ಶೇರು ಹೂಡಿಕೆ ಮಾಡಲು ಬಂಡವಾಳ ಎಲ್ಲಿಂದ ತರಬೇಕು, ಏನಿದು IPO?


Team Udayavani, May 7, 2018, 11:02 AM IST

Sensex Building1-700.jpg

ಶೇರು  ಹೂಡಿಕೆಗೆ  ಬಂಡವಾಳ ಬೇಕು ಎನ್ನುವುದು ಬಹಳ ಮುಖ್ಯ. ಆದರೆ ಅದನ್ನು ಎಲ್ಲಿಂದ ತರಬೇಕು ಎನ್ನುವುದು ಎಲ್ಲರಿಗೂ ಒಂದು ಬಹಳ ಮುಖ್ಯವಾಗುವ ಪ್ರಶ್ನೆ !

ಶೇರುಗಳಲ್ಲಿ ಹಣ ಹೂಡಬೇಕೆಂದು ಎಲ್ಲರೂ ಬಯಸುತ್ತಾರೆ. ಅದಕ್ಕೆ ಮುಖ್ಯ ಕಾರಣ – ಶೇರುಗಳಲ್ಲಿ ಹಣ ಹೂಡಿದರೆ ರಾತ್ರಿ ಬೆಳಗಾಗುವುದರೊಳಗೆ ಸಿರಿವಂತರಾಗಲು ಸಾಧ್ಯ ಎಂಬ ಸರ್ವತ್ರ ನಂಬಿಕೆ ! ಆದರೆ ಇದು ನಿಜವೋ ಸುಳ್ಳೋ ಎಂಬುದನ್ನು ಅವರವರೇ ಅನುಭವ ಮತ್ತು ತಂತ್ರಗಾರಿಕೆಯಿಂದ ಪ್ರಮಾಣಿಸಿಕೊಳ್ಳಬೇಕಾಗುತ್ತದೆ. 

ಅದೇನಿದ್ದರೂ ಶೇರು  ಹೂಡಿಕೆಗೆ  ಬಂಡವಾಳ ಬೇಕು ಎನ್ನುವುದು ಬಹಳ ಮುಖ್ಯ. ಆದರೆ ಅದನ್ನು ಎಲ್ಲಿಂದ ತರಬೇಕು. ದೊಡ್ಡ ಮೊತ್ತದ ಬಂಡವಾಳ ಬೇಕೆಂದರೆ ಮಧ್ಯಮ ವರ್ಗದವರಾದ ನಮ್ಮಲ್ಲಿ ಅದು ಸಹಜವಾಗಿಯೇ ಇರುವುದಿಲ್ಲ. ಹಾಗಿರುವಾಗ ನಾವೇನು ಮಾಡಬೇಕು ? ಬ್ಯಾಂಕುಗಳಲ್ಲಿ ಸಾಲ ಮಾಡಿ ಬಂಡವಾಳ ರೂಪಿಸಿಕೊಳ್ಳಬೇಕೇ ? 

ಇಲ್ಲ; ಹಾಗೆಂದೂ ಮಾಡಬಾರದು. ಬಡ್ಡಿಗೆ ಸಾಲ ಮಾಡಿ ತರುವ ಬಂಡವಾಳ ಅತ್ಯಂತ ಅಪಾಯಕಾರಿ. ಅಂತಹ ದುಡ್ಡನ್ನು ಶೇರುಗಳಲ್ಲಿ ಹೂಡಿದರೆ ಕೊನೆಗೆ ಅಸಲೂ ಖೋತಾ ಬಡ್ಡಿಯೂ ಖೋತಾ ಎಂಬ ಸ್ಥಿತಿ ಉಂಟಾಗಿ ಕೈಸುಟ್ಟು ಕೊಳ್ಳುವುದು ಅನಿವಾರ್ಯವಾದೀತು. ಅಂತಿರುವಾಗ ಶೇರು ಹೂಡಿಕೆಗೆ ಬಂಡವಾಳವನ್ನು ನಾವೇ ರೂಪಿಸಿಕೊಳ್ಳಬೇಕು. ಅದು ಹೇಗೆಂದರೆ ಉಳಿತಾಯದ ಮೂಲಕ !

