ಸ್ವಂತ ಕಲ್ಯಾಣ ಮಾಡಿಕೊಂಡ ಮಂತ್ರಿ: ನರೇಂದ್ರ ಮೋದಿ ವ್ಯಂಗ್ಯ
Team Udayavani, May 7, 2018, 6:10 AM IST
ಚಿತ್ರದುರ್ಗ: “ಚಿತ್ರದುರ್ಗದ ಓರ್ವ ಮಂತ್ರಿ ಪರಿಶಿಷ್ಟರ ಕಲ್ಯಾಣ ಮಾಡದೆ ಸ್ವಂತ ಕಲ್ಯಾಣ ಮಾಡಿಕೊಂಡಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿಯವರು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಅವರನ್ನು ಪರೋಕ್ಷವಾಗಿ ಟೀಕಿಸಿದರು.
ನಗರದಲ್ಲಿ ಮಾತನಾಡಿ, ಸಮಾಜ, ನಾಡನ್ನು ಕಲ್ಯಾಣ ಮಾಡಬೇಕಾಗಿರುವ ಸಮಾಜ ಕಲ್ಯಾಣ ಸಚಿವರು ತಮ್ಮ ಕಲ್ಯಾಣ
ಮಾಡಿಕೊಂಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ತರಾತುರಿಯಲ್ಲಿ ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸಿದರು. ತಮ್ಮ ಕ್ಷೇತ್ರದಲ್ಲೇ 1,200 ಕೊಳವೆ ಬಾವಿಗಳನ್ನು ಮಂಜೂರು ಮಾಡಿಸಿಕೊಂಡಿದ್ದಾರೆ.
ಚುನಾವಣಾ ದಿನಾಂಕ ಘೋಷಣೆಗೆ ಕೇವಲ ಮೂರು ದಿನ ಇದ್ದಾಗ ವಿವಿಧ ಅರ್ಜಿಗಳಿಗೆ ರಾತ್ರೋರಾತ್ರಿ ಶಿಫಾರಸು ಮಾಡಿ 1,800
ಫಲಾನುಭವಿಗಳನ್ನು ಆಯ್ಕೆ ಮಾಡಿದ್ದಾರೆ. ಈ ಪಾಪವನ್ನು ಜನತೆ ಕ್ಷಮಿಸಬಾರದು ಎಂದು ಮೋದಿ ಗುಡುಗಿದರು. ಸಮಾಜ ಕಲ್ಯಾಣ ಇಲಾಖೆಯ ಗಂಗಾ ಕಲ್ಯಾಣ ಯೋಜನೆಯಲ್ಲಿ ಭ್ರಷ್ಟಾಚಾರ ಎಸಗಿರುವುದು ಚಿಕ್ಕ ಮಕ್ಕಳಿಗೂ ಗೊತ್ತಿದೆ. ಇಂತವರಿಗೆ ಸಿದ್ದರಾಮಯ್ಯ ಕ್ಲೀನ್‌ಚಿಟ್ ನೀಡಿ ಪ್ರಮಾಣ ಪತ್ರ ನೀಡುತ್ತಾ ಹೋಗುತ್ತಿದ್ದಾರೆ. ಹಾಸ್ಟೆಲ್‌ನಲ್ಲಿ ಬಡ ಮಕ್ಕಳಿಗೆ ನೀಡುವ ಹಾಸಿಗೆ ದಿಂಬುಗಳಲ್ಲಿ ಸಚಿವರು ಭ್ರಷ್ಟಾಚಾರ ಎಸಗಿದ್ದಾರೆ. ಇವರನ್ನು ಹೀಗೆಯೇ ಬಿಟ್ಟರೆ ನಮ್ಮ ಮನೆಯ ಹಾಸಿಗೆ, ದಿಂಬಿಗೂ ಕೈ ಹಾಕುತ್ತಾರೆ. ಕಾಂಗ್ರೆಸ್ಸಿಗರಿಗೆ ಹಾಸಿಗೆ, ದಿಂಬು ಎಂದರೆ ಅಷ್ಟೊಂದು ಪ್ರೀತಿ. ಏಕೆಂದರೆ ಕಾಂಗ್ರೆಸ್ಸಿಗರು ಹಾಸಿಗೆ ಕೆಳಗೆ ಹಣ ಬಚ್ಚಿಡುತ್ತಾರೆ. ನೀವು ಹುಷಾರಾಗಿರಿ, ನಿಮ್ಮ ಹಾಸಿಗೆ-ದಿಂಬು ತಂಟೆಗೂ ಕಾಂಗ್ರೆಸ್‌ನವರು ಬರಬಹುದು ಎಂದು ವ್ಯಂಗ್ಯವಾಡಿದರು.
ಜವಾಬ್ದಾರಿ ಸ್ಥಾನದಲ್ಲಿರುವ ಪ್ರಧಾನಿ ಮೋದಿ ಗ್ರಾಪಂ ಮಟ್ಟಕ್ಕೆ ಇಳಿದು ಆಧಾರರಹಿತವಾಗಿ ಆರೋಪ ಮಾಡುವುದು ಸರಿಯಲ್ಲ. ತಮ್ಮ ವಿರುದ್ಧ ಮೋದಿ ವಿನಾಕಾರಣ ಟೀಕೆ ಮಾಡಿದ್ದಾರೆ. ಹಾಸಿಗೆ-ದಿಂಬು ಹಗರಣವನ್ನು ನಾನೇ ಬಯಲಿಗೆಳೆದಿದ್ದೆ. ಒಂದು ವೇಳೆ ಲಂಚ ಪಡೆದಿದ್ದರೆ ನೇಣಿಗೇರಿಸಲಿ, ಸಿಬಿಐ ತನಿಖೆ ನಡೆಸಲಿ, ನ್ಯಾಯಾಲಯಕ್ಕೆ ದೂರು ನೀಡಲಿ.
– ಎಚ್.ಆಂಜನೇಯ, ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಸರ್ಕಾರದಿಂದ ಜನತೆಗೆ ಆತ್ಮಹತ್ಯೆ ಭಾಗ್ಯ: ಕಾರಜೋಳ
ತೋಟದ ಮನೆಗಳಿಗೆ ಹಗಲು ತ್ರಿಫೇಸ್, ರಾತ್ರಿ ಸಿಂಗಲ್ ಫೇಸ್ ವಿದ್ಯುತ್: ಸಚಿವ ಜಾರ್ಜ್
ನಾನು ಗಣಪತಿ ಕೇಸ್ ನಲ್ಲಿ ರಾಜೀನಾಮೆ ನೀಡಿದ್ದೆ…: ಬಿಜೆಪಿ ವಿರುದ್ಧ ಸಚಿವ ಜಾರ್ಜ್ ಕಿಡಿ
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
MUST WATCH
ಹೊಸ ಸೇರ್ಪಡೆ
German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್ ಶೆಫರ್ಡ್ ನಾಯಿ ಕೊಂದ!
Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.