ಮೂವರು ಲಷ್ಕರ್ ಉಗ್ರರ ಹತ್ಯೆ
Team Udayavani, May 6, 2018, 6:00 AM IST
ಶ್ರೀನಗರ: ಕಣಿವೆ ರಾಜ್ಯದಲ್ಲಿ ಭಾರೀ ವಿಧ್ವಂಸಕ ಕೃತ್ಯ ನಡೆಸಲು ಸಂಚು ಹೂಡಿದ್ದ ಲಷ್ಕರ್-ಎ- ತೊಯ್ಬಾ ಸಂಘಟನೆಗೆ ಸೇರಿದ ಮೂವರು ಉಗ್ರರನ್ನು ಭದ್ರತಾ ಪಡೆಗಳು ಶನಿವಾರ ಹೊಡೆದುರುಳಿಸಿವೆ.
ಶ್ರೀನಗರದ ನಿರ್ಮಾಣ ಹಂತದ ಕಟ್ಟಡದಲ್ಲಿ ಉಗ್ರರು ಅಡಗಿಕೊಂಡಿರುವುದಾಗಿ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ರಾಜ್ಯದ ಚಳಿಗಾಲದ ರಾಜಧಾನಿಯಾದ ಶ್ರೀನಗರಕ್ಕೆ, ಬೇಸಿಗೆ ರಾಜಧಾನಿಯಾದ ಜಮ್ಮುವಿನಿಂದ ಸರ್ಕಾರಿ ಕಚೇರಿಗಳು ಸ್ಥಳಾಂತರಗೊಂಡಿದ್ದು ಮೇ 7ರಂದು ಅವು ಕಾರ್ಯಾರಂಭ ಮಾಡಲಿವೆ. ಈ ಹಿನ್ನೆಲೆಯಲ್ಲಿ ಮೇ 7ರಂದು ಸರ್ಕಾರಿ ಕಚೇರಿಗಳ ಮೇಲೆ ದಾಳಿ ನಡೆಸಲು ಈ ಉಗ್ರರು ಸಂಚು ರೂಪಿಸಿದ್ದಾರೆಂದು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತೆಂದು ಜಮ್ಮು ಕಾಶ್ಮೀರ ಪೊಲೀಸ್ ಮಹಾ ನಿರ್ದೇಶಕ ಸ್ವಯಂ ಪ್ರಕಾಶ್ ಪಾಣಿ ತಿಳಿಸಿದ್ದಾರೆ.
ಮಾಹಿತಿಯನ್ನಾಧರಿಸಿ, ಜಮ್ಮು ಕಾಶ್ಮೀರ ಪೊಲೀಸ್ ಪಡೆ ಹಾಗೂ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿ ಕಟ್ಟಡವನ್ನು ಸುತ್ತುವರಿದರು. ಸುಮಾರು 4 ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರು ಹತರಾದರು ಎಂದು ಅವರು ತಿಳಿಸಿದ್ದಾರೆ.
ಉಗ್ರರ ಅಡಗುದಾಣದಲ್ಲಿ ಮೂರು ಎ.ಕೆ. 47 ರೈಫಲ್‌ಗಳು, ದೊಡ್ಡ ಪ್ರಮಾಣದ ಮದ್ದು ಗುಂಡು ಸಂಗ್ರಹ, ಐದು ಮ್ಯಾಗಜಿನ್‌ಗಳು, ಒಂದು ಮೆಡಿಕಲ್ ಕಿಟ್ ಸಿಕ್ಕಿವೆ. ಇವರೆಲ್ಲರೂ ಲಷ್ಕರ್ ಉಗ್ರರೇ ಎಂಬುದಕ್ಕೆ ಪ್ರಬಲ ಸಾಕ್ಷ್ಯಾಧಾರಗಳೂ ಸಿಕ್ಕಿವೆ. ಮೃತ ಉಗ್ರರ ಗುರುತು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂದು ಪಾಣಿ ವಿವರಿಸಿದ್ದಾರೆ.
ಅಪಘಾತವೋ, ಹತ್ಯೆಯೋ?
ಈ ಘಟನೆ ನಡೆದ ಪ್ರದೇಶದಿಂದ ಐದು ಕಿಮೀ ಆಚೆಗೆ ಆದಿಲ್ ಅಹ್ಮದ್ ಯಾದೂ ಎಂಬ ಯುವಕನೊಬ್ಬ ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ವೈದ್ಯಕೀಯ ವರದಿಯಲ್ಲಿ ಆತ ರಸ್ತೆ ಅಪಘಾತದಲ್ಲಿ ಮೃತನಾಗಿದ್ದಾನೆಂದು ಹೇಳಲಾಗಿದೆ. ಆದರೆ, ನಾಗರಿಕರು ಆತನನ್ನು ಪೊಲೀಸರೇ ಉಗ್ರನೆಂದು ಅನುಮಾನಿಸಿ ಕೊಂದು, ಇದೀಗ ಪ್ರಕರಣ ತಿರುಚಿದ್ದಾರೆಂದು ಆರೋಪಿಸಿದ್ದಾರೆ. ಇದು ಶ್ರೀಗರದಲ್ಲಿ ಬಿಗುವಿನ ವಾತಾವರಣ ನಿರ್ಮಿಸಿದೆ.
ನಾಗರಿಕರ ಹತ್ಯೆ
ಏತನ್ಮಧ್ಯೆ, ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಶಾಹ್‌ಗುಡ್ ಹಾಜಿನ್ ಪ್ರಾಂತ್ಯದ ಇಬ್ಬರು ನಾಗರಿಕರನ್ನು ಲಷ್ಕರ್ ಉಗ್ರರು ಹತ್ಯೆಗೈದಿದ್ದಾರೆ. ಗುಲಾಮ್ ಹಸನ್ ದಾರ್ ಅಲಿಯಾಸ್ ಹಸನ್ ರಸ್ಸಾ ಮತ್ತು ಬಶೀರ್ ಅಹ್ಮದ್ ದಾರ್ ಎಂಬುವರು ಹತರಾದವರು. ಶನಿವಾರ ಬೆಳಗಿನ ಜಾವ 3:30ರ ಸುಮಾರಿಗೆ ನುಗ್ಗಿದ ಉಗ್ರರು, ಅವರಿಬ್ಬರನ್ನೂ ಅಪಹರಿಸಿಕೊಂಡು ಹೋಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್ ವಿಧಿವಶ
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.