ಮ್ಯಾಡ್ರಿಡ್ ಓಪನ್ ಟೆನಿಸ್ ಮೊದಲ ಸುತ್ತಿನಲ್ಲೇ ಎಡವಿದ ಒಸ್ಟಾಪೆಂಕೊ
Team Udayavani, May 7, 2018, 7:10 AM IST
ಮ್ಯಾಡ್ರಿಡ್: ಫ್ರೆಂಚ್ ಓಪನ್ ಚಾಂಪಿಯನ್ ಜೆಲೆನಾ ಒಸ್ಟಾಪೆಂಕೊ “ಮ್ಯಾಡ್ರಿಡ್ ಓಪನ್’ ಟೆನಿಸ್ ಪಂದ್ಯಾವಳಿಯ ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿದ್ದಾರೆ. ಲಾತ್ವಿಯಾದ ಈ ಆಟಗಾರ್ತಿಯನ್ನು ರೊಮೇನಿಯಾದ ಐರಿನಾ ಕ್ಯಾಮೆಲಿಯಾ ಬೆಗು 6-3, 6-3 ನೇರ ಸೆಟ್‌ಗಳಲ್ಲಿ ಹಿಮ್ಮೆಟ್ಟಿಸಿದರು.
ಒಸ್ಟಾಪೆಂಕೊ ನಿರ್ಗಮನದ ಬೆನ್ನಲ್ಲೇ ಅಮೆರಿಕದ ಹಿರಿಯ ಆಟಗಾರ್ತಿ ವೀನಸ್ ವಿಲಿಯಮ್ಸ್ ಕೂಡ ಮನೆಯ ಹಾದಿ ಹಿಡಿದರು. 2010ರ ರನ್ನರ್-ಅಪ್ ಆಗಿದ್ದ ವೀನಸ್ ಅವರನ್ನು ಎಸ್ತೋನಿಯಾದ ಅನೆಟ್ ಕೊಂಟಾವೀಟ್ 3 ಸೆಟ್‌ಗಳ ಹೋರಾಟದ ಬಳಿಕ 3-6, 6-3, 6-2ರಿಂದ ಮಣಿಸಿದರು.
ವಿಶ್ವದ ನಂ.4 ಆಟಗಾರ್ತಿ ಎಲಿನಾ ಸ್ವಿಟೋಲಿನಾ, ಮಾಜಿ ನಂ.1 ಆಟಗಾರ್ತಿ ಕ್ಯಾರೋಲಿನಾ ಪ್ಲಿಸ್ಕೋವಾ ಗೆಲುವಿನ ಓಟ ಆರಂಭಿಸಿದ್ದಾರೆ. ಉಕ್ರೇನಿನ ಸ್ವಿಟೋಲಿನಾ ಫ್ರಾನ್ಸ್‌ನ ಅಲಿಜ್ ಕಾರ್ನೆಟ್ ಅವರನ್ನು 6-2, 6-2 ಅಂತರದಿಂದ ಮಣಿಸಿದರು. ಆದರೆ 23ರ ಹರೆಯದ ಸ್ವಿಟೋಲಿನಾ ಈವರೆಗೆ ಮ್ಯಾಡ್ರಿಡ್‌ನಲ್ಲಿ ದ್ವಿತೀಯ ಸುತ್ತು ದಾಟಿಲ್ಲ. ಜೆಕ್ ಗಣರಾಜ್ಯದ ಪ್ಲಿಸ್ಕೋವಾ 6-4, 6-2 ಅಂತರದಿಂದ ರಶ್ಯದ ಎಲೆನಾ ವೆಸ್ನಿನಾಗೆ ಸೋಲುಣಿಸಿದರು.
ಫ್ರಾನ್ಸ್‌ನ ಕ್ಯಾರೋಲಿನಾ ಗಾರ್ಸಿಯಾ, ಕ್ರಿಸ್ಟಿನಾ ಲಡೆನೋವಿಕ್, ರಶ್ಯದ ದರಿಯಾ ಕಸತ್ಕಿನಾ ಕೂಡ ಗೆಲುವು ಸಾಧಿಸಿದ್ದಾರೆ. ಲಡೆನೋವಿಕ್ ಅಮೆರಿಕದ ಕೊಕೊ ವಾಂಡೆವೇಗ್ ಅವರಿಗೆ ಆಘಾತವಿಕ್ಕಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Manya: ಭಜನ ಮಂದಿರದಿಂದ ಕಳವು ಆರೋಪಿಗಳಿಂದ ಮಾಹಿತಿ ಸಂಗ್ರಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.