ್ಯೆ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

3

Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ

3-vitla

Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

RBI ಗವರ್ನರ್‌ ಶಕ್ತಿಕಾಂತ್‌ ದಾಸ್‌‌ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್‌ ಚಾರ್ಜ್

RBI ಗವರ್ನರ್‌ ಶಕ್ತಿಕಾಂತ್‌ ದಾಸ್‌‌ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್‌ ಚಾರ್ಜ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.