ಬಾಳ್ಕಟ್ ಅಚ್ಚುಕಟ್ಟು ಪ್ರದೇಶಗಳಿಗೆ ಬೇಕು ವಾರಾಹಿ ನೀರು
Team Udayavani, May 6, 2018, 6:30 AM IST
ಸಿದ್ದಾಪುರ: ಏರುತ್ತಿರುವ ತಾಪಮಾನದ ಪರಿಣಾಮ ನೀರಿನ ಅಭಾವ ಹೆಚ್ಚುತ್ತಿದ್ದು, ನೀರಿನ ನಿರ್ವಹಣೆ ಸರಿಯಾಗಿ ಮಾಡಬೇಕಿದೆ. ಈ ನಿಟ್ಟಿನಲ್ಲಿ ಸಿದ್ದಾಪುರ ಗ್ರಾಮದ ಮೂಲಕ ಹಾದು ಹೋಗುವ ವಾರಾಹಿ ಕಾಲುವೆಯ ನೀರನ್ನೂ ಸಿದ್ದಾಪುರ ಕೆಳಾಪೇಟೆಯ ಕಾಶಿಕಾಲು ಕೆರೆಗೆ ಹಾಯಿಸಿ, ಅಲ್ಲಿಂದ ನೈಸರ್ಗಿಕದತ್ತವಾಗಿ ಹರಿಯುವ ನಾಲೆಯಲ್ಲಿ ಹರಿಸಬೇಕೆಂಬ ಒತ್ತಾಯವಿದೆ.
ಹೀಗೆ ಮಾಡಬಹುದು…
ವಾರಾಹಿ ಕಾಲುವೆ ನೀರನ್ನು ಐರಬೈಲುವಿನಿಂದ ಪೈಪ್‌ಲೈನ್ ಮೂಲಕ ಬಾಳ್ಕಟ್ ನದಿಯ ಮೂಲವಾದ ಕಾಶಿಕಾಲು ಕೆರೆಗೆ ಹಾಯಿಸಬೇಕು. ಆಗ ನೈಸರ್ಗಿಕ ನಾಲೆಗಳಲ್ಲಿ ನೀರು ಹರಿಯುತ್ತದೆ. ಇದರಿಂದ ಸಿದ್ದಾಪುರ, ಅಂಪಾರು, ಆಜ್ರಿ ಮತ್ತು ಕೊಡ್ಲಾಡಿ ಹೀಗೆ ಹತ್ತಾರು ಗ್ರಾಮದ ಹಳ್ಳಿಗಳ ಕೃಷಿ ಭೂಮಿಗೆ ಹಾಗೂ ಕುಡಿಯುವ ನೀರಿನ ಮೂಲಕ್ಕೆ ಅನುಕೂಲವಾಗುತ್ತದೆ. ಇದಕ್ಕೆ ಕಡಿಮೆ ಮೊತ್ತದ ಹಣ ಬೇಕಿದ್ದು, ಯೋಜನೆಯಿಂದ ಎಲ್ಲೂ ಪರಿಸರ ನಾಶ ಅಥವಾ ಭೂಮಿ ಒತ್ತುವರಿ ಅಗತ್ಯ ಇರುವುದಿಲ್ಲ ಎನ್ನುವುದು ಬಾಳ್ಕಟ್ಟು ನದಿ ನೀರು ಬಳಕೆದಾರರ ಅಭಿಪ್ರಾಯವಾಗಿದೆ.
ಪ್ರಯೋಜನವೇನು?
ವಾರಾಹಿ ನೀರನ್ನು ಬಾಳ್ಕಟ್ ನಾಲೆಯಲ್ಲಿ 20ಕಿ. ಮೀ. ದೂರ ಹರಿಯಲು ಅನುಕೂಲ ಕಲ್ಪಿಸಿದಲ್ಲಿ ಸುಮಾರು 410 ಹೆಕ್ಟೇರ್ ಕೃಷಿ ಭೂಮಿಗೆ ಅನುಕೂಲವಾಗುತ್ತದೆ. ಜತೆಗೆ ಕುಡಿಯುವ ನೀರಿನ ಮೂಲವೂ ವೃದ್ಧಿಸುತ್ತದೆ.
ಯಾರಿಗೆಲ್ಲ ಉಪಯೋಗ?
ಕೊಳ್ಕೆಬೈಲು, ಜಡ್ಡಿನಬೈಲು, ಅಕ್ಕುಂಜೆ, ಕೊಡ್ಗಿ, ಗುಳಿಗದ್ದೆ, ಹೆಗ್ಗೇರಿ, ಮಣಿಗಾರಡಿ, ಚೋನಾಳಿ, ಹೆರಬೈಲು, ಅಂಪಾರು ಗ್ರಾಮದ ಶ್ಯಾನ್ಕಟ್ಟು, ಬಾಳ್ಕಟ್, ಆಜ್ರಿ ಗ್ರಾಮದ ಕನ್ನಾಲಿ, ಮಾರ್ಡಿ, ಗಂಗಾಡಿ, ಹೊಲದಮನೆ, ಮೂರು ಸಾಲು ಪ್ರದೇಶಕ್ಕೂ ಅನುಕೂಲವಾಗುತ್ತದೆ. ಈ ನಾಲೆಯು ಕನ್ನಾಲಿ ಮಾರ್ಗವಾಗಿ ಕೊಡ್ಲಾಡಿ ಗ್ರಾಮದಲ್ಲಿ ಕುಬಾj ನದಿಗೆ ಜೋಡಣೆಯಾಗುತ್ತದೆ. ಕುಬಾj ನದಿಯ ಮೂಲಕ ನೀರು ಮುಂದುವರಿದಲ್ಲಿ ಮುಂದಿನ ಭೂ ಪ್ರದೇಶಗಳಿಗೂ ನೀರಿನ ಸೌಲಭ್ಯ ಕಲ್ಪಿಸಿದಂತಾಗುತ್ತದೆ.
ಕುಡಿಯುವ ನೀರಿಗೆ ಅನುಕೂಲ
ಬಾಳ್ಕಟ್ ಅಚ್ಚುಕಟ್ಟು ಪ್ರದೇಶಗಳಿಗೆ ವಾರಾಹಿ ಕಾಲುವೆ ನೀರು ಏತ ನೀರಾವರಿ ಮೂಲಕ ಹರಿಸುವುದರಿಂದ ನೈಸರ್ಗಿಕ ತೋಡುಗಳ ಮೂಲಕ ಕೃಷಿ, ಕುಡಿಯುವ ನೀರಿಗೆ ಅನುಕೂಲ. ಈ ಯೋಜನೆಯಿಂದ ಸಿದ್ದಾಪುರ ಅಲ್ಲದೇ ಪಕ್ಕದ ಗ್ರಾಮಗಳಿಗೂ ಉಪಯೋಗವಾಗುತ್ತದೆ.
– ಎಸ್. ರಾಜೀವ ಶೆಟ್ಟಿ ಶಾನ್ಕಟ್ಟು,
ಕಾರ್ಯದರ್ಶಿ, ಬಾಳ್ಕಟ್ಟು ನದಿ ನೀರು ಬಳಕೆದಾರರ ವೇದಿಕೆ
– ಸತೀಶ ಆಚಾರ್ ಉಳ್ಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Udupi; ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಡಿ.1 ರಂದು ದೀಪೋತ್ಸವ
Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು
School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್ ನಿಧನ
Kota: ರಾಷ್ಟ್ರೀಯ ಹೆದ್ದಾರಿಯಲ್ಲಿ ಸೌಲಭ್ಯ ಕೊರತೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.