ಚುನಾವಣಾ ಪ್ರಚಾರದಲ್ಲಿ ಭಾಗವಹಿಸದಿರಲು ಸುದೀಪ್ ನಿರ್ಧಾರ
Team Udayavani, May 9, 2018, 11:56 AM IST
ಮುಂಬರುವ ವಿಧಾನಸಭಾ ಚುನಾವಣೆಗಳಿಗೆ ರಾಜು ಗೌಡ ಮತ್ತು ಶ್ರೀರಾಮುಲು ಪರ ಪ್ರಚಾರ ಮಾಡಿದ್ದ ನಟ-ನಿರ್ದೇಶಕ ಸುದೀಪ್, ಇನ್ನು ಮುಂದೆ ಯಾವುದೇ ಪ್ರಚಾರದಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ.
ಅದಕ್ಕೆ ಕಾರಣ ಅವರ ಅಭಿಮಾನಿಗಳ ಮನವಿ. ಸುದೀಪ್ ಪ್ರಚಾರದಲ್ಲಿ ಭಾಗವಹಿಸಿದ ನಂತರ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಯಾವುದೋ ಒಬ್ಬ ಅಭ್ಯರ್ಥಿಯ ಪರವಾಗಿ ಗುರುತಿಸಿಕೊಳ್ಳಬಾರದು ಮತ್ತು ಪಕ್ಷಾತೀತವಾಗಿರಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ್ದರು. ಅಭಿಮಾನಿಗಳ ಮನವಿಗೆ ಸ್ಪಂದಿಸಿರು ಸುದೀಪ್, ಇನ್ನು ಮುಂದೆ ಯಾರ ಪರವಾಗಿಯೂ ಪ್ರಚಾರ ಮಾಡದಂತೆ ತೀರ್ಮಾನಿಸಿದ್ದಾರೆ.
ಈ ಕುರಿತು ಅವರು ತಮ್ಮ ಅಭಿಮಾನಿಗಳಿಗೆ ಒಂದು ಪತ್ರ ಬರೆದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪತ್ರದಲ್ಲಿ ಅವರು ತನ್ನ ಅಭಿಮಾನಿಗಳು ಹಾಗೂ ಗೆಳೆಯರ ಸಲುವಾಗಿ ಈ ನಿರ್ಧಾರ ಕೈಗೊಳ್ಳುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ನಾನು ಪ್ರಚಾರಕ್ಕೆ ಸೇರಿದ್ದು ಸುಮಾರು ವರ್ಷಗಳ ಪರಿಚಯದ ನನ್ನ ಕೆಲವು ಗೆಳೆಯರಿಗಾಗಿ. ಅವರು ಒಂದಲ್ಲ ಒಂದು ರೀತಿ ನನ್ನೊಟ್ಟಿಗೆ ನನ್ನ ಕಠಿಣ ಸಮಯದಲ್ಲಿ ನಿಂತವರು. ಸಣ್ಣದು ಅಥವ ದೊಡ್ಡದು ಎಂಬುದು ವಿಷಯವಲ್ಲ. ಅವರು ಅಂದು ನಿಂತದ್ದು ವಿಷಯ. ಈಗ ಅವರಿಗಾಗಿ ನಾನು ಅಲ್ಲಿರುವುದು ಬಹುಶಃ ಅವರು ನನ್ನಿಂದ ಪಡೆಯುವ ಒಂದು ಸಣ್ಣ ಬೆಂಬಲ. ಇದು ಕನಿಷ್ಠ ನಾನು ಅವರಿಗಾಗಿ ಮಾಡಬಹುದಾದದ್ದು… ಅದರಲ್ಲಿ ಯಾವುದೇ ವಿಷಾದವಿಲ್ಲ. ನನ್ನ ಗೆಳೆಯರ ಹಾಗೂ ಅಭಿಮಾನಿಗಳ ಸಲುವಾಗಿ ನಾನು ಮುಂದಿನ ಯಾವುದೇ ಪ್ರಚಾರದಲ್ಲಿ ಭಾಗವಹಿಸುವುದಿಲ್ಲ. ಎಲ್ಲರಿಗೂ ನನ್ನ ಅವಶ್ಯಕತೆ ಇದೆ ಹಾಗೂ ನನ್ನ ಉಪಸ್ಥಿತಿಯಿಂದ ಫಲಿತಾಂಶಗಳು ಬದಲಾಗುತ್ತದೆ ಎಂದು ನಾನು ನನ್ನನ್ನು ಅಂತಹ ದೊಡ್ಡ ಮಟ್ಟಕ್ಕೆ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ.. ನಾನು ಒಬ್ಬ ಕಲಾವಿದ. ನನ್ನ ಪಯಣದಲ್ಲಿ ನನ್ನೊಟ್ಟಿಗೆ ಇದ್ದಂತಹ ಗೆಳೆಯರು ಹಾಗು ಅಭಿಮಾನಿಗಳ ಅಭಿಪ್ರಾಯ ಮುಖ್ಯವಾಗುತ್ತದೆ. ಇದು ನಾನು ತೆಗೆದುಕೊಳ್ಳುತ್ತಿರುವ ಕಠಿಣ ನಿರ್ಧಾರ. ಆದರೂ ಈ ನಿರ್ಧಾರ ನನ್ನೊಟ್ಟಿಗೆ ನಿಂತ ನನ್ನ ಅಭಿಮಾನಿಗಳು ಹಾಗು ಗೆಳೆಯರ ಸಲುವಾಗಿ ಕೈಗೊಳ್ಳುತ್ತಿದ್ದೇನೆ. ನಾನು ಯಾವುದೇ ರೀತಿ ನನ್ನ ಕ್ರಮಗಳಲ್ಲಿ ಅವರಿಗೆ ನೋವುಂಟು ಮಾಡಲು ಇಚ್ಛಿಸುವುದಿಲ್ಲ…
ತುಂಬು ಪ್ರೀತಿಯಿಂದ
ಕಿಚ್ಚ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.