ಮನೆಯಾಕೆಯ ಉಳಿತಾಯದ ಖಾತೆ


Team Udayavani, May 11, 2018, 7:20 AM IST

9.jpg

ಗೃಹಿಣಿಯಾದವಳು ಮನೆಯಲ್ಲಿದ್ದುಕೊಂಡು ಸಂಸಾರವನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗಬೇಕಾದ ಗುರುತರ ಹೊಣೆಗಾರಿಕೆಯನ್ನು ಹೊತ್ತಿದ್ದಾಳೆ. ಅಂದಮಾತ್ರಕ್ಕೆ ಮನಸೋ ಇಚ್ಛೆ ಖರ್ಚು ಮಾಡುತ್ತ ಸಂಸಾರವನ್ನು ನಡೆಸುವುದು ಎಂಬರ್ಥವಲ್ಲ. ತಿಂಗಳ ವರಮಾನ ಎಷ್ಟೇ ಕಡಿಮೆಯಿದ್ದರೂ ಇದ್ದದ್ದರಲ್ಲಿ  ಸೂಕ್ಷ್ಮವಾಗಿ ಮನೆವಾರ್ತೆಯನ್ನು ತೂಗಿಸಿಕೊಂಡು ಹೋಗುವುದು ಮನೆಯೊಡತಿಯ ಜಾಣತನ. ಎಷ್ಟೇ ಬುದ್ಧಿವಂತೆಯಾದರೂ ಕೆಲವೊಂದು ಸೂಕ್ಷ್ಮಾತಿಸೂಕ್ಷ್ಮ ವಿಷಯಗಳನ್ನು ಗಮನಿಸುತ್ತ, ಮನೆಯ ಇತರ ಸದಸ್ಯರ ಅರಿವಿಗೆ ಬಾರದಂತೆ ಯಜಮಾನಿ¤ಯಾದವಳು ತನ್ನ ಕರ್ತವ್ಯವನ್ನು ಪಾಲಿಸಬೇಕು.

“ಬದುಕು ಒಂದು ಜಟಕಾಬಂಡಿ’. ವಿಧಿಯಾಟ ಏನು ಎಂದು ಯಾರಿಗೂ ಗೊತ್ತಿರುವುದಿಲ್ಲ. ಏರುಪೇರುಗಳು ಸಂಸಾರದಲ್ಲಿ ಸಂಭವಿಸುತ್ತವೆ. ಮುಂಜಾಗ್ರತೆಗೋಸ್ಕರ “ಭವಿಷ್ಯ ನಿಧಿ’ ಎಂದು ಸ್ವಲ್ಪವಾದರೂ ಹಣವನ್ನು ಉಳಿತಾಯ ಮಾಡಿಟ್ಟರೆ ಎಲ್ಲರಿಗೂ ಉಪಯೋಗ. ಹಣವನ್ನು ಉಳಿಸುವುದು ಹೇಗೆ? ಎಂಬ ಪ್ರಶ್ನೆಗೆ ಇಲ್ಲಿ ಕೆಲವಾರು ಸಲಹೆಗಳನ್ನು ಕೊಟ್ಟಿದೆ. ಸಾಧ್ಯವಾದರೆ ಕೆಲವೊಂದಾದರೂ ಉಪಯೋಗಕ್ಕೆ ಬರಬಹುದು. 

. ಮನೆಯ ಖರ್ಚಿಗೆಂದು ಕೊಟ್ಟ ಹಣದಲ್ಲಿ ಪ್ರತಿ ತಿಂಗಳೂ ಕಟ್ಟಲೇಬೇಕಾದ ಕೆಲವೊಂದು ಬಾಬ್ತುಗಳಿಗೆ (ವಿದ್ಯುತ್‌, ನೀರು, ಫೋನ್‌) ಹಣವನ್ನು ಮೊದಲು ತೆಗೆದಿಟ್ಟು ನಂತರ ಉಳಿದ ವಿಷಯಗಳತ್ತ ಗಮನಹರಿಸಿ ಖರ್ಚು ಮಾಡಬೇಕು.

