ಭಾರತದ ಹೊಸ ಹೆಮ್ಮೆ ಬೊಗಿ ಬೀಲ್ ಸೇತುವೆ
Team Udayavani, May 11, 2018, 9:39 AM IST
ಗಂಡು ನದಿ ಬ್ರಹ್ಮಪುತ್ರಾದಿಂದ ಬೇರ್ಪಟ್ಟಿರುವ ಅಸ್ಸಾಂನ ದಿಬ್ರುಗಢ ಹಾಗೂ ಅರುಣಾಚಲ ಪ್ರದೇಶದ ಪಾಸೀಘಾಟ್ ಪ್ರಾಂತ್ಯವನ್ನು ಬೆಸೆಯಲು ನಿರ್ಮಿಸಲಾಗಿರುವ ‘ಬೊಗಿ ಬೀಲ್ ಸೇತುವೆ’ ಕೆಲವೇ ತಿಂಗಳುಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಲೋಕಾರ್ಪಣೆಗೊಳ್ಳಲಿದೆ. ಏಷ್ಯಾದಲ್ಲೇ 2ನೇ ಅತಿ ಉದ್ದದ ಸೇತುವೆ ಎಂಬ ಹೆಗ್ಗಳಿಕೆ ಹೊಂದಿರುವ ಇದರ ವೈಶಿಷ್ಟ್ಯದ ಮಾಹಿತಿ ಇಲ್ಲಿದೆ.
ಉದ್ದೇಶ
ಅಸ್ಸಾಂನ ದಿಬ್ರುಗಢದಿಂದ ಅರುಣಾಚಲದ ಪಾಸೀ ಘಾಟ್ ಪ್ರಾಂತ್ಯವನ್ನು ಬ್ರಹ್ಮಪುತ್ರಾ ನದಿ ಬೇರ್ಪಡಿಸುತ್ತದೆ. ದಿಬ್ರುಗಢದಿಂದ ಪಾಸೀಘಾಟ್ಗೆ ಅಥವಾ ಪಾಸೀಘಾಟ್ ನಿಂದ ದಿಬ್ರುಗಢಕ್ಕೆ ಬರುವುದಾದರೆ ಸುಮಾರು 600 ಕಿ.ಮೀ.ಗಳಷ್ಟು ದೂರವನ್ನು ಸುತ್ತು ಹಾಕಿಕೊಂಡು ಬರಬೇಕಿತ್ತು. ಈ ಅಂತರ ಕಡಿಮೆ ಮಾಡಲು ಬ್ರಹ್ಮಪುತ್ರಾ ನದಿಗೆ ಅಡ್ಡವಾಗಿ ಈ ಸೇತುವೆ ಕಟ್ಟಲಾಗಿದೆ. ಇದರಿಂದ ಈ ಪ್ರಾಂತ್ಯಗಳ ನಡುವಿನ ಅಂತರ 100 ಕಿ.ಮೀ.ಗಳಿಗಿಂತಲೂ ಕಡಿಮೆಯಾಗಲಿದೆ. ಸಾರ್ವಜನಿಕರಿಗಷ್ಟೇ ಅಲ್ಲದೆ, ಸೇನಾ ಪರಿಕರ, ಸಾಮಗ್ರಿಗಳ ತ್ವರಿತ ರವಾನೆಗೆ ಹೆಚ್ಚಿನ ಅನುಕೂಲ ಕಲ್ಪಿಸಲಿರುವ ಸೇತುವೆಯಿದು.
4.94 ಕಿ.ಮೀ. ಉದ್ದ
4696 ಕೋಟಿ ನಿರ್ಮಾಣ ವೆಚ್ಚ
1997 : ಯೋಜನೆಗೆ ಅನುಮೋದನೆ ಸಿಕ್ಕಿದ ವರ್ಷ
2002 : ಎನ್.ಡಿ.ಎ.-1 ಸರಕಾರದಿಂದ ಕಾಮಗಾರಿ ಶುರು
2007 : ಇದನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಿಸಿದ ಯುಪಿಎ
105 ಅಡಿ : ಬ್ರಹ್ಮಪುತ್ರಾ ನೀರಿನ ಸರಾಸರಿ ಮೇಲ್ಮೈನಿಂದ ಸೇತುವೆಗೆ ಇರುವ ಎತ್ತರ
34.4 : ಅಡಿ ಸೇತುವೆಯಲ್ಲಿ ರೈಲ್ವೆ ಮಾರ್ಗಕ್ಕೂ ರಸ್ತೆ ಮಾರ್ಗ ನಡುವಿನ ಅಂತರ
20,000 : ಸೇತುವೆ ನಿರ್ಮಾಣದಲ್ಲಿ ಬಳಸಲಾಗಿರುವ ಉಕ್ಕಿನ ಪ್ರಮಾಣ
ಸೇತುವೆ ವಿಶೇಷತೆ
– ರಸ್ತೆ – ರೈಲು ಮಾರ್ಗಗಳುಳ್ಳ ಸೇತುವೆ
– ಸೇತುವೆಯ ಮೇಲ್ತುದಿಯಲ್ಲಿ ಮೂರು ಲೇನ್ ಗಳ ರಸ್ತೆ ಮಧ್ಯಭಾಗದಲ್ಲಿ ಎರಡು ರೈಲು ಮಾರ್ಗಗಳು
– ಭಾರತದ ಮೊದಲ, ಏಷ್ಯಾದ ಎರಡನೇ ಅತಿ ದೊಡ್ಡ ಸೇತುವೆ
– ಸ್ವೀಡನ್, ಡೆನ್ಮಾರ್ಕ್ ಸಂಪರ್ಕ ಸೇತುವೆಯಿಂದ ಸ್ಫೂರ್ತಿಗೊಂಡ ಸೇತುವೆ
ಹೆಸರು: ಬೊಗಿ ಬೀಲ್ ಯೋಜನೆ
ಎಲ್ಲಿಂದ ಎಲ್ಲಿಗೆ?: ಅಸ್ಸಾಂನ ದಿಬ್ರುಗಢದಿಂದ ಅರುಣಾಚಲ ಪ್ರದೇಶದ ಪಾಸೀ ಘಾಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.