ಕಾಂಗ್ರೆಸ್‌ ಆಡಳಿತಕ್ಕೆ ತಿಲಾಂಜಲಿ


Team Udayavani, May 11, 2018, 2:31 PM IST

naindoor-1_0.jpg

ಮಾಗಡಿ: ರಾಜ್ಯದಲ್ಲಿ ಜನಪರವಾದ ಯೋಜನೆಗಳನ್ನು ಜಾರಿಗೆ ತರಬೇಕಾದರೆ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು. ಮಾಗಡಿ ಕ್ಷೇತ್ರದಲ್ಲಿ ಶಾಶ್ವತದ ಹೇಮಾವತಿ ನೀರಾವರಿ ಯೋಜನೆ ಪೂರ್ಣಗೊಳ್ಳಲು ಜೆಡಿಎಸ್‌ ಅಭ್ಯರ್ಥಿ ಎ.ಮಂಜುನಾಥ್‌ ಅವರನ್ನು ಅತ್ಯಾಧಿಕ ಮತಗಳಿಂದ ಗೆಲ್ಲಿಸಿಕೊಳ್ಳುವ ಮೂಲಕ ವಿರೋಧಿ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಸಿ.ಬಾಲಕೃಷ್ಣ ಅವರ ಆಡಳಿತಕ್ಕೆ ತಿಲಾಂಜಲಿಯಾಡಬೇಕು ಎಂದು ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಪೂಜಾರಿಪಾಳ್ಯದ ಕೆ.ಕೃಷ್ಣಮೂರ್ತಿ ತಿಳಿಸಿದರು.

ಪಟ್ಟಣದ ಕೆಂಪೇಗೌಡ ಬಯಲು ರಂಗಮಂದಿರದಲ್ಲಿ ಜೆಡಿಎಸ್‌ ನಿಂದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ಶಾಸಕರಾಗಿದ್ದ ಎಚ್‌.ಸಿ.ಬಾಲಕೃಷ್ಣ ಅವರು ಕ್ಷೇತ್ರ ಶಾಶ್ವತವಾದ ನೀರಾವರಿ ಯೋಜನೆಯನ್ನು ಅನಷ್ಠಾನಗೊಳಿಸಲಿಲ್ಲ. 

ಹುರುಳಿಕಾಳು ಬೆಳೆಯುತ್ತಿದ್ದಾರೆ: ಈಗ ನೀರಾವರಿ ಯೋಜನೆ ಅನುಷ್ಠಾನಗೊಳಿಸುವುದಾಗಿ ಮತದಾರರಿಗೆ ಆಸೆ ಹುಟ್ಟಿಸಿ ಮತ ಕಸಿಯುವ ಯತ್ನ ಮಾಡುತ್ತಿರುವ ಇವರು, 20 ವರ್ಷಗಳ ಶಾಸಕರಾಗಿದ್ದುಕೊಂಡು ನೀರಾವರಿ ಯೋಜನೆ ತರದೆ ಹುಲಿಕಟ್ಟೆಯಲ್ಲಿ ಹುರುಳಿಕಾಳು ಬೆಳೆಯುತ್ತಿದ್ದಾರೆ.

20 ವರ್ಷಗಳಿಂದ ಕ್ಷೇತ್ರದಲ್ಲಿ ದುಡಿದ್ದಿದ್ದರೆ ಮತದಾರರ ಕೈ ಕಾಲು ಹಿಡಿದು ಮತ ಕೇಳುವ ಅಗತ್ಯವಿರಲಿಲ್ಲ. ಹಗರಣಗಳ ಸರ್ದಾರ ಎಚ್‌.ಸಿ.ಬಾಲಕೃಷ್ಣ ಹಣಕ್ಕಾಗಿ ಕ್ಷೇತ್ರದ 2 ಲಕ್ಷ ಮತದಾರರ ಸ್ವಾಭಿಮಾನವನ್ನೇ ಹರಾಜು ಹಾಕಿರುವ ಇವರಿಗೆ ಈ ಬಾರಿ ಮತದಾರರು ತಕ್ಕ ಪಾಠ ಕಲಿಸಬೇಕಿದೆ ಎಂದು ಎಚ್‌.ಸಿ.ಬಾಲಕೃಷ್ಣ ವಿರುದ್ಧ ಲೇವಡಿ ಮಾಡಿದರು.

