ಐಐಟಿ ಮದ್ರಾಸ್ ವಿದ್ಯಾರ್ಥಿಗಳ ಮಹತ್ವದ ಶೋಧ: ವಿನೂತನ ಬ್ಯಾಂಡೇಜ್
Team Udayavani, May 8, 2018, 6:00 AM IST
ನವದೆಹಲಿ: ಡಯಾಬಿಟೀಸ್ ರೋಗಿಗಳಿಗೆ ಸಣ್ಣ ಗಾಯವಾದರೂ ಗುಣವಾಗುವುದು ನಿಧಾನ. ಕೆಲವೊಮ್ಮೆ ಡಯಾಬಿಟೀಸ್ ಸಮಸ್ಯೆ ಹೆಚ್ಚಿದ್ದರೆ ಗಾಯ ಗುಣವಾಗದೇ, ಆ ಅಂಗವನ್ನು ಕತ್ತರಿಸುವ ಪರಿಸ್ಥಿತಿಯೂ ಬರುತ್ತದೆ. ಇದು ಇಂದಿಗೂ ಗಮನಾರ್ಹ ವೈದ್ಯಕೀಯ ಸಮಸ್ಯೆಯಾಗಿಯೇ ಉಳಿದಿದೆ. ಇದಕ್ಕೆ ಐಐಟಿ ಮದ್ರಾಸ್ ವಿದ್ಯಾರ್ಥಿಗಳು ಹೊಸ ಡ್ರೆಸ್ಸಿಂಗ್ ಸಾಮಗ್ರಿಯನ್ನು ಕಂಡು ಹಿಡಿದಿದ್ದಾರೆ.
ಗ್ರಾಫೀನ್ ಆಧರಿತ ಡ್ರೆಸ್ಸಿಂಗ್ ಸಾಮಗ್ರಿ ಯನ್ನು ಇವರು ತಯಾರಿಸಿದ್ದು, ಇದು ಗಾಯದ ಭಾಗದಲ್ಲಿ ರಕ್ತನಾಳಗಳ ಬೆಳವಣಿಗೆ ಯನ್ನು ಹೆಚ್ಚಿಸುತ್ತವೆ. ಈಗಾಗಲೇ ಪ್ರಾಣಿಗಳ ಮೇಲೆ ಪ್ರಯೋಗ ನಡೆಸಲಾಗಿದ್ದು, ಉತ್ತಮ ಫಲಿತಾಂಶ ನೀಡಿದೆ ಎಂದು ಬಯೋಟೆಕ್ನಾಲಜಿ ವಿಭಾಗದ ಸಹಾಯಕ ಉಪನ್ಯಾಸಕ ವಿಘ್ನೇಶ್ ಮುತ್ತುವಿಜಯನ್ ಹೇಳಿದ್ದಾರೆ.
ಗ್ರಾಫೀನ್‌ನಿಂದ ಆಕ್ಸೆ„ಡ್ ಅನ್ನು ಬೇರ್ಪ ಡಿಸಿ ಸಸ್ಯ ಕಾಬೊìಹೈಡ್ರೇಟ್ ಪಾಲಿಮರ್‌ಗೆ ಸೇರಿಸಿದ್ದಾರೆ. ಇದರಿಂದ ಡ್ರೆಸ್ಸಿಂಗ್ ಮಟೀರಿಯಲ್ ತಯಾರಿಸಲಾಗಿದೆ. ಇದಕ್ಕೆ ಪೈಬ್ರೋಬ್ಲಾಸ್ಟ್ ಕೋಶಗಳನ್ನೂ ಅಳವಡಿಸ ಲಾಗಿದ್ದು, ಇವು ವಿಷಾಂಶವನ್ನು ಅಂದಾಜು ಮಾಡಿ ಜೈವಿಕ ಚಟುವಟಿಕೆ ವರ್ಧಿಸಲು ನೆರವಾಗುತ್ತವೆ ಎಂದು ಮುತ್ತುವಿಜಯನ್ ಹೇಳಿದ್ದಾರೆ.
ಸದ್ಯ ಡಯಾಬಿಟಿಕ್ ರೋಗಿಗಳಲ್ಲಿ ಸಾಮಾನ್ಯ ಡ್ರೆಸ್ಸಿಂಗ್‌ನಿಂದ ಗಾಯ 26 ದಿನಗಳಲ್ಲಿ ಗುಣವಾದರೆ ಈ ಡ್ರೆಸ್ಸಿಂಗ್‌ನಿಂದ 20 ದಿನಗಳಲ್ಲಿ ಗುಣವಾಗುತ್ತದೆ. ಇನ್ನೊಂದೆಡೆ ಸಾಮಾನ್ಯ ಜನರಲ್ಲಿ 23 ದಿನಗಳಲ್ಲಿ ಗುಣವಾಗುವ ಗಾಯಗಳನ್ನು ಈ ಡ್ರೆಸ್ಸಿಂಗ್‌ನಿಂದ 16 ದಿನಗಳಲ್ಲಿ ಗುಣವಾಗಿಸಬಹುದು. ಈವರೆಗೆ ನಡೆಸಿದ ಅಧ್ಯಯನದಲ್ಲಿ ಇದು ಸಾಬೀತಾಗಿದೆ. ಇವು ತಯಾರಿಸಲು ಸುಲಭವಾಗಿದ್ದು, ವೆಚ್ಚವೂ ಕಡಿಮೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.