.ಕೈಯಲ್ಲಿರುವ ಹಣದಲ್ಲಿ ನೂರಿನ್ನೂರು ರೂಪಾಯಿಗಳನ್ನಾದರೂ ಉಳಿಸಿ ಬ್ಯಾಂಕಿನಲ್ಲಿ ಉಳಿತಾಯ ಖಾತೆಗೆ ಜಮಾ ಮಾಡಬೇಕು.

.ಮಕ್ಕಳು ಬಯಸುವ ವಸ್ತುಗಳನ್ನೆಲ್ಲಾ ತೆಗೆದುಕೊಡದೆ ಅವರಿಗೆ ಅದು ಅಗತ್ಯವಿದೆಯೋ ಇಲ್ಲವೋ ಎಂದು ಪರಿಶೀಲಿಸಿ ನಂತರವೇ ತೆಗೆದುಕೊಡಬೇಕು. “ಕೊಳ್ಳುಬಾಕತನ’ಕ್ಕೆ ಕಡಿವಾಣ ಹಾಕಿದರೆ ಮಕ್ಕಳಿಗೂ ಸ್ವಲ್ಪವಾದರೂ ದುಡ್ಡಿನ ಬೆಲೆ ತಿಳಿಯುತ್ತದೆ.

.ಮನೆಗೆ ಬೇಕಾದ ಸಾಮಾನುಗಳನ್ನು ಖರೀದಿಸುವಾಗ ಯಾವ ಅಂಗಡಿಯಲ್ಲಿ ಬೆಲೆ ಕಮ್ಮಿಯಿರುತ್ತದೋ ಅಲ್ಲಿ ಖರೀದಿಸಬೇಕು. ತಿಂಗಳಿಗೆ ಒಮ್ಮೆಯೇ ಸಗಟು ವ್ಯಾಪಾರದ ಅಂಗಡಿಗಳಲ್ಲಿ ಖರೀದಿಸಿದರೆ ಹೆಚ್ಚಿನ ಹಣವನ್ನು ಉಳಿತಾಯ ಮಾಡಬಹುದು.

.ವಿದ್ಯುತ್‌, ನೀರು, ಫೋನಿನ ಬಿಲ್ಲನ್ನು ಉಳಿಸುವ ಚಾಕಚಕ್ಯತೆ ಗೃಹಿಣಿಯ ಕೈಯಲ್ಲೇ ಇರುತ್ತದೆ. ಆವಶ್ಯಕತೆಗಿಂತ ಹೆಚ್ಚಾಗಿ ನೀರು, ವಿದ್ಯುತ್‌ಗಳನ್ನು ಬಳಸದೆ, ಉಪಯೋಗಿಸಿದ ತಕ್ಷಣ ಎಲ್ಲವನ್ನೂ ಸ್ಥಗಿತಗೊಳಿಸುವ ಅಭ್ಯಾಸವನ್ನು ಮಕ್ಕಳಿಗೆ ಎಳವೆಯಿಂದಲೇ ಕಲಿಸಿಕೊಡುವುದು ಉತ್ತಮ.

.ಮನೆಗೆ ತಂದ ದಿನಸಿ ಸಾಮಾನುಗಳನ್ನು ಪೂರ್ತಿ ಖರ್ಚು ಮಾಡದೆ ಒಂದೊಂದು ಹಿಡಿಯಷ್ಟನ್ನಾದರೂ ತೆಗೆದಿಡುವುದು ಕ್ಷೇಮ. ಹೀಗೆ ಮಾಡಿದರೆ ಮುಂದೊಂದು ದಿನ ಅದು ಉಪಯೋಗಕ್ಕೆ ಬರುತ್ತದೆ.

