ಜಲಸಂರಕ್ಷಣೆಯ ಕಿಂಡಿ ಅಣೆಕಟ್ಟುಗಳ ದುರುಪಯೋಗ


Team Udayavani, May 7, 2018, 12:22 PM IST

7-May-6.jpg

ಸುಳ್ಯ: ಬೇಸಗೆಯಲ್ಲಿ ನೀರಿನ ಮೂಲ ಬತ್ತುತ್ತವೆ. ಹೀಗಾಗಿ ಇಲಾಖೆಗಳ ಮೂಲಕ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಸರಕಾರಗಳು ಆದ್ಯತೆ ನೀಡುತ್ತವೆ. ಅನುದಾನಗಳು ಲಭಿಸುತ್ತಿವೆ ಆದರೆ ಅದನ್ನು ಬಳಸುವಲ್ಲಿ ಲೋಪವಾದರೆ ಸರಕಾರದ ಇಚ್ಛಾಶಕ್ತಿ ನೀರುಪಾಲಾಗುತ್ತದೆ ಎಂಬುದಕ್ಕೆ ಚೆನ್ನಡ್ಕ ಪರಿಸರದಲ್ಲಿ ನಿರ್ಮಾಣವಾದ ಕಿಂಡಿಆಣೆಕಟ್ಟುಗಳು ಸಾಕ್ಷಿಯಾಗಿವೆ.

ದೊಡ್ಡತೋಟ-ಮರ್ಕಂಜ ಸಂಪರ್ಕ ಮಾರ್ಗದ ನಡುವೆ ದೊಡ್ಡತೋಟದಿಂದ ಸ್ವಲ್ಪ ಮುಂದಕ್ಕೆ ಚೆನ್ನಡ್ಕ (ನಳಿಯೂರು) ಎಂಬಲ್ಲಿ ಕಿರು ತೋಡೊಂದು ಹರಿಯುತ್ತದೆ. ಈ ತೋಡು ಕಂದಡ್ಕ ಸೇರುವ ಮಧ್ಯೆ ಮೂರು ವರ್ಷಗಳ ಅವಧಿಯಲ್ಲಿ ಮೂರು ಕಡೆ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಒಂದೇ ತೋಡಿಗೆ ಮೂರು ಅಣೆಕಟ್ಟು ನಿರ್ಮಾಣವಾಗಿರುವುದು ಈ ಭಾಗದ ನಾಗರಿಕರಲ್ಲಿ ಹಲವು ಸಂಶಯಗಳನ್ನು ಹುಟ್ಟುಹಾಕಿವೆ.

ತೋಡಿಗೆ ಚೆನ್ನಡ್ಕ ಬಳಿ ಗ್ರಾ.ಪಂ. ಹಾಗೂ ಜಿ.ಪಂ. ನೆರವಿನಲ್ಲಿ ಉದ್ಯೋಗ ಖಾತರಿ ಯೋಜನೆಯನ್ನು ಬಳಸಿ, ವರ್ಷದ ಹಿಂದೆ ಸುಮಾರು 4 ಲಕ್ಷ ರೂ. ವೆಚ್ಚದ ಅನುದಾನದಲ್ಲಿ ಒಂದು ಕಿರು ಅಣೆಕಟ್ಟು ನಿರ್ಮಿಸಲಾಗಿತ್ತು. ಹಲಗೆ ಜೋಡಿಸಲು ವ್ಯವಸ್ಥೆ ಇದ್ದರೂ ಅದರ ನಿರ್ವಹಣೆ ಆಗುತ್ತಿಲ್ಲ. ಜತೆಗೆ ಅದರ ಕಾಮಗಾರಿಯೂ ಪೂರ್ಣಗೊಂಡಿಲ್ಲ. ಕಿಂಡಿ ಅಣೆಕಟ್ಟಿಗೆ ಹಲಗೆ ಜೋಡಿಸದೆ ಇರುವುದರಿಂದ ಇದರ ಮೇಲೆ ನಡೆದು ಹೋಗುವುದಕಷ್ಟೆ ಸೀಮಿತವಾಗಿದ್ದು, ಎರಡು ಕುಟುಂಬಗಳು ಮಾತ್ರ ಇದರ ಪ್ರಯೋಜನ ಪಡೆಯುತ್ತಿದೆ.

