ಬಹಿರಂಗ ಪ್ರಚಾರ ನಾಳೆ ಮುಕ್ತಾಯ: ಕೃಷ್ಣಮೂರ್ತಿ
Team Udayavani, May 9, 2018, 10:35 AM IST
ಪುತ್ತೂರು: ಗುರುವಾರ ಮೇ 10ರಂದು ಸಂಜೆ 6 ಗಂಟೆಯ ಒಳಗೆ ಬಹಿರಂಗ ಪ್ರಚಾರಕ್ಕೆ ಮುಕ್ತಾಯ ಹಾಡಬೇಕು. ಅನಂತರ ಕ್ಷೇತ್ರದಿಂದ ಹೊರಗಿನ ಯಾವ ನಾಯಕರೂ ಕ್ಷೇತ್ರದಲ್ಲಿ ಉಳಿದುಕೊಳ್ಳಬಾರದು ಎಂದು ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಸಹಾಯಕ ಕಮಿಷನರ್ ಎಚ್. ಕೆ. ಕೃಷ್ಣಮೂರ್ತಿ ಅವರು ಸೂಚನೆ ನೀಡಿದ್ದಾರೆ.
ಅವರು ಮಂಗಳವಾರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ಮತ್ತು ಏಜೆಂಟರ ಸಭೆಯಲ್ಲಿ ಮಾತನಾಡಿದರು. ಚುನಾವಣೆ ಹಿನ್ನೆಲೆಯಲ್ಲಿ ಅನುಸರಿಸಬೇಕಾದ ನಿಯಮಗಳ ಕುರಿತು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮತದಾನ ಕೇಂದ್ರಗಳಿಗಿಂತ 200 ಮೀ. ದೂರದಲ್ಲಿ ಪ್ರತೀ ಅಭ್ಯರ್ಥಿಗಳ ಪರವಾಗಿ ಒಂದು ಬೂತ್ ರಚಿಸಿಕೊಳ್ಳಬಹುದು. ಇಲ್ಲಿ ಅಭ್ಯರ್ಥಿಯ ಫೂಟೋ ಪ್ರದರ್ಶನ ಮಾಡಬಾರದು. ಪಕ್ಷದ ಹೆಸರು, ಅಭ್ಯರ್ಥಿಯ ಹೆಸರು ಬರೆಯಬಹುದು. ಪಕ್ಷದ ಧ್ವಜವನ್ನೂ ಅಳವಡಿಸುವಂತಿಲ್ಲ. ಬೂತ್ ರಚನೆಗೆ ಸಂಬಂಧಿಸಿ ಆಯಾ ಗ್ರಾ.ಪಂ.ನ ಅಭಿವೃದ್ಧಿ ಅಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳಬೇಕು ತಿಳಿಸಿದರು.
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 2,01,884 ಮತದಾರರಿದ್ದು, 217 ಬೂತ್‌ಗಳು ಮತ್ತು 6 ಹೆಚ್ಚುವರಿ ಬೂತ್ ಗಳಿವೆ. ಇವುಗಳಲ್ಲಿ 44 ಅತಿಸೂಕ್ಷ್ಮ ಮತಗಟ್ಟೆಗಳಿವೆ ಹಾಗೂ ಉಳಿದ ಸಾಮಾನ್ಯ ಮತಗಟ್ಟೆಗಳಿಗೆ. ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಓರ್ವ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಮತ್ತು ಕೇಂದ್ರೀಯ ಅರೆಸೇನಾ ಪಡೆಯ ನಾಲ್ವರು ಭದ್ರತಾ ಸಿಬಂದಿ ಕಾರ್ಯನಿರ್ವಹಿಸಲಿದ್ದಾರೆ. ಸಾಮಾನ್ಯ ಮತಗಟ್ಟೆಗಳಲ್ಲಿ ಒಬ್ಬ ಪೊಲೀಸ್ ಅಥವಾ ಹೋಂ ಗಾರ್ಡ್ ಇರಲಿದ್ದಾರೆ.
ಒಂದು ಮತಗಟ್ಟೆಯಲ್ಲಿ ಒಬ್ಬ ಅಧ್ಯಕ್ಷಾಧಿಕಾರಿ (ಪಿಆರ್‌ಒ), ಒಬ್ಬ ಸಹಾಯಕ ಅಧ್ಯಕ್ಷಾಧಿಕಾರಿ ಮತ್ತು ಮೂವರು ಮತಗಟ್ಟೆ ಅಧಿಕಾರಿಗಳು ಇರುತ್ತಾರೆ. ಪುತ್ತೂರು ಕ್ಷೇತ್ರದಲ್ಲಿ ಒಟ್ಟು 264 ಪಿಆರ್‌ಒ ಮತ್ತು 264 ಎಪಿಆರ್‌ಒಗಳು ಕರ್ತವ್ಯ ನಿರ್ವಹಿಸುತ್ತಾರೆ. 792 ಮತಗಟ್ಟೆ ಅಧಿಕಾರಿಗಳಿರುತ್ತಾರೆ ಎಂದರು.
81 ಅಂಗವಿಕಲರು
ಕ್ಷೇತ್ರದಲ್ಲಿ 81 ಅಂಗವಿಕಲ ಮತದಾರರನ್ನು ಗುರುತಿಸಲಾಗಿದೆ. ಕೋಡಿಂಬಾಡಿ ಮತಗಟ್ಟೆ ವ್ಯಾಪ್ತಿಯಲ್ಲಿ ಗರಿಷ್ಠ 23 ಅಂಗವಿಕಲ ಮತದಾರರಿದ್ದಾರೆ. ಆಯಾ ಮತಗಟ್ಟೆಗಳಲ್ಲಿ ಇವರಿಗೆ ಗಾಲಿ ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆಗಳಿಗೆ ಸಿಬಂದಿ ತೆರಳುವಾಗಲೇ ಅವರ ಜತೆ ತುರ್ತು ಆರೋಗ್ಯ ಚಿಕಿತ್ಸೆಯ ಕಿಟ್ ಕಳುಹಿಸಿ ಕೊಡಲಾಗುತ್ತದೆ. ಇದಲ್ಲದೆ ಕ್ಷೇತ್ರದಲ್ಲಿ ಸಂಚಾರಿ ಆರೋಗ್ಯ ಘಟಕಗಳನ್ನು ಸಿದ್ಧತಾ ಸ್ಥಿತಿಯಲ್ಲಿ ಇರಿಸಲಾಗುತ್ತದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.