ಅಜ್ಞಾತವಾಗಿರುವ ಪಡುಮುಂಡು ಕಲ್ಲುಗಣಪತಿ ಗುಹಾಂತರ ದೇವಾಲಯ
ಕಲ್ಲುಬಂಡೆಗಳ ಎಡೆಗಳಲ್ಲಿ ಬೆಳೆದಂತಹ ಗಿಡಮರಗಳು ಇಲ್ಲಿನ ಸೊಬಗನ್ನು ಇಮ್ಮಡಿಗೊಳಿಸಿದಂತಿದೆ.
ಸುಧೀರ್, Nov 7, 2020, 5:05 PM IST
ಪ್ರಕೃತಿಯ ಎದುರು ನಾವೆಲ್ಲರೂ ತಲೆಬಾಗಲೇಬೇಕು ಎಂಬುದಕ್ಕೆ ಪ್ರತ್ಯಕ್ಷ ಉದಾಹರಣೆಯೇ ಪಡುಮುಂಡು ಕಲ್ಲುಗಣಪತಿ ದೇವಾಲಯ. ಈ ದೇವಾಲಯ ಪ್ರಕೃತಿ ನಿರ್ಮಿತವಾದ ದೇವಾಲಯವಾಗಿದೆ ಸುಮಾರು ಮೂರು ಅಂತಸ್ತಿನ ಕಲ್ಲುಬಂಡೆಗಳಿಂದ ಕೂಡಿದ ಗುಹಾಂತರ ದೇವಾಲಯವಾಗಿದೆ.
ದೊಡ್ಡ ದೊಡ್ಡ ಕಲ್ಲು ಬಂಡೆಗಳ ನಡುವೆ ಶಿವ, ಪಾರ್ವತಿ, ಗಣಪ ವಿರಾಜಮಾನರಾಗಿ ಬಂದ ಭಕ್ತರ ಇಷ್ಟಗಳನ್ನು ಈಡೇರಿಸುತ್ತಿದ್ದಾರೆ. ಶಿರಿಯಾರದಲ್ಲಿರುವ ಕಲ್ಲುಗಣಪತಿ ದೇವಾಲಯ ಇಂದಿನ ಆಧುನಿಕ ಯುಗದಲ್ಲೂ ಅಜ್ಞಾತವಾಗಿರುವುದು ವಿಪರ್ಯಾಸವೇ ಸರಿ.
ದೇವಾಲಯದ ಇತಿಹಾಸ :
ಪಡುಮುಂಡು ಕಲ್ಲುಗಣಪತಿ ದೇವಾಲಯವನ್ನು ೧೨ನೇ ಶತಮಾನದಲ್ಲಿ ನಮ್ಮ ತುಳುನಾಡನ್ನು ಆಳಿದ ಭೂತಾಳ ಪಾಂಡ್ಯ ಇಲ್ಲಿ ಶಿಲಾಮಯ ಗುಡಿ ನಿರ್ಮಾಣ ಮಾಡಿದ್ದನೆಂದು ಇಲ್ಲಿಯ ದೇವಳದ ಅರ್ಚಕರಾದ ರಾಮಕೃಷ್ಣ ಅಡಿಗರ ಉಲ್ಲೇಖ.
ಸುತ್ತಲೂ ಭತ್ತದ ಗದ್ದೆಗಳ ನಡುವೆ ಪ್ರಕೃತಿ ನಿರ್ಮಿತ ಗುಹಾಂತರ ದೇವಾಲಯ ಜೊತೆಗೆ ಕಲ್ಲುಬಂಡೆಗಳ ಎಡೆಗಳಲ್ಲಿ ಬೆಳೆದಂತಹ ಗಿಡಮರಗಳು ಇಲ್ಲಿನ ಸೊಬಗನ್ನು ಇಮ್ಮಡಿಗೊಳಿಸಿದಂತಿದೆ.
ಉಡುಪಿ ಕುಂದಾಪುರ ಗಡಿಭಾಗವು ಹೌದು:
ಈ ದೇವಾಲಯದ ಹಿಂಭಾಗದಲ್ಲಿ ವಾರಾಹಿ ನದಿಯು ಕವಲೊಡೆದು ಹರಿಯುತ್ತಿದೆ. ನದಿಯ ಒಂದು ಭಾಗ ಉಡುಪಿ ಜಿಲ್ಲೆಗೆ ಸೇರಿದ್ದು ಇನ್ನೊಂದು ಭಾಗ ಕುಂದಾಪುರಕ್ಕೆ ಸೇರಿದ್ದಾಗಿದೆ ಎಂದು ಇಲ್ಲಿನ ಅರ್ಚಕರು ಹೇಳುತ್ತಾರೆ. ದೇವಾಲಯದ ಬದಿಯ ಕಲ್ಲಿನ ಪರ್ವತಕ್ಕೆ ಹತ್ತಿನಿಂತರೆ ಪ್ರಕೃತಿಯ ಸೊಬಗನ್ನು ಕಣ್ತುಂಬಿಕೊಳ್ಳಬಹುದು.
