ಮುಂಬೈ ಎಟ್ ಟಾಪ್-ಫೋರ್!
Team Udayavani, May 11, 2018, 6:35 AM IST
ಕೋಲ್ಕತಾ: ಆರಂಭದಲ್ಲಿ ಸತತವಾಗಿ ಸೋತು ಇನ್ನೇನು ಹೊರಗೆ ಬಿದ್ದೇ ಬಿಟ್ಟಿತು ಎಂಬ ಸ್ಥಿತಿಯಿಂದ ನಾಟಕೀಯವಾಗಿ ಚೇತರಿಸಿಕೊಂಡು ಗೆಲುವಿನ ಓಟ ಆರಂಭಿಸುವ ಮುಂಬೈ ಇಂಡಿಯನ್ಸ್ ಪರಿಪಾಠ ಈ ಐಪಿಎಲ್‌ನಲ್ಲೂ ಮುಂದುವರಿದಂತೆ ಕಾಣುತ್ತದೆ. ಬುಧವಾರ ರಾತ್ರಿ ಕೆಕೆಆರ್ ತಂಡವನ್ನು ಅವರದೇ ಈಡನ್ ಅಂಗಳದಲ್ಲಿ 102 ರನ್ನುಗಳ ಬೃಹತ್ ಅಂತರದಿಂದ ಕೆಡವಿದ ರೋಹಿತ್ ಪಡೆ ಮೊದಲ ಬಾರಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಅಲಂಕರಿಸಿದೆ. ಇದು ಮುಂದಿನ ಏರುಪೇರುಗಳಿಗೆ ಸಾಕ್ಷಿಯಾಗುವುದರಲ್ಲಿ ಅನುಮಾನವೇ ಇಲ್ಲ.
ಸತತ ಸೋಲುಗಳಿಂದ ದಿಕ್ಕೆಟ್ಟಿದ್ದ ಮುಂಬೈ 2018ನೇ ಐಪಿಎಲ್‌ನಿಂದ ನಿರ್ಗಮಿಸುವ ಮೊದಲ ತಂಡವೆಂಬ ಸೂಚನೆಯನ್ನು ರವಾನಿಸಿದ್ದು ಸುಳ್ಳಲ್ಲ. ಆದರೀಗ ಲೀಗ್ ಮುಖಾಮುಖೀ ಕೊನೆಗೊಳ್ಳುತ್ತ ಬಂದಂತೆ ಪರಿಸ್ಥಿತಿ ಬದಲಾಗತೊಡಗಿದೆ. ಈತನಕ ಟಾಪ್-4ನಲ್ಲಿದ್ದ ತಂಡವೊಂದು ಮುಂಬೈಗೆ ಜಾಗ ಮಾಡಿಕೊಡುವ ಸೂಚನೆ ದಟ್ಟವಾಗಿದೆ.
ಮೇ ತಿಂಗಳಲ್ಲಿ ಆಧಿಕ ಗೆಲುವು
ಇದರೊಂದಿಗೆ ಎಪ್ರಿಲ್ ತಿಂಗಳಲ್ಲಿ ಅಧಿಕ ಸೋಲು ಕಾಣುವ, ಮೇ ತಿಂಗಳಲ್ಲಿ ಹೆಚ್ಚು ಹೆಚ್ಚು ಗೆಲ್ಲುವ ಪರಂಪರೆಯೊಂದನ್ನು ಮುಂಬೈ ಮುಂದುವರಿಸಿಕೊಂಡು ಹೋಗುವುದು ಸ್ಪಷ್ಟಗೊಂಡಿದೆ. ಈ 5 ವರ್ಷಗಳ ಐಪಿಎಲ್ ಇತಿಹಾಸವನ್ನು ಕೆದಕಿದರೆ (2014-2018) ಮುಂಬೈ ಎಪ್ರಿಲ್ ತಿಂಗಳಲ್ಲಿ 15ರಲ್ಲಿ ಗೆದ್ದು 21 ಪಂದ್ಯಗಳಲ್ಲಿ ಸೋಲನುಭವಿಸಿರುದು; ಮೇ ತಿಂಗಳಲ್ಲಿ 26ರಲ್ಲಿ ಜಯ ಸಾಧಿಸಿ ಕೇವಲ 11ರಲ್ಲಷ್ಟೇ ಸೋತಿರುವುದು ಕಂಡು
ಬರುತ್ತದೆ. ಈ 2 ತಿಂಗಳಲ್ಲಿ ಕ್ರಮವಾಗಿ ಮುಂಬೈ ಇಂಡಿಯನ್ಸ್‌ನ ಶೇಕಡಾವಾರು ಗೆಲುವಿನ ಅಂಕಿಅಂಶ ಹೀಗಿದೆ: ಶೇ. 41.66 ಹಾಗೂ ಶೇ. 70.27. ಇದನ್ನು ಗಮನಿಸುವಾಗ ರೋಹಿತ್ ಪಡೆಯ ಓಟ ಎಲ್ಲಿಯ ತನಕ ಮುಂದುವರಿದೀತು ಎಂದು ಹೇಳುವುದು ಕಷ್ಟ!