ಈ ಕಿಂಡಿ ಅಣೆಕಟ್ಟಿನ ಪಕ್ಕ ಹತ್ತು ಮೀಟರಿನಷ್ಟು ದೂರವಿಲ್ಲದ ಜಾಗದಲ್ಲಿ ಮತ್ತೂಂದು ಕಿಂಡಿ ಅಣೆಕಟ್ಟು ನಿರ್ಮಿಸಲಾಗುತ್ತಿದೆ. ಎಸ್‌ ಟಿ ಪ್ರದೇಶಕ್ಕೆ ಎಂದು ಮೀಸಲಿರಿಸಿ ಜಿ.ಪಂ. ಶಿಪಾರಸಿನಂತೆ ಕೇಂದ್ರದಿಂದ ವಿಶೇಷ ಮಂಜೂರಾತಿ ಪಡೆದು ಇಲ್ಲಿಗೆ ಸುಮಾರು 19 ಲಕ್ಷ ರೂ. ಅನುದಾನದ ದೊರಕಿದ್ದು, ಅದರಲ್ಲಿ ಇಲ್ಲಿ ಕಿಂಡಿ ಅಣೆ ಕಟ್ಟು ನಿರ್ಮಾಣ ಕಾಮಗಾರಿ ಈಗ ನಡೆಯುತ್ತಿದೆ.

ಅವೈಜ್ಞಾನಿಕ
ಇದೇ ತೋಡಿನ ಮೇಲ್ಭಾಗದಲ್ಲಿ ಸುಮಾರು 500 ಮೀ. ದೂರದ ಅಂತರದಲ್ಲಿ ಈ ಹಿಂದೆಯೇ ಒಂದು ಕಿಂಡಿ ಅಣೆಕಟ್ಟು ನಿರ್ಮಿಸಿ, ಕಾಮಗಾರಿ ಮಳೆಯಿಂದ ಪೂರ್ಣವಾಗದೆ ಪ್ರಯೋಜನಕ್ಕೆ ಸಿಗದೆ ನಿಂತಿದೆ. ಇದೀಗ ಮತ್ತೆ ಮತ್ತೆ ಒಂದೇ ತೋಡಿನ ಅಕ್ಕಪಕ್ಕದಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸುತ್ತಿರುವುದು ಅವೈಜ್ಞಾನಿಕ ಯೋಜನೆ ಎನ್ನುತ್ತಾರೆ ಸ್ಥಳೀಯರು.

ಕೂಲಿ ಪಾವತಿಯಾಗಿಲ್ಲ
ಈ ಕಿಂಡಿ ಅಣೆಕಟ್ಟಿನ ನಿರ್ಮಾಣ ಹಂತದಲ್ಲಿ ಉದ್ಯೋಗ ಖಾತರಿ ಯೋಜನೆಯಿಂದ ಬಳಸಿಕೊಂಡ 15 ಮಂದಿ ಮಹಿಳಾ ಕೂಲಿ ಕೆಲಸಗಾರರಿಗೆ ಇನ್ನೂ ವೇತನವನ್ನು ಪಾವತಿಸಿಲ್ಲ ಎಂಬ ಆರೋಪವೂ ಇದೆ.

ಆಕ್ಷೇಪಣೆ
ಈಗ ನಡೆಯುತ್ತಿರುವ ಕಿರು ಅಣೆಕಟ್ಟು ನಿರ್ಮಾಣದ ಜಾಗಕ್ಕೆ ಸಂಬಂಧಿಸಿ ಪಕ್ಕದ ಕುಟುಂಬವೊಂದರ ಆಕ್ಷೇಪ ಇದೆ. ಕಮಲಾ ಎಂಬ ನಿವಾಸಿಗೆ ಸೇರಿದ ಸ್ಥಳದಲ್ಲಿ ಅನುಮತಿ ಪಡೆಯದೆ ಕಾಮಗಾರಿ ನಡೆಸುತ್ತಿರುವ ಕುರಿತು ಪೊಲೀಸರಿಗೆ ದೂರು ನೀಡಲು ಅವರ ಕುಟುಂಬ ಸಿದ್ಧತೆ ನಡೆಸುತ್ತಿದೆ.

ಚೆನ್ನಡ್ಕ ಪರಿಸರದಲ್ಲಿ ಬೆರಳೆಣಿಕೆಯ ಎಸ್‌ಟಿ ಕುಟುಂಬಗಳು ಸಹಿತ ಮೂವತ್ತಕ್ಕೂ ಅಧಿಕ ಮನೆಗಳಿವೆ. ಇಲ್ಲಿ ಸಾರ್ವಜನಿಕ ಒಂದು ಬಾವಿ ಕೂಡ ಇದೆ. ಬಾವಿಯಲ್ಲಿ ನೀರು ಏರಿಕೆ ಆಗಬೇಕಿದ್ದರೆ ಈಗ ಇರುವ ಎರಡು ಕಿಂಡಿ ಅಣೆಕಟ್ಟುಗಳನ್ನೇ ಪೂರ್ಣಗೊಳಿಸಿ ಹಲಗೆ ಜೋಡಿಸಿ ನಿರ್ವಹಣೆ ನಡೆಸುತ್ತ ಬಂದರೇ ಯಥೇತ್ಛ ನೀರು ಲಭ್ಯವಾಗಲಿದೆ.

