ಮೂಗಿನೊಳಗೆ ಹಾವು!


Team Udayavani, May 10, 2018, 6:00 AM IST

4.jpg

ಹವ್ಯಾಸಗಳು ಕೆಲವೊಮ್ಮೆ ತುಂಬಾ ವಿಚಿತ್ರ ಅನ್ನಿಸುತ್ತವೆ. ಹಾವು ಹಿಡಿದು ಪರರಿಗೆ ಉಪಕಾರ ಮಾಡುವುದು ಕೆಲವರ ಹವ್ಯಾಸವಾದರೆ ಇಲ್ಲೊಬ್ಬರು ಹಿಡಿದ ಹಾವಿನ ತಲೆಯನ್ನು ಮೂಗಿನೊಳಗೆ ತೂರಿಸಿ ಬಾಯಿಯ ಮೂಲಕ ಹೊರಗೆಳೆದು ತೋರಿಸಿ ಜನರಲ್ಲಿ ಬೆರಗು ಮೂಡಿಸುತ್ತಿದ್ದಾರೆ. 

ಹಾವನ್ನು ಮುಗು, ಬಾಯಿಯಿಂದ ತೂರಿಸುವ ಈ ಹುಚ್ಚು ಸಾಹಸಿ ಬೇರೆ ಯಾವುದೋ ದೇಶದವರಲ್ಲ, ಭಾರತದವರೇ. ಅದಕ್ಕೂ ಮಿಗಿಲಾಗಿ ಚೆನ್ನೈ ನಿವಾಸಿ. ಅವರ ಹೆಸರು ಮನು. ಅವರಿಗೆ ಮೂವತ್ತಾರರ ಹರೆಯ. ಪ್ರೌಢಶಾಲೆಯಲ್ಲಿ ಎಂಟನೆಯ ತರಗತಿ ವಿದ್ಯಾರ್ಥಿಯಾಗಿರುವಾಗ ಅವರು ಮೂಗಿನ ಹೊಳ್ಳೆಯೊಳಗೆ ಚಾಕು ಮತ್ತು ಎರೇಸರ್‌ ಸೇರಿಸಿ ಬಾಯಿಯ ಮೂಲಕ ಹೊರಗೆಳೆಯುವ ಪ್ರಾಣಾಂತಿಕ ಸಾಹಸವನ್ನು ಪ್ರದರ್ಶಿಸಿ ಸಹಪಾಠಿಗಳನ್ನು ಬೆಚ್ಚಿಬೀಳಿಸುತ್ತಿದ್ದರು! 

ಈ ಸಾಹಸಕ್ಕೆ ಪ್ರೇರಣೆ
13 ವಯಸ್ಸಿನಲ್ಲಿ ಅವರಿಗೆ ಯೋಗ ಗುರುವೊಬ್ಬರ ಪರಿಚಯವಾಯಿತು. ಅವರಲ್ಲಿ ಯೋಗಾಭ್ಯಾಸ ಮಾಡುವಾಗ ಗುರುಗಳಲ್ಲಿ ಒಂದು ವಿಶಿಷ್ಟವಾದ ಶಕ್ತಿಯನ್ನು ಮನಗಂಡರು. ಅಲ್ಲಿ ಯೋಗ ಕಲಿಯುತ್ತಿದ್ದ ಪ್ರತಿಯೊಬ್ಬ ಶಿಷ್ಯನೂ ಏನಾದರೊಂದು ವಿಶೇಷ ಸಾಹಸದ ಕೈಚಳಕವನ್ನು ಪ್ರದರ್ಶಿಸುತ್ತಿದ್ದರು. ಅವರ ಉತ್ತೇಜನದಿಂದಾಗಿ ಪ್ರತಿಯೊಬ್ಬರೂ ಒಂದೊಂದು ವಿಶೇಷ ಸಾಮರ್ಥ್ಯವನ್ನು ಸಿದ್ಧಿಸಿಕೊಂಡು ಜನಪ್ರಿಯರಾದರು. ತಾನೂ ಅಂತಹ ಒಂದು ಕಲೆಯನ್ನು ಕರಗತ ಮಾಡಿಕೊಳ್ಳಬೇಕೆಂಬ ಬಯಕೆ ಮನುವಿನ ಮನದಲ್ಲಿ ಮೂಡಿತು.

ಇದು ಮ್ಯಾಜಿಕ್‌ ಅಲ್ಲ, ಯೋಗಿಕ್‌!
ಅದರ ಫ‌ಲವಾಗಿ ಒಂದು ನೀರುಹಾವನ್ನು ಹಿಡಿದು ಸಲೀಸಾಗಿ ಮೂಗಿನ ಹೊಳ್ಳೆಯ ಮೂಲಕ ಗಂಟಲಿಗಿಳಿಸಿ ಜೀವಂತವಾಗಿ ಅದನ್ನು ಬಾಯಿಯಲ್ಲಿ ಹೊರಗೆಳೆದು ತುಂಬ ಹೊತ್ತು ಹಾಗೆಯೇ ಇರಿಸಿಕೊಂಡರು. ಯೋಗದ ಮೂಲಕ ಹಾವಿಗೆ ಹೊರಗೆ ಬರಲು ಬೇಕಾದಷ್ಟು ದಾರಿಯನ್ನು ಮೂಗಿನೊಳಗೆ ಸಡಿಲುಗೊಳಿಸಲು ತನಗೆ ಸಾಧ್ಯವಾಯಿತೆಂದು ಅವರು ಹೇಳುತ್ತಾರೆ. ಕೆಲವೊಮ್ಮೆ ಹಾವುಗಳು ಅವರಿಗೆ ಕಚ್ಚಿವೆಯಾದರೂ ವಿಷರಹಿತ ಹಾವುಗಳನ್ನು ಮಾತ್ರ ಈ ಪ್ರಯೋಗಕ್ಕೆ ಬಳಸಿಕೊಳ್ಳವುದರಿಂದ ಏನೂ ತೊಂದರೆಯಾಗಿರಲಿಲ್ಲ. 