108ಕ್ಕೆ ಕುಸಿದ ಕೆಕೆಆರ್
ಗುರುವಾರ ರಾತ್ರಿ ಈಡನ್‌ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ 6ಕ್ಕೆ 210 ರನ್ ಪೇರಿಸಿದರೆ, ಕೋಲ್ಕತಾ ತವರಿನಂಗಳದಲ್ಲೇ ಹೀನಾಯ ಆಟವಾಡಿ 18.1 ಓವರ್‌ಗಳಲ್ಲಿ 108ಕ್ಕೆ ಕುಸಿಯಿತು. ಇದು 11 ಪಂದ್ಯಗಳಲ್ಲಿ ರೋಹಿತ್ ಬಳಗ ಸಾಧಿಸಿದ 5ನೇ ಗೆಲುವು. ಇದರಿಂದ ರನ್‌ರೇಟನ್ನೂ ಹೆಚ್ಚಿಸಿಕೊಂಡ ಮುಂಬೈ ತನ್ನಷ್ಟೇ ಅಂಕ ಗಳಿಸಿರುವ ಕೋಲ್ಕತಾವನ್ನು 5ನೇ ಸ್ಥಾನಕ್ಕಿಳಿಸಿದೆ. ಇದರಿಂದ 4ನೇ ಪ್ಲೇ-ಆಫ್ ಸ್ಥಾನದ ಪೈಪೋಟಿ ತೀವ್ರಗೊಳ್ಳುವುದರಲ್ಲಿ ಅನುಮಾನವಿಲ್ಲ.
ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿದ ರೋಹಿತ್ ಶರ್ಮ, ಇದು ತಂಡ ಪ್ರಯತ್ನಕ್ಕೆ ಸಂದ ಜಯ ಎಂದಿದ್ದಾರೆ. “ನಾವು ಮೇ ತಿಂಗಳಲ್ಲಿ ಸಾಧನೆಯ ಎತ್ತರವನ್ನು ಕಾಣುವುದು ವಾಡಿಕೆ. ಇದು ಈ ಸಲವೂ ನಿಜವಾಗಲಿ ಎಂದು ನಾನು ಹಾರೈಸುತ್ತೇನೆ. ನಾವು ಆರಂಭದಿಂದಲೂ ಒಂದು ತಂಡವಾಗಿ ಆಡುತ್ತ ಬಂದೆವು. ಈಗಲೂ ತಂಡವಾಗಿಯೇ ಉಳಿದಿದ್ದೇವೆ. ಸತತ ಸೋಲಿನಿಂದ ಹೊರಬಂದು ಗೆಲುವಿನ ಲಯ ಕಂಡುಕೊಳ್ಳುವುದು ಸುಲಭವಲ್ಲ…’ ಎಂದು ರೋಹಿತ್ ಹೇಳಿದರು.
“ಅನುಮಾನವೇ ಇಲ್ಲ, ಇಶಾನ್ ಕಿಶನ್ ಅವರ ಸ್ಫೋಟಕ ಆಟವೇ ಈ ಪಂದ್ಯದ ಟರ್ನಿಂಗ್ ಪಾಯಿಂಟ್. ಈ ಟ್ರ್ಯಾಕ್‌ನಲ್ಲಿ ಚೆಂಡನ್ನು ಬಡಿದಟ್ಟುವುದು ಅಷ್ಟು ಸುಲಭವಾಗಿರಲಿಲ್ಲ. ಆದರೆ ಇಶಾನ್ ಮುನ್ನುಗ್ಗಿ ಬಾರಿಸಿ ಪಂದ್ಯಕ್ಕೆ ರಭಸ ತಂದಿತ್ತರು. ಇಂಥದೊಂದು ಆಟಕ್ಕಾಗಿ ಅವರು ಎಂದಿನಿಂದಲೋ ಕಾಯುತ್ತಿದ್ದರು. ಬೆನ್ ಕಟಿಂಗ್ ಅವರ ಫಿನಿಶಿಂಗ್ ಕೂಡ ಅಮೋಘ ಮಟ್ಟದಲ್ಲಿತ್ತು. ಅವರಿಗೆ ಹೆಚ್ಚಿನ ಅವಕಾಶ ಲಭಿಸಿರಲಿಲ್ಲ’ ಎಂದರು ರೋಹಿತ್ ಶರ್ಮ.