ಚುನಾವಣೆ ಅಸ್ತ್ರವಾಗಿ ಬಳಕೆ
ಪುಟ್ಟ ತೋಡಿನ ಅಲ್ಲಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಆಗುತ್ತಿರುವುದು ರಾಜಕೀಯ ಪಕ್ಷಗಳ ಕಣ್ಣು ಕೆಂಪಾಗಿಸಿದೆ. ಕೃಷಿಕರಿಗೆ ಜಲಸಂರಕ್ಷಣೆಯ ದೃಷ್ಟಿಯಿಂದ ಕಿಂಡಿ ಅಣೆಕಟ್ಟುಗಳು ಪ್ರಯೋಜನಕಾರಿ ಆಗಿದ್ದರೂ ಒಂದೇ ಕಡೆ ಒಂದೇ ತೋಡಿಗೆ ಅಕ್ಕಪಕ್ಕದಲ್ಲಿ ನಿರ್ಮಿಸಿರುವ ಹಿಂದೆ ಹಣ ಗಳಿಸುವ ಉದ್ದೇಶ ಅಡಗಿದೆ ಎಂಬ ಆರೋಪ- ಪ್ರತ್ಯಾರೋಪಗಳೂ ಕೇಳಿಬರುತ್ತಿವೆ. ಇದು ಚುನಾವಣೆ ಅಸ್ತ್ರವಾಗಿ ಮಾರ್ಪಾಡಾಗುವ ಸಾಧ್ಯತೆ ಇದೆ.

ದಿಢೀರನೆ ಮಂಜೂರು
14 ವರ್ಷಗಳಿಂದ ನಮ್ಮ ಭಾಗಕ್ಕೆ ಯಾವುದೇ ಯೋಜನೆಗಳು ಮಂಜೂರಾತಿ ಆಗಿರಲಿಲ್ಲ. ಈ ಅವಧಿಯಲ್ಲಿ ಹಲವು ಸ್ಕೀಮುಗಳ ಮೂಲಕ ಇಲಾಖೆಗಳಿಗೆ ಅರ್ಜಿ ಸಲ್ಲಿಸಿದ್ದೆವು. ಇತ್ತೀಚೆಗೆ ಕೇಂದ್ರದ ವಿಶೇಷ ಅನುದಾನದಲ್ಲಿ ಹಣ ಒದಗಿ ಬಂತು. ಹೀಗಾಗಿ ಇದೀಗ ಸ್ವಲ್ಪ ದೊಡ್ಡ ಗಾತ್ರದ ಕಿಂಡಿ ಅಣೆಕಟ್ಟು ನಿರ್ಮಾಣ ಆಗುತ್ತಿದೆ. ಇದನ್ನು ಸ್ಥಳಾಂತರಿಸಲು ನಿಯಮಾನುಸಾರ ಆಗದೆ ಇರುವುದರಿಂದ ಇಲ್ಲಿ ನಿರ್ಮಿಸಲಾಗುತ್ತಿದೆ.
– ಪದ್ಮನಾಭ ಚೆನ್ನಡ್ಕ, ಫಲಾನುಭವಿ

ದೂರು ನೀಡುತ್ತೇವೆ
ಒಂದೇ ತೋಡಿಗೆ ಅವೈಜ್ಞಾನಿಕವಾಗಿ ಮೂರು ಅಣೆಕಟ್ಟುಗಳನ್ನು ನಿರ್ಮಿಸುವುದಕ್ಕೆ ನಮ್ಮ ವಿರೋಧವಿದೆ. ಅಣೆಕಟ್ಟು ನಿರ್ಮಿಸುವಾಗ ಜಾಗದ ಹಕ್ಕುದಾರೆ ನನ್ನ ತಾಯಿಯ ಅನುಮತಿ ಪಡೆದಿಲ್ಲ. ಹೀಗಾಗಿ ಅಲ್ಲಿ ಕಾಮಗಾರಿ ಮುಂದುವರಿಸಬಾರದು.ಈ ಕುರಿತು ಮುಂದಿನ ದಿನಗಳಲ್ಲಿ ಪೊಲೀಸರಿಗೆ ದೂರು ನೀಡುತ್ತೇವೆ.
– ಸುಂದರ
ಸ್ಥಳೀಯ ನಿವಾಸಿ

ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Vimana 2

Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

1-kanna

Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ

1-raga

Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ

ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

Belagavi: ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

1-p-r

US; ಒಬಾಮಾ ಮನೆಯಲ್ಲಿ ಪ್ರೇಯಸಿ ಕರೆಸಿ ಸೆ*ಕ್ಸ್ ಮಾಡಿದ ಸೀಕ್ರೆಟ್ ಸರ್ವಿಸ್ ಏಜೆಂಟ್ ವಜಾ!

POLICE-5

Malpe: ಜುಗಾರಿ ಅಡ್ಡೆಗೆ ದಾಳಿ, ವಶಕ್ಕೆ

POlice

Malpe: ಜೂಜಾಟ; 12 ಮಂದಿ ಅಂದರ್‌; ಪ್ರಕರಣ ದಾಖಲು

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.