.ಹತ್ತಿರದ ಸ್ಥಳಗಳಿಗೆ ಹೋಗುವಾಗ ಮನೆಯ ಸದಸ್ಯರೆಲ್ಲರೂ ಕಾಲ್ನಡಿಗೆಯಲ್ಲಿಯೇ ಹೋಗುವುದು ಸೂಕ್ತ. ಇದರಿಂದ ದೇಹಕ್ಕೂ ವ್ಯಾಯಾಮ ದೊರಕಿದಂತಾಗುತ್ತದೆ. ವಾಹನಗಳ ಅತಿಯಾದ ಬಳಕೆಯಿಂದ ಉಂಟಾಗುವ ಪರಿಸರ ಮಾಲಿನ್ಯಕ್ಕೂ ಕಡಿವಾಣ ಹಾಕಿದಂತಾಗುತ್ತದೆ. ಬಳಸಲೇಬೇಕಾದ ಅಗತ್ಯಬಂದರೆ ಮಕ್ಕಳಿಗೆ ಸೈಕಲ್‌ ಬಳಸಲು ಹೇಳಿ.

.ದಿನನಿತತ್ಯದ ಗೃಹಕೃತ್ಯಕ್ಕೆ ಮನೆಕೆಲಸದಾಳಿನ ಅಗತ್ಯ ಇದ್ದರೆ ಮಾತ್ರ ನೇಮಿಸಿಕೊಳ್ಳಿ. ಮಕ್ಕಳು ದೊಡ್ಡವರಾಗಿದ್ದರೆ ಅವರವರ ಕೋಣೆಯನ್ನು ಅವರೇ ಸ್ವತ್ಛಗೊಳಿಸಿಕೊಂಡರೆ ಕೆಲಸದವರನ್ನು ಇಟ್ಟುಕೊಳ್ಳಬಹುದಾದ ಪ್ರಮೇಯವೇ ಬರುವುದಿಲ್ಲ.

.ತರಕಾರಿಗಳನ್ನು ತುಂಬಾ ಒಮ್ಮೆಲೇ ಕೊಂಡುಕೊಂಡು ಫ್ರಿಡ್ಜ್ನೊಳಗೆ ತುರುಕಿಸಬೇಡಿ. ಇದರಿಂದ ವಿದ್ಯುತ್ತಿನ ಖರ್ಚೂ ಹೆಚ್ಚು. ಅಂಗಡಿ ಹತ್ತಿರವಿದ್ದರೆ ದಿನಾಲೂ ತಾಜಾ ತರಕಾರಿ, ಹಣ್ಣುಗಳನ್ನು ಕೊಂಡು ಉಪಯೋಗಿಸಿದರೆ ಆರೋಗ್ಯವೂ ವೃದ್ಧಿಯಾಗುತ್ತದೆ.

.ಮನೆಯ ಮುಂದೆ ಜಾಗವಿದ್ದರೆ ಮನೆಗೆ ಬೇಕಾದ ಅಲ್ಪಸ್ವಲ್ಪ ತರಕಾರಿಗಳನ್ನು ಬೆಳೆದುಕೊಳ್ಳಬಹುದು. ಇತ್ತೀಚೆಗೆ ಪ್ರಸಿದ್ಧವಾಗುತ್ತಿರುವ “ಟೆರೇಸ್‌ ಗಾರ್ಡನ್‌’ ಬಗ್ಗೆ ಮಾಹಿತಿ ಪಡೆದು ಕೆಲವಾರು ತರಕಾರಿಗಳನ್ನು ನೀವೇ ಬೆಳೆಸಿಕೊಳ್ಳಬಹುದು. ತರಕಾರಿ ಸಿಪ್ಪೆ , ಹಣ್ಣಿನ ಸಿಪ್ಪೆಗಳನ್ನು ಉಪಯೋಗಿಸಿ ಗಿಡಗಳಿಗೆ ಬೇಕಾಗಿರುವ ಗೊಬ್ಬರವನ್ನೂ ತಯಾರಿಸಿಕೊಳ್ಳಬಹುದು. ಹೀಗೆ ಮಾಡುವುದರಿಂದ ನಗರಗಳಲ್ಲಿ ಸಮಸ್ಯೆಯಾಗುತ್ತಿರುವ ಕಸದ ಸಮಸ್ಯೆಗೂ ಒಂದು ಪರಿಹಾರ ದೊರಕಬಹುದು.

