ನಂಬರ್ ವನ್ ಅಲಿಯಾ
Team Udayavani, May 11, 2018, 7:20 AM IST
ಚಿತ್ರರಂಗದಲ್ಲಿ ಬಹುಕಾಲ ಉಳಿಯಬೇಕಾದರೆ ಚಿತ್ರಗಳ ಆಯ್ಕೆಯಲ್ಲಿ ಜಾಣತನ ತೋರಿಸುವುದು ಅಗತ್ಯ ಎನ್ನುವುದನ್ನು ಆರಂಭದ ದಿನಗಳಲ್ಲಿಯೇ ಮನಗಂಡಾಕೆ ಅಲಿಯಾ ಭಟ್. ಜನಪ್ರಿಯತೆ ಮತ್ತು ಪ್ರಯೋಗಶೀಲತೆಯಲ್ಲಿ ಸಮತೋಲನವನ್ನು ಕಾಯ್ದುಕೊಂಡ ಕಾರಣವೇ ಅಲಿಯಾ ಇಂದು ಬಾಲಿವುಡ್‌ನ ಬಹು ಜನಪ್ರಿಯ ಮಾತ್ರವಲ್ಲದೆ ಪ್ರತಿಭಾವಂತ ನಟಿಯೆಂದು ಗುರುತಿಸಿಕೊಂಡಿದ್ದಾಳೆ.ಸಮಕಾಲೀನ ನಟಿಯರ ಪೈಕಿ ಅಲಿಯಾಳನ್ನು ಸರಿಗಟ್ಟುವವರು ಸದ್ಯಕ್ಕೆ ಯಾರೂ ಇಲ್ಲ.
ಚಿತ್ರದಿಂದ ಚಿತ್ರಕ್ಕೆ ಬೆಳೆಯುತ್ತಿರುವ ನಟಿ ಅಲಿಯಾ. ಅವಳ ಯಶಸ್ಸಿಗೆ ಇನ್ನೊಂದು ಕಾರಣವೂ ಇದೆ. ಅದೇನೆಂದರೆ, ಅಲಿಯಾ ನಟಿಸಿದ ಹೆಚ್ಚಿನ ಚಿತ್ರಗಳು ಹಿಟ್ ಆಗಿವೆ. ಇದರಲ್ಲಿ ಕೆಲವು ಪ್ರಯೋಗಾತ್ಮಕ ಪಾತ್ರಗಳೂ ಸೇರಿವೆ ಎನ್ನುವುದು ಗಮನಾರ್ಹ. ಉಡ್ತಾ ಪಂಜಾಬ್, ಹೈವೇ ಯಂತಹ ಚಿತ್ರಗಳು ಅಲಿಯಾಳನ್ನು ಭಿನ್ನ ನಟಿ ಎಂದು ಗುರುತಿಸಲು ಸಹಕಾರಿಯಾಗಿವೆ. ಇದೀಗ ಮೇಘನಾ ಗುಲ್ಜಾರ್ ನಿರ್ದೇಶಿಸುತ್ತಿರುವ ರಾಝಿ ಚಿತ್ರದಲ್ಲಿ ಅಲಿಯಾ ಇನ್ನೊಂದು ವಿಭಿನ್ನ ಪ್ರಯೋಗಕ್ಕೆ ತಯಾರಾಗಿದ್ದಾಳೆ. ಇದರ ಟೀಸರ್‌ನ್ನು ಈಗಾಗಲೇ ಲಕ್ಷಾಂತರ ಮಂದಿ ವೀಕ್ಷಿಸಿ ಅಲಿಯಾಳ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರದ ಬಾಕ್ಸಾಫೀಸ್ ಗಳಿಕೆಯೊಂದೇ ಅದರ ಯಶಸ್ಸಿನ ಮಾನದಂಡವಾಗಬಾರದು ಎನ್ನುವುದು ಅಲಿಯಾ ನಿಲುವು. ಕೆಲವು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸೋತಿದ್ದರೂ ಸಾಮಾಜಿಕವಾಗಿ ಪರಿಣಾಮ ಬೀರುತ್ತವೆ. ಒಟ್ಟಾರೆಯಾಗಿ ಚಿತ್ರ ಉಂಟು ಮಾಡಿರುವ ಗುಣಾತ್ಮಕ ಪರಿಣಾಮಗಳನ್ನು ಲೆಕ್ಕಕ್ಕೆ ಹಿಡಿದು ಅದರ ಯಶಸ್ಸು ಮತ್ತು ಸೋಲನ್ನು ನಿರ್ಧರಿಸಬೇಕೆನ್ನುವ ವಾದ ಮಂಡಿಸುತ್ತಾಳೆ ಅಲಿಯಾ. ಈ ಲೆಕ್ಕದಲ್ಲಿ ಮೊದಲ ಚಿತ್ರ ಸ್ಟೂಡೆಂಟ್ ಆಫ್ ದ ಇಯರ್‌ನಿಂದ ಹಿಡಿದು ಎಲ್ಲವೂ ಹಿಟ್ ಚಿತ್ರಗಳೇ ಎನ್ನುತ್ತಾಳೆ ಅಲಿಯಾ. ರಾಝಿಯ ಬೆನ್ನಿಗೆ ಕಳಂಕ್ ಎಂಬ ಇನ್ನೊಂದು ಭಾರೀ ಬಜೆಟ್‌ನ ಚಿತ್ರವೂ ಬರಲಿದೆ. ಈ ಎರಡು ಚಿತ್ರಗಳು ಹಿಟ್ ಆದರೆ ನಂಬರ್ ಒನ್ ಪಟ್ಟ ಅಲಿಯಾಇಇಳದ್ದಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rohit, Pant, Jaiswal, Gill: ರಣಜಿ ಪುನರಾಗಮನದಲ್ಲಿ ವೈಫಲ್ಯ ಕಂಡ ಟೀಂ ಇಂಡಿಯಾ ಸ್ಟಾರ್ಸ್
UV Fusion: ಸ್ವಾಮಿ ವಿವೇಕಾನಂದರ ಕನಸಿನ ರಾಷ್ಟ್ರನಿರ್ಮಾಣದಲ್ಲಿ ಯುವಜನತೆಯ ಪಾತ್ರ
Tumkur: ತುಮುಲ್ ಅಧ್ಯಕರಾಗಿ ಕೈ ಬೆಂಬಲಿತ ಅಭ್ಯರ್ಥಿ ಗೆಲುವು
Tollywood: ಹಾಲಿವುಡ್‌ಗೆ ಜೂ. ಎನ್‌ಟಿಆರ್ ಎಂಟ್ರಿ? ಖ್ಯಾತ ನಿರ್ದೇಶಕ ಹೇಳಿದ್ದೇನು?
Shiva Rajkumar: ಜ.26ಕ್ಕೆ ಶಿವಣ್ಣ ವಾಪಸ್: ಸ್ವಾಗತಕ್ಕೆ ಅದ್ಧೂರಿ ತಯಾರಿ