ಬ್ರಾಂಡ್‌ ಅಂಬಾಸಿಡರ್


Team Udayavani, May 11, 2018, 7:20 AM IST

19.jpg

 “ಪೊಲೀಸ್‌ ಯೂನಿಫಾರಂನ ಪರ್ಮನೆಂಟ್‌ ಆಗಿ ಮನೆಯಲ್ಲಿಟ್ಟುಕೊಂಡಿದ್ದೇನೆ …’
– ಒಂದೆರಡು ವರ್ಷಗಳ ಹಿಂದೆ ನಡೆದ “ರಿಯಲ್‌ ಪೊಲೀಸ್‌’ ಪತ್ರಿಕಾಗೋಷ್ಠಿಯಲ್ಲಿ ಸಾಯಿಕುಮಾರ್‌ ಹೀಗೆ ಹೇಳಿ ನಕ್ಕಿದ್ದರು. ಪೊಲೀಸ್‌ ಎಂದರೆ ಸಾಯಿಕುಮಾರ್‌, ಸಾಯಿಕುಮಾರ್‌ ಎಂದರೆ ಪೊಲೀಸ್‌ ಎನ್ನುವಷ್ಟರ ಮಟ್ಟಿಗೆ ಅವರು ಆ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಚಿತ್ರರಂಗದ ಮಂದಿ ಕೂಡಾ ಅವರಿಗೆ ಬೇರೆ ಪಾತ್ರಗಳನ್ನು ನೀಡುವ ಬಗ್ಗೆ ಚಿಂತಿಸಲೇ ಇಲ್ಲ. ಸಿನಿಮಾದಲ್ಲೊಂದು ಖಡಕ್‌ ಪೊಲೀಸ್‌ ಪಾತ್ರವಿದೆ ಎಂದರೆ ಅದಕ್ಕೆ ಸಾಯಿಕುಮಾರ್‌ ಇದ್ದಾರೆ ಬಿಡಿ ಎನ್ನುವ ಮಟ್ಟಕ್ಕೆ ಅವರನ್ನು ಪೊಲೀಸ್‌ ಪಾತ್ರಕ್ಕೆ ಬ್ರಾಂಡ್‌ ಮಾಡಿಬಿಟ್ಟಿದ್ದರು. ಅದು ಸಾಯಿಕುಮಾರ್‌ಗೂ ಗೊತ್ತಾಗಿತ್ತು. ತಾನು ಪೊಲೀಸ್‌ ಪಾತ್ರಕ್ಕೆ ಬ್ರಾಂಡ್‌ ಆಗಿದ್ದೇನೆ ಮತ್ತು ಆ ತರಹದ ಪಾತ್ರಗಳೇ ತನಗೆ ಬರುತ್ತವೆ ಎಂಬುದನ್ನು ಸಾಯಿಕುಮಾರ್‌ ಕೂಡಾ ಒಪ್ಪಿಕೊಂಡಿದ್ದರು. ಬಂದ ಪಾತ್ರಗಳಲ್ಲೇ ಒಳ್ಳೆಯ ಅಂಶಗಳಿರುವ, ಹೊಸತನದಿಂದ ಕೂಡಿರುವ ಪೊಲೀಸ್‌ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಸಾಯಿಕುಮಾರ್‌. ಕಳೆದ ವಾರ ತೆರೆಕಂಡ “ಕಿಚ್ಚು’, ತಿಂಗಳ ಹಿಂದೆ ಬಿಡುಗಡೆಯಾದ “ಹುಚ್ಚ-2′, ಅದಕ್ಕೂ ಮುನ್ನ ಬಂದ “ಪಟಾಕಿ’, “ಮಡಮಕ್ಕಿ’, “ರಿಯಲ್‌ ಪೊಲೀಸ್‌’ ಚಿತ್ರಗಳಲ್ಲೂ ಸಾಯಿಕುಮಾರ್‌ ಪೊಲೀಸ್‌. 