ಕರ್ನಾಟಕದ ನಕ್ಷೆ ಹೋಲುವ ಕಲ್ಲುಬಂಡೆ:
ಈ ದೇವಾಲಯದ ಎದುರಿನ ಬಯಲಿನಲ್ಲಿ ದೊಡ್ಡ ಗಾತ್ರದ ಕಲ್ಲು ಬಂಡೆಯೊಂದಿದ್ದು ಇದು ನಮ್ಮ ಕರ್ನಾಟಕ ರಾಜ್ಯದ ನಕ್ಷೆಯನ್ನೇ ಹೋಲುತ್ತದೆ. ಇಲ್ಲಿನ ಅರ್ಚಕರು ಹೇಳುವಂತೆ ಈ ಕಲ್ಲು ಹಿಂದಿನ ರಾಜರ ಆಳ್ವಿಕೆಯ ಕಾಲಕ್ಕೆ ಸೇರಿದ್ದು ಎಂದು ಪ್ರತೀತಿ.
ಮೂಲ ಸೌಕರ್ಯಗಳ ಕೊರತೆ :
ಈ ದೇವಾಲಯ ಅತ್ಯಂತ ಪ್ರಾಚೀನ ದೇವಾಲಯವಾಗಿದ್ದು, ಕೆಲವು ವರ್ಷಗಳ ಹಿಂದೆ ರಸ್ತೆ ನಿರ್ಮಾಣಕಾರ್ಯ ನಡೆದಿದೆ, ಪ್ರಾಕೃತಿಕ ಸೌಂದರ್ಯ ಹೊಂದಿರುವ ದೇವಾಲಯ ಹೊರಜಗತ್ತಿಗೆ ಪ್ರಚಾರವಾಗದೆ ಅಜ್ಞಾತವಾಗಿಯೇ ಉಳಿದಿರುವುದು ವಿಪರ್ಯಾಸ. ಇಲ್ಲಿಯ ದೇವಾಲಯಕ್ಕೆ ಮೂಲ ಸೌಕರ್ಯಗಳ ಕೊರತೆ ಎದ್ದುಕಾಣುತ್ತಿದೆ.
ನಿತ್ಯಪೂಜೆ :
ಇಲ್ಲಿ ಗಣಪತಿ, ಶಿವ, ಪಾರ್ವತಿ ದೇವರ ವಿಗ್ರಹವಿದ್ದು ನಿತ್ಯ ಪೂಜಾ ಕೈಂಕರ್ಯ ನಡೆಯುತ್ತಿದೆ. ವಿಶೇಷ ದಿನಗಳು ಅಂದರೆ ಸಂಕಷ್ಟಿ, ಗಣೇಶ ಚತುರ್ಥಿ ಸಂದರ್ಭಗಳ್ಲಲಿ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದು ವಿಶೇಷ ಪೂಜೆಗಳನ್ನೂ ಮಾಡಿ ಹೋಗುತ್ತಾರೆ.
ದಾರಿ ಹೇಗೆ:
ಪಡುಮುಂಡು ಕಲ್ಲುಗಣಪತಿ ದೇವಾಲಯ ಉಡುಪಿಯಿಂದ ೨೫ಕಿಮೀ ದೂರದಲ್ಲಿದೆ. ಬ್ರಹ್ಮಾವರ, ಬಾರಕೂರು ಮಾರ್ಗವಾಗಿ ಶಿರಿಯಾರದಲ್ಲಿ ಎಡಕ್ಕೆ ತಿರುಗಿ ಮುಂದೆ ಸಾಗಿದರೆ ದೇವಾಲಯ ಕಾಣಸಿಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
BGT: ವಿರಾಟ್ ಬಗ್ಗೆ ಆಸೀಸ್ ಜನರಿಗೆ ಯಾಕಿಷ್ಟು ಕುತೂಹಲ; ಇದು ಕಿಂಗ್ ಸಾಮ್ರಾಜ್ಯದ ಕಥೆ
AIADMK-BJP ಮರು ಮೈತ್ರಿ ಸುದ್ದಿ: ನಿರ್ಧಾರ ಬದಲಿಸುವರೇ ಪಳನಿಸ್ವಾಮಿ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.