ಕಠಿನ ಗುರಿ: ದಿನೇಶ್ ಕಾರ್ತಿಕ್
“200 ಪ್ಲಸ್ ರನ್ ಎನ್ನುವುದು ಯಾವತ್ತೂ ದೊಡ್ಡ ಹಾಗೂ ಕಠಿನ ಗುರಿ. ನಮ್ಮ ಬ್ಯಾಟಿಂಗ್ ತೀರಾ ಕಳಪೆಯಾಗಿತ್ತು. ಯಾರಿಗೆ ಗೊತ್ತು, ನಾವು ಆ ಕ್ಯಾಚ್‌ಗಳನ್ನೆಲ್ಲ ಪಡೆದಿದ್ದರೆ ಏನಾಗುತ್ತಿತ್ತೋ…’ ಎಂಬುದು ಕೆಕೆಆರ್ ಕಪ್ತಾನ ದಿನೇಶ್ ಕಾರ್ತಿಕ್ ಅವರ ಹತಾಶೆಯ ನುಡಿಗಳು.
“ಇದು ಬ್ಯಾಟಿಂಗ್ ಯೋಗ್ಯ ಟ್ರ್ಯಾಕ್ ಆಗಿತ್ತು. ಆದರೆ ನಾವು ಪವರ್-ಪ್ಲೇ ಅವಧಿಯಲ್ಲೇ ಹೆಚ್ಚು ವಿಕೆಟ್‌ಗಳನ್ನು ಕಳೆದುಕೊಂಡೆವು. ಹೀಗಾಗಿ ಚೇತರಿಸುವುದು ಸುಲಭವಾಗಿರಲಿಲ್ಲ. ಮುಂದಿನ ಪಂದ್ಯಗಳಲ್ಲಿ ಸಾಮರ್ಥ್ಯಕ್ಕೂ ಮಿಗಿಲಾದ ಪ್ರದರ್ಶನ ನೀಡಬೇಕಿದೆ. ತಂಡದ ಮೇಲೆ ನನಗೆ ನಂಬಿಕೆ ಇದೆ’ ಎಂದು ಕಾರ್ತಿಕ್ ಹೇಳಿದರು.
ಸ್ಕೋರ್‌ಪಟ್ಟಿ
ಮುಂಬೈ ಇಂಡಿಯನ್ಸ್ 6 ವಿಕೆಟಿಗೆ 210
ಕೋಲ್ಕತಾ ನೈಟ್‌ರೈಡರ್
ಸುನೀಲ್ ನಾರಾಯಣ್ ಬಿ ಮೆಕ್ಲೆನಗನ್ 4
ಕ್ರಿಸ್ ಲಿನ್ ರನೌಟ್ 21
ರಾಬಿನ್ ಉತ್ತಪ್ಪ ಸಿ ಯಾದವ್ ಬಿ ಮಾರ್ಕಂಡೆ 14
ನಿತೀಶ್ ರಾಣ ಸಿ ಕಟಿಂಗ್ ಬಿ ಪಾಂಡ್ಯ 21
ಆ್ಯಂಡ್ರೆ ರಸೆಲ್ ಸಿ ಮಾರ್ಕಂಡೆ ಬಿ ಪಾಂಡ್ಯ 2
ದಿನೇಶ್ ಕಾರ್ತಿಕ್ ರನೌಟ್ 5
ರಿಂಕು ಸಿಂಗ್ ಸಿ ಇಶಾನ್ ಬಿ ಬುಮ್ರಾ 5
ಟಾಮ್ ಕರನ್ ಸಿ ಡ್ಯುಮಿನಿ ಬಿ ಕೆ.ಪಾಂಡ್ಯ 18
ಪೀಯೂಷ್ ಚಾವ್ಲಾ ಸಿ ಯಾದವ್ ಬಿ ಕಟಿಂಗ್ 11
ಕುಲದೀಪ್ ಯಾದವ್ ಎಲ್‌ಬಿಡಬ್ಲ್ಯು ಕೆ.ಪಾಂಡ್ಯ 5
ಪ್ರಸಿದ್ಧ್ ಕೃಷ್ಣ ಔಟಾಗದೆ 1
ಇತರ 1
ಒಟ್ಟು (18.1 ಓವರ್‌ಗಳಲ್ಲಿ ಆಲೌಟ್) 108
ವಿಕೆಟ್ ಪತನ: 1-4, 2-32, 3-49, 4-54, 5-67, 6-67, 7-76, 8-93, 9-106.