ಚಿತ್ರರಂಗದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದು, ಇವತ್ತಿಗೂ ಮುಂದುವರೆಯುತ್ತಿರುವ ಒಂದು ಅಂಶವೆಂದರೆ ಅದು ಪಾತ್ರವೊಂದಕ್ಕೆ ಬ್ರಾಂಡ್‌ ಮಾಡಿ ಬಿಡೋದು. ಯಾವುದಾದರೂ ಒಂದು ಸಿನಿಮಾದಲ್ಲಿ ಒಬ್ಬ ನಟನ ಪಾತ್ರ ಕ್ಲಿಕ್‌ ಆದರೆ, ಸಿನಿಮಾಕ್ಕಿಂತ ಹೆಚ್ಚಾಗಿ ಜನ ಆ ಪಾತ್ರದ ಬಗ್ಗೆ ಮಾತನಾಡಿದರೆ, ಮೆಚ್ಚಿಕೊಂಡರೆ ಮುಂದೆ ಆತನಿಗೆ ಅಂತಹುದೇ ಪಾತ್ರ ಹುಡುಕಿಕೊಂಡು ಬರುತ್ತವೆ. ಅದು ಯಾವ ಮಟ್ಟಿಗೆ ಎಂದರೆ ಆತನಿಗೆ ಬೇರೆ ಪಾತ್ರಗಳ ಆಯ್ಕೆಗೆ ಅವಕಾಶವೇ ಇಲ್ಲದಂತೆ. ಇದೇ ಕಾರಣದಿಂದ ಚಿತ್ರರಂಗದಲ್ಲಿ ಸಾಕಷ್ಟು ಮಂದಿ ಒಂದೊಂದು ಪಾತ್ರಗಳಿಗೆ ಬ್ರಾಂಡ್‌ ಆಗಿದ್ದಾರೆ ಮತ್ತು ಆಗುತ್ತಿದ್ದಾರೆ. ಕೆಲವರು ಅನಿವಾರ್ಯವಾಗಿ ಬ್ರಾಂಡ್‌ ಆದರೆ, ಇನ್ನು ಕೆಲವರು ಜನ ಇಷ್ಟಪಟ್ಟ ಪಾತ್ರಗಳಲ್ಲೇ ಕಾಣಿಸಿಕೊಂಡು ಬ್ರಾಂಡ್‌ ಆಗುತ್ತಿದ್ದಾರೆ. ಇತ್ತೀಚೆಗೆ ಕೆಲವು ಕಲಾವಿದರನ್ನು ನೋಡಿದಾಗ, ಬಹುತೇಕ ಸಿನಿಮಾಗಳಲ್ಲಿ ಅವರು ಒಂದೇ ರೀತಿಯ ಮತ್ತು ಅದೇ ಶೇಡ್‌ನ‌ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ಮತ್ತದೇ ಕಾರಣ ನೀಡಬೇಕಾಗುತ್ತದೆ. ಪಾತ್ರವನ್ನು ತೂಗಿಸಿಕೊಂಡು ಹೋಗುವ ಅವರ ಸಾಮರ್ಥ್ಯದಿಂದಾಗಿ ಅವರ ಪಾತ್ರಗಳು ರಿಪೀಟ್‌ ಆಗುತ್ತಿರುತ್ತವೆೆ. ನೀವೇ ಸೂಕ್ಷ್ಮವಾಗಿ ಗಮನಿಸಿದರೆ ಇತ್ತೀಚೆಗೆ ಸುಚೇಂದ್ರ ಪ್ರಸಾದ್‌, ತಬಲಾ ನಾಣಿ, ಚಿಕ್ಕಣ್ಣ, ಪದ್ಮಜಾ ರಾವ್‌, ಬ್ಯಾಂಕ್‌ ಜನಾರ್ದನ್‌, ಮೂಗು ಸುರೇಶ್‌, ಮೋಹನ್‌ ಜುನೇಜಾ ಸೇರಿದಂತೆ ಅನೇಕ ನಟರ ಪಾತ್ರಗಳು ಬಹುತೇಕ ಸಿನಿಮಾಗಳಲ್ಲಿ ರಿಪೀಟ್‌ ಆಗುತ್ತಿರುತ್ತವೆ. ಅದೇ ಕಾರಣದಿಂದ ಸಿನಿಮಾಗಳಲ್ಲಿ ಅವರ ಪಾತ್ರ ಪರಿಚಯವಾಗುತ್ತಿದ್ದಂತೆ ಈ ಹಿಂದಿನ ಸಿನಿಮಾಗಳಲ್ಲಿ ಅವರು ಮಾಡಿರುವ ಪಾತ್ರಗಳು ಕಣ್ಣ ಮುಂದೆ ಬರುತ್ತವೆ.

