ಜೀವಕ್ಕೆರವಾಯ್ತು ಡೇಟಿಂಗ್
Team Udayavani, May 10, 2018, 6:00 AM IST
ಜೈಪುರ: ಡೇಟಿಂಗ್ ಆ್ಯಪ್ಲಿಕೇಶನ್ ಜೈಪುರದ ಯುವಕನೊಬ್ಬನ ಜೀವಕ್ಕೆ ಎರವಾದ ಘಟನೆ ನಡೆದಿದೆ. ದುಶ್ಶಂತ್ ಶರ್ಮಾ (27) ಎಂಬ ಯುವ ವ್ಯಾಪಾರಿಗೆ ಪ್ರಿಯಾ ಸೇಥ್ ಎಂಬ ಯುವತಿ ಡೇಟಿಂಗ್ ಆ್ಯಪ್ ಮೂಲಕ ಪರಿಚಯಗೊಂಡಿದ್ದಳು. ಬ್ಲಾಕ್‌ವೆುಲ್ ದಂಧೆ ನಡೆಸುತ್ತಿದ್ದ ಆಕೆ ದುಷ್ಯಂತ್‌ನನ್ನು ಅಪಹರಿಸಲು ತನ್ನ ಅಪಾರ್ಟ್‌ಮೆಂಟ್‌ಗೆ ಕರೆಸಿಕೊಂಡಿದ್ದಳು. ಈ ಸಂದರ್ಭದಲ್ಲಿ ಯುವಕ ದುಶ್ಶಂತ್ ಕೋಟ್ಯಧಿಪತಿ ಅಲ್ಲ ಎಂಬುದು ತಿಳಿದುಬರುತ್ತಿದ್ದಂತೆಯೇ, ಆತನ ತಂದೆಗೆ ಕರೆ ಮಾಡಿ 10 ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕಿದ್ದಳು.
ಆದರೆ ದುಷ್ಯಂತ್ ತಂದೆ 3 ಲಕ್ಷವನ್ನು ಪ್ರಿಯಾ ಸೇಥ್ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಿದ್ದಂತೆ, ಪ್ರಕರಣ ಹೊರಬರುವ ಭೀತಿಯಿಂದ ಯುವಕನನ್ನು ಪ್ರಿಯಾ ಮತ್ತು ಆಕೆಯ ಅನುಚರರು ಕೊಂದು ಹಾಕಿದ್ದಾರೆ. ಈ ಬಗ್ಗೆ ಯುವಕನ ತಂದೆ ನೀಡಿದ ದೂರು ಸ್ವೀಕರಿಸಿದ ಪೊಲೀಸರು ತನಿಖೆ ನಡೆಸಿ ಪ್ರಿಯಾ, ಆಕೆಗೆ ಸಹಾಯ ಮಾಡಿದ ದೀಕ್ಷಂತ್ ಕಮ್ರಾ ಮತ್ತು ಲಕ್ಷ್ಯ ವಾಲಿಯಾರನ್ನು ಪೊಲೀಸರು ಬಂಧಿಸಿದ್ದಾರೆ.
ಅಂದ ಹಾಗೆ ಇದೇ ಯುವತಿ ಹಿಂದೊಮ್ಮೆ ಉದ್ಯಮಿ ವಿರುದ್ಧ ಸುಳ್ಳು ಅತ್ಯಾಚಾರ ಕೇಸು ದಾಖಲಿಸಿದ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದಳು. ದುಷ್ಯಂತ್ ಜೊತೆಗೆ ಕಳೆದ ಮೂರು ತಿಂಗಳ ಹಿಂದೆ ಪರಿಚಯವಾಗಿತ್ತು. ಅಂದಿನಿಂದಲೂ ದುಷ್ಯಂತ್ ಜತೆ ಮಾತುಕತೆ ನಡೆಸಿದ್ದಳು. ತಾನು 25 ಕೋಟಿ ರೂ. ಕಂಪನಿಯ ಒಡೆಯ ಎಂದು ದುಷ್ಯಂತ್ ಪರಿಚಯಿಸಿಕೊಂಡಿದ್ದ. ಅಲ್ಲದೆ ತನ್ನ ಹೆಸರನ್ನು ವಿವಾನ್ ಕೊಹ್ಲಿ ಎಂದೂ ಹೇಳಿಕೊಂಡಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
MUST WATCH
ಹೊಸ ಸೇರ್ಪಡೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.