.ಕೆಲವು ತರಕಾರಿಗಳ ಸಿಪ್ಪೆ , ತಿರುಳುಗಳನ್ನು ಬಿಸಾಡದೆ ಅವುಗಳನ್ನು ಚೆನ್ನಾಗಿ ತೊಳೆದು ಅದನ್ನು ಅಡುಗೆಗೆ ಬಳಸಿಕೊಳ್ಳಬಹುದೆಂಬುದನ್ನು ಅರಿತಿರಬೇಕು.

ಪುಷ್ಪಾ ಎನ್‌.ಕೆ. ರಾವ್‌

ಟಾಪ್ ನ್ಯೂಸ್

1-sm

ODI;ಸ್ಪೋಟಕ ಶತಕ ಸಿಡಿಸಿದ ನಾಯಕಿ ಸ್ಮೃತಿ: ಟೀಮ್ ಇಂಡಿಯಾ ದಾಖಲೆ ಮೊತ್ತ

1-aaad

Lakshmi Hebbalkar ಕಾರು ಅಪಘಾ*ತ ಹಿಟ್ & ರನ್ ಪ್ರಕರಣ: ಬೆಳಗಾವಿ ಎಸ್ ಪಿ

11-betel-leaf-1

Betel leaf: ಮೈಸೂರ ಚಿಗುರೆಲೆ

10-bike

ಬೈಕ್ ನಲ್ಲಿ ಚಲಿಸುತ್ತಿದ್ದ ವೇಳೆ ತುಂಡಾಗಿ ಬಿದ್ದ ಕೊಂಬೆ;ಸವಾರರಿಗೆ ಗಂಭೀರ ಗಾಯ, ಮೂಳೆ ಮುರಿತ

ಐದನೇ ಬಾರಿ ಜತೆಯಾದ ಧನುಷ್‌ – ವೆಟ್ರಿಮಾರನ್; ತೆರೆಮೇಲೆ ʼಕೆಜಿಎಫ್‌ʼ ರಿಯಲ್‌ ಕಹಾನಿ?

ಐದನೇ ಬಾರಿ ಜತೆಯಾದ ಧನುಷ್‌ – ವೆಟ್ರಿಮಾರನ್; ತೆರೆಮೇಲೆ ʼಕೆಜಿಎಫ್‌ʼ ರಿಯಲ್‌ ಕಹಾನಿ?

rasaleele

Belagavi: ಇಬ್ಬರು ಅಪ್ರಾಪ್ತೆಯರ ಮೇಲೆ ಸಾಮೂಹಿಕ ಅತ್ಯಾಚಾ*ರ

ಶಿವಮೊಗ್ಗದಲ್ಲಿ ಹೆಚ್ಚಾಯ್ತು ಪುಂಡರ ಹಾವಳಿ… ಕಚೋರಿ ವ್ಯಾಪಾರಿಗೆ ಚಾಕು ಇರಿದು ಪರಾರಿ

ಶಿವಮೊಗ್ಗದಲ್ಲಿ ಹೆಚ್ಚಾಯ್ತು ಪುಂಡರ ಹಾವಳಿ… ಕಚೋರಿ ವ್ಯಾಪಾರಿಗೆ ಚಾಕು ಇರಿದು ಪರಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

1-sm

ODI;ಸ್ಪೋಟಕ ಶತಕ ಸಿಡಿಸಿದ ನಾಯಕಿ ಸ್ಮೃತಿ: ಟೀಮ್ ಇಂಡಿಯಾ ದಾಖಲೆ ಮೊತ್ತ

13-uv-fusion

Bharatanatyam: ನಾಟ್ಯಗಳ ರಾಣಿ ಭರತನಾಟ್ಯ

12-uv-fusion

Education: ಮಾನವನ ಸುಸ್ಥಿರತೆಗೆ ಶಿಕ್ಷಣ ಮೂಲ ಮಂತ್ರ

Sandalwood: ಜ.17ಕ್ಕೆ ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ

Sandalwood: ಜ.17ಕ್ಕೆ ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ

1-aaad

Lakshmi Hebbalkar ಕಾರು ಅಪಘಾ*ತ ಹಿಟ್ & ರನ್ ಪ್ರಕರಣ: ಬೆಳಗಾವಿ ಎಸ್ ಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.