ಗಡಿಯಲ್ಲಿ ಬೇಗ ಕಾವೇರಿದೆ ಚುನಾವಣೆ ಬಿಸಿ

Team Udayavani, May 6, 2018, 6:50 AM IST

0505rjh1.jpg

ಪುತ್ತೂರು: ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯ, ರಾಷ್ಟ್ರದ ಅಭಿವೃದ್ಧಿ ಪರ -ವಿರೋಧದ ವಿಚಾರಗಳು ಎಲ್ಲೆಡೆ ಚರ್ಚೆಯಾಗುತ್ತಿದ್ದರೆ ಕರ್ನಾಟಕ -ಕೇರಳ ಗಡಿ»ದಲ್ಲಿ ಮಾತ್ರ ಸ್ಥಳೀಯ ಅಭಿವೃದ್ಧಿ ಕುರಿತ ವಿಚಾರಗಳೇ ಚರ್ಚೆಯ ವಸ್ತು. ಗಾಳಿಮುಖ, ಈಶ್ವರಮಂಗಲ, ಸುಳ್ಯಪದವು, ಪಾಣಾಜೆ, ಆರ್ಲಪದವು ಪರಿಸರದಲ್ಲಿ ಉಳಿದೆಡೆಗಳಿಗಿಂತ ಬೇಗ ಚುನಾವಣೆ ಕಾವು ಕಾಣಿಸಿಕೊಂಡಿದೆ. ನೀತಿ ಸಂಹಿತೆ ಜಾರಿಯಾದ ಕೂಡಲೇ ವಿಶೇಷ ಕಾವಲು ಪಡೆ ತಪಾಸಣೆಗೆ ಆಗಮಿಸಿದ್ದೇ ಕಾರಣ. ಅಕ್ರಮ ತಡೆಗಟ್ಟುವ ನಿಟ್ಟಿನಿಂದ ಗಡಿ ದಾಟಿ ಕೇರಳಕ್ಕೆ ಹೋಗುವ ಹಾಗೂ ಆ ಕಡೆಯಿಂದ ಇತ್ತ ಬರುವ ವಾಹನಗಳ ಕಟ್ಟುನಿಟ್ಟಿನ ತಪಾಸಣೆ ಎಂದೋ ಆರಂಭವಾಗಿದೆ. ಇದು ಚುನಾವಣೆಯ ಬಿಸಿಯನ್ನು ಏರಿಸಿದೆ ಎನ್ನುವುದು ಗಡಿಭಾಗದ ನಿವಾಸಿಗಳ ಮಾತು.

ಮನೆ ಪ್ರಚಾರ ಆರಂಭ
ಈಶ್ವರಮಂಗಲ, ಸುಳ್ಯಪದವು, ಗಾಳಿಮುಖ, ಪಾಣಾಜೆ, ಆರ್ಲಪದವು ಮೊದಲಾದ ಕಡೆಗಳಲ್ಲಿ ಒಂದು ಹಂತದ ಬಹಿರಂಗ ಸಭೆಗಳನ್ನು ಎರಡು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ನಡೆಸಿದ್ದಾರೆ. ಮನೆ ಮನೆ ಪ್ರಚಾರ ಕಾರ್ಯ ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳ ಮೂಲಕ ನಡೆದಿದೆ. ಪಕ್ಷೇತರ ಅಭ್ಯರ್ಥಿಗಳು ಕಾಲಿಟ್ಟಿಲ್ಲ. 

