ಮ್ಯೂನಿಚ್ ಓಪನ್ ಟೆನಿಸ್: ಅಲೆಕ್ಸಾಂಡರ್ ಜ್ವರೇವ್ ಚಾಂಪಿಯನ್
Team Udayavani, May 8, 2018, 6:00 AM IST
ಮ್ಯೂನಿಚ್: ಜರ್ಮನಿಯ 21ರ ಹರೆಯದ ಅಲೆಕ್ಸಾಂಡರ್ ಜ್ವರೇವ್ “ಮ್ಯೂನಿಚ್ ಓಪನ್’ ಟೆನಿಸ್ ಪ್ರಶಸ್ತಿ ಉಳಿಸಿ ಕೊಂಡು ಮುಂಬರುವ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಟೂರ್ನಿಗೆ ಹೊಸ ಹುರುಪಿನಿಂದ ಸಜ್ಜಾಗಿದ್ದಾರೆ.
ರವಿವಾರ ರಾತ್ರಿ ನಡೆದ ಪ್ರಶಸ್ತಿ ಕಾಳಗದಲ್ಲಿ ಅಲೆಕ್ಸಾಂಡರ್ ಜ್ವರೇವ್ ತಮ್ಮದೇ ದೇಶದ ಫಿಲಿಪ್ ಕೋಹ್ಲ ಶ್ರೀಬರ್ ವಿರುದ್ಧ 6-3, 6-3 ನೇರ ಸೆಟ್‌ಗಳ ಜಯ ಸಾಧಿಸಿದರು. ಇದು 2018ರಲ್ಲಿ ಜ್ವರೇವ್ ಜಯಿಸಿದ ಮೊದಲ ಟೆನಿಸ್ ಪ್ರಶಸ್ತಿಯಾಗಿದೆ.
ಕಳೆದ ವರ್ಷವೂ ಚಾಂಪಿಯನ್
ವಿಶ್ವದ ನಂ.3 ಟೆನಿಸಿಗನಾಗಿರುವ ಜ್ವರೇವ್ ಕಳೆದ ವರ್ಷದ ಫ್ರೆಂಚ್ ಓಪನ್ ಕೂಟದಲ್ಲಿ ಮೊದಲ ಸುತ್ತಿ ನಲ್ಲೇ ಸೋತು ನಿರ್ಗಮಿಸಿದ್ದರು. ಅಂದು ಮ್ಯೂನಿಚ್ ಓಪನ್ ಪ್ರಶಸ್ತಿ ಜಯಿಸಿದ್ದರೂ ರೊಲ್ಯಾಂಡ್ ಗ್ಯಾರೋಸ್‌ನಲ್ಲಿ ಇದು ಜ್ವರೇವ್‌ಗೆ
ಯಾವುದೇ ಲಾಭ ತಂದು ಕೊಟ್ಟಿರಲಿಲ್ಲ. ಈ ವರ್ಷ ಪರಿಸ್ಥಿತಿ ಬದಲಾದೀತೆಂಬ ನಂಬಿಕೆ ಜರ್ಮನ್ ಟೆನಿಸಿಗನದ್ದು.
3 ಬಾರಿಯ ಚಾಂಪಿಯನ್ ಕೋಹ್ಲಶ್ರೀಬರ್ ಮೊದಲ ಸೆಟ್‌ನಲ್ಲಿ 3-2ರ ಮುನ್ನಡೆಯಲ್ಲಿದ್ದರು. ಆದರೆ ಜ್ವರೇವ್ ಕೂಡಲೇ ತಿರುಗಿ ಬಿದ್ದು ಹಿಡಿತ ಸಾಧಿಸಿದರು.
“ಮಾಂಟೆ ಕಾರ್ಲೋದಲ್ಲೂ ನಾನು ಉತ್ತಮ ಪ್ರದರ್ಶನ ನೀಡಿದ್ದೆ. ಮ್ಯೂನಿಚ್ ಪ್ರಶಸ್ತಿ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಇದೇ ಲಯವನ್ನು ಕಾಯ್ದುಕೊಂಡರೆ ಮುಂಬರುವ ಫ್ರೆಂಚ್ ಓಪನ್‌ನಲ್ಲಿ ಬಹಳ ದೂರ ಸಾಗುವ ನಿರೀಕ್ಷೆ ಹೊಂದಿದ್ದೇನೆ’ ಎಂದು ಅಲೆಕ್ಸಾಂಡರ್ ಜ್ವರೇವ್ ಪ್ರತಿಕ್ರಿಯಿಸಿದ್ದಾರೆ. ಎಪ್ರಿಲ್‌ನಲ್ಲಿ ನಡೆದ ಮಾಂಟೆ ಕಾರ್ಲೊ ಮಾಸ್ಟರ್ ಟೆನಿಸ್ ಪಂದ್ಯಾವಳಿಯಲ್ಲಿ ಜ್ವರೇವ್ ಸೆಮಿಫೈನಲ್ ತನಕ ಸಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.