‘ಭಾಷಾ ಶುದ್ಧತೆ, ಜ್ಞಾನ ವೃದ್ಧಿಯಲ್ಲಿ ಯಕ್ಷಗಾನದ ಕೊಡುಗೆ ಮಹತ್ತರ’
Team Udayavani, May 11, 2018, 12:03 PM IST
ಮಹಾನಗರ: ಯಕ್ಷರಂಗದ ದಿಗ್ಗಜ ಹಾಗೂ ಗಾಂಧಿವಾದಿ ದಿ| ಮಲ್ಪೆ ಶಂಕರನಾರಾಯಣ ಸಾಮಗರು ಯಕ್ಷಗಾನ ಕ್ಷೇತ್ರಕ್ಕೆ ಹಾಗೂ ಹರಿಕಥಾ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಯು ಅನನ್ಯವಾಗಿದೆ. ಇಂತಹ ಅನೇಕ ಮಹನೀಯರಿಂದಾಗಿ ನಮ್ಮ ಭಾಷಾ ಶುದ್ಧತೆ ಹಾಗೂ ಜ್ಞಾನ ವೃದ್ಧಿಗೊಳ್ಳುವಲ್ಲಿ ಸಹಕಾರಿಯಾಗಿದೆ ಎಂದು ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮಹಬಲೇಶ್ವರ ಎಂ.ಎಸ್.
ಹೇಳಿದರು.
ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಕಲ್ಕೂರ ಪ್ರತಿಷ್ಠಾನವು ಆಯೋಜಿಸಿದ್ದ ಸಾಮಗ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸಾಮಗರ ಸಂಸ್ಮರಣೆಗೈದ ಯಕ್ಷಗಾನ ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷ ಕುಂಬ್ಳೆ ಸುಂದರರಾವ್, ಪ್ರಖಂಡ ಪಂಡಿತ ಗಾಂಧಿವಾದಿಯಾಗಿದ್ದ ದೊಡ್ಡ ಸಾಮಗರ ಪರಿಶುದ್ಧ ಜೀವನ ಆದರ್ಶನೀಯವಾಗಿದ್ದು , ಅವರೊಬ್ಬ ಅವಧೂತನಂತೆ ಜನರ ಪ್ರೀತಿಗೆ ಪಾತ್ರರಾಗಿದ್ದರು ಎಂದರು.
ಪ್ರೌಢಿಮೆ ಮೆರೆದವರು
ಯಕ್ಷಗಾನ ಬಯಲಾಟ ಅಕಾಡೆಮಿಯ ಇನ್ನೋರ್ವ ಮಾಜಿ ಅಧ್ಯಕ್ಷ ಪ್ರೊ| ಎಂ.ಎಲ್. ಸಾಮಗ ಮಾತನಾಡಿ, ಹಿರಿಯ ಮದ್ದಳೆಗಾರ ಹಿರಿಯಡ್ಕ ಗೋಪಾಲ ರಾವ್‌ಅವರಿಗೆ ಸಾಮಗ ಪ್ರಶಸ್ತಿ ಸಂದಿರುವುದು ಸೂಕ್ತವಾಗಿದೆ. ಏರು ಮದ್ದಳೆಯ ಅವಿಷ್ಕಾರದಿಂದ ಹೆಸರುವಾಸಿಯಾದ ಗೋಪಲರಾಯರು ದೇಶವಿದೇಶಗಳಲ್ಲೂ ತನ್ನ ಪ್ರೌಢಿಮೆಯನ್ನು ಮೆರೆದವರು ಎಂದರು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಅನಾರೋಗ್ಯದ ನಿಮಿತ್ತ ಗೋಪಾಲರಾಯರಿಗೆ ಅವರ ಸ್ವಗೃಹದಲ್ಲೇ ಸಾಮಗ ಪ್ರಶಸ್ತಿಯನ್ನು ನೀಡಿ ಅಭಿನಂದಿಸಲಾಗುವುದು.
ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ರಮಾನಾಥ ಹೆಗ್ಡೆ, ಉದ್ಯಮಿಗಳಾದ ರತ್ನಾಕರ ಜೈನ್,
ಸ್ವರ್ಣೋದ್ಯಮಿ ಪ್ರಶಾಂತ್ ಶೇಟ್, ಹಳೆಕೋಟೆ ಮಾರಿಯಮ್ಮ ದೇವಸ್ಥಾನದ ಮೊಕ್ತೇಸರ ತಾರನಾಥ ಶೆಟ್ಟಿ ಬೋಳಾರ ಉಪಸ್ಥಿತರಿದ್ದರು.
ಕದ್ರಿ ನವನೀತ ಶೆಟ್ಟಿ ಸ್ವಾಗತಿಸಿದರು. ಜನಾರ್ದನ ಹಂದೆ ಅಭಿನಂದಿಸಿದರು. ಪೊಳಲಿ ನಿತ್ಯಾನಂದ ಕಾರಂತ ವಂದಿಸಿ, ಮಾಧುರಿ ದಿಕ್ಷೀತ್ ನಿರೂಪಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.