 ಸುಚೇಂದ್ರ ಪ್ರಸಾದ್‌ ಅವರು ಇತ್ತೀಚಿನ ಸಿನಿಮಾಗಳಲ್ಲಿ ನಕ್ಸಲ್‌ ಮುಖಂಡ, ಬಡವರ ಪರ ಕಾಳಜಿಯುಳ್ಳ ಹೋರಾಟಗಾರ, ಖಡಕ್‌ ಅಧಿಕಾರಿ … ಈ ತರಹದ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಸಿಗುತ್ತಾರೆ. ಕಳೆದ ವರ್ಷದ ಕೊನೆಯಲ್ಲಿ ತೆರೆಕಂಡ “ಹೊಂಬಣ್ಣ’ದಲ್ಲಿ ಸುಚೇಂದ್ರ ಪ್ರಸಾದ್‌ ಅವರು ಎಡಪಂಥೀಯ ನಿಲುವಿನ ಮೃದು ಹೋರಾಟಗಾರ. ಗನ್‌ ಹಿಡಿಯುವ ಬದಲು ಹೋರಾಟ ಮೂಲಕ ಸಮಸ್ಯೆ ಬಗೆಹರಿಸಬೇಕೆಂಬ ಪಾತ್ರ ಅವರದು. ಈ ವರ್ಷಾರಂಭದಲ್ಲಿ ಬಿಡುಗಡೆಯಾದ “ನಾನು ಲವರ್‌ ಆಫ್ ಜಾನು’ ಸಿನಿಮಾದಲ್ಲಿ ಸುಚೇಂದ್ರ ಪ್ರಸಾದ್‌ ನಕ್ಸಲ್‌ ಮುಖಂಡ. ಬಂದೂಕಿನಿಂದ ಭಯಪಡಿಸಬೇಕು ಎಂಬ ಸಿದ್ಧಾಂತವಿರುವ ವ್ಯಕ್ತಿ. ಇನ್ನು, ಮೊನ್ನೆ ಮೊನ್ನೆ ತೆರೆಕಂಡ “ಕಿಚ್ಚು’ ಸಿನಿಮಾದಲ್ಲೂ ಸುಚೇಂದ್ರ ಪ್ರಸಾದ್‌ ನಕ್ಸಲ್‌ ನಾಯಕ. ಇಲ್ಲೂ ಬಂದೂಕುನಿಂದ ಯಶಸ್ಸು ಸಾಧ್ಯ, ನಮ್ಮ ಹೋರಾಟ, ನಮ್ಮ ಹಕ್ಕು ಎನ್ನುವಂತಹ ಪಾತ್ರ ಮಾಡಿದ್ದಾರೆ. ಇತ್ತೀಚೆಗೆ ಅವರು ಬಹುತೇಕ ಆ ತರಹದ ಪಾತ್ರಗಳಲ್ಲೇ ಪ್ರೇಕ್ಷಕರಿಗೆ ಎದುರಾಗುತ್ತಿದ್ದಾರೆ. ಹಾಗಂತ ಅವರು ಪಾತ್ರಕ್ಕೆ ಮೋಸ ಮಾಡಿಲ್ಲ. ಸಿಗುತ್ತಿರುವ ಪ್ರತಿ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಸುಚೇಂದ್ರ ಪ್ರಸಾದ್‌ ಪ್ರೇಕ್ಷಕರ ಹಾಗೂ ನಿರ್ದೇಶಕರ ಮನಗೆಲ್ಲುತ್ತಿದ್ದಾರೆ. “ಕಿಚ್ಚು’ ಚಿತ್ರದ ಪಾತ್ರದ ಜೊತೆಗೆ ಹಾಡೊಂದರಲ್ಲೂ ಅವರು ಮಿಂಚಿದ್ದಾರೆ. 