ರಸ್ತೆಯೇ ಪ್ರಮುಖ ವಿಚಾರ
ಗಡಿ ಭಾಗಗಳ ಜನತೆಯಲ್ಲಿ ರಸ್ತೆಯೇ ಚರ್ಚೆಯ ಮುಖ್ಯ ವಸ್ತು. ಗಡಿ ಭಾಗದ ರಸ್ತೆಗಳು ಎಂದಿಗೂ ಪರಿಪೂರ್ಣ ಅಭಿವೃದ್ಧಿಯಾಗುವುದಿಲ್ಲ ಎಂಬುದೇ ಕಾರಣ. ಪಾಣಾಜೆ, ಈಶ್ವರಮಂಗಲ, ಸುಳ್ಯಪದವು ಕಡೆ ಇದೇ ಹೆಚ್ಚಾಗಿ ಕಾಣಿಸಿತು. ಸದ್ಯಕ್ಕೆ ಪಾಣಾಜೆ ಭಾಗದಲ್ಲಿ ಕರ್ನಾಟಕಕ್ಕೆ ಸೇರಿದ ರಸ್ತೆ ಉತ್ತಮವಿದೆ. ಆದರೆ ಕೇರಳ ಭಾಗದ ವಾಣಿನಗರ, ಪೆರ್ಲ ಭಾಗದಲ್ಲಿ ರಸ್ತೆ ಜೀರ್ಣಾವಸ್ಥೆಯಲ್ಲಿದೆ. ಈಶ್ವರಮಂಗಲ, ಸುಳ್ಯ ಪದವು ಭಾಗದಲ್ಲಿ ಹಲವು ವರ್ಷಗಳ ರಸ್ತೆ ಸಮಸ್ಯೆ ಇನ್ನೂ ಮುಕ್ತಿ ಕಂಡಿಲ್ಲ. ಗಾಳಿಮುಖ, ದೇಲಂಪಾಡಿ ಭಾಗಕ್ಕೆ, ಸುಳ್ಯದವಿನಿಂದ ಕಾಯರ್‌ಪದವು, ಬೆಳ್ಳೂರು, ಮುಳ್ಳೇರಿಯಾ ಸಂಪರ್ಕ ರಸ್ತೆ ಸಮಸ್ಯೆ ಬಗೆಹರಿದಿಲ್ಲ. 

ಬಸ್ಸು ನಿಂತಿದೆ
ಹಿಂದೆ ಕೇರಳ ಭಾಗದ ರಸ್ತೆಗಳು ಹೆಚ್ಚು ಅಭಿವೃದ್ಧಿಯಾಗುತ್ತಿದ್ದವು. ಉತ್ತಮ ರಸ್ತೆಯ ಕಾರಣದಿಂದ ಈ ಭಾಗದ ಜನತೆ ಕೇರಳಕ್ಕೆ ತಮ್ಮ ಆವಶ್ಯಕತೆಗಳಿಗಾಗಿ ತೆರಳುತ್ತಿದ್ದರು. ಆದರೆ ಈಗ ಅಲ್ಲಿನ ರಸ್ತೆಗಳಿಗಿಂತ ಕರ್ನಾಟಕದ ರಸ್ತೆಗಳೇ ಪರವಾಗಿಲ್ಲ. ಅಂತಾರಾಜ್ಯ ಸಂಪರ್ಕ ರಸ್ತೆ ಆದ್ದರಿಂದ ಎರಡೂ ಭಾಗಗಳ ರಸ್ತೆ ಅಭಿವೃದ್ಧಿ ಅಗತ್ಯ ಎನ್ನುವುದು ಆರ್ಲಪದವು ನಿವಾಸಿ ಗೃಹಿಣಿ ವಾಣಿ ಅವರ ಅಭಿಪ್ರಾಯ. ಈಶ್ವರಮಂಗಲ, ಪದಡ್ಕ, ಗಾಳಿಮುಖ ಭಾಗಗಳಲ್ಲಿ ರಸ್ತೆ ಸಮಸ್ಯೆ ನಿವಾರಿಸಲು ಮನಸ್ಸು ಮಾಡಿಲ್ಲ ಎನ್ನುವುದು ನೆಟ್ಟಣಿಗೆ ಮುಟ್ನೂರು ಗ್ರಾಮದ ಮಹಮ್ಮದ್‌ ಕುಂಞಿ ಅವರ ಅಭಿಪ್ರಾಯ.