ಎಲ್ಲಕ್ಕಿಂತ ಮುನ್ನ ನಾವು ಮಾಡಬೇಕಾದ ಕೆಲಸವೆಂದರೆ ಕನಿಷ್ಠ ನಾಲ್ಕು ಅಥವಾ ಐದು ತಿಂಗಳ ಸಂಬಳದ ಒಟ್ಟು ಮೊತ್ತದಷ್ಟು ಹಣವನ್ನು ಎಮರ್ಜೆನ್ಸಿಗಾಗಿ (ತುರ್ತಿಗಾಗಿ) ಪ್ರತ್ಯೇಕವಾಗಿ ಉಳಿತಾಯ ಮಾಡಿಡಬೇಕು. ಆ ಹಣವನ್ನು ನಿರಖು ಠೇವಣಿಯಲ್ಲಿ ಇರಿಸಿದರೆ ಉತ್ತಮ.

ಅದಾದ ಬಳಿಕದ ಉಳಿತಾಯದ ಶೇ.35ರಷ್ಟು ಹಣವನ್ನು ಶೇರು ಹೂಡಿಕೆಗೆಂದು ಬಳಸಿಕೊಳ್ಳಬೇಕು. ಅದೇನಿದ್ದರೂ  ಈ ಮೊತ್ತವನ್ನು ಪ್ರತೀ ತಿಂಗಳೆಂಬಂತೆ ತೆಗೆದಿಡಬೇಕು. ಅದು ಒಂದು ಹೂಡಿಕೆ ಯೋಗ್ಯ ಮೊತ್ತವಾಗಿ ಬೆಳೆದಾಗ ಅದನ್ನು ಶೇರು ಹೂಡಿಕೆಗೆ ಬಳಸಬೇಕು.ಆಗ ಮಾತ್ರವೇ ನಾವು ನಮ್ಮ ಕಾಲ ಮೇಲೆ ನಿಂತು, ಸ್ವಾವಲಂಬಿಗಳಾಗಿ,  ಶೇರು ಹೂಡಿಕೆಯನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯ. 

ಶೇರುಗಳನ್ನು ನಾವು ಎರಡು ಮಾಧ್ಯಮಗಳ ಮೂಲಕ ಖರೀದಿಸಬಹುದು. ಮೊದಲನೇದು ಪ್ರೈಮರಿ ಮಾರ್ಕೆಟ್ ಮೂಲಕ. ಅದುವೇ ಐಪಿಓ ಮಾರ್ಗ – ಎಂದರೆ ಇನಿಶಿಯಲ್ ಪಬ್ಲಿಕ್ ಆಫರ್. ಹಾಲಿ ಕಂಪೆನಿಗಳು ಅಥವಾ ಹೊಸದಾಗಿ ಸ್ಥಾಪಿಸಲ್ಪಟ್ಟ ಕಂಪೆನಿಗಳು ವಿವಿಧ ಉದ್ದೇಶಗಳಿಗಾಗಿ ನಿರ್ದಿಷ್ಟ ಯೋಜನೆಗಳನ್ನು ಮುಂದಿಟ್ಟುಕೊಂಡು ಸಾರ್ವಜನಿಕರಿಂದ ಬಂಡವಾಳ ಎತ್ತಲು ಐಪಿಓ (ಸಾರ್ವಜನಿಕರಿಗೆ ಶೇರು ನೀಡುವ ಪ್ರಕ್ರಿಯೆ – Initial Public Offer) ಮೂಲಕ ಶೇರು ಮಾರುಕಟ್ಟೆಗೆ ಬರುತ್ತವೆ. 