ಇದು ಸುಚೇಂದ್ರ ಪ್ರಸಾದ್‌ ಅವರ ಪಾತ್ರ ಪೋಷಣೆ ವಿಷಯವಾದರೆ, ಹಾಸ್ಯನಟ ತಬಲ ನಾಣಿ ಕೂಡಾ ಇತ್ತೀಚೆಗೆ ಸೋದರ ಮಾವ ಆಗಿ ತುಂಬಾನೇ ನಗಿಸುತ್ತಿದ್ದಾರೆ. ನೀವೇ ಸೂಕ್ಷ್ಮವಾಗಿ ಗಮನಿಸಿದರೆ ತಬಲ ನಾಣಿ ಇತ್ತೀಚೆಗೆ ಹೆಚ್ಚಾಗಿ ನಾಯಕನ ಸೋದರ ಮಾವನ ಪಾತ್ರಗಳಲ್ಲಿ ಕಾಣಸಿಗುತ್ತಾರೆ. ನಾಯಕ ತುಂಟಾಟದಲ್ಲಿ ಭಾಗಿಯಾಗುವ ಅಥವಾ ಅಳಿಯನಿಗೆ ಹೆಣ್ಣು ಹುಡುಕುವಂತಹ ಸೋದರ ಮಾವನಾಗಿ ತಬಲ ನಾಣಿ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಶಿವರಾಜಕುಮಾರ್‌ ಅವರ “ಭಜರಂಗಿ’, “ವಿಕ್ಟರಿ’, ಮೊನ್ನೆ ಮೊನ್ನೆ ತೆರೆಕಂಡ “ಭೂತಯ್ಯನ ಮೊಮ್ಮಗ ಅಯ್ಯು’ ಮುಂದೆ ತೆರೆಕಾಣಲಿರುವ “ರ್‍ಯಾಂಬೋ-2′, “ರಾಜ ಲವ್ಸ್‌ ರಾಧೆ’ … ಹೀಗೆ ಲೆಕ್ಕ ಹಾಕುತ್ತಾ ಹೋದರೆ ತಬಲ ನಾಣಿ ಸೋದರ ಮಾವನಾಗಿ ನಟಿಸಿರುವ ಸಾಕಷ್ಟು ಸಿನಿಮಾಗಳು ಸಿಗುತ್ತವೆ. ಹಾಸ್ಯ ತುಂಬಿರುವ ಸೋದರ ಮಾವನ ಪಾತ್ರಗಳಲ್ಲಿ ತಬಲ ನಾಣಿ ಹೆಚ್ಚು ಇಷ್ಟವಾಗುತ್ತಾರೆಂಬ ಕಾರಣಕ್ಕೋ ಏನೋ, ನಿರ್ದೇಶಕರು ಅವರಿಗೆ ಆ ತರಹದ್ದೇ ಪಾತ್ರ ನೀಡುತ್ತಿದ್ದಾರೆ. ತಬಲ ನಾಣಿ ಕೂಡಾ ತಮಗೆ ಸಿಗುತ್ತಿರುವ ಪಾತ್ರಗಳ ಬಗ್ಗೆ ಖುಷಿಯಾಗಿದ್ದಾರೆ. “ನಿರ್ದೇಶಕರು ನನ್ನನ್ನು ನಾಯಕನ ಚಿಕ್ಕಪ್ಪ, ಸೋದರ ಮಾವನ ಪಾತ್ರದಲ್ಲಿ ನೋಡಲು ಇಷ್ಟಪಡುತ್ತಾರೆ. ಅದಕ್ಕಿಂತ ಹೆಚ್ಚಾಗಿ ನಾಯಕನ ಫ್ರೆಂಡ್‌ ಆಗಿ ನಟಿಸುವ ವಯಸ್ಸು ನನ್ನದಲ್ಲ. ತಂದೆಯಾಗಿ ನಟಿಸುವಷ್ಟು ವಯಸ್ಸು ಆಗಿಲ್ಲ. ಹಾಗಾಗಿ, ಅದರ ಮಧ್ಯೆ ಇರುವ ಪಾತ್ರಗಳು ನನಗೆ ಸಿಗುತ್ತಿವೆ. ಸಿಕ್ಕ ಪಾತ್ರಗಳಲ್ಲೇ ಭಿನ್ನವಾಗಿ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ’ ಎನ್ನುವುದು ತಬಲ ನಾಣಿ ಮಾತು. 