ಬೌಲಿಂಗ್:
ಮಿಚೆಲ್ ಮೆಕ್ಲೆನಗನ್ 3-0-24-1
ಕೃಣಾಲ್ ಪಾಂಡ್ಯ 3.1-0-12-2
ಜಸ್‌ಪ್ರೀತ್ ಬುಮ್ರಾ 3-0-17-1
ಹಾರ್ದಿಕ್ ಪಾಂಡ್ಯ 3-0-16-2
ಮಾಯಾಂಕ್ ಮಾರ್ಕಂಡೆ 4-0-26-1
ಬೆನ್ ಕಟಿಂಗ್ 2-0-12-1
ಪಂದ್ಯಶ್ರೇಷ್ಠ: ಇಶಾನ್ ಕಿಶನ್
ಎಕ್ಸ್‌ಟ್ರಾ ಇನ್ನಿಂಗ್ಸ್
* ಕೋಲ್ಕತಾ ನೈಟ್‌ರೈಡರ್ ವಿರುದ್ಧ ಮುಂಬೈ ಇಂಡಿಯನ್ಸ್ ಸತತ 8 ಗೆಲುವು ದಾಖಲಿಸಿತು. ಇದು ಐಪಿಎಲ್‌ನಲ್ಲಿ ತಂಡವೊಂದು ನಿರ್ದಿಷ್ಟ ಎದುರಾಳಿ ವಿರುದ್ಧ ಸಾಧಿಸಿದ ಸತತ ಗೆಲುವಿನ ಜಂಟಿ ದಾಖಲೆ. ಇದಕ್ಕೂ ಮುನ್ನ ಪಂಜಾಬ್ ವಿರುದ್ಧ ಕೆಕೆಆರ್ ಹಾಗೂ ಡೆಲ್ಲಿ ವಿರುದ್ಧ ಆರ್‌ಸಿಬಿ ಸತತ 8 ಗೆಲುವು ಒಲಿಸಿಕೊಂಡಿತ್ತು. ಆರ್‌ಸಿಬಿಯ ಒಂದು ಜಯ ಸೂಪರ್ ಓವರ್‌ನಲ್ಲಿ ಬಂದಿತ್ತು.
* ಇಶಾನ್ ಕಿಶನ್ 17 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿದರು. ಇದು ಮುಂಬೈ ಆಟಗಾರನೊಬ್ಬನ ಅತೀ ವೇಗದ ಅರ್ಧ ಶತಕದ ಜಂಟಿ ದಾಖಲೆ. 2016ರಲ್ಲಿ ಕೆಕೆಆರ್ ವಿರುದ್ಧ ಕೈರನ್ ಪೊಲಾರ್ಡ್ ಕೂಡ 17 ಎಸೆತಗಳಲ್ಲಿ 50 ರನ್ ಪೂರೈಸಿದ್ದರು.
* ರೋಹಿತ್ ಶರ್ಮ 50 ಜಯಗಳನ್ನು ಕಂಡ 3ನೇ ಐಪಿಎಲ್ ನಾಯಕನೆನಿಸಿದರು. ಉಳಿದವರೆಂದರೆ ಮಹೇಂದ್ರ ಸಿಂಗ್ ಧೋನಿ (90) ಮತ್ತು ಗೌತಮ್ ಗಂಭೀರ್ (71). ಕಾಕತಾಳೀಯವೆಂದರೆ, ರೋಹಿತ್ ಶರ್ಮ ತಮ್ಮ ನಾಯಕತ್ವವನ್ನು ಕೆಕೆಆರ್ ವಿರುದ್ಧ ಈಡನ್ ಗಾರ್ಡನ್ಸ್‌ನಲ್ಲೇ ಗೆಲುವಿನೊಂದಿಗೆ ಆರಂಭಿಸಿದ್ದರು (2013).