ಕಂಪೆನಿಗಳು ತಾವು ಸಾರ್ವಜನಿಕರಿಗೆ ಕೊಡಲು ಉದ್ದೇಶಿಸುವ ತಮ್ಮ ಶೇರುಗಳ ಮುಖ ಬೆಲೆ 10 ರೂ. ಇದ್ದರೆ ಅದಕ್ಕೆ ತಮ್ಮ ಕಂಪೆನಿಯ ಆರ್ಥಿಕ ಸಾಮರ್ಥ್ಯ, ಉಜ್ವಲ ಭವಿಷ್ಯ ಇತ್ಯಾದಿಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಅದರ ಮೇಲೆ ಪ್ರೀಮಿಯಂ ಮೊತ್ತವನ್ನು ನಿರ್ಧರಿಸುತ್ತವೆ. ಒಂದು ವೇಳೆ 100 ರೂ. ಪ್ರೀಮಿಯಂ ಇದ್ದಲ್ಲಿ  ಐಪಿಓ ಶೇರು ಬೆಲೆ (10+100) 110 ರೂ. ಆಗತ್ತದೆ. ಆದರೆ ಕಂಪೆನಿಗಳು 105 ರೂ.ಗಳಿಂದ 110 ರೂ. ನಡುವೆ ಒಂದು ಬಿಡ್ಡಿಂಗ್‌ ರೇಂಜ್ ಸೆಟ್ ಮಾಡುತ್ತವೆ. ಸಾಮಾನ್ಯವಾಗಿ ಈ ರೇಂಜ್‌ ನ ಗರಿಷ್ಠ ಮೊತ್ತಕ್ಕೆ ಅರ್ಜಿ ಗುಜರಾಯಿಸುವಂತೆ ಮಾಡಲಾಗುತ್ತದೆ. 

ಐಪಿಓಗಳಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಅತ್ಯಧಿಕವಿರುತ್ತದೆ. ವಿಶೇಷವಾಗಿ ಹೂಡಿಕೆಗೆ ಹೊಸಬರಾಗಿರುವವರು ಐಪಿಓ ಮಾರ್ಗದ ಮೂಲಕ ಶೇರು ಪಡೆಯಲು ಮುಂದಾಗುತ್ತಾರೆ. ಅರ್ಜಿ ಹಾಕಿದ ಎಲ್ಲರಿಗೂ ಐಪಿಓ ಶೇರು ಸಿಗುವುದಿಲ್ಲ. ಒಂದೊಮ್ಮೆ ಸಿಕ್ಕಿದರೂ ನಾವು ಕೇಳಿದಷ್ಟು ಶೇರುಗಳನ್ನು ಅವರು ಕೊಡುವುದಿಲ್ಲ. ಶೇರು ನೀಡಿಕೆಯನ್ನು ವಿವಿಧ ಪ್ರಮಾಣದ ಹೂಡಿಕೆಗೆ ಅನುಸಾರವಾಗಿ ಲಾಟರಿಯಲ್ಲಿ ನೀಡಲಾಗುತ್ತದೆ. ಐಪಿಓ ಶೇರು ಸಿಗದವರಿಗೆ ಅವರು ಪಾವತಿಸಿದ ಹಣ ಎರಡು ವಾರಗಳ ಒಳಗೆ ಮರುಪಾವತಿಯಾಗುತ್ತದೆ. 

ಪ್ರೈಮರಿ ಮಾರ್ಕೆಟ್‌ ನಲ್ಲಿ ಐಪಿಓ ಮೂಲಕ ನೀಡಲಾಗುವ ಶೇರುಗಳ ಲಿಸ್ಟಿಂಗ್ ನಡೆದಾಗ ಅವುಗಳ ಮಾರುಕಟ್ಟೆ ಬೆಲೆಯಲ್ಲಿ ವಿಪರೀತ ಏರು ಪೇರುಗಳು ಆಗುವುದಿದೆ. ಪ್ರೀಮಿಯಂ ಸಹಿತವಾದ 100 ರೂ. ಇಶ್ಯೂ ಬೆಲೆಯ ಶೇರಿನ ಧಾರಣೆ ಲಿಸ್ಟಿಂಗ್ ದಿನ 150 -170 ರೂ. ಗಳಲ್ಲಿ ವಹಿವಾಟಾಗುವುದಿದೆ.