 ಇನ್ನು, ನಾಯಕನಿಗೊಬ್ಬ ತುಂಬಾನೇ ಕಾಮಿಡಿ ಮಾಡುವ ಫ್ರೆಂಡ್‌ ಪಾತ್ರವಿದೆ ಎಂದರೆ ಸದ್ಯ ನಿರ್ದೇಶಕರ ತಲೆಗೆ ಬರೋದು ಚಿಕ್ಕಣ್ಣ. ಚಿಕ್ಕಣ್ಣ ಸಿನಿಮಾ ಕೆರಿಯರ್‌ ಆರಂಭಿಸಿದ್ದು ಕೂಡಾ ನಾಯಕನ ಫ್ರೆಂಡ್‌ ಮಾತ್ರ ಮೂಲಕ. “ಕಿರಾತಕ’ ಚಿತ್ರದಲ್ಲಿ ಯಶ್‌ ಅವರ ಫ್ರೆಂಡ್‌ ಆಗಿ ನಟಿಸುವ ಮೂಲಕ ಸಿನಿಕೆರಿಯರ್‌ ಆರಂಭಿಸಿದವರು ಚಿಕ್ಕಣ್ಣ. ಆ ನಂತರ ನಟಿಸಿದ ಬಹುತೇಕ ಸಿನಿಮಾಗಳಲ್ಲಿ ಅವರು ಮಾಡಿದ್ದು ನಾಯಕನ ಫ್ರೆಂಡ್‌ ಪಾತ್ರವೇ. ಹೇಗೆ ಮಾಡಿದರೂ ಅದು ಕಾಮಿಡಿಯೇ. ಆದರೆ, ನಿರ್ದೇಶಕರು ಮಾತ್ರ ನಾಯಕನ ಫ್ರೆಂಡ್‌ ಆಗಿಸಿಯೇ ಚಿಕ್ಕಣ್ಣನಿಂದ ಕಾಮಿಡಿ ಮಾಡಿಸಿದ್ದಾರೆ. ಅವರ ಸಿನಿಮಾ ಪಟ್ಟಿಯಲ್ಲಿ  ಶೇ 80ರಷ್ಟು ನಾಯಕನ ಫ್ರೆಂಡ್‌ ಪಾತ್ರವೇ ಇವೆ.  ಉಳಿದಂತೆ ಗಿರಿ, ವಿಶ್ವ ಸೇರಿದಂತೆ ಅನೇಕ ಕಲಾವಿದರು ಫ್ರೆಂಡ್‌ ಪಾತ್ರಗಳಲ್ಲೇ ಗಮನ ಸೆಳೆಯುತ್ತಿದ್ದಾರೆ. 