ಮದ್ಯ ವಹಿವಾಟು
ಗಡಿಭಾಗಗಳಲ್ಲಿ ಮದ್ಯದ ವಿಚಾರವೂ ಪ್ರಮುಖ. ಕೇರಳದಲ್ಲಿ ಮದ್ಯ ನಿಷೇಧ ಮಾಡಿರುವುದರಿಂದ ಕರ್ನಾಟಕ ಗಡಿ ಭಾಗಗಳ ಬಾರ್‌ ಮತ್ತು ವೈನ್‌ಶಾಪ್‌ಗ್ಳಿಂದ ಅಧಿಕ ಪ್ರಮಾಣದಲ್ಲಿ ಗಡಿ ಭಾಗದ ಆಚೆ ಕೇರಳಕ್ಕೆ ಮದ್ಯ ಸಾಗಾಟ ನಡೆಯುತ್ತಿತ್ತು. ಆದರೆ ಪ್ರಸ್ತುತ ಕರ್ನಾಟಕ ಭಾಗದ ಬಾರ್‌, ವೈನ್‌ಶಾಪ್‌ಗ್ಳಲ್ಲೂ ಬೇಕಾದಷ್ಟು ಪ್ರಮಾಣದ ಮದ್ಯ ಸಿಗುತ್ತಿಲ್ಲ. ಸಿಕ್ಕರೂ ಗಡಿ ಭಾಗದಲ್ಲಿ ಬಿಗಿ ಬಂದೋಬಸ್ತ್ ಇರುವುದರಿಂದ ಕೊಂಡೊಯ್ಯಲು ಸಾಧ್ಯವಾಗುತ್ತಿಲ್ಲ. ಕೇರಳದ ವೈನ್‌ಶಾಪ್‌ಗ್ಳಿಂದ ರಾಜ್ಯಕ್ಕೆ ಮದ್ಯ ಕೊಂಡೊಯ್ಯಲು ಅವಕಾಶವಿದ್ದರೂ ಗಡಿ ಭಾಗದಲ್ಲಿ ಕಷ್ಟ ಸಾಧ್ಯ.

ಅಕ್ರಮ ಸ್ಥಗಿತ 
ಸಾಮಾನ್ಯವಾಗಿ ಗಡಿಭಾಗದಲ್ಲಿ ಓಡಾಟ ಹೆಚ್ಚಾಗಿರುತ್ತದೆ. ವಿವಿಧ ರೀತಿಯಲ್ಲಿ ಅಕ್ರಮ ವ್ಯವಹಾರಗಳು ಇಲ್ಲಿ ನಿರಂತರ ನಡೆಯುತ್ತವೆ. ಆದರೆ ಚುನಾವಣೆ ಬಂದ ಕೂಡಲೇ ಎಲ್ಲವೂ ಸ್ಥಗಿತಗೊಳ್ಳುತ್ತದೆ. ಈ ಬಾರಿಯೂ ಕಳೆದ 20 ದಿನಗಳಿಂದ ಗಡಿಯಲ್ಲಿ ಬಂದೋಬಸ್ತ್ ನಡೆಸಲಾಗಿದೆ. ವರ್ಷವಿಡೀ ಹೀಗೇ ಇರಬೇಕೆಂಬುದು ನಮ್ಮ ಆಶಯ.
– ಸುಕುಮಾರ ಶೆಟ್ಟಿ, ಪಾಣಾಜೆ

ಬಂದಾಗ ಹೇಳುತ್ತೇವೆ
ಗಡಿಭಾಗದ ಈಶ್ವರಮಂಗಲ ವ್ಯಾಪಾರ ಕೇಂದ್ರವಾಗಿ ಬೆಳೆದು ಜನರನ್ನು ಸೆಳೆಯುತ್ತಿರುವುದರಿಂದ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಇಲ್ಲಿ ಬಹಿರಂಗ ಸಭೆಗಳನ್ನು ನಡೆಸುತ್ತಾರೆ. ಈ ಬಾರಿಯೂ ಒಂದು ಸುತ್ತಿನ ಪ್ರಚಾರ ಸಭೆಗಳು ನಡೆದಿವೆ. ಅಭ್ಯರ್ಥಿಗಳು ಬಂದಾಗ ಈ ಭಾಗದ ಸಮಸ್ಯೆಗಳನ್ನು ಹೇಳುತ್ತೇವೆ.
– ಗಿರಿಧರ, ಈಶ್ವರಮಂಗಲ

– ರಾಜೇಶ್‌ ಪಟ್ಟೆ

ಟಾಪ್ ನ್ಯೂಸ್

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

ಗೀತಾರ್ಥ ಚಿಂತನೆ 106: ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌

Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ

Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ

Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

accident

Vitla: ರಿಕ್ಷಾ- ಬೈಕ್‌ ಢಿಕ್ಕಿ; ಮೂವರಿಗೆ ಗಾಯ

Sullia: ಕನಕಮಜಲು; ಅಂಗಡಿ, ಹೊಟೇಲ್‌ನಿಂದ ಕಳವು

Sullia: ಕನಕಮಜಲು; ಅಂಗಡಿ, ಹೊಟೇಲ್‌ನಿಂದ ಕಳವು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ

Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.