ದಿನಾಂತ್ಯಕ್ಕೆ ಅದು ಏಕಾಏಕಿ ಇಳಿದು ಇಶ್ಯೂ ಬೆಲೆಗೆ ಮರಳುವುದಿದೆ. ಇಶ್ಯೂ ಬೆಲೆಗಿಂತಲೂ ಕೆಳಗಿನ ಮಟ್ಟಕ್ಕೆ ಇಳಿಯುವ ಸಾಧ್ಯತೆಗಳೂ ಇರುತ್ತವೆ. ಆದು ಆಯಾ ಕಂಪೆನಿಗಳ ದೃಢತೆ, ಇತಿಹಾಸ, ಭವಿಷ್ಯ ಇತ್ಯಾದಿಗಳನ್ನು ಅವಲಂಭಿಸಿರುತ್ತದೆ. ಸಾಮಾನ್ಯ ಹೂಡಿಕೆದಾರರು ಈ ಏರಿಳಿತಗಳಿಗೆ ಸ್ಪಂದಿಸಬೇಕಾದ ಅಗತ್ಯವಿಲ್ಲ. ಕೇವಲ ವಹಿವಾಟುದಾರರಿಗೆ ಮಾತ್ರವೇ ಈ ಏರಿಳಿತಗಳ ಲಾಭ – ನಷ್ಟವನ್ನು ತಾಳಿಕೊಳ್ಳಲು ಸಾಧ್ಯವಿರುತ್ತದೆ. 

ಹೊಸದಾಗಿ ಪಬ್ಲಿಕ್ ಇಶ್ಯೂ ಮಾಡಿದ ಕಂಪೆನಿಯ ಶೇರುಗಳು ಲಿಸ್ಟಿಂಗ್ ದಿನ ಅಥವಾ ಅನಂತರದಲ್ಲಿ ಇಶ್ಯೂ ಬೆಲೆಗಿಂತ ಕಡಿಮೆ ಮಟ್ಟಕ್ಕೆ  ಇಳಿದಾಗ ಆ ಶೇರು ಸಿಗದವರು ಅಥವಾ ಸಿಕ್ಕಿದವರು, ಸೆಕೆಂಡರಿ ಮಾರ್ಕೆಟ್ನಲ್ಲಿ ಅದು ಬೇಕೇ ಬೇಕೆಂದು ಅನ್ನಿಸಿದಲ್ಲಿ  ಆಯಾ ಹೊತ್ತಿನ ಮಾರುಕಟ್ಟೆ ದರದಲ್ಲಿ ಖರೀದಿಸಬಹುದು.

ಒಂದು ನಿರ್ದಿಷ್ಟ ಕಂಪೆನಿಯ ಪಬ್ಲಿಕ್ ಇಶ್ಯೂನಲ್ಲಿ  ಒಬ್ಬ ಸಣ್ಣ ಹೂಡಿಕೆದಾರನಿಗೆ 28 ಶೇರುಗಳು ಸಿಕ್ಕಿವೆ ಎನ್ನೋಣ. ಅದೇ ಶೇರು ಲಿಸ್ಟಿಂಗ್ ಆದಾಗ ಕಡಿಮೆ ಬೆಲೆಗೆ ಇಳಿದ ಪಕ್ಷದಲ್ಲಿ ಆತ ಸೆಕೆಂಡರಿ ಮಾರ್ಕೆಟ್‌ ನಲ್ಲಿ  ಇನ್ನೂ 12 ಶೇರು ಖರೀದಿಸಿ, ತಲಾ ಶೇರು ವೆಚ್ಚವನ್ನು ಸರಾಸರಿಯ ಮೂಲಕ ಕಡಿಮೆ ಮಾಡಿಕೊಳ್ಳಬಹುದಲ್ಲದೆ  50 ಶೇರಿನ ಒಂದು ರೌಂಡ್ ಫಿಗರ್ ಮಾಡಲೂ ಮುಂದಾಗಬಹುದು. ಇದಕ್ಕೆ ಎವರೇಜಿಂಗ್ ಎನ್ನುತ್ತಾರೆ. ಎಂದರೆ ಶೇರು ಖರೀದಿಯ ಸರಾಸರಿ ವೆಚ್ಚವನ್ನು ಕಡಿಮೆ ಮಾಡುವ ವಿಧಾನ. 