ಹಿರಿಯ ನಟ ಬ್ಯಾಂಕ್‌ ಜನಾರ್ದನ್‌ ಇಲ್ಲಿವರೆಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಪಾತ್ರಗಳು ಕೂಡಾ ಬಹುತೇಕ ಅಕ್ಕಪಕ್ಕವೇ ಸುತ್ತಿವೆ. ಮಾರ್ವಾಡಿ, ಪೊಲೀಸ್‌, ಬ್ಯಾಂಕ್‌ ಮ್ಯಾನೇಜರ್‌ … ಈ ತರಹದ ಪಾತ್ರಗಳು ಬ್ಯಾಂಕ್‌ ಜನಾರ್ದನ್‌ ಅವರಿಗೆ ಹೆಚ್ಚು ಸಿಕ್ಕಿವೆ. ನಟರಾದ ಮೂಗು ಸುರೇಶ್‌ ಕೂಡಾ ಪೊಲೀಸ್‌ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡು ಪ್ರೇಕ್ಷಕರನ್ನು ನಗಿಸಿದ್ದಾರೆ. ಉಳಿದಂತೆ ಭಿಕ್ಷುಕನ ಪಾತ್ರವೆಂದರೆ ಬಿರಾದಾರ್‌, ಕುಡುಕ ತಂದೆಯ ಪಾತ್ರವಾದರೆ ಮೋಹನ್‌ ಜುನೇಜಾ, ಸೆಂಟಿಮೆಂಟ್‌ ತಾಯಿಯಾದರೆ ಪದ್ಮಜಾ ರಾವ್‌, ಸಂಗೀತಾ, ಚಿತ್ರಾ ಶೆಣೈ, ರೌಡಿ ಪಾತ್ರಗಳಾದರೆ ಹರೀಶ್‌ ರೈ, ಕೋಟೆ ಪ್ರಭಾಕರ್‌, ತುಮಕೂರು ಮೋಹನ್‌, ಊರಗೌಡನಾಗಿ ಅಂಜನಪ್ಪ, ಹಳ್ಳಿ ಮಂದಿಯಾದರೆ ಹೊನ್ನವಳ್ಳಿ ಕೃಷ್ಣ, ಡಿಂಗ್ರಿ ನಾಗರಾಜ್‌, ಅಂತಃಕರಣದ ತಂದೆಯಾಗಿ ರಮೇಶ್‌ ಭಟ್‌ … ಹೀಗೆ ಅನೇಕ ಕಲಾವಿದರನ್ನು ಚಿತ್ರರಂಗ ಒಂದೇ ಪಾತ್ರಗಳಲ್ಲಿ ರಿಪೀಟ್‌ ಮಾಡುತ್ತಿವೆ. 

ಏನೇ ಆದರೂ ಕಲಾವಿದರು ಆಯ್ಕೆ, ಅವಕಾಶ ಹಾಗೂ ಅನಿವಾರ್ಯತೆಯ ಜೊತೆಗೆ ಸಾಗಬೇಕಾಗುತ್ತದೆ. ಕೆಲವರಿಗೆ ಪಾತ್ರಗಳ ಆಯ್ಕೆ ಸ್ವತಂತ್ರ್ಯವಿದ್ದರೆ, ಇನ್ನು ಅನೇಕ ಕಲಾವಿದರಿಗೆ ಅವಕಾಶ ಅನಿವಾರ್ಯವಾಗಿರುತ್ತದೆ. ಈ ಮೂರು ಅಂಶಗಳ ನಡುವೆಯೇ ಸಿನಿಪಯಣ ಸಾಗಬೇಕಾಗುತ್ತದೆ. ಹಾಗಾಗಿ ಇಷ್ಟವಿದ್ದರೂ, ಇಲ್ಲದಿದ್ದರೂ ಬ್ರಾಂಡ್‌ ಆದ ಪಾತ್ರಗಳಿಗೇ ಸೀಮಿತವಾಗಬೇಕಾಗುತ್ತದೆ.