ಮತ ಮನವಿ: ಜೆಡಿಎಸ್‌ ರೈತ ಪರವಾದ ಸರ್ಕಾರವಾಗಿದ್ದು, ಜನಪರವಾದ ಯೋಜನೆ ಜಾರಿಗೆ ಬರಬೇಕಾದರೆ ಎಚ್‌ಡಿಕೆ ಸಿಎಂ ಆಗಬೇಕು. ಆದ್ದರಿಂದ ಜೆಡಿಎಸ್‌ಗೆ ಮತನೀಡಬೇಕು. ಮಾಗಡಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಾಣಬೇಕಾದರೆ ಜೆಡಿಎಸ್‌ ಅಭ್ಯರ್ಥಿ ಎ.ಮಂಜು ಅವರಿಗೆ ಕ್ಷೇತ್ರದ ಜನತೆ ಮತ ಹಾಕುವ ಮೂಲಕ ಗೆಲ್ಲಿಸಿಕೊಳ್ಳಬೇಕಿದೆ ಎಂದು ಹೇಳಿದರು.

ಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ಎನ್‌.ಮಂಜುನಾಥ್‌, ಪುರಸಭಾ ಸದಸ್ಯರಾದ ಕೆ.ವಿ.ಬಾಲು, ಮಹೇಶ್‌, ಶಿವಕುಮಾರ್‌, ಎಸ್‌.ಮಹದೇವ್‌ ಜೆಡಿಎಸ್‌ ಮುಖಂಡ, ಕಲ್ಕೆರೆ ಶಿವಣ್ಣ, ಗಿರಿಯಪ್ಪ, ಮಾರೇಗೌಡ, ಪೊಲೀಸ್‌ ರಾಮಣ್ಣ, ಚಂದ್ರಮ್ಮ, ನಂಜಯ್ಯ, ದೊಡ್ಡಯ್ಯ, ಡಿ.ಜಿ.ಕುಮಾರ್‌, ಜೈಕುಮಾರ್‌ ನರಸೇಗೌಡ, ಜುಟ್ಟನಹಳ್ಳಿ ಜಯರಾಂ ಇತರರು ಇದ್ದರು.

ಮೊಬೈಲ್‌ ಮೂಲಕವೇ ಮನವಿ: ಮಾಗಡಿಯಲ್ಲಿ ಎಚ್‌ಡಿಕೆ ನೇತೃತ್ವದ ಬಹಿರಂಗ ಸಭೆ ಏರ್ಪಡಿಸಲಾಗಿತ್ತು. ಎಚ್‌ಡಿಕೆ ಭಾಷಣ ಕೇಳಲು ಜನಸಾಗರ ಹರಿದು ಬಂದಿತ್ತು. ಆದರೆ ಅನಾರೋಗ್ಯ ನಿಮಿತ್ತ  ಸಭೆಗೆ ಆಗಮಿಸದೆ ಮೊಬೈಲ್‌ ಮೂಲಕವೇ ಜೆಡಿಎಸ್‌ ಪಕ್ಷದ ಜನಪರವಾದ ಯೋಜನೆ ಜಾರಿ,

ವಿರೋಧಿ ಎಚ್‌.ಸಿ.ಬಾಲಕೃಷ್ಣ ಅವರ ದೂರಾಡಳಿತದ ವಿರುದ್ಧ ಹರಿಹಾಯ್ದ ಎಚ್‌.ಡಿ.ಕುಮಾರಸ್ವಾಮಿ ಅವರು ಮತದಾರರಲ್ಲಿ ಮನವಿ ಮಾಡಿ ತನಗೆ ಆರೋಗ್ಯ ಕೈಕೊಟ್ಟಿದೆ. ಮಾಗಡಿಗೆ ಬರಲು ಆಗುತ್ತಿಲ್ಲ, ಇಲ್ಲಿಂದಲೇ ತಮ್ಮಲ್ಲಿ ಕೈಮುಗಿದು ಬೇಡಿಕೊಳ್ಳುತ್ತೇನೆ. ಯಾರ ಮಾತನ್ನು ಕೇಳಬೇಡಿ, ಜೆಡಿಎಸ್‌ ಬೆಂಬಲಿಸಲು ಮನವಿ ಮಾಡಿದರು.

ಟಾಪ್ ನ್ಯೂಸ್

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!

snehamayi krishna

Snehamayi Krishna ವಿರುದ್ಧ ಕಾಂಗ್ರೆಸ್‌ನಿಂದ ಪೊಲೀಸರಿಗೆ ಮತ್ತೊಂದು ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yogeshwar

C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!

CM-Ramanagara

By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ

Ramanagara: ಆರು ಟ್ರಾನ್ಸ್‌‌ ಫಾರ್ಮರ್ ಗಳ ಕಳವು

Ramanagara: ಆರು ಟ್ರಾನ್ಸ್‌‌ ಫಾರ್ಮರ್ ಗಳ ಕಳವು

HDD-Gowda

Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್‌.ಡಿ.ದೇವೇಗೌಡ ಭವಿಷ್ಯ

Nikhil-CPY

By Election: ಗದ್ದುಗೆ ಸೈನಿಕ ಯೋಗೇಶ್ವರ್‌ಗೋ? ನಿಖಿಲ್‌ ಕುಮಾರಸ್ವಾಮಿಗೋ?

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.