ಒಮ್ಮೊಮ್ಮೆ ಅವರು ಮೂಗಿನ ಒಂದು ಹೊಳ್ಳೆಗೆ ಮರದ ಮೇಲಿರುವ ನೀಳವಾದ ವಿಷರಹಿತ ಮರಹಾವನ್ನು, ಇನ್ನೊಂದು ಹೊಳ್ಳೆಯೊಳಗೆ ಹಸಿರುಹಾವನ್ನು ತೂರಿಸಿ ಹೊರಗೆಳೆಯುವ ಸಾಹಸವನ್ನೂ ತೋರಿಸುತ್ತಾರೆ. ನನ್ನ ಈ ಹವ್ಯಾಸದಿಂದಾಗಿ ತುಂಬ ಮಂದಿ ಅಭಿಮಾನಿಗಳನ್ನು ಗಳಿಸಿದ್ದೇನೆ, ಜನರಿಗೆ ಮನರಂಜನೆ ಕೊಟ್ಟ ಕಾರಣ ಅವರ ಪ್ರೀತಿ ಸಂಪಾದಿಸಿದ್ದೇನೆ ಎನ್ನುತ್ತಾರೆ ಸ್ನೇಕ್‌ ಮನು.

2ನೇ ದಾಖಲೆ ಹಾದಿಯಲ್ಲಿ…
ಅಂದ ಹಾಗೆ ಈಗಾಗಲೆ ಮನು ಬೇರೊಂದು ಸಾಧನೆ ಮೆರೆದು ಗಿನ್ನೆಸ್‌ ದಾಖಲೆಗೆ ಪಾತ್ರರಾಗಿದ್ದಾರೆ. 2004ರಲ್ಲಿ ಮನು ಹತ್ತು ಸೆಂಟಿಮೀಟರ್‌ ಉದ್ದದ ಇನ್ನೂರು ಎರೆಹುಳಗಳನ್ನು ಮೂವತ್ತು ಸೆಕೆಂಡ್‌ ಅವಧಿಯಲ್ಲಿ ಶ್ಯಾವಿಗೆಯ ಹಾಗೆ ಗುಳಮ್ಮನೆ ನುಂಗಿ ಗಿನ್ನೆಸ್‌ ದಾಖಲೆಗೆ ಸೇರಿದ್ದಾರೆ. ಸದ್ಯಕ್ಕೆ ವಿಷರಹಿತ ಹಾವುಗಳನ್ನು ಮೂಗಿನೊಳಗೆ ತೂರಿಸಿ ಹೊರಗೆ ತೆಗೆಯುತ್ತಿರುವ ಅವರು ಮುಂದೆ ನಾಗರಹಾವಿನಂಥ ವಿಷದ ಹಾವುಗಳನ್ನು ಕೂಡ ಯೋಗಬಲದಿಂದ ನಿಸ್ತೇಜಗೊಳಿಸಿ ಇದೇ ರೀತಿ ಹೊರಗೆಳೆಯುವ ಆತ್ಮವಿಶ್ವಾಸವನ್ನು ಹೊಂದಿದ್ದಾರೆ. “ನನ್ನದು ಏನಿದ್ದರೂ ಯೋಗಾಭ್ಯಾಸದ ಫ‌ಲ. ಯೋಗದ ಜ್ಞಾನವಿಲ್ಲದವರು ದಯವಿಟ್ಟು ಹಾವನ್ನು ತೂರಿಸಿಕೊಳ್ಳಲು ಹೋಗಬೇಡಿ. ಹಾವೂ ಸಾಯುತ್ತದೆ, ಸಾಹಸ ಮಾಡಲು ಹೋದವರಿಗೂ ಪ್ರಾಣಾಪಾಯ’ ಎಂದು ಅವರು ವಿನಂತಿಸಿಕೊಳ್ಳುತ್ತಾರೆ.

ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

Dinesh-Gundurao

Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್‌

Priyank-Kharghe

Inquiry Report: ಬಿಜೆಪಿಗೆ ’40 ಪರ್ಸೆಂಟ್‌’ ಕ್ಲೀನ್‌ಚಿಟ್‌ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್‌

nelamangala

Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

udupi

udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ

Dinesh-Gundurao

Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್‌

CN-Manjunath

Mysuru: ಕೋವಿಡ್‌ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್‌.ಮಂಜುನಾಥ್‌

Priyank-Kharghe

Inquiry Report: ಬಿಜೆಪಿಗೆ ’40 ಪರ್ಸೆಂಟ್‌’ ಕ್ಲೀನ್‌ಚಿಟ್‌ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್‌

4

Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್‌ ಪರಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.