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

ಸಾಹಿತ್ಯ ಸಮ್ಮೇಳನನ ಖರ್ಚು ಕಡಿತಗೊಳಿಸಿ ಹಂಪಿ ಕನ್ನಡ ವಿ.ವಿ.ಗೆ ನೆರವು: ಜೋಶಿ

ಸಾಹಿತ್ಯ ಸಮ್ಮೇಳನನ ಖರ್ಚು ಕಡಿತಗೊಳಿಸಿ ಹಂಪಿ ಕನ್ನಡ ವಿ.ವಿ.ಗೆ ನೆರವು: ಜೋಶಿ

E-Khata ಇದ್ದರಷ್ಟೇ ಆಸ್ತಿ ನೋಂದಣಿ: ಸಚಿವ ಕೃಷ್ಣ ಬೈರೇಗೌಡ

E-Khata ಇದ್ದರಷ್ಟೇ ಆಸ್ತಿ ನೋಂದಣಿ: ಸಚಿವ ಕೃಷ್ಣ ಬೈರೇಗೌಡ

illegal sand mining ಸಹಕಾರ ಮಾಡಿರುವ ಆರೋಪ: ಕಾಪು ಎಸ್‌ಐ ಅಮಾನತು

illegal sand mining ಸಹಕಾರ ಮಾಡಿರುವ ಆರೋಪ: ಕಾಪು ಎಸ್‌ಐ ಅಮಾನತು

Kaniyoor: ಮರಳುಗಾರಿಕೆಯ ಬೋಟ್‌ ಅನ್ನು ಕಟ್ಟಿ ಹಾಕಿದರು

Kaniyoor: ಮರಳುಗಾರಿಕೆಯ ಬೋಟ್‌ ಅನ್ನು ಕಟ್ಟಿ ಹಾಕಿದರು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Sullia: ವಿದ್ಯುತ್‌ ಕಂಬದಿಂದ ಬಿದ್ದಿದ್ದ ವ್ಯಕ್ತಿ ಸಾವು

Sullia: ವಿದ್ಯುತ್‌ ಕಂಬದಿಂದ ಬಿದ್ದಿದ್ದ ವ್ಯಕ್ತಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yuva rajkumar’s Ekka movie muhurtha

Ekka: ಯುವ ರಾಜಕುಮಾರ್‌ ಹೊಸ ಸಿನಿಮಾ ʼಎಕ್ಕʼ ಮುಹೂರ್ತ

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Manada Kadalu: ಯುವ ಜೋಡಿಗಳ ʼಮನದ ಕಡಲುʼ; ಮತ್ತೆ ಒಂದಾದ ಮುಂಗಾರು ಮಳೆ ಟೀಂ

Manada Kadalu: ಯುವ ಜೋಡಿಗಳ ʼಮನದ ಕಡಲುʼ; ಮತ್ತೆ ಒಂದಾದ ಮುಂಗಾರು ಮಳೆ ಟೀಂ

naa ninna bidalare movie releasing today

Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಸಾಹಿತ್ಯ ಸಮ್ಮೇಳನನ ಖರ್ಚು ಕಡಿತಗೊಳಿಸಿ ಹಂಪಿ ಕನ್ನಡ ವಿ.ವಿ.ಗೆ ನೆರವು: ಜೋಶಿ

ಸಾಹಿತ್ಯ ಸಮ್ಮೇಳನನ ಖರ್ಚು ಕಡಿತಗೊಳಿಸಿ ಹಂಪಿ ಕನ್ನಡ ವಿ.ವಿ.ಗೆ ನೆರವು: ಜೋಶಿ

E-Khata ಇದ್ದರಷ್ಟೇ ಆಸ್ತಿ ನೋಂದಣಿ: ಸಚಿವ ಕೃಷ್ಣ ಬೈರೇಗೌಡ

E-Khata ಇದ್ದರಷ್ಟೇ ಆಸ್ತಿ ನೋಂದಣಿ: ಸಚಿವ ಕೃಷ್ಣ ಬೈರೇಗೌಡ

illegal sand mining ಸಹಕಾರ ಮಾಡಿರುವ ಆರೋಪ: ಕಾಪು ಎಸ್‌ಐ ಅಮಾನತು

illegal sand mining ಸಹಕಾರ ಮಾಡಿರುವ ಆರೋಪ: ಕಾಪು ಎಸ್‌ಐ ಅಮಾನತು

Kaniyoor: ಮರಳುಗಾರಿಕೆಯ ಬೋಟ್‌ ಅನ್ನು ಕಟ್ಟಿ ಹಾಕಿದರು

Kaniyoor: ಮರಳುಗಾರಿಕೆಯ ಬೋಟ್‌ ಅನ್ನು ಕಟ್ಟಿ ಹಾಕಿದರು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.