* ರೋಹಿತ್ ನಾಯಕನಾಗಿ 100 ಟಿ20 ಪಂದ್ಯಗಳನ್ನು ಪೂರ್ತಿಗೊಳಿಸಿದರು. ಅವರೀಗ ನಾಯಕತ್ವದಲ್ಲಿ “ಶತಕ’ ಬಾರಿಸಿದ ವಿಶ್ವದ 9ನೇ ಹಾಗೂ ಭಾರತದ 4ನೇ ಆಟಗಾರ.
* ಕೆಕೆಆರ್ ಮೊದಲ ಬಾರಿಗೆ ನೂರಕ್ಕೂ ಅಧಿಕ ರನ್ ಅಂತರದಲ್ಲಿ ಸೋಲನುಭವಿಸಿತು. 2009ರಲ್ಲಿ ಮುಂಬೈ ವಿರುದ್ಧವೇ 92 ರನ್ನುಗಳಿಂದ ಎಡವಿದ್ದು ಕೆಕೆಆರ್‌ನ ಅತೀ ದೊಡ್ಡ ಸೋಲಾಗಿತ್ತು.
* ಇದು ಮುಂಬೈ ಇಂಡಿಯನ್ಸ್‌ನ 2ನೇ ಅತೀ ದೊಡ್ಡ ಗೆಲುವು. ಕಳೆದ ವರ್ಷ ಡೆಲ್ಲಿ ವಿರುದ್ಧ 146 ರನ್ನುಗಳಿಂದ ಜಯಿಸಿದ್ದು ದಾಖಲೆ.
* ಕೆಕೆಆರ್ ತವರಿನ “ಈಡನ್ ಗಾರ್ಡನ್ಸ್’ನಲ್ಲಿ ಅತ್ಯಂತ ಕಡಿಮೆ ರನ್ನಿಗೆ ಆಲೌಟಾಯಿತು (108). 2010ರಲ್ಲಿ ಚೆನ್ನೈ ವಿರುದ್ಧ 109ಕ್ಕೆ ಆಲೌಟಾದದ್ದು ಹಿಂದಿನ ಕನಿಷ್ಠ ಮೊತ್ತವಾಗಿತ್ತು.
* ಮುಂಬೈ ಇಂಡಿಯನ್ಸ್ “ಈಡನ್ ಗಾರ್ಡನ್ಸ್’ನಲ್ಲಿ ಅತ್ಯಧಿಕ ರನ್ ಬಾರಿಸಿದ ದಾಖಲೆ ಸ್ಥಾಪಿಸಿತು (6ಕ್ಕೆ 210). 2010ರಲ್ಲಿ ಕೆಕೆಆರ್ ವಿರುದ್ಧ ಪಂಜಾಬ್ 2ಕ್ಕೆ 204 ರನ್ ಗಳಿಸಿದ ದಾಖಲೆ ಪತನಗೊಂಡಿತು.
* ಪೀಯೂಷ್ ಚಾವ್ಲಾ ಐಪಿಎಲ್‌ನಲ್ಲಿ ಸಾವಿರ “ಡಾಟ್ ಬಾಲ್’ ಎಸೆದ 4ನೇ ಬೌಲರ್ ಹಾಗೂ ಮೊದಲ ಲೆಗ್ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸಾವಿರ ಡಾಟ್ ಬಾಲ್ ಎಸೆದ ಮತ್ತೂಬ್ಬ ಸ್ಪಿನ್ನರ್ ಹರ್ಭಜನ್ ಸಿಂಗ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Council: ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಅಪಮಾನ: ಛಲವಾದಿ ನಾರಾಯಣಸ್ವಾಮಿ
Chandigarh: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅಕ್ರಿ ಗ್ರಾ.ಪಂನಿಂದ ಹಣ ಸಹಾಯ
ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್ ವಿರುದ್ಧ ತಿರುಗಿ ಬಿದ್ದ ಸಂತರು
Ambedkar Row: ಕಾಂಗ್ರೆಸ್ ತಿಪ್ಪೆ ಇದ್ದಂತೆ, ಕೆದಕಿದಷ್ಟೂ ದುರ್ವಾಸನೆ ಬರುತ್ತೆ: ಛಲವಾದಿ
Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.