ಸಾಮಾನ್ಯವಾಗಿ ಐಪಿಓ ಮೂಲಕ ಶೇರು ಪಡೆಯುವವರಿಗೆ ಅತ್ಯಧಿಕ ಲಾಭ ಇರುತ್ತದೆ. ಕೆಲವು ಐಪಿಓ ಶೇರು ಬೆಲೆ ಕೆಲವೇ ದಿನ/ತಿಂಗಳಲ್ಲಿ ಐದು, ಹತ್ತು ಅಥವಾ ಇನ್ನೆಷ್ಟೋ ಹೆಚ್ಚು ಪಟ್ಟು ಮಾರುಕಟ್ಟೆ ಬೆಲೆಗೆ ಏರುವುದುಂಟು. ಐಪಿಓ ಮೂಲಕ ಶೇರು ಪಡೆಯುವುದು ಹೆಚ್ಚು ಕ್ಷೇಮಕರ, ಲಾಭದಾಯಕ, ಕಡಿಮೆ ರಿಸ್ಕ್ ಹೂಡಿಕೆ ಎಂದೆಲ್ಲ ಹೇಳಬಹುದು.

ಆದರೆ ಕೆಲವೊಮ್ಮೆ ಈ ಮಾತುಗಳು ವಾಸ್ತವದಲ್ಲಿ ಅತಿಶಯವಾಗುವುದುಂಟು. ಸೆಕೆಂಡರಿ ಮಾರ್ಕೆಟ್‌ ಮೂಲಕ ಶೇರು ಖರೀದಿಗೆ ಮುಂದಾಗುವುದಕ್ಕಿಂತ ಕಡಿಮೆ ಅಪಾಯ, ರಿಸ್ಕ್ ಐಪಿಓ ಗಳಲ್ಲಿ ಇರುವುದು ಸಹಜವೂ ಸಾಮಾನ್ಯವೂ ಆಗಿದೆ. 

ಟಾಪ್ ನ್ಯೂಸ್

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

KRS (2)

KRS ಈಗಲೂ ಭರ್ತಿ: 30 ವರ್ಷಗಳ ದಾಖಲೆ

cyber crime

Cyber ​​fraud ಬದಲಾಗಿದೆ: ನಮ್ಮವರೇ ಆಟಗಾರರು; ಆಡಿಸುವಾತ ಮಾತ್ರ ಬೇರೆ!

1somanna

ರೈಲ್ವೇ, ಜಲಶಕ್ತಿ ಇಲಾಖೆ; ಶೀಘ್ರ 60,000 ಉದ್ಯೋಗ ನೇಮಕ: ಸೋಮಣ್ಣ

bjp-congress

Contractor ಆತ್ಮಹ*ತ್ಯೆ: ರಾಜಕೀಯ ಜಟಾಪಟಿ

1-gite

Udupi: ಇಂದು ಗೀತೋತ್ಸವದ ಮಂಗಳ್ಳೋತ್ಸವ

gold

D.K.Suresh ಹೆಸರಲ್ಲಿ 14 ಕೆಜಿ ಚಿನ್ನ ವಂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

KRS (2)

KRS ಈಗಲೂ ಭರ್ತಿ: 30 ವರ್ಷಗಳ ದಾಖಲೆ

cyber crime

Cyber ​​fraud ಬದಲಾಗಿದೆ: ನಮ್ಮವರೇ ಆಟಗಾರರು; ಆಡಿಸುವಾತ ಮಾತ್ರ ಬೇರೆ!

1somanna

ರೈಲ್ವೇ, ಜಲಶಕ್ತಿ ಇಲಾಖೆ; ಶೀಘ್ರ 60,000 ಉದ್ಯೋಗ ನೇಮಕ: ಸೋಮಣ್ಣ

bjp-congress

Contractor ಆತ್ಮಹ*ತ್ಯೆ: ರಾಜಕೀಯ ಜಟಾಪಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.